Single Women: ಮನೆ, ಆಫೀಸ್​ನಲ್ಲೇ ಕಳೆದು ಹೋಗಬೇಡಿ; ಮಹಿಳೆಯರೇ ಈ ವಿಚಾರದಲ್ಲೂ ಅಡಗಿದೆ ಖುಷಿ

ದೊಡ್ಡ ನಗರಗಳಲ್ಲಾಗಲಿ, ಚಿಕ್ಕ ಊರುಗಳಲ್ಲಾಗಲಿ ಏಕಾಂಗಿಯಾಗಿ ಬದುಕು ನಡೆಸುವುದು ಭಾರಿ ಕಷ್ಟದ ವಿಚಾರ. ಅದರಲ್ಲೂ ಹೆಣ್ಣು ಮಕ್ಕಳು ಒಬ್ಬಂಟಿಯಾಗಿ ಜೀವನ ಕಳೆಯುವ ನಿರ್ಧಾರ ದೊಡ್ಡದು ಮತ್ತು ಸ್ವಲ್ಪ ಸವಾಲಿನ ಸಂಗತಿ ಎನ್ನಬಹುದು. ನೀವು ಒಂಟಿ ಮಹಿಳೆಯಾಗಿದ್ದರೆ ಮತ್ತು ಏಕಾಂಗಿಯಾಗಿರಲು ಬಯಸಿದರೆ, ನೀವು ಸಂತೋಷವಾಗಿರಲು ಸಹಾಯ ಮಾಡುವ ಕೆಲವು ಸಲಹೆಗಳು ಹೀಗಿದ್ದು, ಅವುಗಳ ಬಗ್ಗೆ ಈ ಕೆಳಗಿನ ಮಾಹಿತಿಯನ್ನು ಓದುವ ಮೂಲಕ ತಿಳಿಯಿರಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಪ್ರತಿಯೊಬ್ಬರೂ ತಮ್ಮ ಜೀವನವನ್ನು (Life) ಹೇಗೆ ಜೀವಿಸಬೇಕು ಎಂಬ ಆಯ್ಕೆಯನ್ನು ಹೊಂದುವ ಹಕ್ಕನ್ನು ಹೊಂದಿರುತ್ತಾರೆ. ಕೆಲವರು ಕುಟುಂಬದೊಂದಿಗೆ ತಮ್ಮ ಸಮಯ ಕಳೆಯಲು ಇಷ್ಟಪಟ್ಟರೆ, ಇತರರು ತಮ್ಮದೇ ಆದ ಉದ್ಯೋಗ (Job), ಕಂಪನಿ ಆರಂಭಿಸಿ ತಮ್ಮ ಕಾಲ ಮೇಲೆ ತಾವು ನಿಲ್ಲಲು ಇಷ್ಟ ಪಡುತ್ತಾರೆ. ಅದಕ್ಕೆ ಅಂತಾನೇ ಕೆಲವರು ಮನೆ, ಕುಟುಂಬದವರು (Family) ಎಲ್ಲರನ್ನೂ ಬಿಟ್ಟು ಒಬ್ಬಂಟಿಯಾಗಿ ಜೀವನ ನಡೆಸುತ್ತಿರುತ್ತಾರೆ. ಒಂಟಿಯಾಗಿರುವವರಿಗೆ ಏಕಾಂಗಿ ಎಂಬ ಮನೋಭಾವ ಕಾಡುವುದು ಸಹಜ. ಕುಟುಂಬ ಎಲ್ಲಾ ಇದ್ದರೂ ಬೇರೆ ಕಡೆ ಹೋಗಿ ಅಥವಾ ಒಬ್ಬರೇ ವಾಸಿಸುವಾಗ ಮನೆಯವರನ್ನು ಪ್ರತಿಯೊಬ್ಬರೂ ಮಿಸ್‌ ಮಾಡಿಕೊಳ್ಳುತ್ತಾರೆ. ಈ ಸಮಯದಲ್ಲಿ ನಾವು ಮಾನಸಿಕವಾಗಿ ಸಧೃಢರಾಗಿರಬೇಕು (Mentally Strong). ಮತ್ತು ಅದೇ ಸಮಯದಲ್ಲಿ ನಮ್ಮ ಅಮೂಲ್ಯ ಜೀವನವನ್ನು ಸಂತೋಷದಿಂದ ಕಳೆಯಲು ಯೋಚಿಸಬೇಕು.

ದೊಡ್ಡ ನಗರಗಳಲ್ಲಾಗಲಿ, ಚಿಕ್ಕ ಊರುಗಳಲ್ಲಾಗಲಿ ಏಕಾಂಗಿಯಾಗಿ ಬದುಕು ನಡೆಸುವುದು ಭಾರಿ ಕಷ್ಟದ ವಿಚಾರ. ಅದರಲ್ಲೂ ಹೆಣ್ಣು ಮಕ್ಕಳು ಒಬ್ಬಂಟಿಯಾಗಿ ಜೀವನ ಕಳೆಯುವ ನಿರ್ಧಾರ ದೊಡ್ಡದು ಮತ್ತು ಸ್ವಲ್ಪ ಸವಾಲಿನ ಸಂಗತಿ ಎನ್ನಬಹುದು. ನೀವು ಒಂಟಿ ಮಹಿಳೆಯಾಗಿದ್ದರೆ ಮತ್ತು ಏಕಾಂಗಿಯಾಗಿರಲು ಬಯಸಿದರೆ, ನೀವು ಸಂತೋಷವಾಗಿರಲು ಸಹಾಯ ಮಾಡುವ ಕೆಲವು ಸಲಹೆಗಳು ಹೀಗಿದ್ದು, ಅವುಗಳ ಬಗ್ಗೆ ಈ ಕೆಳಗಿನ ಮಾಹಿತಿಯನ್ನು ಓದುವ ಮೂಲಕ ತಿಳಿಯಿರಿ.

1) ಬದಲಾವಣೆ ಅಗತ್ಯ
ಹಲವು ಬಾರಿ ಒಂದೇ ರೀತಿಯ ದಿನಚರಿ ಅನುಸರಿಸಿದಾಗ ಜೀವನ ಬೇಸರವಾಗುತ್ತದೆ. ನಿಮ್ಮ ಜೀವನವನ್ನು ಸ್ವಲ್ಪ ಹೆಚ್ಚು ಖುಷಿಯಿಂದ ಕಳೆಯಲು ಕಾಲಕಾಲಕ್ಕೆ ಕೆಲವು ಬದಲಾವಣೆಗಳನ್ನು ಮಾಡಲು ಪ್ರಯತ್ನಿಸಿ. ಉದಾಹರಣೆಗೆ, ಮನೆಯ ಅಲಂಕಾರ, ಡ್ರೆಸ್ಸಿಂಗ್ ಸೆನ್ಸ್ ಮತ್ತು ಕೇಶವಿನ್ಯಾಸದಲ್ಲಿ ಹೊಸದನ್ನು ಪ್ರಯತ್ನಿಸುವ ಮೂಲಕ ನೀವು ಬೇಸರಗೊಳ್ಳುವುದನ್ನು ತಪ್ಪಿಸಬಹುದು. ಅಲ್ಲದೆ, ನೀವು ಜೀವನವನ್ನು ಪೂರ್ಣವಾಗಿ ಎಂಜಾಯ್‌ ಕೂಡ ಮಾಡಬಹುದು. ಹೇರ್‌ ಸ್ಟೈಲ್‌, ಡ್ರೆಸ್ಸಿಂಗ್ ಸೆನ್ಸ್ ಬದಲಾವಣೆಗಳು ನಮಗೆ ಹೊಸದಾದ ಮನೋಸ್ಥೈರ್ಯ, ಚೈತನ್ಯ ನೀಡುತ್ತವೆ.

ಇದನ್ನೂ ಓದಿ: Relationship Tips: ಹೆಂಡತಿಯ ಕೋಪ ಹೋಗಲಾಡಿಸೋಕೆ ಇಲ್ಲೊಂದು ಮ್ಯಾಜಿಕ್ ಟ್ರಿಕ್ಸ್​ ಇದೆ, ಪಕ್ಕಾ ಹೆಲ್ಪ್​ ಆಗುತ್ತೆ

2) ಸ್ನೇಹಿತರೊಂದಿಗೆ ಮಾತನಾಡಿ
ಸಹಜವಾಗಿ, ನೀವು ಒಬ್ಬಂಟಿಯಾಗಿರುವಾಗ, ಸ್ನೇಹಿತರೊಂದಿಗೆ ಸಮಯ ಕಳೆಯುವುದು ಉತ್ತಮ ಆಯ್ಕೆಯಾಗಿದೆ. ಸ್ನೇಹಿತರೊಂದಿಗೆ ವಿಷಯಗಳನ್ನು ಹಂಚಿಕೊಳ್ಳುವುದರಿಂದ ಹಿಡಿದು ಅವರೊಂದಿಗೆ ಮೋಜು ಮಾಡುವವರೆಗೆ, ನೀವು ನಿಮ್ಮನ್ನು ಕಾರ್ಯನಿರತವಾಗಿ ಮತ್ತು ಸಂತೋಷವಾಗಿರಿಸಿಕೊಳ್ಳಬಹುದು. ಒಬ್ಬಂಟಿಯಾಗಿರುವವರಿಗೆ ಸ್ನೇಹಿತರೇ ಶಕ್ತಿಯಾಗಿರುತ್ತಾರೆ. ಹೀಗಾಗಿ ಸರಿಯಾದ ಸ್ನೇಹಿತರ ಆಯ್ಕೆ ಕೂಡ ಇಲ್ಲಿ ಮುಖ್ಯವಾಗಿರುತ್ತದೆ.

3) ಡೈರಿ ಬರೆಯುವ ಅಭ್ಯಾಸ ಮಾಡಿಕೊಳ್ಳಿ
ಒಬ್ಬಂಟಿಯಾಗಿ ಇದ್ದಾಗ ಸಹಜವಾಗಿ ಮನಸ್ಸಿನಲ್ಲಿ ಆಗಾಗ ಬೇರೆ ಬೇರೆ ಯೋಚನೆಗಳು ಬರುತ್ತವೆ. ಅದೇ ಸಮಯದಲ್ಲಿ, ನಕಾರಾತ್ಮಕ ವಿಷಯಗಳು ಸಹ ನಿಮ್ಮನ್ನು ಕಾಡಬಹುದು. ಆದ್ದರಿಂದ, ಇದನ್ನು ನಿವಾರಿಸಲು ಡೈರಿ ಬರೆಯುವುದು ಉತ್ತಮ ಆಯ್ಕೆಯಾಗಿದೆ. ನಿಮ್ಮ ದಿನಚರಿಯಲ್ಲಿ ನಿಮ್ಮ ಭಾವನೆಗಳನ್ನು ಬರೆಯುವ ಮೂಲಕ ನೀವು ಸಂತೋಷವನ್ನು ಅನುಭವಿಸಬಹುದು.

4)ವೃತ್ತಿಜೀವನದತ್ತ ಗಮನಹರಿಸಿ
ಒಂಟಿಯಾಗಿರುವಾಗ ಕೆಲವೊಮ್ಮೆ ಬೇಸರವಾಗುತ್ತದೆ. ನಿಮ್ಮನ್ನು ಪ್ರೇರೇಪಿಸಲು ನಿಮ್ಮ ವೃತ್ತಿಜೀವನದ ಮೇಲೆ ಹೆಚ್ಚೆಚ್ಚು ಕೇಂದ್ರೀಕರಿಸಿ. ವೃತ್ತಿಜೀವನದ ಬಗ್ಗೆ ಉತ್ಸಾಹ ಹೊಂದಿರುವ ಜನರು ಮತ್ತು ಗುರಿಯನ್ನು ಸಾಧಿಸಲೇಬೇಕೆಂದಿರುವವರು ಯಾವಾಗಲೂ ಸಂತೋಷವಾಗಿರುತ್ತಾರೆ ಮತ್ತು ಇದು ನಮ್ಮನ್ನು ಕೆಟ್ಟ ಯೋಚನೆಗಳಿಂದ ದೂರವಿರಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Office Tips: ಆಫೀಸ್‌ನಲ್ಲಿ ನೀವು ಎಲ್ಲರ ಫೇವರೇಟ್ ಆಗ್ಬೇಕಾ? ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ ಸಾಕು!

5) ದೈನಂದಿನ ದಿನಚರಿ
ಒಂಟಿ ಮಹಿಳೆಯರು ತಮಗಾಗಿ ಆರೋಗ್ಯಕರ ದಿನಚರಿಯನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ಅವರು ಏಕಾಂಗಿಯಾಗಿ ಸಂತೋಷವಾಗಿರಲು ದಿನಚರಿಯಲ್ಲಿ ಯೋಗ ಅಥವಾ ವ್ಯಾಯಾಮವನ್ನು ಸೇರಿಸಬಹುದು. ಧ್ಯಾನ, ಯೋಗ ಮತ್ತು ಕ್ರೀಡಾ ಚಟುವಟಿಕೆಗಳು ನಿಮಗೆ ಸಂತೋಷವನ್ನು ನೀಡುವುದಲ್ಲದೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಬಲವಾಗಿರಲು ಸಹಾಯ ಮಾಡುತ್ತದೆ.

ಒಂಟಿ ಮಹಿಳೆಯರು ಈ ಎಲ್ಲಾ ಮೇಲಿನ ಅಂಶಗಳನ್ನು ಅನುಸರಿಸುವುದರ ಮೂಲಕ ಬೇಸರದ ಜೀವನದಿಂದ ಮುಕ್ತಿ ಪಡೆದು ಖುಷಿಯಾಗಿರಬಹುದು. ಅಂತೆಯೇ ಒಬ್ಬಂಟಿಯಾಗಿ ಬದುಕುವ ಮಹಿಳೆ ತನ್ನ ಸುರಕ್ಷತೆಯ ಬಗ್ಗೆಯೂ ಕಾಳಜಿ ಮಾಡಬೇಕು.
Published by:Ashwini Prabhu
First published: