• Home
  • »
  • News
  • »
  • lifestyle
  • »
  • Skin Care: ಪಿಗ್ಮಂಟೇಶನ್‌ ನಿಂದ ನಿಮ್ಮ ಮುಖದ ಕಾಂತಿ ಹಾಳಾಗಿದ್ಯಾ? ಮನೆಯಲ್ಲೇ ಈ 5 ಫೇಸ್ ಪ್ಯಾಕ್‌ ಟ್ರೈ ಮಾಡಿ

Skin Care: ಪಿಗ್ಮಂಟೇಶನ್‌ ನಿಂದ ನಿಮ್ಮ ಮುಖದ ಕಾಂತಿ ಹಾಳಾಗಿದ್ಯಾ? ಮನೆಯಲ್ಲೇ ಈ 5 ಫೇಸ್ ಪ್ಯಾಕ್‌ ಟ್ರೈ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮುಖದಲ್ಲಿ ವಿಪರೀತ ಕಲೆಗಳು, ಗೆರೆಗಳು ಇವೆಲ್ಲ ಲಕ್ಷಣಗಳನ್ನು ನೀವು ಗಮನಿಸಿಯೇ ಇರುತ್ತಿರಿ? ತ್ವಚೆ ಆರೈಕೆ ತಜ್ಞರ ಪ್ರಕಾರ, ಚರ್ಮಕ್ಕೆ ಸೂಕ್ತ ಆರೈಕೆ ಸಿಗದೇ ಮುಖದ ಬಣ್ಣವು ತೀರಾ ಕಪ್ಪಾಗಿ ಕಾಣುವುದು, ಕೈಗಳು ಮತ್ತು ಕಾಲುಗಳಲ್ಲಿ ಕಪ್ಪು ಮಚ್ಚೆಗಳ ತರ ಕಾಣಿಸುವುದು, ಮುಖದಲ್ಲಿ ಅಥವಾ ಬೇರೆ ಇನ್ಯಾವುದೇ ದೇಹದ ಭಾಗದಲ್ಲಿ ಕಾಣಿಸುವ ಕಪ್ಪು ಮಚ್ಚೆಗಳನ್ನು ಪಿಗ್ಮಂಟೇಶನ್‌ ಅಥವಾ ವರ್ಣಕತೆ ಎಂದು ಕರೆಯಲಾಗುತ್ತದೆ.

ಮುಂದೆ ಓದಿ ...
  • Share this:

ನಮ್ಮ ಮುಖ ಕಾಂತಿಯಿಂದ (Face Glow) ಹೊಳೆಯಬೇಕು. ನಾವು ಎಲ್ಲರಿಗಿಂತ ಸುಂದರವಾಗಿ ಕಾಣಬೇಕು ಅಂತ ಪ್ರತಿಯೊಬ್ಬರಿಗೂ ಮನಸ್ಸಲ್ಲಿ ಆಸೆ ಇದ್ದೆ ಇರುತ್ತದೆ. ಆದರೆ ಕೆಲವರಿಗೆ ಈ ಚರ್ಮದ ಸಮಸ್ಯೆಗಳಿಂದ ಮುಖದ ಕಾಂತಿ ಕಡಿಮೆ ಆಗುತ್ತಲೇ ಇರುತ್ತದೆ. ಕೆಲವೊಮ್ಮೆ ನಮ್ಮ ಮುಖದ ಚರ್ಮ (Face Skin) ವಯಸ್ಸಾದವರ ಚರ್ಮದ ಹಾಗೆ ಕಾಣಿಸುತ್ತಿರುತ್ತದೆ. ಮುಖದಲ್ಲಿ ವಿಪರೀತ ಕಲೆಗಳು, ಗೆರೆಗಳು ಇವೆಲ್ಲ ಲಕ್ಷಣಗಳನ್ನು ನೀವು ಗಮನಿಸಿಯೇ ಇರುತ್ತಿರಿ? ತ್ವಚೆ ಆರೈಕೆ ತಜ್ಞರ (Skin care specialist) ಪ್ರಕಾರ, ಚರ್ಮಕ್ಕೆ ಸೂಕ್ತ ಆರೈಕೆ ಸಿಗದೇ ಮುಖದ ಬಣ್ಣವು ತೀರಾ ಕಪ್ಪಾಗಿ ಕಾಣುವುದು, ಕೈಗಳು ಮತ್ತು ಕಾಲುಗಳಲ್ಲಿ ಕಪ್ಪು ಮಚ್ಚೆಗಳ ತರ ಕಾಣಿಸುವುದು, ಮುಖದಲ್ಲಿ (Face) ಅಥವಾ ಬೇರೆ ಇನ್ಯಾವುದೇ ದೇಹದ ಭಾಗದಲ್ಲಿ ಕಾಣಿಸುವ ಕಪ್ಪು ಮಚ್ಚೆಗಳನ್ನು ಪಿಗ್ಮಂಟೇಶನ್‌ ಅಥವಾ ವರ್ಣಕತೆ ಎಂದು ಕರೆಯಲಾಗುತ್ತದೆ.


ಈ ಪಿಗ್ಮಂಟೇಶನ್‌ ಅಥವಾ ವರ್ಣಕತೆ ಸಂಭವಿಸಲು ಮುಖ್ಯ ಕಾರಣವೇನು?
ಈ ಸಮಸ್ಯೆಯು ಸೂರ್ಯನ ಅತಿಯಾದ ಬೆಳಕಿಗೆ ದೇಹವನ್ನು ಒಡ್ಡಿಕೊಳ್ಳುವುದರಿಂದ ಈ ಪಿಗ್ಮಂಟೇಶನ್‌ ಸಮಸ್ಯೆ ಉದ್ಭವಿಸುತ್ತದೆ. ಮುಖ್ಯವಾಗಿ ನೇರಳಾತೀತ ಕಿರಣಗಳು ನಮ್ಮ ದೇಹವನ್ನು ಸೋಕಿದಾಗ ದೇಹದ ಬಣ್ಣ ಕಪ್ಪಾಗಿ, ವಯಸ್ಸಾದಂತೆ ಮುಖ ತನ್ನ ಸ್ವರೂಪವನ್ನೇ ಬದಲಿಸಿ ಬಿಡುತ್ತದೆ.


ಯುಸ್‌ ಎನ್‌ಐಎಚ್‌ ಪ್ರಕಾರ, “ಚರ್ಮದ ವರ್ಣದ್ರವ್ಯವು ಮೆಲನಿನ್‌ನ ಅಧಿಕ ಉತ್ಪಾದನೆಯ ಪರಿಣಾಮವಾಗಿದೆ. ಇದು ಚರ್ಮದಲ್ಲಿ ಕಾಣಿಸುವ ಕಪ್ಪು ಕಲೆಗಳು, ಚರ್ಮ ಕಪ್ಪಾಗುವಿಕೆ ಮತ್ತು ಪ್ಯಾಚಿ ಚರ್ಮಕ್ಕೆ ಕಾರಣವಾಗುತ್ತದೆ. ಹೈಪರ್‌ಪಿಗ್ಮಂಟೇಶನ್‌ ಉಂಟಾದ ಸಂದರ್ಭದಲ್ಲಿ, ಇದು ಕೈಗಳು, ಕಾಲ್ಬೆರಳುಗಳು, ಬೆರಳುಗಳು ಮತ್ತು ಬಾಯಿಯ ಸುತ್ತಲಿನ ಪ್ರದೇಶಗಳಿಗೆ ಸಹ ಹರಡಬಹುದು” ಎಂದು ವರದಿಯಲ್ಲಿ ಹೇಳಿದೆ.


ಇದನ್ನೂ ಓದಿ:  Neetu Kapoor: ಯಂಗ್ ಆಗಿ ಕಾಣುವ ನೀತು ಕಪೂರ್ ಅವರ ಬ್ಯೂಟಿ ಮಂತ್ರವೇ ಓಟ್ಸ್ ಅಂತೆ: ಇವರ ಓಟ್ ಮೀಲ್ ರೆಸಿಪಿ ಇದು


ಹಾಗಿದ್ರೆ ಈ ಪಿಗ್ಮಂಟೇಶನ್‌ ಸಮಸ್ಯೆಗೆ ಮನೆಯಲ್ಲಿಯೇ 5 ರೀತಿಯ ಫೇಶ್‌ ಪ್ಯಾಕ್‌ ಇಲ್ಲಿವೆ:


  • ಮುಲ್ತಾನಿ ಮಿಟ್ಟಿ ಮತ್ತು ಜೇನು ಮಿಶ್ರಣದ ಫೇಸ್ ಪ್ಯಾಕ್‌
    ಮುಲ್ತಾನಿ ಮಿಟ್ಟಿಯು ಚರ್ಮದ ಅನೇಕ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ ಮತ್ತು ಮೃದು ಚರ್ಮವನ್ನು ಪಡೆಯಲು ಇದು ಅತ್ಯಂತ ಪರಿಣಾಮಕಾರಿ ಪರಿಹಾರಗಳಲ್ಲಿ ಒಂದಾಗಿದೆ. ನೀವು ಮುಲ್ತಾನಿ ಮಿಟ್ಟಿ, ಜೇನುತುಪ್ಪ ಮತ್ತು ರೋಸ್ ವಾಟರ್ ಅನ್ನು ಬಳಸಬಹುದು. ನಾಲ್ಕು ಚಮಚ ಶ್ರೀಗಂಧವನ್ನು ಅರ್ಧ ಚಮಚ ಜೇನುತುಪ್ಪ ಮತ್ತು ಎರಡು ಚಮಚ ರೋಸ್ ವಾಟರ್ ಬೆರೆಸಿ. ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ ಹಾಗೂ ಕ್ಲೆನ್ಸರ್ ಮತ್ತು ತಣ್ಣೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ. ನಿಮ್ಮ ಮುಖವನ್ನು ಒರೆಸಿಕೊಂಡು ಈ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಾಕಿ 25 ನಿಮಿಷಗಳ ನಂತರ ಅದನ್ನು ತೊಳೆಯಿರಿ. ವಾರಕ್ಕೆ ಎರಡು ಸಲ ಈ ರೀತಿ ಮಾಡುವುದರಿಂದ ನಿಮ್ಮ ಪಿಗ್ಮಂಟೇಶನ್‌ ಸಮಸ್ಯೆ ಗುಣವಾಗುತ್ತದೆ.

  • ಬಾದಾಮಿ ಮತ್ತು ಹಸಿ ಹಾಲಿನ ಫೇಸ್ ಪ್ಯಾಕ್
    ಒಂದು ಹಿಡಿ ಬಾದಾಮಿಯನ್ನು ರಾತ್ರಿಯಿಡೀ ನೆನೆಸಿ ಮತ್ತು ಮರುದಿನ ಬೆಳಿಗ್ಗೆ ಅವುಗಳ ಸಿಪ್ಪೆಯನ್ನು ಸುಲಿಯಿರಿ. ನೆನೆಸಿದ ಬಾದಾಮಿಯನ್ನು ರುಬ್ಬಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್‌ಗೆ ಹಸಿ ಹಾಲನ್ನು ಸೇರಿಸಿ ಮತ್ತು ಮಿಶ್ರಣವನ್ನು ಮುಖ ಅಥವಾ ಚರ್ಮಕ್ಕೆ ಅನ್ವಯಿಸಲು ಹತ್ತಿಯನ್ನು ಬಳಸಿ. ಸುಮಾರು 20 ನಿಮಿಷಗಳ ಕಾಲ ಅದನ್ನು ಹಾಗೆ ಬಿಡಿ. ತಣ್ಣೀರಿನಿಂದ ಮುಖ ತೊಳೆಯಿರಿ ಮತ್ತು ಇದರ ಫಲಿತಾಂಶ ಇನ್ನು ಹೆಚ್ಚು ಪಡೆಯಲು ವಾರಕ್ಕೆ ಎರಡು ಬಾರಿ ಹಚ್ಚಿಕೊಳ್ಳಿ.

  • ಪಪ್ಪಾಯಿ ಫೇಸ್ ಪ್ಯಾಕ್‌
    ಹಸಿ ಅರ್ಧ ಪಪ್ಪಾಯಿಯನ್ನು ತುರಿದು ನಯವಾದ ಪೇಸ್ಟ್ ಅನ್ನು ಮಾಡಿಕೊಂಡು ಸುಮಾರು ನಾಲ್ಕು ಚಮಚ ಹಸಿ ಹಾಲನ್ನು ಸೇರಿಸಿ. ಈ ಪ್ಯಾಕ್ ಅನ್ನು ನಿಮ್ಮ ಮುಖಕ್ಕೆ ಸುಮಾರು 20 ನಿಮಿಷಗಳ ಕಾಲ ಹಚ್ಚಿರಿ ಮತ್ತು ತಣ್ಣೀರಿನಿಂದ ತೊಳೆಯಿರಿ. ಚರ್ಮದ ಮೇಲಿನ ಕಪ್ಪು ಕಲೆಗಳನ್ನು ನಿವಾರಿಸಲು ಈ ಫೇಸ್ ಪ್ಯಾಕ್ ಅನ್ನು ವಾರಕ್ಕೆ ಮೂರು ಬಾರಿ ಹಚ್ಚಿಕೊಳ್ಳಿ.


ಇದನ್ನೂ ಓದಿ: Disease And Symptoms: ದೇಹದಲ್ಲಿ ಗೋಚರವಾಗುವ ವಿವಿಧ ಕಾಯಿಲೆಗಳು ಮತ್ತು ಲಕ್ಷಣಗಳನ್ನು ನಿರ್ಲಕ್ಷಿಸದಿರಿ!

  • ಕಿತ್ತಳೆ ಸಿಪ್ಪೆಯ ಫೇಸ್ ಪ್ಯಾಕ್‌
    ಇದಕ್ಕೆ ಎರಡು ಚಮಚ ಕಿತ್ತಳೆ ಸಿಪ್ಪೆಯ ಪುಡಿ ಮತ್ತು ಜೇನುತುಪ್ಪವನ್ನು ಸೇರಿಸಿ. ಈ ಮಿಶ್ರಣವನ್ನು ಬೆರೆಸುವಾಗ ನಿಧಾನವಾಗಿ ಹಾಲು ಸೇರಿಸಿ. ನಯವಾದ ಪೇಸ್ಟ್ ಮಾಡಿ ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಸುಮಾರು 20 ನಿಮಿಷಗಳ ಕಾಲ ಹಾಗೆಯೇ ಬಿಡಿ ಮತ್ತು ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರ ಉತ್ತಮ ಫಲಿತಾಂಶಕ್ಕಾಗಿ ವಾರಕ್ಕೆ ಎರಡು ಬಾರಿ ಕಿತ್ತಳೆ ಸಿಪ್ಪೆಯ ಫೇಸ್ ಮಾಸ್ಕ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಬಹುದು.

  • ಅವಕಾಡೊ ಫೇಸ್ ಪ್ಯಾಕ್‌
    ಅವಕಾಡೊಗಳು ಚರ್ಮದ ಕಲೆಗಳಿಗೆ ಸೂಕ್ತ ಚಿಕಿತ್ಸೆಯ ಅಂಶವಾಗಿದೆ. ಇದರ ನಯವಾದ ಪೇಸ್ಟ್‌ಗೆ ಅವಕಾಡೊಗಳನ್ನು ಮ್ಯಾಶ್ ಮಾಡಬೇಕು ಮತ್ತು ಅದರ ಜೊತೆಗೆ ಹಾಲನ್ನು ಮಿಶ್ರಣ ಮಾಡಬೇಕು. ಈ ಸರಳ ಫೇಸ್ ಪ್ಯಾಕ್‌ ಅನ್ನು ಹಚ್ಚಿದ ನಂತರ 20 ನಿಮಿಷಗಳ ಬಿಟ್ಟು ತೊಳೆಯಬೇಕು. ಇದರ ಉತ್ತಮ ಫಲಿತಾಂಶಕ್ಕಾಗಿ ದಿನವೂ ಇದನ್ನು ನೀವು ಬಳಸಬಹುದು.

Published by:Ashwini Prabhu
First published: