Mentally Strong: ನೀವು ಮಾನಸಿಕವಾಗಿ ಸದೃಢರಾಗಬೇಕಂದ್ರೆ ಇವಾಗಿಂದ್ಲೇ ಈ ಟಿಪ್ಸ್ ಅನ್ನು ಫಾಲೋ ಮಾಡಿ

ಸ್ಥೈರ್ಯ ಮತ್ತು ಆತ್ಮವಿಶ್ವಾಸವು ಹುಟ್ಟಿನಿಂದ ಯಾರೊಂದಿಗೂ ಬಂದಿರುವುದಿಲ್ಲ. ಆದರೆ ಆ ಗುಣಗಳನ್ನು ನೀವು ರೂಢಿಸಿಕೊಳ್ಳಬೇಕಾದ ಅಗತ್ಯ ಗುಣಗಳು ಆಗಿವೆ. ಇವೆಲ್ಲ ಗುಣಗಳನ್ನು ನಮ್ಮಲ್ಲಿ ಮೈಗೂಡಿಸಿಕೊಂಡು ನಾವು ಸದೃಢ ವ್ಯಕ್ತಿಯಾಗುವುದು ಹೇಗೆ? ಎಂಬುದಕ್ಕೆ ನೀವು ಈ ಲೇಖನವನ್ನು ಮುಂದೆ ಓದಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮಾನಸಿಕ (Mental) ಮತ್ತು ಭಾವನಾತ್ಮಕ ಆರೋಗ್ಯವು (Emotional health) ನಮ್ಮ ಪರಿಪೂರ್ಣ ಯೋಗಕ್ಷೇಮದ ಪ್ರಮುಖವಾದ ಭಾಗವಾಗಿದೆ. ನಮ್ಮಲ್ಲಿ ಹೆಚ್ಚಿನವರು, ಜಿಮ್‌ಗೆ ಹೋಗುವುದು, ವಾಕಿಂಗ್ ಮಾಡುವುದು, ಈಜು ಮತ್ತು ಆಟಗಳನ್ನಾಡುವ ಮೂಲಕ ದೈಹಿಕವಾಗಿ ಸದೃಢರಾಗಿರಲು (Physically Strong) ಪ್ರಯತ್ನಿಸುತ್ತೇವೆ. ಹಾಗೆಯೇ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕಾಗಿಯೂ ಕೆಲವು ಚಟುವಟಿಕೆಗಳನ್ನು ಮಾಡಬೇಕು. ಸಾಮಾನ್ಯವಾಗಿ, ಒಬ್ಬ ವ್ಯಕ್ತಿಗೆ ಮಾನಸಿಕ ಕಾಯಿಲೆ (Mental Illness) ಇಲ್ಲವೆಂದರೆ ಆತನು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಸದೃಢವಾಗಿದ್ದಾನೆ. ಭಾವನೆಗಳ ನಿರ್ವಹಣೆ ಮತ್ತು ಸಮತೋಲ ಹೊಂದುವುದು ಒಂದು ಮುಖ್ಯ ಕೌಶಲ್ಯ. ಇದು ತಿಳಿಯದಿದ್ದರೆ ಜೀವನದಲ್ಲಿ ಎದುರಾಗುವ ಸನ್ನಿವೇಶಗಳ, ಸಂಬಂಧಗಳ ನಿರ್ವಹಣೆ, ಮತ್ತು ವಿವೇಚನೆಯಿಂದ ಕೆಲಸ (Work) ಮಾಡುವುದಕ್ಕೆ ಕಷ್ಟವಾಗಬಹುದು ಎಂದು ಹೇಳಲು ಸಾಧ್ಯವಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.

ನಾವು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯದಿಂದಿದ್ದರೆ ದೈನಂದಿನ ಜೀವನದಲ್ಲಿ ಹೆಚ್ಚು ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ. ಇತರರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ ಜೀವನದ ಹಾದಿಯಲ್ಲಿ ಬರುವ ಸವಾಲುಗಳನ್ನೆದುರಿಸಲು ಕೂಡ ಶಕ್ತರಾಗುತ್ತೇವೆ.

ಮಾನಸಿಕವಾಗಿ ಸದೃಢರಾಗಿರುವುದು ಎಷ್ಟು ಮುಖ್ಯ?
ಕಷ್ಟಗಳನ್ನು ಧೈರ್ಯವಾಗಿ ಎದುರಿಸುವುದು ನಿಜಕ್ಕೂ ಒಂದು ಕಲೆ. ಈ ಕಲೆ ನಿಮ್ಮಲ್ಲಿ ಮೈಗೂಡಬೇಕೆಂದರೆ ಮೊದಲು ನೀವು ನಿಮ್ಮಲ್ಲಿ ಮತ್ತು ನಿಮ್ಮ ಸಾಮರ್ಥ್ಯಗಳಲ್ಲಿ ನಂಬಿಕೆಯನ್ನು ಬೆಳೆಸಿಕೊಳ್ಳಬೇಕು. ಆದರೆ ನಮ್ಮಲ್ಲಿ ನಾವು ನಂಬಿಕೆ ಇರಿಸಿಕೊಳ್ಳುವುದು ಹೇಗೆ? ಅದಕ್ಕೆ ಉತ್ತರ ಇಲ್ಲಿದೆ… ನೀವು ಚಿಕ್ಕ-ಚಿಕ್ಕ ವಿಷಯಗಳಲ್ಲಿ ಮೊದಲು ನಂಬಿಕೆ ಇರಿಸುವುದು ಆಗಿದೆ.

ಇದನ್ನೂ ಓದಿ: Successful Tips: ಜೀವನದಲ್ಲಿ ಯಶಸ್ವಿಯಾಗ್ಬೇಕು ಅಂದ್ರೆ ಏನು ಮಾಡಬೇಕು? ಜಸ್ಟ್ ಇಷ್ಟ್ ಮಾಡಿ ಸಾಕು!

ಸ್ಥೈರ್ಯ ಮತ್ತು ಆತ್ಮವಿಶ್ವಾಸವು ಹುಟ್ಟಿನಿಂದ ಯಾರೊಂದಿಗೂ ಬಂದಿರುವುದಿಲ್ಲ. ಆದರೆ ಆ ಗುಣಗಳನ್ನು ನೀವು ರೂಢಿಸಿಕೊಳ್ಳಬೇಕಾದ ಅಗತ್ಯ ಗುಣಗಳು ಆಗಿವೆ. ಇವೆಲ್ಲ ಗುಣಗಳನ್ನು ನಮ್ಮಲ್ಲಿ ಮೈಗೂಡಿಸಿಕೊಂಡು ನಾವು ಸದೃಢ ವ್ಯಕ್ತಿಯಾಗುವುದು ಹೇಗೆ? ಎಂಬುದಕ್ಕೆ ನೀವು ಈ ಲೇಖನವನ್ನು ಮುಂದೆ ಓದಿ.

ಮಾನಸಿಕವಾಗಿ ಸದೃಢವಾಗಿರಲು ಅಗತ್ಯವಾಗಿರುವ 10 ಮಾರ್ಗಗಳು ಇಲ್ಲಿವೆ:
1) ನಿಮಗೆ ನೀವೇ ಜವಾಬ್ದಾರರಾಗಿರಿ
ನೀವು ನಿಮಗೆ ಜವಬ್ದಾರಿಯಾಗಿರುವುದೆಂದರೆ, ಮಾನಸಿಕವಾಗಿ ಗಟ್ಟಿಯಾಗಿರಲು ಕಲಿಯಬೇಕಾದ ಕೌಶಲ್ಯಗಳನ್ನು ಕಲಿಯಲೇಬೇಕು. ಅದಕ್ಕೆ ನೀವು ಜೀವನದಲ್ಲಿ ಶ್ರೇಷ್ಠವಾಗಿ ಬದುಕಿದ ಕೆಲವು ಯಶಸ್ಸಿನ ಕಥೆಗಳನ್ನು ಆಗಾಗ ಓದಬೇಕು. ಅದರಿಂದ ನೀವು ಏನನ್ನಾದರೂ ಕಲಿಯುವಿರಿ. ಕಷ್ಟಗಳನ್ನು ಎದುರಿಸಲು ಇಂತಹ ಶ್ರೇಷ್ಠ ಪುಸ್ತಕಗಳು ನಿಮಗೆ ಸಹಾಯ ಮಾಡುತ್ತವೆ. ಈ ಪುಸ್ತಕಗಳನ್ನು ಓದಲು ನೀವು ನಿಮಗೆ ಜವಬ್ದಾರರಾಗಿರಬೇಕು.

2) ನಿಮ್ಮ ಆರಾಮ ವಲಯದಿಂದ ಹೊರಬನ್ನಿ
ನಮ್ಮ ಕಂಪರ್ಟ್‌ ಜೋನ್‌ನಿಂದ ಹೊರಬಂದು ಜೀವನ ನಡೆಸುವುದು ನಾವು ಮಾನಸಿಕವಾಗಿ ಬಲಿಷ್ಠರಾಗಿರಲು ಬಹಳ ಮುಖ್ಯವಾಗಿದೆ. ನಿಮಗೆ ಯಾವ ಕೆಲಸ ಮಾಡುವುದು ಕಷ್ಟವೆನಿಸುತ್ತದೆಯೋ ಅದೇ ಕೆಲಸವನ್ನು ಪಟ್ಟು ಹಿಡಿದು ಕೆಲಸ ಮಾಡಿ. ಆಗ ನೋಡಿ ಮ್ಯಾಜಿಕ್‌. ನಿಮ್ಮ ಮನಸ್ಸಿಗೆ ನೀವೆ ಹೀರೋ ಆಗಿರುತ್ತಿರಿ. ಉದಾಹರಣೆಗೆ ಒಬ್ಬರೇ ಪ್ರವಾಸಕ್ಕೆ ಹೊರಡಿ. ಬ್ಯಾಂಕ್‌ಗೆ ಒಬ್ಬರೇ ಹೋಗಲು ಭಯವಾದರೆ ಒಬ್ಬರೇ ಹೋಗಿ ಬ್ಯಾಂಕ್‌ ಕೆಲಸಗಳನ್ನು ಮಾಡಿ. ಇದೇ ಕೆಲಸ ಮಾಡಿ ಎಂದಲ್ಲ. ನಿಮಗೆ ಈ ಕೆಲಸ ನನ್ನಿಂದ ಆಗದು ಎನ್ನುವ ಕೆಲಸ ನೀವೆ ಮಾಡಿ. ಇಂತಹ ಕೆಲಸಗಳು ನಿಮ್ಮನ್ನು ಮತ್ತಷ್ಟು ಬಲಿಷ್ಠರನ್ನಾಗಿ ಮಾಡುತ್ತವೆ.

ಇದನ್ನೂ ಓದಿ: Solo Trip: ಯಾರ ಜೊತೆಯೂ ಟ್ರಿಪ್ ಹೋಗಲು ಇಷ್ಟ ಇಲ್ವಾ? ಸೋಲೋ ಟ್ರಿಪ್ ಹೋದ್ರೆ ಸೂಪರ್ ಆಗಿ ಇರುತ್ತೆ

3) ನಿಮ್ಮ ತಪ್ಪುಗಳನ್ನು ನೀವೇ ವಿಶ್ಲೇಷಿಸಿ
ಮಾನಸಿಕವಾಗಿ ದೃಢತೆ ಮತ್ತು ಜೀವನದಲ್ಲಿ ಯಶಸ್ವಿಯಾದವರ ಪ್ರಮುಖ ಅಭ್ಯಾಸ ಎಂದರೆ ಅವರ ತಪ್ಪುಗಳನ್ನು ಅವರೇ ವಿಶ್ಲೇಷಣೆ ನಡೆಸುವುದು. ತಪ್ಪುಗಳನ್ನು ಎಲ್ಲರೂ ಮಾಡುತ್ತಾರೆ. ಆದರೆ ಆ ತಪ್ಪುಗಳನ್ನು ಜೀವನದಲ್ಲಿ ಮತ್ತೆ ಮಾಡದೇ ಇರುವವರು ಕೆಲವರು ಮಾತ್ರ. ಅಂತಹವರೇ ತಮ್ಮ ತಪ್ಪುಗಳನ್ನು ತಾವೇ ವಿಶ್ಲೇಷಣೆ ಮಾಡಿಕೊಳ್ಳುವವರು. ಆ ತಪ್ಪುಗಳು ಘಟಿಸಿದ ನಂತರ ನೀವು ನಿಮ್ಮ ಆತ್ಮವಿಶ್ವಾಸ ಕಡಿಮೆ ಮಾಡಿಕೊಳ್ಳಬಾರದು. ಬದಲಾಗಿ ಇನ್ನು ಹೆಚ್ಚಿನ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು.

4) 'ಇಲ್ಲ' ಎಂದು ಹೇಳುವುದನ್ನು ಅಭ್ಯಾಸ ಮಾಡಿ
ಎಲ್ಲ ವಿಷಯಗಳಿಗೂ ಹೌದು ಅನ್ನುವ ಜನರಿಗೆ ಯಾವ ಕೆಲಸಕ್ಕೆ ಹೌದು ಎನ್ನಬೇಕು, ಯಾವ ಕೆಲಸಕ್ಕೆ ಇಲ್ಲ ಎನ್ನುವ ಜನರನ್ನು ಹೋಲಿಕೆ ಮಾಡಿದಾಗ ತಿಳಿದು ಬರುವ ವಿಷಯವೆಂದರೆ ಇಲ್ಲ ಎನ್ನುವರು ಮಾನಸಿಕ ಹೆಚ್ಚು ಬಲಿಷ್ಠರಾಗಿರುತ್ತಾರೆ ಎಂಬುದು ನಿಜವಾಗಿದೆ. ಇದರಿಂದ ನೀವು ನಿಮಗೆ ಬೇಡದ ವಿಷಯಗಳನ್ನು ತಿರಸ್ಕರಿಸಲು ಮತ್ತು ನಿಮ್ಮ ಅಸಮರ್ಥತೆ ಮತ್ತು ಇತರ ಜನರ ಬೇಡಿಕೆಗಳು ಮತ್ತು ನಿರೀಕ್ಷೆಗಳೊಂದಿಗೆ ನೀವು ನಿಮ್ಮ ಕೆಲಸವನ್ನು ಮರೆಯುವ ಅವಕಾಶ ಹೆಚ್ಚಿರುತ್ತದೆ. ಆದ್ದರಿಂದ ‘ಇಲ್ಲ’ ಎಂದು ಹೇಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

5) ಕೆಟ್ಟ ಸ್ನೇಹ ಮತ್ತು ಸಂಬಂಧಗಳಿಂದ ದೂರವಿರಿ
ಕೆಲ ಜನರು ಇರುತ್ತಾರೆ ಯಾವಾಗಲೂ ಬೇರೆಯವರ ವಿಷಯ ಮಾತನಾಡುವುದು ಸಮಯ ಹಾಳು ಮಾಡುವವರು ಇಂತಹ ವ್ಯಕ್ತಿಗಳು ಕೇವಲ ನಿಮ್ಮ ಸಮಯವನ್ನು ಮಾತ್ರ ಕಾಲಹರಣ ಮಾಡುವುದಿಲ್ಲ.‌ ಬದಲಾಗಿ ನಿಮ್ಮ ಮನಸ್ಸಿನಲ್ಲಿ ಬೇಡವಾದ ವಿಷಯಗಳನ್ನು ಇರಿಸಲು ಪ್ರಯತ್ನ ಮಾಡುತ್ತಾರೆ. ಇವರು ಮುಂದೆ ನಿಮ್ಮ ಜೀವನದಲ್ಲಿ ನಿಮ್ಮ ದೌರ್ಬಲ್ಯಗಳು ಆದರೂ ಕೂಡ ಆಶ್ಚರ್ಯವಲ್ಲ. ಆದ್ದರಿಂ ಇಂತಹ ಸ್ನೇಹ ಮತ್ತು ಸಂಬಂಧಗಳಿಂದ ದೂರವಿರಿ.

6) ನಿಮ್ಮ ದೌರ್ಬಲ್ಯಗಳನ್ನು ಮೊದಲು ಒಪ್ಪಿಕೊಳ್ಳಿ
ಎಲರೂ ಭಿನ್ನವಾದ ವ್ಯಕ್ತಿತ್ವ ಹೊಂದಿರುತ್ತಾರೆ. ನಿಮ್ಮ ಸಾಮರ್ಥ್ಯವನ್ನು ಪೋಷಿಸಿ ನಿಮ್ಮ ಕುಂದುಗಳನ್ನು ಒಪ್ಪಿಕೊಳ್ಳುವುದರಿಂದ ಜೀವನದಲ್ಲಿ ಧೈರ್ಯದಿಂದ ಮುನುಗ್ಗಲು ಸಾಧ್ಯ. ಯಾರೂ ಪರಿಪೂರ್ಣರಲ್ಲ, ನಿಮ್ಮಂತೆಯೇ ಇತರರಲ್ಲೂ ನ್ಯೂನ್ಯತೆಗಳಿವೆ. ನಿಮ್ಮ ಕುಂದುಗಳನ್ನು ಗುರುತಿಸಿ, ಅದನ್ನು ತಿದ್ದಲು ಪ್ರಯತ್ನಿಸಿ. ಪ್ರತಿ ವ್ಯಕ್ತಿಯಲ್ಲೂ ಹೇಗೆ ಸಾಮರ್ಥ್ಯಗಳು ಇರುತ್ತವೆಯೋ ಆಗೆ ದೌರ್ಬಲ್ಯಗಳು ಸಹ ಇರುತ್ತವೆ. ನೀವು ನಿಮ್ಮ ದೌರ್ಬಲ್ಯಗಳನ್ನು ಸಾಮರ್ಥ್ಯಗಳನ್ನಾಗಿ ಮಾಡಿಕೊಳ್ಳುವುದೇ ಜೀವನದ ದೊಡ್ಡ ಸವಾಲು. ಅದನ್ನು ನೀವು ಕಲಿತರೆ ನಿಮ್ಮ ಮನಸ್ಸು ಮತ್ತು ಬಲಿಷ್ಠವಾಗಿ ಎಲ್ಲ ಕೆಲಸಗಳನ್ನು ದೃಢ ಚಿತ್ತದಿಂದ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:  Savings Tips: ತಿಪ್ಪರಲಾಗ ಹಾಕಿದ್ರೂ ಹಣ ಉಳಿಸೋಕೆ ಆಗ್ತಿಲ್ಲ ಅಂತ ಚಿಂತೆ ಬಿಡಿ, ಇಲ್ಲಿದೆ ಹ್ಯಾಕ್ಸ್

7) ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಲು ಕಲಿಯಿರಿ
ಸಹಜವಾಗಿ, ಪ್ರತಿಯೊಬ್ಬರು ಭಾವೋದ್ವೇಗಕ್ಕೆ ಒಳಗಾಗುವುದು ಜಗತ್ತಿನಲ್ಲಿ ಸರ್ವೆಸಾಮಾನ್ಯ. ಕಷ್ಟಗಳು ಬಂದರೆ ಸಾಕು ಕೋಪದಿಂದ ಕಿರುಚಾಡುವುದು, ಸಂತೋಷ ಬಂದಾಗ ಖುಷಿಯಿಂದ ಕುಣಿದಾಡುವುದು ಈ ರೀತಿ ಮಾಡುವುದರಿಂದ ತಿಳಿಯುವ ವಿಷಯವೆಂದರೆ ಆ ವ್ಯಕ್ತಿಯು ತನ್ನ ಭಾವನೆಗಳ ಮೇಲೆ ತಾನೇ ನಿಯಂತಣ ಹೊಂದಿಲ್ಲ ಎಂಬುದನ್ನು ತೋರಿಸುತ್ತದೆ. ಆದ್ದರಿಂದ ಭಾವನೆಗಳ ವಿಷಯದಲ್ಲಿ ಜಾಗೃತೆ ವಹಿಸಿ.

8) ನಿಮ್ಮ ಗುರಿಗಳನ್ನು ಚಿಕ್ಕ ಗುರಿಗಳನ್ನಾಗಿ ವಿಂಗಡಿಸಿ
ಹೌದು ಒಂದು ದೊಡ್ಡ ಗುರಿ ಯಾವಾಗಲೂ ಚಿಕ್ಕ ಚಿಕ್ಕ ಗುರಿಗಳ ಸಂಯೋಜನೆ ಆಗಿರುತ್ತದೆ. ಆದ್ದರಿಂದ ನೀವು ನಿಮ್ಮ ಸವಾಲು ಅಥವಾ ಗುರಿಗಳನ್ನು ವಿಂಗಡಿಸಿಕೊಂಡು ಕಾರ್ಯನ್ಮೊಖರಾಗಿರಿ. ಆಗ ಕೆಲಸವು ಸುಲಭವಾಗುತ್ತದೆ. ಹಾಗೆಯೇ ನಿಮಗೆ ಈ ಕೆಲಸ ನನ್ನಿಂದ ಆಗದು ಎಂಬ ಭಾವನೆ ಬರದು. ಆದ್ದರಿಂದ ಯಾವುದೇ ಕೆಲಸವನ್ನು ಕೈಗೆತ್ತಿಕೊಳ್ಳುವ ಮೊದಲು ಅದನ್ನು ಒಂದು ಸಲ ವಿಶ್ಲೇಷಿಸಿ, ನಂತರ ಚಿಕ್ಕ ಚಿಕ್ಕ ಭಾಗಗಳಾಗಿ ವಿಂಗಡಿಸಿ ನಂತರ ಕೆಲಸವನ್ನು ಆರಂಭಿಸಿ. ಆಗ ಜಯ ನಿಮ್ಮದೇ. ಇದರಿಂದ ನಿಮ್ಮ ಮನಸ್ಸು ಮತ್ತಷ್ಟು ಬಲಿಷ್ಠವಾಗುತ್ತದೆ.

9) ಹೊಸ ಗುರಿಗಳನ್ನು ಇರಿಸಿಕೊಳ್ಳಿ
ಒಂದು ಗುರಿ ಮುಟ್ಟಿದ ತಕ್ಷಣ ನೀವು ಅಲ್ಲಿಗೆ ನಿಲ್ಲಬಾರದು. ಅದರ ನಂತರ ಮತ್ತೊಂದು ಹೊಸ ಗುರಿ ಇಟ್ಟುಕೊಂಡು ಅದನ್ನು ಸಾಧಿಸುವಲ್ಲಿ ಕಾರ್ಯನ್ಮೋಖರಾಗಬೇಕು. ಇದರಿಂದ ನಿಮ್ಮ ಮನಸ್ಸು ಬಲಿಷ್ಠವಾಗುತ್ತದೆ. ಮನುಷ್ಯನಲ್ಲಿ ಗುರಿ ಸಾಧಿಸಲು ಮಾತ್ರ ಆತ್ಮ ತೃಪ್ತಿ ಇರಬಾರದು. ಏಕೆಂದರೆ ಅದೇ ಮನುಷ್ಯ ಮೊದಲ ಶತ್ರು. ದೈಹಿಕ ಶಕ್ತಿಯನ್ನು ಹೆಚ್ಚಿಸುಕೊಳ್ಳುವಲ್ಲಿ ಹೇಗೆ ಅನೇಕ ಮಾರ್ಗಗಳು ಇವೆಯೋ ಹಾಗೆಯೇ ಮಾನಸಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ಈ ಮಾರ್ಗ ಬಹಳ ಮುಖ್ಯವಾಗಿದೆ.

ಇದನ್ನೂ ಓದಿ: Mysterious Places: ಗುರುತ್ವಾಕರ್ಷಣೆಯೇ ಇಲ್ಲದ ಸ್ಥಳಗಳಿವು! ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

10) ನಿಮ್ಮ ಭಯವನ್ನು ಗುರುತಿಸಿ
ನಿಮ್ಮಲ್ಲಿರುವ ಭಯವನ್ನು ಗುರುತಿಸಿ ನಂತರ ಆ ಭಯವನ್ನು ಹೋಗಲಾಡಿಸುವುದು ಹೇಗೆ ಎಂಬುದಕ್ಕೆ ಯೋಜನೆಗಳನ್ನು ಹಾಕಿಕೊಳ್ಳಿ. ಇದರಿಂದ ನಿಮ್ಮ ಭಯಗಳು ಯಾವುವು ಎಂಬುದು ನಿಮಗೆ ಸ್ಪಷ್ಟವಾಗಿ ಗೊತ್ತಾಗುತ್ತವೆ. ಧೈರ್ಯ ಬೇಕೆಂದರೆ ಮೊದಲು ಭಯವನ್ನು ದೂರ ಮಾಡಿಕೊಳ್ಳಬೇಕು. ಇದೇ ನಿಮ್ಮ ಮನಸ್ಸನ್ನು ಬಲಿಷ್ಠಗೊಳಿಸುವ ಮತ್ತೊಂದು ದಾರಿ. ಬೇರೆಯವರ ಜೊತೆ ಮುಕ್ತವಾಗಿ ಮಾತನಾಡುವುದು ನಿಮ್ಮ ಭಯವಾಗಿದ್ದರೆ, ಅದನ್ನು ದೂರವಾಗಿಸಲು ನೀವು ಹೊರಗಡೆ ಹೊರಡಿ ಎಲ್ಲರ ಜೊತೆ ಮುಕ್ತವಾಗಿ ಮಾತಾಡಿ. ಆಗ ನೋಡಿ ನಿಮ್ಮ ಭಯ ನಿಮ್ಮ ಸಾಮರ್ಥ್ಯವಾಗಿ ಬದಲಾಗುತ್ತದೆ. ಇದರಿಂದ ನಿಮ್ಮ ಮನಸ್ಸು ಬಲಿಷ್ಟವಾಗಿ ಕಾರ್ಯನಿರ್ವಹಿಸುವಲ್ಲಿ ಯಶಸ್ವಿಯಾಗುತ್ತದೆ.
Published by:Ashwini Prabhu
First published: