• Home
  • »
  • News
  • »
  • lifestyle
  • »
  • Exam Tips: ಪರೀಕ್ಷೆಯಲ್ಲಿ ಚೆನ್ನಾಗಿ ಅಂಕ ಪಡೆದುಕೊಳ್ಳಬೇಕೆ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ

Exam Tips: ಪರೀಕ್ಷೆಯಲ್ಲಿ ಚೆನ್ನಾಗಿ ಅಂಕ ಪಡೆದುಕೊಳ್ಳಬೇಕೆ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಫೋನ್‌, ಮೆಸೇಜ್‌, ಸಾಮಾಜಿಕ ತಾಲತಾಣ ಹೀಗೆ ವಿದ್ಯಾರ್ಥಿಗಳ ಸಮಯ ವ್ಯರ್ಥವಾಗುತ್ತಿರುತ್ತೆ. ಏಕಾಗ್ರತೆ ಇಲ್ಲದಿರುವುದು ಹಾಗೂ ಆಲಸ್ಯ ಇವು ವಿದ್ಯಾರ್ಥಿಗಳ ದೊಡ್ಡ ಸಮಸ್ಯೆ. ಅದು ನಿಮ್ಮನ್ನು ನಿಮ್ಮ ಗುರಿಯಿಂದ ವಿಚಲಿತರಾಗುವಂತೆ ಮಾಡುತ್ತೆ. ನಿಮ್ಮ ಸಾಮರ್ಥ್ಯ ಪೋಲಾಗುವಂತೆ ಮಾಡುತ್ತೆ. ಹಾಗಿದ್ರೆ ನೀವು ಇದರಿಂದ ಹೊರಬರುವುದು ಹೇಗೆ ಅನ್ನೋದನ್ನ ನೋಡೋಣ.

ಮುಂದೆ ಓದಿ ...
  • Share this:

ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆಗಳು (Exam) ಎದುರಾಗುತ್ತಲೇ ಇರುತ್ತವೆ. ಪರೀಕ್ಷೆಗಳೆಂದರೆ ವಿದ್ಯಾರ್ಥಿಗಳಿಗೆ ಟೆನ್ಶನ್‌ ಸಾಮಾನ್ಯ. ಓದುವುದು, ನೆನಪಿಟ್ಟುಕೊಳ್ಳುವುದು, ಸರಿಯಾಗಿ ಉತ್ತರ ನೀಡುವುದು ಹೀಗೆ ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ (Student) ಗಲಿಬಿಲಿಯಾಗೋದು ಸಹಜ. ಆದ್ರೆ ಇವುಗಳನ್ನ ಎದುರಿಸಲು ಒಂದಷ್ಟು ಸಿದ್ಧತೆ ಹಾಗೂ ಕ್ರಮವನ್ನು ಅನುಸರಿಸಿದರೆ ಪರೀಕ್ಷೆ ಅನ್ನೋದು ಸುಲಭವಾಗಿಬಿಡುತ್ತೆ. ಬಹಳಷ್ಟು ವಿದ್ಯಾರ್ಥಿಗಳು ಸ್ಟಡಿ ಗೋಲ್ಸ್‌ ಹಾಗೂ ದಿನದ ಟೈಂ ಟೇಬಲ್‌ ಅನ್ನು (Time Table) ಯಾವಾಗಲೂ ಬದಲಾಯಿಸುತ್ತಲೇ ಇರ್ತಾರೆ. ಸ್ಟಡಿ ಪ್ಲಾನ್‌ ಬದಲಾಯಿಸೋದು, ನಿರಂತರ ಗೊಂದಲಗಳು, ಆಲಸ್ಯಗಳು ಅವರನ್ನ ಕಾಡುತ್ತಿರುತ್ತವೆ.  ಇದಕ್ಕೆ ಕಾರಣ ಇಂದು ನಮ್ಮ ಮುಂದಿರುವ ಪರಿಸ್ಥಿತಿ.


ಇಲ್ಲಿ ವಿದ್ಯಾರ್ಥಿಗಳ ಏಕಾಗ್ರತೆಗೆ ಭಂಗ ತರುವ, ಗಮನವನ್ನು ಬೇರೆಡೆ ಸೆಳೆಯುವ ಸಂಗತಿಗಳೇ ನಮ್ಮ ಸುತ್ತ ತುಂಬಿವೆ. ಫೋನ್‌, ಮೆಸೇಜ್‌, ಸಾಮಾಜಿಕ ತಾಲತಾಣ ಹೀಗೆ ವಿದ್ಯಾರ್ಥಿಗಳ ಸಮಯ ವ್ಯರ್ಥವಾಗುತ್ತಿರುತ್ತೆ. ಏಕಾಗ್ರತೆ ಇಲ್ಲದಿರುವುದು ಹಾಗೂ ಆಲಸ್ಯ ಇವು ವಿದ್ಯಾರ್ಥಿಗಳ ದೊಡ್ಡ ಸಮಸ್ಯೆ. ಅದು ನಿಮ್ಮನ್ನು ನಿಮ್ಮ ಗುರಿಯಿಂದ ವಿಚಲಿತರಾಗುವಂತೆ ಮಾಡುತ್ತೆ. ನಿಮ್ಮ ಸಾಮರ್ಥ್ಯ ಪೋಲಾಗುವಂತೆ ಮಾಡುತ್ತೆ. ಹಾಗಿದ್ರೆ ನೀವು ಇದರಿಂದ ಹೊರಬರುವುದು ಹೇಗೆ ಅನ್ನೋದನ್ನ ನೋಡೋಣ.


1. ಅನುಕೂಲಕರ ಪರಿಸರ ಆಯ್ಕೆ
ನೀವು ಅನುಕೂಲಕರ ವಾತಾವರಣದಲ್ಲಿ ಓದುವುದು ಅಥವಾ ಅಭ್ಯಾಸ ಮಾಡುವುದು ನಿಮ್ಮ ಏಕಾಗ್ರತೆ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗೊಂದಲವನ್ನು ಕಡಿಮೆ ಮಾಡುತ್ತದೆ. ಜೊತೆಗೆ ನಿಮ್ಮ ಆಲಸ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಟಿವಿ, ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಇತರ ಸಾಧನಗಳಿಂದ ದೂರವಿರುವ, ಅಧ್ಯಯನಕ್ಕಾಗಿ ಆರಾಮದಾಯಕ ವಾತಾವರಣವನ್ನು ಆಯ್ಕೆ ಮಾಡಿಕೊಳ್ಳಿ. ಶಾಲೆಯ ಕೆಲಸವನ್ನು ಮಾಡುವಾಗ, ನೀವು ಎಲ್ಲಿ ಮತ್ತು ಯಾರೊಂದಿಗೆ ಕುಳಿತುಕೊಳ್ಳುತ್ತೀರಿ ಎಂಬುದನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ.


ಇದನ್ನೂ ಓದಿ:  Happy Workers: ಇಷ್ಟದ ಕೆಲಸ, ಸ್ಯಾಲರಿಯಲ್ಲಿಲ್ಲ ಮೋಸ: ಈ ವೃತ್ತಿಯಲ್ಲಿರುವವರಿಗೆ ಯಾವುದೇ ಚಿಂತೆ ಇಲ್ಲವಂತೆ!


2. ಸಣ್ಣ ಗುರಿ ನಿಮ್ಮದಾಗಿರಲಿ
ಒಂದೇ ಸಲಕ್ಕೆ ದೊಡ್ಡ ಗುರಿ ಸಾಧನೆಯ ಬೆನ್ನು ಹತ್ತಿ ಮನಸ್ಸಿಗೆ ಒತ್ತಡ ತಂದುಕೊಳ್ಳಬೇಡಿ. ಬದಲಿಗೆ ಸಣ್ಣ ಸಣ್ಣ ಗುರಿಗಳನ್ನು ಹಾಕಿಕೊಳ್ಳಿ. ಅದನ್ನು ಪೂರ್ಣಗೊಳಿಸಿ. ಒಂದು ದೊಡ್ಡ ಅಧ್ಯಾಯವನ್ನು ಪೂರ್ಣಗೊಳಿಸುವ ಗುರಿಯ ಬದಲು ಸ್ವಲ್ಪ ಸ್ವಲ್ಪ ವೇ ಓದಿಕೊಂಡು ಮನನ ಮಾಡಿ. ಸಣ್ಣ ವಿರಾಮದ ನಂತರ ಮತ್ತೆ ಓದಿ. ಇದರಿಂದ ನಿಮ್ಮ ಮೆದುಳು ಹೆಚ್ಚಿನ ಏಕಾಗ್ರತೆಯೊಂದಿಗೆ ವಿಷಯ ಗ್ರಹಿಸಲು ಸಾಧ್ಯವಾಗುತ್ತದೆ.


3. ಚಿಕ್ಕ ಚಿಕ್ಕ ಬ್ರೇಕ್‌ ತೆಗೆದುಕೊಳ್ಳಿ
ಒಂದೇ ಸಲ ಬಹಳಷ್ಟು ಕೆಲಸ ಮಾಡುವುದನ್ನು ತಪ್ಪಿಸಿ. ಗೊಂದಲವನ್ನು ಕಡಿಮೆ ಮಾಡಲು ಹಾಗೂ ಮಾಡಬೇಕಾಗಿರುವ ಕಾರ್ಯದ ಮೇಲೆ ಗಮನ ಕೇಂದ್ರೀಕರಿಸಲು ʼಪೊಮೊಡೊರೊ ಟೆಕ್ನಿಕ್' ಅನ್ನು ಬಳಸಿ.25 ನಿಮಿಷಗಳ ಸ್ಲಾಟ್‌ಗಳನ್ನು ರಚಿಸಿ, ನಿಮ್ಮ ಟೈಮರ್ ಅನ್ನು ಹೊಂದಿಸಿ ಮತ್ತು ಅಭ್ಯಾಸ ಮಾಡಿ. ಟೈಮರ್ ಆಫ್ ಆದ ನಂತರ, ಸ್ವಲ್ಪ ವಿರಾಮ ತೆಗೆದುಕೊಳ್ಳಿ, ತದನಂತರ ಇದನ್ನೇ ಪುನರಾವರ್ತಿಸಿ. ಆಗ ಮತ್ತೆ ಹೆಚ್ಚಿನ ಎನರ್ಜಿಯೊಂದಿಗೆ ನೀವು ಅಭ್ಯಾಸ ಮಾಡಲು ತೊಡಗುತ್ತೀರಿ.


4. ವಾಸ್ತವಿಕ ಗುರಿಯ ಮೇಲೆ ನಿಮ್ಮ ಗಮನವಿರಲಿ
ಮಹತ್ವಾಕಾಂಕ್ಷೆ ಒಳ್ಳೆಯದು. ಆದರೆ ಅವಾಸ್ತವಿಕ ನಿರೀಕ್ಷೆಗಳಿಂದ ನಿಮ್ಮ ಆತ್ಮ ವಿಶ್ವಾಸ ಕುಂದುತ್ತದೆ. ನೀವು ಧನಾತ್ಮಕವಾದ , ದೃಢವಾದ ಹಾಗೂ ಅರ್ಥಪೂರ್ಣ ಗುರಿಗಳನ್ನು ಹೊಂದಿರಿ. ಅಂತಿಮ ಗುರಿಯ ಮೇಲೆ ಗಮನ ಕೇಂದ್ರೀಕರಿಸುವ ಮೊದಲು ಸದ್ಯ ಮಾಡುತ್ತಿರುವ ಕೆಲಸವನ್ನು ಸರಿಯಾಗಿ ಮಾಡಿ. ವಾಸ್ತವಿಕ ಗುರಿಗಳ ಮೇಲೆ ಗಮನ ಕೇಂದ್ರೀಕರಿಸಿ.


5. ಏನು ಮಾಡಬಾರದು ಎಂಬುದನ್ನು ನಿರ್ಧರಿಸಿ
ಆಲಸ್ಯವನ್ನು ಸೋಲಿಸಲು ನೀವು ದೃಢವಾದ ನಿರ್ಧಾರ ಮಾಡಬೇಕು. ನಿಮ್ಮ ಸಮಯ ಎಷ್ಟಿದೆ ಹಾಗೂ ಆ ಸಮಯದಲ್ಲಿ ನೀವು ಏನನ್ನು ಮಾಡಬೇಕು ಹಾಗೂ ಏನನ್ನು ಮಾಡಬಾರದು ಎಂಬುದನ್ನು ನಿರ್ಧರಿಸಬೇಕು. ಸಮಯದ ಗಡಿ ಒಳಗೆ ನೀವು ಕೆಲಸ ಮಾಡಬೇಕು.


ಇದನ್ನೂ ಓದಿ: Career Tips: ಸಂಗೀತವನ್ನೇ ವೃತ್ತಿಯಾಗಿ ತೆಗೆದುಕೊಳ್ಳುವುದಾದ್ರೆ; ಈ ವಿಷಯದ ಬಗ್ಗೆ ಇರಲಿ ಗಮನ


ಇವಿಷ್ಟು ಏಕಾಗ್ರತೆಗೆ ಹಾಗೂ ಪರೀಕ್ಷೆಗಳನ್ನು ಚೆನ್ನಾಗಿ ಎದುರಿಸಲು ಮಾಡಬೇಕಾದ ಕ್ರಮಗಳು. ಇವುಗಳ ಹೊರತಾಗಿಯೂ ಬೇಕಾದಷ್ಟು ಧನಾತ್ಮಕ ಕ್ರಮಗಳನ್ನು ನೀವು ಅನುಸರಿಸಬಹುದು.

Published by:Ashwini Prabhu
First published: