Weight Loss: ಹೊಸ ವರ್ಷದಲ್ಲಿ ಸಣ್ಣ ಆಗಲು ಪ್ಲಾನ್ ಮಾಡಿದ್ದೀರಾ? ಈ ಬೆಸ್ಟ್ ಚಹಾ ಸೇವಿಸಿ

ಹರ್ಬಲ್ ಟೀ

ಹರ್ಬಲ್ ಟೀ

ಕರಿಮೆಣಸು ಪೈಪರಿನ್ ಅನ್ನು ಹೊಂದಿರುತ್ತದೆ. ಇದು ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವ ಸಂಯುಕ್ತವಾಗಿದ್ದು, ದೇಹದಲ್ಲಿ ಕೊಬ್ಬಿನ ಶೇಖರಣೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.

  • Trending Desk
  • 2-MIN READ
  • Last Updated :
  • Share this:

ಸಣ್ಣ ಆಗೋದು (Weight Loss) ಅಂದ್ರೆ ಅದೇನೂ ರಾಕೆಟ್‌ ಸೈನ್ಸ್‌ ಅಲ್ಲ. ಆದರೆ ಇಲ್ಲಿ ತಾಳ್ಮೆ, ಸ್ಥಿರತೆ ಮುಖ್ಯವಾಗುತ್ತದೆ. ನಾವು ಸೇವಿಸುವ ಆಹಾರ (Food) ಕುಡಿಯುವ ಪಾನೀಯ, ನಡೆಸುವ ಜೀವನ ಶೈಲಿ (Lifestyle) ಎಲ್ಲವೂ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ (Physical And Mental Health) ಪ್ರಮುಖ ಕೊಡುಗೆ ನೀಡುತ್ತವೆ. ಸಣ್ಣ ಆಗಲು ಈ ಮೂರು ಅಂಶಗಳ ಜೊತೆ ಸ್ಥಿರತೆ ಕಾಪಾಡಿಕೊಳ್ಳಬೇಕು. ಸಣ್ಣ ಆಗೋದು ಅಂದ್ರೆ ಡಯಟ್‌ ಅಂತಾ ಅಂದುಕೊಂಡಿದ್ದಾರೆ. ಆದರೆ ನಿಮಗೆ ಗೊತ್ತಾ, ನಿಮ್ಮ ಹೆಚ್ಚುವರಿ ತೂಕವನ್ನು ಇಳಿಸಲು ಈ ದ್ರವ ರೂಪದ ಕೆಲವು ಪಾನೀಯಗಳು (Drinks) ಸಹ ಮ್ಯಾಜಿಕ್‌ ಮಾಡುತ್ತವೆ ಅಂತಾ.


ಹೌದು, ಕೆಲವು ಪಾನೀಯಗಳಿಂದ ಅಂದರೆ ಸಕ್ಕರೆ ಇರುವ ಪಾನೀಯ, ಆಲ್ಕೋಹಾಲ್‌ ಇವುಗಳನ್ನು ಸೇವಿಸುವುದರಿಂದ ಹೇಗೆ ಬೊಜ್ಜು ಸಂಭವಿಸುತ್ತದೆಯೋ ಹಾಗೆಯೇ ಕೆಲ ಪಾನೀಯಗಳನ್ನು ಕುಡಿಯುವುದರಿಂದ ಬೊಜ್ಜು ಕರಗುತ್ತದೆ.


ತೂಕ ಇಳಿಕೆಗೆ ಸಹಾಯ ಮಾಡುತ್ತೆ ಈ ಪಾನೀಯ


ಉದಾಹರಣೆಗೆ ನಾವು ಸೇವಿಸುವ ಕೆಲವು ಟೀ, ಕೆಲವು ಪದಾರ್ಥಗಳ ಮಿಶ್ರಿತ ನೀರು, ಡಿಟಾಕ್ಸ್‌ ಪಾನೀಯ, ಹೀಗೆ ಇಂತಹ ಪಾನೀಯಗಳು ನಮ್ಮ ತೂಕ ಇಳಿಕೆಗೆ ಕಾರಣವಾಗುತ್ತವೆ.


ಸಣ್ಣ ಆಗಲು ಹಲವಾರು ತಜ್ಞರು ಅವರದ್ದೇ ಆದ ಕೆಲ ಪ್ರಯೋಗಗಳ ಮೂಲಕ ಕಂಡುಹಿಡಿದಿರುವ ಆಹಾರ, ಪಾನೀಯಗಳ ಬಗ್ಗೆ ಸಲಹೆ ನೀಡುತ್ತಾರೆ. ಹಾಗೆಯೇ ತೂಕ ಇಳಿಕೆಯಲ್ಲಿ ಸಖತ್‌ ಫಲಿತಾಂಶ ನೀಡುವ ಒಂದು ಹರ್ಬಲ್‌ ಟೀ ಬಗ್ಗೆ ಒಂದಿಷ್ಟು ಮಾಹಿತಿ ತಂದಿದ್ದೇವೆ. ಈ ಹರ್ಬಲ್‌ ಟೀ ಮಾಡುವುದು ಹಾಗೂ ತೂಕ ಇಳಿಕೆಯಲ್ಲಿ ಇದರ ಪಾತ್ರ ಏನು ಅಂತಾ ಇಲ್ಲಿ ನೋಡೋಣ.


ತೂಕ ನಷ್ಟದಲ್ಲಿ ಪವಾಡ ಮಾಡುವ ಒಂದು ಸೂಪರ್‌ ಪಾನೀಯ ಎಂದರೆ ಅದು, ಅರಿಶಿನ ಮತ್ತು ಕರಿಮೆಣಸಿನ ಚಹಾ. ಇದು ಸಣ್ಣ ಆಗಲು ಸಹಾಯ ಮಾಡುವುದರ ಜೊತೆಜೊತೆಯಾಗಿ ಇಮ್ಯುನಿಟಿಯನ್ನು ಹೆಚ್ಚಿಸುತ್ತದೆ.


ತೂಕ ನಷ್ಟಕ್ಕೆ ಅರಿಶಿಣ- ಕರಿಮೆಣಸು ಚಹಾದ ಪ್ರಯೋಜನಗಳು


ಅರಿಶಿನದ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ. ಎಲ್ಲಾ ಕಾಯಿಲೆಗಳಿಗೂ ಇದು ಮನೆ ಮದ್ದು. ಇದನ್ನು ಒಂದು ರೀತಿಯಲ್ಲಿ ಮನೆಮದ್ದಿನ ರಾಜ ಎನ್ನಬಹುದು. ಅರಿಶಿನವು ಒಮೆಗಾ-3 ಕೊಬ್ಬಿನಾಮ್ಲಗಳು, ಪ್ರೋಟೀನ್, ಫೈಬರ್ಗಳು ಸೇರಿದಂತೆ ಹಲವಾರು ಆರೋಗ್ಯ ಪ್ರಯೋಜನಕಾರಿ ಗುಣಗಳನ್ನು ಹೊಂದಿದೆ.


ಜೀರ್ಣಕ್ರಿಯೆಗೆ ಸಹಾಯ


ಅದು ನಮಗೆ ಜೀರ್ಣಿಸಿಕೊಳ್ಳಲು ಮತ್ತು ಚಯಾಪಚಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಜೊತೆಗೆ ಉರಿಯೂತದ, ಆಂಟಿಆಕ್ಸಿಡೆಂಟ್, ನೋವು ನಿವಾರಕ, ಆಂಟಿಮೈಕ್ರೊಬಿಯಲ್ ಮತ್ತು ಥರ್ಮೋಜೆನಿಕ್ ಗುಣಲಕ್ಷಣಗಳಿಂದ ಕೂಡಿದೆ, ಇದು ದೇಹದ ವಿಷವನ್ನು ಸಹ ಹೊರಹಾಕುತ್ತದೆ. ಈ ಎಲ್ಲಾ ಕ್ರಿಯೆಗಳು ಮೂಲಕ ಇದು ತೂಕ ನಷ್ಟವನ್ನು ಉತ್ತೇಜಿಸುತ್ತದೆ.


ಕೊಬ್ಬಿನ ಶೇಖರಣೆ ತಗ್ಗಿಸುತ್ತೆ


ಇನ್ನೂ ಕರಿಮೆಣಸು ಪೈಪರಿನ್ ಅನ್ನು ಹೊಂದಿರುತ್ತದೆ. ಇದು ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವ ಸಂಯುಕ್ತವಾಗಿದ್ದು, ದೇಹದಲ್ಲಿ ಕೊಬ್ಬಿನ ಶೇಖರಣೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.


ಕರಿಮೆಣಸು ದೇಹದಲ್ಲಿನ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ತೂಕ ಇಳಿಕೆ ಜೊತೆಗೆ ಒಟ್ಟಾರೆ ಆರೋಗ್ಯವನ್ನು ಇದು ಉತ್ತೇಜಿಸುತ್ತದೆ.


ತೂಕ ನಷ್ಟಕ್ಕೆ ಅರಿಶಿಣ-ಕರಿ ಮೆಣಸು ಚಹಾವನ್ನು ಹೇಗೆ ಮಾಡೋದು ?


ಮೇಲಿನ ಪ್ರಯೋಜನಗಳ ಆಧಾರದ ಮೇಲೆ ತೂಕ ನಷ್ಟಕ್ಕೆ ಈ ಚಹಾ ರಾಮಬಾಣವಾಗಿದೆ. ಇನ್ನೂ ಫಟಾಫಟ್‌ ಅಂತಾ ಮಾಡುವ ಚಹಾ ವಿಧಾನ ಸುಲಭವಾಗಿದೆ. ತಯಾರಿಕೆ ಮತ್ತು ಸೇವನೆಗೆ ಸುಲಭವಾಗಿರುವ ಈ ಚಹಾವನ್ನು ಬೆಳಿಗ್ಗೆ ಸಕ್ಕರೆ ಬದಲಿಯ ಟೀಯಾಗಿ ಸೇವಿಸಬಹುದು.


ವಿಧಾನ: ಒಂದು ಲೋಟ ನೀರು ತೆಗೆದುಕೊಂಡು ಅದನ್ನು ಕುದಿಯಲು ಬಿಡಿ. ನೀರು ಕುದಿಯುವಾಗ, ಅದಕ್ಕೆ ಒಂದು ಚಮಚ ಕರಿಮೆಣಸು ಮತ್ತು ಒಂದು ಚಮಚ ಅರಿಶಿನ ಪುಡಿಯನ್ನು ಸೇರಿಸಿ.


ಇದನ್ನೂ ಓದಿ:  Winter Drink: ಚಳಿಗಾಲದಲ್ಲಿ ಕಾಡುವ ಕಾಯಿಲೆಗೆ ಅರಿಶಿನ ಮತ್ತು ಅಜ್ವೈನ್ ಪಾನೀಯ ಸೇವಿಸಿ


ನಂತರ ಒಲೆ ಆರಿಸಿ ಟೀ ಪಾತ್ರೆಯನ್ನು ಮುಚ್ಚಿ. ಹಾಗೆಯೇ ಒಂದು ಮೂರ್ನಾಲ್ಕು ನಿಮಿಷ ಬಿಟ್ಟು ನಂತರ ಒಂದು ಕಪ್‌ಗೆ ಸೋಸಿಕೊಳ್ಳಿ. ಇಷ್ಟೇ ಮುಗಿತು, ಸಣ್ಣ ಆಗಲು ಬೇಕಾದಂತಹ ಚಹಾ ರೆಡಿ.


ಇದಕ್ಕೆ ನೀವು ಬೇಕಿದ್ದಲ್ಲಿ ಜೇನುತುಪ್ಪ ಸಹ ಸೇರಿಸಿಕೊಳ್ಳಬಹುದು. ಆದಾಗ್ಯೂ, ನಿಮ್ಮ ಆಹಾರದಲ್ಲಿ ಯಾವುದೇ ಡಿಟಾಕ್ಸ್ ಪಾನೀಯವನ್ನು ಸೇರಿಸುವ ಮೊದಲು ಯಾವಾಗಲೂ ಪೌಷ್ಟಿಕತಜ್ಞರನ್ನು ಸಂಪರ್ಕಿಸುವುದು ಉತ್ತಮ ಎಂಬುವುದು ನಮ್ಮ ಸಲಹೆ.

Published by:Mahmadrafik K
First published: