Pet Care: ಬೇಸಿಗೆಯಲ್ಲಿ ಸಾಕು ಪ್ರಾಣಿಗಳ ಆರೈಕೆಗೆ ಹೇಗೆ? ಇಲ್ಲಿವೆ ಓದಿ 5 ಸಲಹೆ

ಸಾಕು ಪ್ರಾಣಿಗಳ ಮಾಲೀಕರು ಬೇಸಿಗೆಯಲ್ಲಿ ತಮ್ಮ ಆರೈಕೆ ಮಾತ್ರವಲ್ಲ, ತಮ್ಮ ಸಾಕು ಪ್ರಾಣಿಗಳ ಆರೈಕೆಯಲ್ಲಿನ ಸವಾಲುಗಳನ್ನು ಎದುರಿಸಲು ಕೂಡ ಸಿದ್ಧವಾಗಿರಬೇಕು. ಅದಕ್ಕೆ ಸಂಬಂಧಿಸಿದಂತೆ ಇಲ್ಲಿವೆ 5 ಸಲಹೆಗಳು...

ಸಾಕು ಪ್ರಾಣಿಗಳು

ಸಾಕು ಪ್ರಾಣಿಗಳು

 • Share this:
  ನಮ್ಮಲ್ಲಿ ಬಹಳಷ್ಟು ಮಂದಿಯ ಪಾಲಿಗೆ ಬೇಸಿಗೆ (Summer) ಎಂದರೆ ಆಹ್ಲಾದಕರ ಪ್ರವಾಸಗಳು (Trip) ಮತ್ತು ಮನರಂಜನೆಗಳ (Entertainment) ಮೂಲಕ ಖುಷಿ ಪಡುವ ಕಾಲ. ಆದರೆ ಬೇಸಿಗೆಯ ಸುಡು ಬಿಸಿಲು, ಅತ್ಯಧಿಕ ತಾಪಮಾನ ನಮ್ಮೆಲ್ಲರನ್ನು ಹೈರಾಣಾಗಿಸುತ್ತದೆ ಎಂಬುವುದನ್ನು ಕೂಡ ಒಪ್ಪದಿರಲು ಸಾಧ್ಯವಿಲ್ಲ. ನಮ್ಮ ಪಾಡು ಹೀಗಾದರೆ, ಮೂಕ ಪ್ರಾಣಿಗಳ (Animals) ಕಥೆ ಇನ್ನು ಹೇಗಿರಬಹುದು..? ವನ್ಯ ಜೀವಿಗಳು ಋತುಮಾನದ ಬದಲಾವಣೆಗಳಿಗೆ ಆರಾಮವಾಗಿ ಹೊಂದುಕೊಳ್ಳುತ್ತವೆಯಾದರೂ, ನಾಡಿನ ಪ್ರಾಣಿಗಳು ಅದರಲ್ಲೂ ಸಾಕು ಪ್ರಾಣಿಗಳು ತೀವ್ರ ತಾಪಮಾನಕ್ಕೆ ಸಲೀಸಾಗಿ ಹೊಂದಿಕೊಳ್ಳುವುದು ಕಷ್ಟವೆನ್ನಬಹುದು. ಅವುಗಳು ಕೂಡ ತಮ್ಮ ಮಾಲೀಕರಂತೆ ಬಿಸಿಲಿನ ಬೇಗೆಗೆ ಬಸವಳಿಯುತ್ತವೆ. ಹಾಗಾಗಿ, ಸಾಕು ಪ್ರಾಣಿಗಳ ಮಾಲೀಕರು ಬೇಸಿಗೆಯಲ್ಲಿ ತಮ್ಮ ಆರೈಕೆ (Care) ಮಾತ್ರವಲ್ಲ, ತಮ್ಮ ಸಾಕು ಪ್ರಾಣಿಗಳ ಆರೈಕೆಯಲ್ಲಿನ ಸವಾಲುಗಳನ್ನು ಎದುರಿಸಲು ಕೂಡ ಸಿದ್ಧವಾಗಿರಬೇಕು. ಅದಕ್ಕೆ ಸಂಬಂಧಿಸಿದಂತೆ ಇಲ್ಲಿವೆ 5 ಸಲಹೆಗಳು.

  ಶಾಖದ ಬಗ್ಗೆ ಗಮನವಿರಲಿ

  ಮನುಷ್ಯರು ಸೆಕೆಗೆ ಬೆವರಿದರೆ, ನಾಯಿಗಳು ತಮ್ಮ ಪಂಜಗಳ ಮೂಲಕ ಮತ್ತು ಏದುಸಿರು ಬಿಡುವ ಮೂಲಕ ಶಾಖವನ್ನು ಹೊರ ಹಾಕುತ್ತವೆ. ನಮ್ಮಂತೆ ಪ್ರಾಣಿಗಳನ್ನು ಕೂಡ ಬೇಸಿಗೆಯಲ್ಲಿ ಕಾಡುವ ಪ್ರಮುಖ ಸಮಸ್ಯೆಗಳಲ್ಲಿ ನಿರ್ಜಲೀಕರಣವು ಕೂಡ ಒಂದು.

  ಎಎಸ್‍ಪಿಸಿಎ ಪ್ರಕಾರ, ಚಪ್ಪಟೆ ಮುಖದ ಪ್ರಾಣಿಗಳಾದ ಪಗ್ ಮತ್ತು ಪರ್ಶಿಯನ್ ಬೆಕ್ಕು ಮುಂತಾದವುಗಳಿಗೆ ಸಲೀಸಾಗಿ ಏದುಸಿರು ಬಿಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅವು ಶಾಖದ ಹೊಡೆದಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ನೀವು ಬೇಸಿಗೆಯಲ್ಲಿ ಧಡೂತಿ ಅಥವಾ ವಯಸ್ಸಾದ ಅಥವಾ ಶ್ವಾಸಕೋಶ ಮತ್ತು ಹೃದಯದ ಕಾಯಿಲೆಗಳುಳ್ಳ ಸಾಕು ಪ್ರಾಣಿಗಳ ಮೇಲೆ ವಿಶೇಷವಾಗಿ ಕಣ್ಣಿಟ್ಟಿರಬೇಕಾಗುತ್ತದೆ. ಫಿಡೋ ಮತ್ತು ಫ್ಲಫಿಗಳು ಸದಾ ತಂಪಾದ ನೀರು ಕುಡಿಯುತ್ತಿರುವಂತೆ ಮತ್ತು ಬಿಸಿಲು ಹೆಚ್ಚಿದ್ದ ಸಮಯದಲ್ಲಿ ಹೊರಗೆ ಓಡಾಡದಂತೆ ನೋಡಿಕೊಳ್ಳಿ.

  ಕೀಟಗಳಿಂದ ದೂರ ಮತ್ತು ಸುರಕ್ಷಿತವಾಗಿಡಿ

  ಬೇಸಿಗೆಯಲ್ಲಿ ಸಾಕು ಪ್ರಾಣಿಗಳನ್ನು ಉಣ್ಣಿ ಮತ್ತು ಕೀಟಗಳಿಂದ ದೂರ ಇಡುವುದು ಮತ್ತೊಂದು ಸವಾಲಿನ ಕೆಲಸ. ಕೀಟಗಳು ರೋಗಗಳನ್ನು ಹೊತ್ತು ತರುತ್ತವೆ ಸರಿ. ಆದರೆ ಅವುಗಳನ್ನು ನಿಮ್ಮ ಮನೆಯ ಹೊರಾಂಗಣದಲ್ಲಿ, ಹುಲ್ಲುಹಾಸು ಮತ್ತು ಗಿಡಗಳಿಂದ ದೂರವಿಡಲು ನೀವು ಬಳಸುವ ರಸಗೊಬ್ಬರಗಳು ಮತ್ತು ಕೀಟನಾಶಕಗಳು ಇದನ್ನು ನಿವಾರಿಸುತ್ತವೆಯಾದರೂ, ಪ್ರಾಣಿಗಳ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ.

  ಇದನ್ನೂ ಓದಿ: North Karnataka Food: ಖಡಕ್ ರೊಟ್ಟಿ, ಗಟ್ಟಿ ಚಟ್ನಿ ತಿನ್ಬೇಕು ಅಂದ್ರೆ ಬೆಂಗಳೂರಿನ ಈ ಟಾಪ್ 5 ಸ್ಥಳಗಳಿಗೆ ಮಿಸ್​ ಮಾಡ್ದೇ ಹೋಗಿ

  ನಿಮ್ಮ ಸಾಕು ಪ್ರಾಣಿಗಳು ಓಡಾಡುವ ಜಾಗದಲ್ಲಿ, ಕ್ರಿಮಿ ಕೀಟಗಳು ದೂರ ಇರುವಂತೆ ಮಾಡಲು ಅಲ್ಲಿನ ಹುಲ್ಲುಹಾಸುಗಳನ್ನು ಚಿಕ್ಕದಾಗಿ ಕತ್ತರಿಸಿ. ನೆರೆಯವರ ಲಾನ್‍ಗಳಲ್ಲಿ ಪ್ರಾಣಿಗಳನ್ನು ವಾಕ್‍ಗೆ ಕರೆದುಕೊಂಡು ಹೋದಾಗ, ಅವರು ಕೀಟನಾಶಕಗಳನ್ನು ಬಳಸಿದ್ದಾರೆಯೇ ಎಂಬುದರ ಬಗ್ಗೆ ಗಮನ ಇರಲಿ. ನಿಮ್ಮ ಸಾಕು ಪ್ರಾಣಿಗಳನ್ನು ಬೇಸಿಗೆಯಲ್ಲಿ ತಿಗಣೆ, ಉಣ್ಣಿ ಮತ್ತಿತರ ಕೀಟಗಳಿಂದ ಕಾಪಾಡುವ ಸುರಕ್ಷಿತ ವಿಧಾನದ ಬಗ್ಗೆ ವೈದ್ಯರಿಂದ ಸಲಹೆ ಪಡೆಯಿರಿ.

  ಆ್ಯಂಟಿಫ್ರೀಜ್ ಬಗ್ಗೆ ಎಚ್ಚರವಿರಲಿ

  ಬೇಸಿಗೆಯಲ್ಲಿ, ಕಾರುಗಳು ಓವರ್‌ ಹೀಟ್‌ ಆದಾಗ, ಅವುಗಳಿಂದ ಆ್ಯಂಟಿಫ್ರೀಜ್‍ಗಳು ಸೋರಿಕೆ ಆಗಬಹುದು. ನಾಯಿಗಳು ಅವುಗಳನ್ನು ನುಂಗದಂತೆ ನೋಡಿಕೊಳ್ಳಿ. ಅದು ಮಾರಣಾಂತಿಕವಾಗಬಲ್ಲದು. ನಿಮ್ಮ ನೆರೆಹೊರೆಯವರ ಕಾರುಗಳು ಮತ್ತು ಸುತ್ತಲಿನ ಕೊಚ್ಚೆ ಗುಂಡಿಗಳಿಂದ ಸಾಕುಪ್ರಾಣಿಗಳನ್ನು ದೂರವಿಡಿ.

  ಸನ್‍ಸ್ಕ್ರೀನ್‍ನ ಅಗತ್ಯವನ್ನು ಪರಿಶೀಲಿಸಿ

  ಮೈಮೇಲೆ ಹೆಚ್ಚು ಕೂದಲಿಲ್ಲದ ಮತ್ತು ಗುಲಾಬಿ ಚರ್ಮ ಹೊಂದಿರುವ ಸಾಕು ಪ್ರಾಣಿಗಳು ಸನ್‍ಬರ್ನ್‍ಗೆ ಒಳಗಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಪ್ರಾಣಿಗೆ ಯಾವ ಸನ್‍ಸ್ಕ್ರೀನ್ ಅಗತ್ಯ ಎಂಬುದರ ಬಗ್ಗೆ ಪಶುವೈದ್ಯರ ಜೊತೆ ಚರ್ಚಿಸಿ, ನಿರ್ಧಾರ ಕೈಗೊಳ್ಳಿ. ಪ್ರಾಣಿಗಳಿಗೆಂದು ತಯಾರಿಸ್ಪಲಡದ ಸನ್‍ಸ್ಕ್ರೀನ್ ಅಥವಾ ಕೀಟ ನಿವಾರಕಗಳನ್ನು ಅವುಗಳ ಮೇಲೆ ಬಳಸಬೇಡಿ. ಅವು ಸಾಕುಪ್ರಾಣಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ.

  ನೀರಿನ ಸುರಕ್ಷತೆಯ ಅಭ್ಯಾಸ

  ಬೇಸಿಗೆಯಲ್ಲಿ ನಾವು ತಂಪಾದ ಅನುಭವ ಪಡೆಯಲು, ಬೀಚ್ ಅಥವಾ ಈಜುಕೊಳಗಳಿಗೆ ಹೋಗುವುದು ಸಾಮಾನ್ಯ. ಅಂತೆಯೇ ನಿಮ್ಮ ಪ್ರಾಣಿಗಳನ್ನು ಕೂಡ ಅಲ್ಲಿಗೆ ಕರೆದುಕೊಂಡು ಹೋಗುವುದು ಅವುಗಳಿಗೆ ಖುಷಿ ನೀಡಬಹುದು. ಆದರೆ ಅಂತಹ ಜಾಗಗಳಲ್ಲಿ ನೀರಿನಿಂದ ಅವು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ಕೂಡ ನಿಮ್ಮ ಜವಾಬ್ದಾರಿ ಆಗಿರುತ್ತದೆ. ನೀವು ಬೇಸಿಗೆಯ ಸಾಹಸಿ ಆಟಗಳಾದ ಬೋಟಿಂಗ್ ಇತ್ಯಾದಿಗಳಿಗೂ ಸಾಕುಪ್ರಾಣಿಗಳನ್ನು ಕರೆದುಕೊಂಡು ಹೋಗುವಿರಾದರೆ, ಅವುಗಳಿಗೆ ಜೀವರಕ್ಷಕವನ್ನು ಕೊಳ್ಳುವುದನ್ನು ಮರೆಯಬೇಡಿ.

  ಇದನ್ನೂ ಓದಿ: Animal Care: ಮನುಷ್ಯರಂತೆ ತೂಕ ಇಳಿಸಿಕೊಳ್ಳಲು ವರ್ಕೌಟ್, ಡಯಟ್ ಮಾಡ್ತಿವೆ ಪಾಂಡಾಗಳು

  ಬೇಸಿಗೆಯಲ್ಲಿ ನಾಯಿಗಳ ಸುರಕ್ಷತೆ ಕಷ್ಟಕರ ಸಂಗತಿಯೇನೂ ಅಲ್ಲ, ಆದರೆ ಕೊಂಚ ಹೆಚ್ಚು ಗಮನ ಹರಿಸಬೇಕು ಅಷ್ಟೇ. ನಿಮ್ಮ ಸಾಕು ಪ್ರಾಣಿಯನ್ನು ಬೇಸಿಗೆಯಲ್ಲಿ ಮಗುವನ್ನು ನೋಡಿಕೊಳ್ಳುವಂತೆ ಆರೈಕೆ ಮಾಡುವುದು ಉತ್ತಮ.
  Published by:Annappa Achari
  First published: