Smarter Brain: ನಿಮ್ಮ ಮೆದುಳು ಸಖತ್ ಬ್ರಿಲಿಯಂಟ್ ಆಗ್ಬೇಕಾ? ಹಾಗಿದ್ರೆ ಈ 7 ತಂತ್ರಗಳನ್ನ ಫಾಲೋ ಮಾಡಿ!

ಕೋವಿಡ್-19 ನ ಪರಿಣಾಮಗಳಲ್ಲಿ ಮೆದುಳಿಗೆ (Brain) ಮಂಕು ಕವಿಯುವುದೂ ಕೂಡ ಒಂದು ಎಂಬುದು ತಿಳಿದುಬಂದಿದೆ. ನಮ್ಮ ಮಾನಸಿಕ ವ್ಯವಸ್ಥೆ (Mental System) ಹಾಗೂ ದೀರ್ಘ ಅವಧಿಯ ನೆನಪಿನ ಮೇಲೆ ಇದು ಪರಿಣಾಮವನ್ನು ಬೀರುತ್ತದೆ ಎಂಬುದಾಗಿ ಅಧ್ಯಯನವು ಸ್ಪಷ್ಟಪಡಿಸಿದೆ. ಹಾಗಿದ್ರೆ ಮೆದುಳು ಚುರುಕಾಗುವುದು ಹೇಗೆ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೋವಿಡ್-19 ನ ಪರಿಣಾಮಗಳಲ್ಲಿ ಮೆದುಳಿಗೆ (Brain) ಮಂಕು ಕವಿಯುವುದೂ ಕೂಡ ಒಂದು ಎಂಬುದು ತಿಳಿದುಬಂದಿದೆ. ನಮ್ಮ ಮಾನಸಿಕ ವ್ಯವಸ್ಥೆ (Mental System) ಹಾಗೂ ದೀರ್ಘ ಅವಧಿಯ ನೆನಪಿನ ಮೇಲೆ ಇದು ಪರಿಣಾಮವನ್ನು ಬೀರುತ್ತದೆ ಎಂಬುದಾಗಿ ಅಧ್ಯಯನವು ಸ್ಪಷ್ಟಪಡಿಸಿದೆ. ವೈರಸ್‌ನ (Virus) ಪ್ರಭಾವಕ್ಕೆ ಒಳಗಾದವರೆಲ್ಲಾ ತಾವು ಮುಂಚಿನಂತೆ ಚುರುಕಾಗಿದ್ದೇವೆಯೇ ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ ಎಂಬುದು ಇತ್ತೀಚಿನ ವಿಶ್ಲೇಷಣೆಗಳಿಂದ ತಿಳಿದು ಬಂದಿದೆ. ಹಾರ್ವರ್ಡ್ ವಿಶ್ವವಿದ್ಯಾನಿಲಯವು (Harvard University) ಇಂತಹ ಗೊಂದಲ ಹಾಗೂ ಸಂಶಯಗಳಿಗೆ ತೆರೆ ಎಳೆಯುವಂತೆ ಪರಿಹಾರವೊಂದನ್ನು ನೀಡಿದ್ದು ನಿತ್ಯದ ಕೆಲಸಗಳನ್ನು ನಿರ್ವಹಿಸುವ ಜೊತೆಗೆ ಮನಸ್ಸನ್ನು (Mind) ಚುರುಕುಗೊಳಿಸುವುದು ಕಷ್ಟದ ಕೆಲಸವಲ್ಲ ಎಂಬುದಾಗಿ ದೃಢಪಡಿಸಿದೆ.

ಬೇರೆ ಬೇರೆ ಸಂಗತಿಗಳನ್ನು ವಿಭಿನ್ನವಾಗಿ ಮಾಡುವುದಿರಲಿ ಇಲ್ಲವೇ ಮೆದುಳಿಗೆ ಕೆಲಸ ಕೊಡುವಂತಹ ಸವಾಲಿನ ಕೆಲಸವೇ ಆಗಿರಲಿ ಇಲ್ಲಿ ನೀಡಿರುವ ಕೆಲವೊಂದು ಸಲಹೆಗಳು ನಿಮ್ಮ ಮೆದುಳನ್ನು ಚುರುಕಾಗಿಸುವುದರ ಜೊತೆಗೆ ಮೆದುಳಿನ ಸ್ಮರಣಾ ಶಕ್ತಿಯನ್ನು ಹೆಚ್ಚಿಸಲಿದೆ ಎಂದಾಗಿದೆ. ಹಾಗಿದ್ದರೆ ಆ ಸಲಹೆಗಳು ಯಾವುವು ಎಂಬುದನ್ನು ಅರಿತುಕೊಳ್ಳೋಣ

ಹೊಸ ಗೇಮ್ ಅಥವಾ ಕೌಶಲ್ಯವನ್ನು ಕಲಿತುಕೊಳ್ಳಿ:
ನಿಮ್ಮ ಮೆದುಳಿನ ಸ್ನಾಯುಗಳಿಗೆ ವ್ಯಾಯಾಮವನ್ನು ನೀಡುವಂತಹ ಕೆಲವೊಂದು ಆಟಗಳನ್ನು ನೀವು ಆಡಬೇಕಾಗುತ್ತದೆ. ಹೊಸ ಭಾಷೆ ಕಲಿಯುವುದು ಅಂತೆಯೇ ವೈವಿಧ್ಯಮಯ ಪಾಕವಿಧಾನವನ್ನು ತಿಳಿದುಕೊಳ್ಳುವುದು ಇಲ್ಲದಿದ್ದರೆ ಪದಬಂಧ, ಒಗಟು ಬಿಡಿಸುವುದು ಇಲ್ಲವೇ ಸ್ಮರಣಾ ಶಕ್ತಿಯನ್ನು ವರ್ಧಿಸುವ ಗೇಮ್‌ಗಳನ್ನು ಆಡುವುದು ಹೀಗೆ ಮೆದುಳಿಗೆ ಕೆಲಸ ಕೊಡುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ಎಂಬುದಾಗಿ ಅಧ್ಯಯನಕಾರರು ಸಲಹೆ ನೀಡುತ್ತಾರೆ

ಇಂದ್ರಿಯಗಳಿಗೆ ಸವಾಲೊಡ್ಡಿ:
ಏನನ್ನಾದರೂ ಕಲಿಯುವ ಪ್ರಕ್ರಿಯೆಯಲ್ಲಿ ನಿಮ್ಮ ಇಂದ್ರಿಯಗಳು ಹೆಚ್ಚು ತೊಡಗಿಸಿಕೊಂಡಲ್ಲಿಇದು ಉತ್ತಮ ಸ್ಮರಣಾ ಶಕ್ತಿಗೆ ಹೆಚ್ಚಿನ ಪುಷ್ಟಿಯನ್ನು ಒದಗಿಸುತ್ತವೆ ಎಂಬುದು ಹಾರ್ವರ್ಡ್ ತಜ್ಞರ ಅಭಿಮತವಾಗಿದೆ. ಇತ್ತೀಚೆಗೆ ಸಂಸ್ಥೆಯು ಕೈಗೊಂಡಿರುವ ಒಂದು ಅಧ್ಯಯನದಲ್ಲಿ ಉದ್ದೇಶಿತ ಗುಂಪಿಗೆ ಭಾವನಾತ್ಮಕವಾಗಿ ಸಮ್ಮಿಳಿತಗೊಂಡ ತಟಸ್ಥ ಚಿತ್ರಗಳನ್ನು ಪ್ರದರ್ಶಿಸಲಾಗಿದ್ದು ಅವರಿಗೆ ಈ ಹಿಂದೆ ಚಿತ್ರಗಳನ್ನು ನೋಡಿರುವುದರ ಕುರಿತು ಯಾವುದೇ ಸೂಚನೆಯನ್ನು ನೀಡದೇ ಇದ್ದರೂ ಮೆದುಳು ಸಕ್ರಿಯಗೊಂಡಿರುವುದು ಕಂಡುಬಂದಿದೆ. ಆಹ್ಲಾದಕರ ಸುವಾಸನಾ ಭರಿತ ಚಿತ್ರಗಳನ್ನು ಜನರು ಗುರುತಿಸಲು ಪ್ರಯತ್ನಿಸಿದ್ದು ಪಿರಿಫಾರ್ಮ್ ಕಾರ್ಟೆಕ್ಸ್ (ಮೆದುಳಿನ ಮುಖ್ಯ ವಾಸನೆ-ಸಂಸ್ಕರಣೆ ಪ್ರದೇಶ) ಸಕ್ರಿಯವಾಗಿರುವುದನ್ನು ಬ್ರೈನ್ ಇಮೇಜಿಂಗ್ ತೋರಿಸಿದೆ.

ವಿಷಯಗಳನ್ನು ಗಟ್ಟಿಯಾಗಿ ಹೇಳಿ:
ಇನ್ನು ಯಾವುದೇ ವಿಷಯಗಳನ್ನು ಗಟ್ಟಿಯಾಗಿ ಹೇಳುವುದರಿಂದ ಅವುಗಳು ಪುನರಾವರ್ತನೆಗೊಂಡಂತೆ ನಿಮ್ಮೊಂದಿಗೆ ಮಿಳಿತಗೊಂಡಿರುತ್ತವೆ. ಹೊಸತನ್ನು ಕಲಿಯುವಾಗ ಗಟ್ಟಿಯಾಗಿ ಹೇಳುವುದು ಅನುಕೂಲಕರವಾಗಿದೆ. ಯಾರಾದರೂ ಹೊಸಬರನ್ನು ನೀವು ಪರಿಚಯಿಸಿಕೊಂಡಾಗ ಅವರ ಹೆಸರನ್ನು ನೀವು ಹೆಚ್ಚು ಬಾರಿ ಬಳಸಿದರೆ ಅವರ ಮುಖ ಮತ್ತು ಹೆಸರನ್ನು ನೀವು ಜೋಡಿಸಿಕೊಳ್ಳಬಹುದು ಇದರಿಂದ ಆ ವ್ಯಕ್ತಿ ನಿಮಗೆ ಸುಲಭವಾಗಿ ನೆನಪಿನಲ್ಲಿರುತ್ತಾರೆ.

ಇದನ್ನೂ ಓದಿ:  Cancer Treatment: ಭಾರತದ ಈ ಆಸ್ಪತ್ರೆಗಳು ಉಚಿತವಾಗಿ ಕ್ಯಾನ್ಸರ್​ ಟ್ರೀಟ್​ಮೆಂಟ್​ ನೀಡುತ್ತವೆಯಂತೆ

ಮಾಹಿತಿಗಳನ್ನು ವಿಭಾಗಿಸಿಕೊಳ್ಳುವುದು:
ಫೋನ್ ಸಂಖ್ಯೆಯನ್ನು ನೆನಪಿನಲ್ಲಿಟ್ಟುಕೊಳ್ಳಲು ನೀವು ಪ್ರಯತ್ನಿಸುತ್ತಿದ್ದೀರಿ ಎಂದಾದಲ್ಲಿ ಅದನ್ನು 3 ಸಂಖ್ಯೆಯ ಇಲ್ಲವೇ 4 ರಂತೆ ವಿಭಾಗಿಸಿಕೊಂಡು ನೆನಪಿನಲ್ಲಿಟ್ಟುಕೊಳ್ಳಲು ಪ್ರಯತ್ನಿಸಿ. ಯಾವುದೇ ವಿಷಯವನ್ನು ಸ್ವಲ್ಪ ಸ್ವಲ್ಪವೇ ವಿಭಾಗಿಸಿಕೊಂಡು ನೆನಪಿನಲ್ಲಿಟ್ಟುಕೊಳ್ಳಲು ಪ್ರಯತ್ನಿಸಿ

ಹಳೆಯ ಸಂಗತಿಗಳನ್ನು ಹೊಸದರೊಂದಿಗೆ ಸಂಪರ್ಕಿಸಿ:
ಸ್ಮರಣಾ ಶಕ್ತಿಯನ್ನು ಸುಧಾರಿಸಲು ನೀವು ಜ್ಞಾಪಕ ಸಾಧನಗಳನ್ನು ಬಳಸುತ್ತಿರಿ ಇಲ್ಲವೇ ಪ್ರಸ್ತುತದಲ್ಲಿರುವ ವಿಷಯಗಳಿಗೆ ಹೊಸ ಮಾಹಿತಿಯ ಅಂಶಗಳನ್ನು ಸೇರಿಸುತ್ತಿರಿ ಇದು ಸದೃಢ ಮನಸ್ಸು ಮತ್ತು ಜ್ಞಾಪಕ ಶಕ್ತಿಯನ್ನು ಜೋಡಿಸುವ ಸೇತುವೆಯಾಗಿ ಕೆಲಸ ಮಾಡುತ್ತದೆ. ಹೊಸ ಮಾಹಿತಿಯನ್ನು ಈಗಾಗಲೇ ನಿಮ್ಮ ಜೀವನಕ್ಕೆ ಸಂಬಂಧಿಸಿದ ಮಾಹಿತಿಯೊಂದಿಗೆ ಸಂಪರ್ಕಿಸುವುದರಿಂದ ಎರಡನ್ನೂ ನೆನಪಿನಲ್ಲಿಟ್ಟುಕೊಳ್ಳುವುದು ಸುಲಭವಾಗಿದೆ.

ನಿಮ್ಮ ಹಲ್ಲುಗಳನ್ನು ಎಡಗೈಯಿಂದ ಉಜ್ಜಿ:
ನಿಮ್ಮ ಹಲ್ಲುಗಳನ್ನು ಉಜ್ಜುವ ಪ್ರಕ್ರಿಯೆಯನ್ನು ತೆಗೆದುಕೊಂಡಾಗ, ಎಡಕೈಯಿಂದ ಉಜ್ಜಲು ಪ್ರಯತ್ನಿಸಿ ಇದರಿಂದ ಮೆದುಳಿಗೆ ಹೆಚ್ಚಿನ ಶಕ್ತಿ ಬೀಳುತ್ತದೆ ಹಾಗೂ ಅದನ್ನು ಹೆಚ್ಚು ಸಕ್ರಿಯಗೊಳಿಸುತ್ತದೆ. ಬರೆಯುವುದು, ಸೇವಿಸುವುದು, ಹಾಗೂ ಮೆಸೇಜ್ ಕಳುಹಿಸುವುದನ್ನು ಕೂಡ ನೀವು ಎಡಗೈಯಲ್ಲಿ ಪ್ರಯತ್ನಿಸಬಹುದು. ಹೀಗೆ ಎರಡೂ ಕೈಗಳಿಂದಲೂ ಕೆಲಸ ಮಾಡಲು ಪ್ರಯತ್ನಿಸಿ.

ಇದನ್ನೂ ಓದಿ:  PCOD V/s PCOS: ಇವೆರಡೂ ಒಂದೇನಾ? ಹೆಣ್ಮಕ್ಕಳನ್ನು ಕಾಡೋ ಸಮಸ್ಯೆಯ ಲಕ್ಷಣಗಳೇನು?

ಸಾಮಾಜಿಕ ಜೀವನವನ್ನು ಬೆಳೆಸಿಕೊಳ್ಳಿ:
ನಿಮ್ಮ ಜೀವನದಲ್ಲಿ ಹೆಚ್ಚು ಸ್ನೇಹಿತರು ಬಂದಂತೆ ನಿಮ್ಮ ಮನಸ್ಸು ಹೆಚ್ಚು ಉಲ್ಲಾಸಗೊಳ್ಳುತ್ತದೆ. ಹೊಸ ಜನರನ್ನು ಭೇಟಿಯಾಗುವುದು ಸಾಮಾಜಿಕ ಸಂವಹನಗಳಲ್ಲಿ ತೊಡಗಿಸಿಕೊಳ್ಳುವುದು ಹೀಗೆ ರಂಗುಭರಿತ ಜೀವನಶೈಲಿಗಳಲ್ಲಿ ತೊಡಗಿಸಿಕೊಳ್ಳಿ. ನಿಮ್ಮ ಮನಸ್ಸಿನಲ್ಲಿ ಮಡುಗಟ್ಟಿರುವ ಖಿನ್ನತೆಗಳನ್ನು ದೂರವಾಗಿಸಲು ಇದು ಸಹಕಾರಿಯಾಗಿದೆ. ಸ್ನೇಹಿತರನ್ನು ಭೇಟಿಯಾಗುವುದು ಎಂದರೆ ಹೊಸ ಸಂಗತಿಗಳನ್ನು ಕಲಿಯುವುದು ಮತ್ತು ನಿಮ್ಮ ಸ್ವಂತ ಅಭಿಪ್ರಾಯಗಳಿಂದ ಭಿನ್ನವಾಗಿರುವ ಅಭಿಪ್ರಾಯಗಳೊಂದಿಗೆ ಸಂಪರ್ಕ ಸಾಧಿಸುವುದು ಎಂದಾಗಿದೆ.
Published by:Ashwini Prabhu
First published: