HOME » NEWS » Lifestyle » HERE ARE 4 THINGS YOU CAN SAY TO SOOTHE A DEPRESSION PATIENT STG KVD

ದುಃಖದಲ್ಲಿರುವವರ ಜೊತೆ ಈ 4 ವಾಕ್ಯಗಳನ್ನು ಬಳಸಿ ಮಾತನಾಡಿ.. ಖಿನ್ನತೆಗೊಳಗಾಗಿರುವವರು ಹಗುರರಾಗುತ್ತಾರೆ!

ಜನರು ಸಾಮಾನ್ಯವಾಗಿ, ಮನುಷ್ಯ ಯಾವ ಪರಿಸ್ಥಿತಿಯಲ್ಲಿ ಇದ್ದಾನೆ ಎಂಬುದನ್ನು ತಿಳಿದುಕೊಳ್ಳದೆ, ‘ಅದೇನು ದೊಡ್ಡ ಸಂಗತಿ ಅಲ್ಲ, ನಮಗೂ ಹಾಗೆ ಆಗಿದೆ’ ಅಥವಾ ‘ನಿನಗೀಗ ಹೆಚ್ಚು ಆತ್ಮಸ್ಥೈರ್ಯದ ಅಗತ್ಯ ಇದೆ’ ಇತ್ಯಾದಿ ಮಾತುಗಳನ್ನು ಹೇಳುತ್ತಾರೆ. ಅದರಿಂದ ವ್ಯಕ್ತಿ ಇನ್ನಷ್ಟು ಖಿನ್ನನಾಗಬಹುದು ಎಂಬುವುದು ಅವರಿಗೆ ಅರ್ಥವಾಗುವುದಿಲ್ಲ.

Trending Desk
Updated:June 23, 2021, 10:45 PM IST
ದುಃಖದಲ್ಲಿರುವವರ ಜೊತೆ ಈ 4 ವಾಕ್ಯಗಳನ್ನು ಬಳಸಿ ಮಾತನಾಡಿ.. ಖಿನ್ನತೆಗೊಳಗಾಗಿರುವವರು ಹಗುರರಾಗುತ್ತಾರೆ!
Photo: Google
  • Share this:
ಮಾನಸಿಕ ಆರೋಗ್ಯವನ್ನು ಅರಿತುಕೊಳ್ಳುವುದು ಕಷ್ಟದ ಕೆಲಸ. ಅದರಲ್ಲೂ ನಮ್ಮ ಪರಿಚಯದವರು ಖಿನ್ನತೆಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಅವರೊಂದಿಗೆ ಒಡನಾಡುವುದು ತುಂಬಾ ಕಷ್ಟವಾಗುತ್ತದೆ. ಯಾಕೆಂದರೆ ನಮ್ಮ ಯಾವ ಮಾತು ಅವರಿಗೆ ನೋವುಂಟು ಮಾಡುತ್ತದೆ ಎಂಬುದನ್ನು ಊಹಿಸಲು ಸಾಧ್ಯವಾಗುವುದಿಲ್ಲ. ಖಿನ್ನತೆಯ ರೋಗಿಗಳ ಆರೈಕೆದಾರರು ನನ್ನ ಬಳಿ ಬಂದಾಗ ಮೊದಲು ಕೇಳುವ ಪ್ರಶ್ನೆ “ನಾವೀಗ ಏನು ಮಾಡಬೇಕು?” ಹೆಚ್ಚಿನವರಿಗೆ ರೋಗಿಯೊಂದಿಗೆ ಹೇಗೆ ಮಾತನಾಡಬೇಕು, ಏನು ಹೇಳಬೇಕು ಮತ್ತು ಏನನ್ನು ಹೇಳಬಾರದು ಎಂಬುವುದು ತಿಳಿದೇ ಇರುವುದಿಲ್ಲ ಎನ್ನುತ್ತಾರೆ ಮುಂಬೈನ ವೊಕ್ಹಾರ್ಡ್‌ ಆಸ್ಪತ್ರೆಯ ಮನೋವೈದ್ಯ ಡಾ.ರಾಹುಲ್ ಖೆಮಾನಿ.

ಅವರಿಗೆ ನನ್ನ ಏಕೈಕ ಸಲಹೆ, ಸುಮ್ಮನೆ ರೋಗಿಗಳು ಹೇಳುವುದನ್ನು ಆಲಿಸಿ, ಅವರಿಗೆ ಬೇಕಿರುವುದು ಅಷ್ಟೆ. ಖಿನ್ನತೆಯ ರೋಗಿಗಳೊಂದಿಗೆ ಹೇಗೆ ವ್ಯವಹರಿಸಬೇಕೆಂಬ ಕೆಲವು ಸಲಹೆಗಳನ್ನು ಡಾ.ಖೆಮಾನಿ ಇಲ್ಲಿ ನೀಡಿದ್ದಾರೆ.

• ನೀವೇ ತೀರ್ಮಾನಿಸಬೇಡಿ: ಅವರಿಗೆ ನಿಮ್ಮ ಮೇಲೆ ವಿಶ್ವಾಸ ಇದ್ದರೆ ಮಾತ್ರ ನಿಮ್ಮ ಜೊತೆ ಮಾತನಾಡುತ್ತಾರೆ. ನೀವು ವಿಶ್ವಾಸಕ್ಕೆ ಅರ್ಹರು ಮತ್ತು ತೀರ್ಮಾನ ಮಾಡುವವರಲ್ಲ ಎಂಬ ನಂಬಿಕೆ ಬಂದ ಮೇಲೆ ನಿಮ್ಮೊಂದಿಗೆ ಸುಲಭವಾಗಿ ಓಪನ್‌ ಅಪ್‌ ಆಗುತ್ತಾರೆ.

• ಊಹಿಸಬೇಡಿ: ರೋಗಿಯನ್ನು ಕೇಳದೆಯೇ ಅವನಿಗೆ ಏನು ಅಗತ್ಯವಿದೆ ಎಂಬುದನ್ನು ಊಹಿಸುವ ಬಹಳಷ್ಟು ಮಂದಿಯನ್ನು ನಾನು ನೋಡಿದ್ದೇನೆ. ಎಲ್ಲರಿಗೂ ಹೊರಗೆ ಹೋಗುವುದು ಅಥವಾ ಅವರಿಷ್ಟದ ಊಟ ಮಾಡುವುದರಿಂದ ಸಂತೋಷ ಆಗುವುದಿಲ್ಲ, ಪ್ರತಿಯೊಬ್ಬರಿಗೂ ಪ್ರತ್ಯೇಕ ಅಗತ್ಯಗಳು ಇರುತ್ತವೆ. ಅವರನ್ನು ಕೇಳಿದರೆ ಮಾತ್ರ ಅದು ನಿಮಗೆ ತಿಳಿಯುತ್ತದೆ. ನೀವು ಅವರಿಗೆ ಅಗತ್ಯ ಎಂದು ಊಹಿಸಿದ್ದು, ಅವರಿಗೆ ಸ್ವಲ್ಪವೂ ಅಗತ್ಯವಿಲ್ಲದೆ ಇರುವ ಸಾಧ್ಯತೆಗಳು ಇರುತ್ತವೆ.

ನಿಷ್ಪ್ರಯೋಜಕ ನುಡಿಗಟ್ಟುಗಳನ್ನು ಬಳಸಬೇಡಿ: ಇದು ಅತ್ಯಂತ ಸಾಮಾನ್ಯ ಸಂಗತಿ , ಆದರೆ ಅದನ್ನು ಮಾಡಬೇಡಿ. ಜನರು ಸಾಮಾನ್ಯವಾಗಿ, ಮನುಷ್ಯ ಯಾವ ಪರಿಸ್ಥಿತಿಯಲ್ಲಿ ಇದ್ದಾನೆ ಎಂಬುದನ್ನು ತಿಳಿದುಕೊಳ್ಳದೆ, ‘ಅದೇನು ದೊಡ್ಡ ಸಂಗತಿ ಅಲ್ಲ, ನಮಗೂ ಹಾಗೆ ಆಗಿದೆ’ ಅಥವಾ ‘ನಿನಗೀಗ ಹೆಚ್ಚು ಆತ್ಮಸ್ಥೈರ್ಯದ ಅಗತ್ಯ ಇದೆ’ ಇತ್ಯಾದಿ ಮಾತುಗಳನ್ನು ಹೇಳುತ್ತಾರೆ. ಅದರಿಂದ ವ್ಯಕ್ತಿ ಇನ್ನಷ್ಟು ಖಿನ್ನನಾಗಬಹುದು ಎಂಬುವುದು ಅವರಿಗೆ ಅರ್ಥವಾಗುವುದಿಲ್ಲ.

ಇದನ್ನೂ ಓದಿ: ನೇರಳೆ ಹಣ್ಣು ಪ್ರಯೋಜನಕಾರಿಯೂ ಹೌದು, ಅಪಾಯಕಾರಿಯೂ ಹೌದು..!

ಖಿನ್ನತೆಯ ರೋಗಿಗೆ ಹೇಳಬೇಕಾದ ಮಾತುಗಳು ಇವು.1. ನೀನು ಇಂತಹ ಕಷ್ಟದಲ್ಲಿದ್ದೀಯಾ, ನನ್ನನ್ನು ಕ್ಷಮಿಸು.ಇದು ನಿಮ್ಮ ಮತ್ತು ಆ ವ್ಯಕ್ತಿಯ ನಡುವೆ ಒಂದು ನಂಟನ್ನು ಬೆಳೆಸುತ್ತದೆ.
2. ನೀನು ಇದರ ಬಗ್ಗೆ ಇನ್ನಷ್ಟು ಮಾತನಾಡಲು ಬಯಸುತ್ತೀಯಾ? ಈ ಮಾತು ಅನುಭೂತಿಯ ಭಾವನೆಯನ್ನು ಹುಟ್ಟಿಸುತ್ತದೆ. ಅದು ನಂಟು ಮತ್ತು ವಿಶ್ವಾಸವನ್ನು ಹುಟ್ಟಿಸುತ್ತದೆ.
3. ನಿನಗೆ ನನ್ನ ಅಗತ್ಯ ಇದ್ದಾಗಲೆಲ್ಲಾ ಜೊತೆಗಿರುತ್ತೇನೆ. ನಿಮ್ಮ ನಿಜವಾದ ಸ್ನೇಹವನ್ನು ಇದು ಬಿಂಬಿಸುತ್ತದೆ. “ಖಿನ್ನತೆಯ ರೋಗಿಗಳು ಭರವಸೆಯನ್ನು ಕಳೆದುಕೊಂಡಿರುತ್ತಾರೆ. ಈ ಮಾತು ಅವರಲ್ಲಿ ಧೈರ್ಯ ಹುಟ್ಟಿಸುತ್ತದೆ” ಎನ್ನುತ್ತಾರೆ ಡಾ. ಖೆಮಾನಿ.
4. ಇದರಲ್ಲಿ ನೀನು ಒಂಟಿಯಲ್ಲ. ಈ ಮಾತು, ಯಾವುದೇ ಕಷ್ಟ ಬರಲಿ , ಆ ರೋಗಿಯ ಬೆಂಬಲಕ್ಕೆ ಸದಾ ನೀವಿರುತ್ತೀರಿ ಎಂಬ ಭರವಸೆಯನ್ನು ಹುಟ್ಟಿಸುತ್ತದೆ.

“ನಾನು ನಿನ್ನ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬಲ್ಲೆ ಎಂದು ನೀವು ಹೇಳುವಾಗ ಎಚ್ಚರದಿಂದ ಇರಿ. ಅದು ಎರಡು ಮುಖವುಳ್ಳ ಕತ್ತಿಯಂತಾಗಬಹುದು. ಕೆಲವರಿಗೆ ಅದು ಇಷ್ಟವಾದರೆ, ಇನ್ನು ಕೆಲವರು ಅದನ್ನು ಅವಮಾನವೆಂದು ಭಾವಿಸಬಹುದು. ಮತ್ತು ನೀವು ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿಲ್ಲ ಎಂದು ಭಾವಿಸಬಹುದು. ಹಾಗಾಗಿ, ನಾನು ನಿನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಆಗದಿರಬಹುದು, ಆದರೆ ಸದಾ ನಿನ್ನೊಂದಿಗೆ ಇರುತ್ತೇನೆ” ಎನ್ನುತ್ತಾರೆ ಖೆಮಾನಿ.

ಖಿನ್ನತೆ ವಾಸ್ತವವಾದುದು, ಅದು ಕೇವಲ ಮನಸ್ಸಿನಲ್ಲಿ ಮಾತ್ರ ಇರುವಂತದ್ದಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ಅದನ್ನು ಒಂದೇ ಸರಿ ಮಾಡಲು ಸಾಧ್ಯವಿಲ್ಲ, ಅದಕ್ಕೆ ಸಮಯ ತಗಲುತ್ತದೆ. ನಿಮ್ಮ ಕೆಲಸ ವ್ಯಕ್ತಿಯನ್ನು ಸರಿ ಮಾಡುವುದಲ್ಲ, ಅವರಿಗೆ ಬೆಂಬಲ ನೀಡುವುದು. ಅದು ಆ ವ್ಯಕ್ತಿಗೆ ಧೈರ್ಯ ತುಂಬುತ್ತದೆ. ಖಿನ್ನತೆಯಿಂದ ಇರುವ ವ್ಯಕ್ತಿಯ ಜೊತೆ ಮಾತನಾಡುವುದು ಮತ್ತು ಅವರ ಮಾತುಗಳನ್ನು ಆಲಿಸುವುದು ಬಹಳ ಅಗತ್ಯ, ಆ ಮೂಲಕ ನೀವು ಅವರನ್ನು ಖಿನ್ನತೆಯಿಂದ ಹೊರ ತರಬಹುದು. ಮೇಲಿನ ಸಲಹೆಗಳನ್ನು ಅರಿತುಕೊಳ್ಳಿ ಮತ್ತು ಅಗತ್ಯ ಇರುವವರಿಗೆ ಸಹಾಯ ಮಾಡಿ.
Published by: Kavya V
First published: June 23, 2021, 10:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories