ಹೊಸ ವರ್ಷದ ಪಾರ್ಟಿಗೆ ಬೆಂಗಳೂರು ಸುತ್ತಮುತ್ತ ಈ ರೆಸಾರ್ಟ್ ಹೋಗ್ಬಹುದು ನೋಡಿ

Resort Details: ನಿಮಗೆ  ಹಳ್ಳಿ ವಾತಾವರಣ ಬೇಕು ಎಂದರೆ ಸಹ ನಿಮಗೆ ನಿಮಗೆ ಬೇಕಾದ ರೆಸಾರ್ಟ್​ ಆಯ್ಕೆ ಮಾಡಬಹುದು.  ಅಲ್ಲದೇ ನಿಮಗೆ ಶಾಂತವಾಗಿ ಸಮಯ ಕಳೆಯಲು ಬೇಕು ಎಂದರೆ ಅಥವಾ ಮಕ್ಕಳ ಜೊತೆ ಆಟೋಟಗಳು ಜಾಸ್ತಿ ಬೇಕು  ಪಾರ್ಟಿ ಗಲಾಟೆನೂ ಬೇಡ, ಸುಮ್ಮನೆ ನೆಮ್ಮದಿಯಾಗಿ ರಿಲ್ಯಾಕ್ಸ್ ಮಾಡ್ತಾ ಹೊಸಾ ವರ್ಷ ಬರಮಾಡಿಕೊಳ್ಳೋರಿಗೆ ಸಹ ರೆಸಾರ್ಟ್​ಗಳಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಾರಣ ಏನೇ ಇರಲಿ ರಜೆ (Holiday) ಬಂದರೆ ಹೊರಗೆ ಹೋಗಿ ಸುತ್ತಾಡುವುದು ಸಂತೋಷವನ್ನು ಹೆಚ್ಚು ಮಾಡುತ್ತದೆ. ಈಗ ಕ್ರಿಸ್​ಮಸ್​ ಹಬ್ಬ ಬರುತ್ತಿದೆ, ಜೊತೆಗೆ ಹೊಸವರ್ಷ ಸಹ, ರಜೆ ಕೂಡ ಸಿಗುತ್ತದೆ. ಈ ಸಮಯದಲ್ಲಿ ಹೆಚ್ಚಿನ ಜನರು ಬೇರೆ ಕಡೆ ಟ್ರಿಪ್ ಹೋಗುವುದು ಸಾಮಾನ್ಯ. ಹಾಗೆಯೇ ಬೇರೆ ಕಡೆ ಹೋಗಲು ನಿಮಗೆ ಸಾಧ್ಯವಾಗುವುದಿಲ್ಲ ಎಂದರೆ ಬೆಂಗಳೂರಿನಲ್ಲಿ ಸಹ ಕೆಲವೊಂದು ರೆಸಾರ್ಟ್​ಗಳಿದ್ದು, ನಿಮ್ಮ ರಜೆಯ ಮೋಜಿಗೆ ಬೆಸ್ಟ್ ಎನ್ನಬಹುದು. ಅಲ್ಲದೇ ಕೋವಿಡ್ ಭಯ ಇರೋದ್ರಿಂದ ಬೆಂಗಳೂರು ಸುತ್ತಮುತ್ತಲೇ ಕ್ರಿಸ್ಮಸ್ ಅಥವಾ ಹೊಸಾ ವರ್ಷದ ಸಂಭ್ರಮ ಬರಮಾಡಿಕೊಳ್ಳೋಕೆ ರೆಸಾರ್ಟ್ ಗಳಿಗೆ ಒಂದೆರಡು ದಿನದ ಟ್ರಿಪ್ ಹೋಗ್ಬಹುದು. ಹಾಗಾದ್ರೆ ಬೆಂಗಳೂರಿನಲ್ಲಿರುವ ಬೆಸ್ಟ್ ರೆಸಾರ್ಟ್​ಗಳ(Best Resort) ಬಗ್ಗೆ ಇಲ್ಲಿದೆ ಮಾಹಿತಿ.

ಗುಹಾಂತರಾ ರೆಸಾರ್ಟ್ 

ಕರ್ನಾಟಕದ ಹೃದಯಭಾಗದಲ್ಲಿ ಈ ಸ್ಥಳವಿದ್ದು, ಇದು ಪ್ರವಾಸಿಗರು ಮತ್ತು ಸಾಹಸ ಉತ್ಸಾಹಿಗಳನ್ನು ಕೈಬೀಸಿ ಕರೆಯುತ್ತದೆ. ಅಲ್ಲಿ ದೀರ್ಘಕಾಲ ಕಳೆದುಹೋದ ನಾಗರಿಕತೆಗಳ ಕುರುಹುಗಳನ್ನು ಸಂರಕ್ಷಿಸಲಾಗಿದೆ ಮತ್ತು ಆಧುನಿಕ ಸೌಕರ್ಯಗಳನ್ನು ಹೊಂದಿರುವುದರಿಂದ ವಿಭಿನ್ನ ಅನುಭವ ನೀಡುತ್ತದೆ. ಅಲ್ಲಿ ಏಕಶಿಲೆಯ ಕಲ್ಲುಗಳು ತಮ್ಮ ಹೃದಯದಲ್ಲಿ ಮತ್ತು ಭೂಮಿಯ ಅಡಿಯಲ್ಲಿ ಆಳವಾದ ರಹಸ್ಯಗಳನ್ನು ಹಿಡಿದಿಟ್ಟುಕೊಳ್ಳುತ್ತವೆ. ಏಕಾಂತ ಅಥವಾ ಆನಂದವನ್ನು ಪಡೆಯಲು ಬರುವವರಿಗೆ ಇದು ಬೆಸ್ಟ್ ಎನ್ನಬಹುದು.

ಗುಹಾಂತರಾದಲ್ಲಿನ ಅನೇಕ ಒಳಾಂಗಣ ಮತ್ತು ಹೊರಾಂಗಣ ಚಟುವಟಿಕೆಗಳನ್ನು ಯೋಜಿಸಲಾಗಿದ್ದು, ಇದು ಪ್ರವಾಸಿಗರಿಗೆ ಬೇಸರವಾಗದಂತೆ ನೋಡಿಕೊಳ್ಳುತ್ತದೆ. ಮಾನವ ನಿರ್ಮಿತ ಜಲಪಾತದ ಗುಡುಗಿನ ಶಬ್ದ ಇಲ್ಲಿ ನಿಮ್ಮನ್ನ ಸ್ವಾಗತಿಸುತ್ತದೆ. ಇಲ್ಲಿನ ಸಿಬ್ಬಂದಿ ನಿಮ್ಮ ಪ್ರತಿಯೊಂದು ಬೇಡಿಕೆಗಳನ್ನು ಈಡೇರಿಸುತ್ತಾರೆ. ಇಲ್ಲಿ ನಿಮಗೆ ಫ್ರೀ ವೈಫೈ ಸೌಲಭ್ಯ ಲಭ್ಯವಿದ್ದು, ಸ್ಪಾ, ಕಾರ್ ಸೇವೆಗಳ ಜೊತೆ ರೆಸ್ಟೋರೆಂಟ್​ ಸಹ ಇದೆ.

ರೆಸಾರ್ಟ್ ಬೆಲೆ ನೀವು ರೆಸಾರ್ಟ್​ನಲ್ಲಿ ಉಳಿಯುವ ಆಲೋಚನೆಯಿದ್ದರೆ ನಿಮಗೆ 4500ರೂಯಿಂದ 9500 ವರೆಗೂ ಸಹ ಪ್ಯಾಕೇಜ್​ಗಳು ಲಭ್ಯವಿದೆ. ನೀವು ನಿಮಗೆ ಇಷ್ಟ ಬಂದ ಪ್ಯಾಕೇಜ್ ಆಯ್ಕೆ ಮಾಡಬಹುದು ಹಾಗೂ ನಿಮ್ಮ ಆಯ್ಕೆಯ ರೂಂ ಸಹ ಲಭ್ಯವಿರುತ್ತದೆ. ಹಾಗೆಯೆ ನಿಮ್ಮ ಪ್ಯಾಕೇಜ್​ಗೆ ಅನುಸಾರ ನಿಮಗೆ ಊಟ –ತಿಂಡಿ ವ್ಯವಸ್ಥೆ ಇರುತ್ತದೆ.

ಚಟುವಟಿಕೆ ಸ್ಥಳ: ಕನಕಪುರ ಮುಖ್ಯ ರಸ್ತೆ, ಬೆಂಗಳೂರು, ಕರ್ನಾಟಕ ಚಟುವಟಿಕೆಯ ಸಮಯಗಳು: 9:00 AM ನಿಂದ 5:30 PM9:00 AM ನಿಂದ 10:00 PM ಚಟುವಟಿಕೆ ಅವಧಿ: 9-13 ಗಂಟೆಗಳು (ಅಂದಾಜು)

ತಲುಪುವುದು ಹೇಗೆ? ರೆಸಾರ್ಟ್ ಬೆಂಗಳೂರಿನಿಂದ ಕನಕಪುರ ರಸ್ತೆಯ ಮೂಲಕ 27 ಕಿಮೀ ದೂರದಲ್ಲಿದೆ ಮತ್ತು ಖಾಸಗಿ ಮತ್ತು ಸಾರ್ವಜನಿಕ ಸಾರಿಗೆಯ ಸಹಾಯದಿಂದ ನೀವು ಸುಲಭವಾಗಿ ತಲುಪಬಹುದು.

ಇದನ್ನೂ ಓದಿ: ಅರಮನೆ ನಗರಿ ಸುತ್ತಲೂ ಇವೆ ಈ ಸೂಪರ್ ಪ್ರವಾಸಿ ತಾಣಗಳು- ಕ್ರಿಸ್​ಮಸ್​ ರಜೆಯಲ್ಲಿ ನೀವೂ ಹೋಗಿ

ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ 

https://guhantara.com/accommodation-packages/  

ಶಿಲ್ಹಾಂದರ ರೆಸಾರ್ಟ್

ದಕ್ಷಿಣ ಭಾರತದ ಪ್ರಾಚೀನ ಸಾಮ್ರಾಜ್ಯಗಳ ಪರಂಪರೆಯ ಆಧಾರಲ್ಲಿ ರೆಸಾರ್ಟ್‌ನ ಅದ್ಭುತವಾಗಿ ನಿರ್ಮಾಣ ಮಾಡಲಾಗಿದೆ.  ಬೀಚ್ ವಾಲಿಬಾಲ್, ಸೈಕ್ಲಿಂಗ್, ಬಿಲ್ಲುಗಾರಿಕೆ, ಫೂಸ್‌ಬಾಲ್, ಡಾರ್ಟ್ಸ್, ಟೇಬಲ್ ಟೆನ್ನಿಸ್ ಮುಂತಾದ ಆಟಗಳನ್ನು ಸಹ ನೀವು ಆಡಬಹುದು. ನಿಮ್ಮ ದಿನವನ್ನು ಆನಂದದಿಂದ ಕಳೆಯಲು ಇದು ಸೂಕ್ತವಾದ ಸ್ಥಳ ಎನ್ನಬಹುದು. ಕ್ವಾಡ್ ಬೈಕ್, ಜಿಪ್‌ಲೈನಿಂಗ್, ಸೆಗ್ ವೇ ಬೈಕ್, ಟಾರ್ಗೆಟ್ ಶೂಟ್ ಮುಂತಾದ ವಿವಿಧ ಚಟುವಟಿಕೆಗಳು ಸಹ ಇದ್ದು, ಇಲ್ಲಿನ ಬಾಯಲ್ಲಿ ನೀರೂರಿಸುವ ಸಸ್ಯಾಹಾರಿ ಅಥವಾ ಮಾಂಸಾಹಾರ ಹೆಚ್ಚು ಪ್ರಸಿದ್ದ.

ವಿಳಾಸ: ಕನಕಪುರ ಮುಖ್ಯ ರಸ್ತೆ, ಬೆಂಗಳೂರು ದಕ್ಷಿಣ , ಕರ್ನಾಟಕ

ಚಟುವಟಿಕೆಯ ಸಮಯ: 9:00 AM ನಿಂದ 5:30 PM9:00 AM ನಿಂದ 10:00 PMಚಟುವಟಿಕೆ ಅವಧಿ: 9-13 ಗಂಟೆಗಳು (ಅಂದಾಜು)

ಭವ್ಯವಾದ ಶಿಲ್ಹಾಂದರ ರೆಸಾರ್ಟ್ ರಾಮನಗರ ಬಂಡೆಗಳ ತಪ್ಪಲಿನಲ್ಲಿದೆ. ಬೆಂಗಳೂರಿನಲ್ಲಿರುವ ರೆಸಾರ್ಟ್ ನಿಮ್ಮ ಪ್ರೀತಿಪಾತ್ರರೊಂದಿಗೆ ವಿಶ್ರಾಂತಿ ಪಡೆಯಲು ಮತ್ತು ಆನಂದಿಸಲು ಪರಿಪೂರ್ಣವಾದ ವಿಹಾರ ತಾಣ ಎಂದರೆ ತಪ್ಪಾಗಲಾರದು. ಹಚ್ಚ ಹಸಿರಿನ ಪರಿಸರದ ನಡುವೆ, ಬೆಂಗಳೂರಿನಲ್ಲಿ ಒಂದು ದಿನ ನಿಜಕ್ಕೂ ನೆನಪಿನಲ್ಲಿ ಉಳಿಯುತ್ತದೆ.

ಚಟುವಟಿಕೆಯ ಬಗ್ಗೆ ಹೆಚ್ಚಿನ ಮಾಹಿತಿ 

ಬೆಳಿಗ್ಗೆ 9 ರಿಂದ ರಾತ್ರಿ 10 ರವರೆಗೆ ಇರುತ್ತದೆ. ನಿಮ್ಮ ಆದ್ಯತೆ ಮತ್ತು ದಿನದ ಯೋಜನೆಗಳ ಪ್ರಕಾರ ನಿಮ್ಮ ಪ್ಯಾಕೇಜ್‌ಗಳು ಮತ್ತು ಊಟವನ್ನು ಆರಿಸಬಹುದು. ಪ್ಯಾಕೇಜ್ ನಲ್ಲಿ ಟೇಬಲ್ ಟೆನ್ನಿಸ್, ಕೇರಂ, ಚೆಸ್, ಡಾರ್ಟ್, ಮತ್ತು ಸ್ವಿಮ್ಮಿಂಗ್ , ಡಿಜೆ  ರೈನ್​ ಡ್ಯಾನ್ಸ್ ಗಳನ್ನು ಸಹ ಒಳಗೊಂಡಿರುತ್ತದೆ.

 ತಲುಪುವುದು ಹೇಗೆ? 

ರೆಸಾರ್ಟ್ ಬೆಂಗಳೂರಿನಿಂದ ಮೈಸೂರು ರಸ್ತೆಯ ಮೂಲಕ 46.8 ಕಿಮೀ ದೂರದಲ್ಲಿದೆ ಮತ್ತು ನೀವು ಖಾಸಗಿ ಮತ್ತು ಸಾರ್ವಜನಿಕ ಸಾರಿಗೆಯ ಸಹಾಯದಿಂದ ಸುಲಭವಾಗಿ ತಲುಪಬಹುದು.

5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಶುಲ್ಕ ವಿಧಿಸಲಾಗುವುದಿಲ್ಲ. 6 ರಿಂದ 10 ವರ್ಷದೊಳಗಿನ ಮಕ್ಕಳಿಗೆ ಅನುಗುಣವಾಗಿ ಶುಲ್ಕ ವಿಧಿಸಲಾಗುತ್ತದೆ, 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳನ್ನು ವಯಸ್ಕರೆಂದು ಪರಿಗಣಿಸಲಾಗುತ್ತದೆ. ಪ್ಯಾಕೇಜ್​ ಬೆಲೆ ಇಲ್ಲಿ ಮಧ್ಯಾಹ್ನದ ಊಟ ಮತ್ತು ಸಂಜೆ ಟೀ ಸಹ ನೀಡಲಾಗುತ್ತದೆ. ಇಲ್ಲಿ 800ರೂ ಯಿಂದ 2 ಸಾವಿರದ ವರೆಗಿನ ಪ್ಯಾಕೇಜ್ ಇದೆ.

ಇದನ್ನೂ ಓದಿ: ನಿಮ್ಮ ಕ್ರಿಸ್​ಮಸ್​, ಹೊಸ ವರ್ಷದ ರಜೆಯನ್ನು ಸುಂದರವಾಗಿ ಕಳೆಯಲು ಈ ಸ್ಥಳಗಳಿಗೆ ಟ್ರಿಪ್ ಹೋಗ್ಬೋದು

https://www.thrillophilia.com/tours/day-out-at-shilhaandara-resort  

ವಿಂಡ್‌ಫ್ಲವರ್ ನೇಚರ್ ರೆಸಾರ್ಟ್

ನಿಮ್ಮ  ಪ್ರೀತಿಪಾತ್ರರ ಜೊತೆಗೆ ಬೆಂಗಳೂರಿನಿಂದ ಸುಮಾರು 31.7 ಕಿಮೀ ದೂರದಲ್ಲಿರುವ ವಿಂಡ್‌ಫ್ಲವರ್ ಪ್ರಕೃತಿ ರೆಸಾರ್ಟ್‌ನಲ್ಲಿ ಸಾಕಷ್ಟು ಮೋಜಿನ ಜೊತೆಗೆ ಒಂದು ದಿನದ ಔಟಿಂಗ್ ಸೆಶನ್ ನಿಜಕ್ಕೂ ಅದ್ಭುತ ಅನುಬವ ನೀಡುತ್ತದೆ.. ಕೆಲವು ಸಾಹಸಮಯ ಚಟುವಟಿಕೆಗಳೊಂದಿಗೆ ದೇವನಹಳ್ಳಿಯ ಕೆಲ ಪ್ರದೇಶಗಳ ವೀಕ್ಷಿಸುವ ಜೊತೆಗೆ ನಿಮ್ಮ ದಿನವನ್ನು ಕಳೆಯಬಹುದು.

ಬಿಲಿಯರ್ಡ್ಸ್, ಕ್ರಿಕೆಟ್, ಕೇರಂ, ಚೆಸ್ ಮತ್ತು ಟೆನ್ನಿಸ್‌ನಂತಹ ಒಳಾಂಗಣ, ಹೊರಾಂಗಣ ಚಟುವಟಿಕೆಗಳನ್ನು ನೀವು ಆನಂದಿಸಲು ಸಾಧ್ಯವಾಗುತ್ತದೆ. 8 ಹಂತದ ರೋಪ್ ಚಾಲೆಂಜ್ ಕೋರ್ಸ್, ಪೇಂಟ್‌ಬಾಲ್ ಫೀಲ್ಡ್, ಜೋರ್ಬಿಂಗ್ ಮತ್ತು ಎಲ್ಲಾ ಭೂಪ್ರದೇಶ ಕ್ವಾಡ್ ಬೈಕಿಂಗ್‌ನಂತಹ ಹೊರಾಂಗಣ ಸಾಹಸ ಚಟುವಟಿಕೆಗಳನ್ನು ಹೆಚ್ಚು ಹಣ ಪಾವತಿ ಮಾಡಿ ಆಡಬಹುದು.

ನೀವು ಈಜುಕೊಳ ಮತ್ತು ಮಕ್ಕಳ ಆಟದ ಮೈದಾನದಲ್ಲಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂತೋಷದಾಯಕ ಸಮಯವನ್ನು ಆನಂದಿಸಬಹುದು. ದೇವನಹಳ್ಳಿಯ ಬಳಿ ಇರುವುದರಿಂದ ನೀವು ಹೆಚ್ಚಾಗಿ ನಿಮ್ಮ ಸ್ವಂತ ವಾಹನದಲ್ಲಿ ತೆರಳುವುದು ಉತ್ತಮ. ಇದು ನಿಮಗೆ ಹೆಚ್ಚಿನ ಸಮಯ ಕಳೆಯಲು ಸಹಾಯವಾಗುತ್ತದೆ.

ಚಟುವಟಿಕೆಯ ಸಮಯ: 8:00 AM ನಿಂದ 5:30 PM ಪ್ಯಾಕೇಜ್ – ಒಂದು ದಿನಕ್ಕೆ 1,250

ಆಂಗ್ಸಾನಾ ರೆಸಾರ್ಟ್

ನಿಸರ್ಗದ ಎದ್ದು ಕಾಣುವ ಸೌಂದರ್ಯದ ನಡುವೆ ಎತ್ತರದ ಪೈನ್ ಮರಗಳಿಂದ ಸುತ್ತುವರಿದ ಸಮೃದ್ಧ ಹಸಿರಿನ ನಡುವೆ ಈ ರೆಸಾರ್ಟ್ ಇದ್ದು, ಶಾಂತಿಯುತವಾಗಿ ಇಲ್ಲಿ ದಿನ ಕಳೆಯಬಹುದಾಗಿದೆ. ರೆಸಾರ್ಟ್ ಸಮಯ: 3:00 PM ರಿಂದ 11:00 AM ಸ್ಥಳ: ಯಲಹಂಕ, ಬೆಂಗಳೂರು ನಗರದ ಜಂಜಾಟದಿಂದ ದೂರವಿರಲು ಪರಿಪೂರ್ಣ ಅವಕಾಶ ಎಂದರೆ ತಪ್ಪಾಗಲಾರದು.

ಆಂಗ್ಸಾನಾ ಓಯಸಿಸ್ ರೆಸಾರ್ಟ್ ಅದ್ಭುತ ಆಯ್ಕೆಯಾಗಿದೆ. ಈ ರೆಸಾರ್ಟ್ ಹಚ್ಚ ಹಸಿರಿನ ನಡುವೆ ಇದ್ದು, ಆಹ್ಲಾದಕರ ವಾತಾವರಣ ನೀಡುತ್ತದೆ. ಇಲ್ಲಿನ ಕೊಠಡಿಗಳು ಆರಾಮದಾಯಕ ಮತ್ತು ಐಷಾರಾಮಿಯಾಗಿದ್ದು, ಗುಣಮಟ್ಟದ ಪೀಠೋಪಕರಣಗಳೊಂದಿಗೆ ಆಧುನಿಕ ಮತ್ತು ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಈ ಶಾಂತ ಮತ್ತು ಪ್ರಶಾಂತ ವಾಸ್ತವ್ಯವು ಸ್ಪಾ  ಸೇರಿದಂತೆ ಹಲವಾರು ಸೌಲಭ್ಯಗಳನ್ನು ಹೊಂದಿದ್ದು, ರಿಫ್ರೆಶ್ ಮಾಡಲು ಸಹಾಯ ಮಾಡುತ್ತದೆ. ಬ್ಯಾಡ್ಮಿಂಟನ್, ಕೇರಂ ಮತ್ತು ಇತರ ಒಳಾಂಗಣ ಮತ್ತು ಹೊರಾಂಗಣ ಆಟಗಳಂತಹ ಚಟುವಟಿಕೆಗಳನ್ನು ಸಹ ರೆಸಾರ್ಟ್ ಹೊಂದಿದೆ.

ಬೆಂಗಳೂರಿನ ಆಂಗ್ಸಾನಾ ಓಯಸಿಸ್ ಸ್ಪಾ ಮತ್ತು ರೆಸಾರ್ಟ್ ಹೋಗುವುದು ಹೇಗೆ?

ಯಲಹಂಕದಲ್ಲಿರುವ ರೆಸಾರ್ಟ್ ಗೆ ಹೋಗಲು ಸಾರ್ವಜನಿಕ ಅಥವಾ ಖಾಸಗಿ ಸಾರಿಗೆ ವಿಧಾನಗಳನ್ನು ಬಳಸಿಕೊಂಡು ಸುಲಭವಾಗಿ ಹೋಗಬಹುದು.

ಹತ್ತಿರದ ರೈಲು ನಿಲ್ದಾಣ: ಯಶವಂತಪುರ ರೈಲು ನಿಲ್ದಾಣ- 17.7 ಕಿಮೀ

ಹತ್ತಿರದ ವಿಮಾನ ನಿಲ್ದಾಣ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ- 16.3 ಕಿ.ಮೀ

ಹತ್ತಿರದ ಪ್ರಮುಖ ಸ್ಥಳಗಳು: ಲುಂಬಿನಿ ಗಾರ್ಡನ್ಸ್- 16.2 ಕಿಮೀ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯ- 10.1 ಕಿಮೀ

ಇದಿಷ್ಟೇ ಅಲ್ಲದೇ ಬೇರೆ ರೆಸಾರ್ಟ್​ಗಳು ಸಹ ಇದೆ. ನಾನಾ ಆಯ್ಕೆಗಳು ಇಲ್ಲಿದೆ.

ರಾಯಲ್ ಆರ್ಕಿಡ್ ರೆಸಾರ್ಟ್ ಮತ್ತು ಕನ್ವೆನ್ಷನ್ ಸೆಂಟರ್

ಪಾಮ್  ಮೆಡೋಸ್ ಕ್ಲಬ್

ರಮಣಶ್ರೀ ಕ್ಯಾಲಿಫೋರ್ನಿಯಾ ರೆಸಾರ್ಟ್

ಚೇರ್​ಮನ್ಸ್ ರೆಸಾರ್ಟ್

ಹಾಲಿಡೇ ವಿಲೇಜ್

ಹ್ಯಾಪಿ ಹೋಂ ರೆಸಾರ್ಟ್

ಪಾರ್ಕ್ ಹೋಟೆಲ್ ಮತ್ತು ರೆಸಾರ್ಟ್

ಇದನ್ನೂ ಓದಿ: ಬೆಂಗಳೂರಿನ ಆಕಾಶದಲ್ಲಿ Parasailing ಮಾಡ್ಬಹುದು.. ಬುಕಿಂಗ್ ಮಾಡೋಕೆ ಹೀಗೆ ಮಾಡಿ

ನಿಮಗೆ  ಹಳ್ಳಿ ವಾತಾವರಣ ಬೇಕು ಎಂದರೆ ಸಹ ನಿಮಗೆ ನಿಮಗೆ ಬೇಕಾದ ರೆಸಾರ್ಟ್​ ಆಯ್ಕೆ ಮಾಡಬಹುದು.  ಅಲ್ಲದೇ ನಿಮಗೆ ಶಾಂತವಾಗಿ ಸಮಯ ಕಳೆಯಲು ಬೇಕು ಎಂದರೆ ಅಥವಾ ಮಕ್ಕಳ ಜೊತೆ ಆಟೋಟಗಳು ಜಾಸ್ತಿ ಬೇಕು  ಪಾರ್ಟಿ ಗಲಾಟೆನೂ ಬೇಡ, ಸುಮ್ಮನೆ ನೆಮ್ಮದಿಯಾಗಿ ರಿಲ್ಯಾಕ್ಸ್ ಮಾಡ್ತಾ ಹೊಸಾ ವರ್ಷ ಬರಮಾಡಿಕೊಳ್ಳೋರಿಗೆ ಸಹ ರೆಸಾರ್ಟ್​ಗಳಿದ್ದು, ಹೊಸ ಹೊಸ ಆಫರ್​ಗಳನ್ನು ಸಹ ನೀಡಲಾಗುತ್ತದೆ.  ನಿಮ್ಮ ಅಭಿರುಚಿಗೆ ತಕ್ಕಂತೆ ಅವುಗಳಲ್ಲಿ ಪ್ಯಾಕೇಜ್ ಬೇಗನೇ ಬುಕ್ ಮಾಡ್ಕೊಂಡು ರಜೆಯ ಮಜಾ ಎಂಜಾಯ್ ಮಾಡಿ.
Published by:Sandhya M
First published: