• Home
  • »
  • News
  • »
  • lifestyle
  • »
  • ಹಿಂದಿಯಲ್ಲೂ ಆರಂಭವಾಯ್ತು Her Circle ಆ್ಯಪ್‌ - ಇದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಹಿಂದಿಯಲ್ಲೂ ಆರಂಭವಾಯ್ತು Her Circle ಆ್ಯಪ್‌ - ಇದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ನೀತಾ ಅಂಬಾನಿ

ನೀತಾ ಅಂಬಾನಿ

Women's Day: Her Circle ಅಪ್ಲಿಕೇಷನ್‌ ಡೆಸ್ಕ್‌ಟಾಪ್ ಮತ್ತು ಮೊಬೈಲ್ ಎರಡರಲ್ಲೂ ಲಭ್ಯವಿದೆ, ಸ್ಮಾರ್ಟ್‌ಫೋನ್‌ನಲ್ಲಿ ನೀವು ಇದನ್ನು ಉಪಯೋಗಿಸಲು Google Play Store ಹಾಗೂ iOS ಆ್ಯಪ್‌ ಸ್ಟೋರ್‌ನಲ್ಲಿ ಉಚಿತ ಅಪ್ಲಿಕೇಶನ್‌ ಲಭ್ಯವಿದೆ.

  • Share this:

ಮಹಿಳೆಯರ ಸಬಲೀಕರಣಕ್ಕೆ (Women Empowerment) ಸಹಾಯ ಮಾಡುವ ಉದ್ದೇಶದಿಂದ ರಚಿತವಾದ Her Circle ಆ್ಯಪ್‌ ಅನ್ನು ಈಗ ಹಿಂದಿಯಲ್ಲಿ (Hindi)  ಪ್ರಾರಂಭಿಸಲಾಗಿದೆ. ಈಗಾಗಲೇ 42 ಮಿಲಿಯನ್‌ ಜನರಿಗೆ ಈ ಆ್ಯಪ್‌ ತಲುಪಿದ್ದು, ಈಗ ಇದನ್ನು ನೂರಾರು ಮಿಲಿಯನ್ ಮಹಿಳೆಯರು ಬಳಸಬಹುದಾಗಿದೆ ಎಂದು ತಿಳಿದುಬಂದಿದೆ. ಅಂತಾರಾಷ್ಟ್ರೀಯ ಮಹಿಳಾ ( International Women's Day) ದಿನವಾದ ಇಂದು ಇದನ್ನು ಪ್ರಾರಂಭಿಸಲಾಗಿದೆ. ಅಂತಾರಾಷ್ಟ್ರೀಯ ಮಹಿಳಾ ದಿನದಂದು ರಿಲಯನ್ಸ್ ಫೌಂಡೇಶನ್‌ನ (Reliance Foundation) ಸಂಸ್ಥಾಪಕ-ಅಧ್ಯಕ್ಷೆ ಶ್ರೀಮತಿ ನೀತಾ ಅಂಬಾನಿ (Nita Ambani) ಈ ಆ್ಯಪ್‌ ಅನ್ನು ಘೋಷಣೆ ಮಾಡಿದ್ದಾರೆ.


ಹಿಂದಿಯ Her Circle ಆ್ಯಪ್‌ ಪ್ರಾರಂಭಿಸಿದ ಬಳಿಕ ಮಾತನಾಡಿದ ನೀತಾ ಅಂಬಾನಿ ಅವರು, ಡಿಜಿಟಲ್ ಕ್ರಾಂತಿಯ ಶಕ್ತಿಯೊಂದಿಗೆ ಮಹಿಳಾ ಶಕ್ತಿಯನ್ನು ಸಂಯೋಜಿಸುವ ವಿಶಿಷ್ಟ ಉಪಕ್ರಮವಾದ ಈ ಆ್ಯಪ್‌, ಈಗ ಹಲವು ಭಾಷೆಗಳಿಗೆ ವಿಸ್ತರಣೆಯಾಗುತ್ತಿದೆ ಎಂದು ಹೇಳಿದ್ದಾರೆ.


Her Circle ಆ್ಯಪ್‌ ಅನ್ನು ನೀತಾ ಅಂಬಾನಿ ಅವರು ಒಂದು ವರ್ಷದ ಹಿಂದೆ ಅಂದರೆ ಕಳೆದ ವರ್ಷದ ಮಾರ್ಚ್‌ನಲ್ಲಿ ಪ್ರಾರಂಭಿಸಿದ್ದರು ಮತ್ತು ಪ್ರಾರಂಭವಾಗಿ ಒಂದು ವರ್ಷದಲ್ಲೇ, ಈ ಅಪ್ಲಿಕೇಷನ್‌, ಮಹಿಳೆಯರಿಗಾಗಿ 42 ಮಿಲಿಯನ್‌ ವ್ಯಾಪ್ತಿಯನ್ನು ಹೊಂದಿರುವ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿದೆ.


ಈ ಮಧ್ಯೆ, ‘’Her Circle ಪ್ರದೇಶ ಮತ್ತು ಭಾಷೆಯ ಹೊರತಾಗಿ ಎಲ್ಲಾ ಮಹಿಳೆಯರಿಗೆ ಮೀಸಲಾದ ವಿಕಾಸಗೊಳ್ಳುತ್ತಿರುವ ವೇದಿಕೆಯಾಗಿದೆ. ನಮ್ಮ ವ್ಯಾಪ್ತಿ ಮತ್ತು ಬೆಂಬಲವು ವಿಸ್ತರಿಸಬೇಕೆಂದು ನಾನು ಬಯಸುತ್ತೇನೆ. ಮತ್ತು ಹೆಚ್ಚು ಮಹಿಳೆಯರನ್ನು ಅವರ ಭಾಷೆಯಲ್ಲಿ ತಲುಪಲು, ನಾವು ಮೊದಲು ಹಿಂದಿಯಲ್ಲಿ Her Circle ಅನ್ನು ಪ್ರಾರಂಭಿಸುತ್ತಿದ್ದೇವೆ. ನಾವು ಮಾರ್ಚ್ 2022 ರಲ್ಲಿ ಲೈವ್ ಆಗುತ್ತೇವೆ ಮತ್ತು ಇಂಗ್ಲೀಷ್‌ ಪ್ಲಾಟ್‌ಫಾರ್ಮ್ ಇಲ್ಲಿಯವರೆಗೆ ಸ್ವೀಕರಿಸಿದಷ್ಟೇ ಇದು ಸಹ ಪ್ರೀತಿಯನ್ನು ಪಡೆಯುತ್ತದೆ ಎಂದು ನಾನು ಭಾವಿಸುತ್ತೇನೆ’’ ಎಂದು ಹೇಳಿದರು.


ಇನ್ನು, ಹಿಂದಿ ಆ್ಯಪ್‌ ಬಿಡುಗಡೆಯ ಜೊತೆಗೆ, ನೀತಾ ಅಂಬಾನಿ ಅವರು Her Circle ನ ಮೊದಲ ವಾರ್ಷಿಕೋತ್ಸವವನ್ನು ಸಹ ಆಚರಣೆ ಮಾಡಿದರು. ಡಿಜಿಟಲ್ ಬಳಕೆ ಮತ್ತು ನೆಟ್‌ವರ್ಕಿಂಗ್‌ನಾದ್ಯಂತ ಗುರಿಗಳ ದೊಡ್ಡ ಪಟ್ಟಿಯನ್ನುHer Circle ಅಪ್ಲಿಕೇಷನ್‌ ಒಳಗೊಂಡಿದೆ. ಇದು ಬಳಕೆದಾರರಿಗಾಗಿ ಕ್ಯೂರೇಟೆಡ್ ಮತ್ತು ಪಟ್ಟಿ ಮಾಡಲಾದ ಸಾವಿರಾರು ಉದ್ಯೋಗಾವಕಾಶಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ.


ಈ ನೆಟ್‌ವರ್ಕ್‌ನಲ್ಲಿ 30,000 ನೋಂದಾಯಿತ ಉದ್ಯಮಿಗಳೊಂದಿಗೆ, ನಾವು ಸಹಯೋಗಿಸಲು ಮತ್ತು ಒಟ್ಟಿಗೆ ಬೆಳೆಯಲು ಬಯಸುವ ಮಹಿಳೆಯರ ಸಮುದಾಯವನ್ನು ಹೊಂದಿದ್ದೇವೆ ಎಂದೂ ನೀತಾ ಅಂಬಾನಿ ಅವರು ಮಾಹಿತಿ ನೀಡಿದರು.


ಫಿಟ್‌ನೆಸ್ ಮತ್ತು ಪೋಷಣೆ, ಪೀರಿಯಡ್ಸ್‌, ಫಲವತ್ತತೆ, ಗರ್ಭಧಾರಣೆ ಮತ್ತು ಹಣಕಾಸು ಸೇರಿ ಹಲವು ಕ್ಷೇತ್ರದ ಬಗ್ಗೆ ವೈಯಕ್ತಿಕಗೊಳಿಸಿದ ಟ್ರ್ಯಾಕರ್‌ಗಳನ್ನು ಈ ಅಪ್ಲಿಕೇಶನ್‌ ಹೊಂದಿದ್ದು, ಇದನ್ನು 1.50 ಲಕ್ಷ ಚಂದಾದಾರರು ಉಚಿತವಾಗಿ ಬಳಸಿದ್ದಾರೆ ಎಂದು ತಿಳಿದುಬಂದಿದೆ.


ಅಲ್ಲದೆ, ಗೀತಾ ಗೋಪಿನಾಥ್, ನೈನಾ ಲಾಲ್ ಕಿದ್ವಾಯಿ, ಪದ್ಮಶ್ರೀ ಪ್ರಶಸ್ತಿ ವಿಜೇತೆ ಗುಲಾಬೊ ಸಪೇರಾ, ಗೀತಾ ಫೋಗಟ್, ಅನಿತಾ ಡೋಂಗ್ರೆ ಸೇರಿದಂತೆ ಮಹಿಳಾ ಸಾಧಕರ ಸಂದರ್ಶನಗಳು ಮತ್ತು ಕಥೆಗಳು ಹಾಗೂ ಸಂಘರ್ಷ ಪೀಡಿತ ಪ್ರದೇಶಗಳಿಂದ ಸ್ಥಳಾಂತರಿಸಲ್ಪಟ್ಟವರ ಹಲವು ವಿಶೇಷತೆಗಳನ್ನು ಸಹ ಈ ಆ್ಯಪ್‌ ಒಳಗೊಂಡಿದೆ.


ಈ ವೇಳೆ ನೀತಾ ಎಂ. ಅಂಬಾನಿ ಅವರು Her Circle ನ ಬಳಕೆದಾರರಿಗೆ ಧನ್ಯವಾದವನ್ನೂ ಅರ್ಪಿಸಿದ್ದಾರೆ.


ಇದನ್ನೂ ಓದಿ: ಮಕ್ಕಳ ಮೆಮೊರಿ ಪವರ್ ಹೆಚ್ಚಾಗೋಕೆ ಈ ಆಹಾರಗಳು ಮುಖ್ಯವಂತೆ


Her Circle ಅಪ್ಲಿಕೇಷನ್‌ ಹೇಗೆ ಕೆಲಸ ಮಾಡುತ್ತದೆ..?


ನೆಟ್‌ವರ್ಕಿಂಗ್ ಮತ್ತು ಗುರಿ-ನೆರವೇರಿಕೆಗಾಗಿ ಒನ್‌ ಸ್ಟಾಪ್‌ ಡೆಸ್ಟಿನೇಷನ್‌: Her Circle ಅಪ್ಲಿಕೇಷನ್‌ ಮಹಿಳೆಯರಿಗೆ ಸಂಬಂಧಿಸಿದ ವಿಷಯವನ್ನು ಒದಗಿಸಲು ಒನ್‌ ಸ್ಟಾಪ್‌ ಡೆಸ್ಟಿನೇಷನ್‌ ಆಗಿದೆ. ಸಾಮಾಜಿಕ ವೇದಿಕೆಯ ಮೂಲಕ ಇದು ಇತರ ಮಹಿಳೆಯರನ್ನು ಸಂಪರ್ಕಿಸುತ್ತದೆ.


ಬಳಕೆದಾರರು ತಮ್ಮ ಆಯ್ಕೆಯ ಭಾಷೆ ಅಂದರೆ, ಇಂಗ್ಲಿಷ್ ಅಥವಾ ಹಿಂದಿ - ಹೀಗೆ ಭಾಷೆಯ ಆಯ್ಕೆಯನ್ನು ಮಾಡಬಹುದು. ಹಿಂದಿ ಕಂಟೆಂಟ್‌ ಅನನ್ಯ ಮತ್ತು ಒರಿಜಿನಲ್‌ ಆಗಿದ್ದು, ಇದನ್ನು ಬಳಕೆದಾರರಿಗೆ ಕಸ್ಟಮೈಸ್ ಮಾಡಲಾಗಿದೆ ಎಂದೂ ತಿಳಿದುಬಂದಿದೆ.


ಈ ಸಾಮಾಜಿಕ ವೇದಿಕೆಯು ಮಹಿಳೆಯರಿಗೆ ಆರೋಗ್ಯ, ಕ್ಷೇಮ, ಶಿಕ್ಷಣ, ಉದ್ಯಮಶೀಲತೆ, ಹಣಕಾಸು, ಲೋಕೋಪಕಾರ, ಮಾರ್ಗದರ್ಶನ ಮತ್ತು ನಾಯಕತ್ವದ ಕುರಿತು ಮಾಹಿತಿ ನೀಡುತ್ತದೆ. ಉನ್ನತ ಕೌಶಲ್ಯ ಮತ್ತು ಉದ್ಯೋಗಗಳ ವಿಭಾಗವು ಮಹಿಳೆಯರಿಗೆ ಹೊಸ ವೃತ್ತಿಪರ ಕೌಶಲ್ಯಗಳನ್ನು ಹುಡುಕಲು ಸಹಾಯ ಮಾಡುತ್ತದೆ ಮತ್ತು ಸೂಕ್ತವಾದ ಉದ್ಯೋಗಾವಕಾಶಗಳನ್ನು ಪಡೆಯಲು ಸಹಾಯ ಮಾಡುತ್ತದೆ.


ಖಾಸಗಿ, ವೈಯಕ್ತೀಕರಿಸಿದ, ಸುರಕ್ಷಿತ: ವಿಡಿಯೋಗಳಿಂದ ಲೇಖನಗಳವರೆಗೆ - ಹೀಗೆ ಈ ಅಪ್ಲಿಕೇಷನ್‌ ಎಲ್ಲ ರೀತಿಯ ಕಂಟೆಂಟ್‌ ಅನ್ನು ಹೊಂದಿದೆ. ಆದರೆ, ಸಾಮಾಜಿಕ ನೆಟ್‌ವರ್ಕಿಂಗ್ ಭಾಗವು ಕೇವಲ ಮಹಿಳೆಯರಿಗೆ ಮಾತ್ರ ಎನ್ನುವುದು ಇದರ ವಿಶೇಷತೆ. ಹೊಸ ಸ್ನೇಹಿತರನ್ನು ಹುಡುಕಲು ಅಥವಾ ಹಿಂಜರಿಕೆಯಿಲ್ಲದೆ ಗೆಳೆಯರಿಂದ ಪ್ರಶ್ನೆಗಳನ್ನು ಕೇಳಲು ಸಹ ಇದು ಅವಕಾಶ ಒದಗಿಸುತ್ತದೆ. ಗೌಪ್ಯ ಚಾಟ್‌ರೂಮ್‌ನಲ್ಲಿ ವೈದ್ಯಕೀಯ ಮತ್ತು ಹಣಕಾಸು ತಜ್ಞರಿಗೆ ಪ್ರಶ್ನೆಗಳನ್ನು ಕೇಳಲು Her Circle ಆ್ಯಪ್‌ ಮಹಿಳೆಯರಿಗೆ ವಿಶೇಷ ಮತ್ತು ವೈಯಕ್ತಿಕ ಸ್ಥಳವನ್ನು ಹೊಂದಿದೆ.


Her ಗುಡ್ ಹ್ಯಾಬಿಟ್ ಅಪ್ಲಿಕೇಶನ್: ಈ ಅಪ್ಲಿಕೇಷನ್‌ ಸುರಕ್ಷಿತ ಮತ್ತು ವೈಯಕ್ತೀಕರಿಸಿದ ಪರಿಸರದಲ್ಲಿ ಉಪಯುಕ್ತ ಮತ್ತು ಉನ್ನತಿಗೇರಿಸುವ ವಿಷಯ, ಸಾಮಾಜಿಕ ನೆಟ್‌ವರ್ಕಿಂಗ್ ಮತ್ತು ತಜ್ಞರ ಸಲಹೆಯನ್ನು ಒದಗಿಸುವುದು ಮಾತ್ರವಲ್ಲ. ಇದರ ಜತೆಗೆ, ಫಿಟ್‌ನೆಸ್, ಪೀರಿಯಡ್ಸ್ ಟ್ರ್ಯಾಕಿಂಗ್, ಸಮಯದಲ್ಲಿ ಸರಿಯಾದ ಅಭ್ಯಾಸಗಳನ್ನು ಬೆಳೆಸಲು ಮತ್ತು ಉಳಿಸಿಕೊಳ್ಳಲು ಬಳಕೆದಾರರನ್ನು ಸಕ್ರಿಯಗೊಳಿಸಲು Her Circle ಫಲವತ್ತತೆ ಮತ್ತು ಗರ್ಭಧಾರಣೆಯ ಮಾರ್ಗದರ್ಶಿ ಹಾಗೂ ಹಣಕಾಸು ಟ್ರ್ಯಾಕಿಂಗ್ ಆ್ಯಪ್‌ ಟ್ರ್ಯಾಕರ್‌ಗಳನ್ನು ಸಹ ಒದಗಿಸುತ್ತದೆ.


Her Circle ಅಪ್ಲಿಕೇಷನ್‌ ಡೆಸ್ಕ್‌ಟಾಪ್ ಮತ್ತು ಮೊಬೈಲ್ ಎರಡರಲ್ಲೂ ಲಭ್ಯವಿದೆ, ಸ್ಮಾರ್ಟ್‌ಫೋನ್‌ನಲ್ಲಿ ನೀವು ಇದನ್ನು ಉಪಯೋಗಿಸಲು Google Play Store ಹಾಗೂ iOS ಆ್ಯಪ್‌ ಸ್ಟೋರ್‌ನಲ್ಲಿ ಉಚಿತ ಅಪ್ಲಿಕೇಶನ್‌ ಲಭ್ಯವಿದೆ.


ಇದನ್ನೂ ಓದಿ: ಕೂತು ಕೆಲಸ ಮಾಡಿ ತೂಕ ಹೆಚ್ಚಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ


ಇನ್ನು, Her Circle ಅಪ್ಲಿಕೇಷನ್‌ ಬಳಸುವ ನೋಂದಾಯಿತ ಬಳಕೆದಾರರು ಈ ಆ್ಯಪ್‌ ಅನ್ನು ಸಂಪೂರ್ಣ ಉಚಿತವಾಗಿ ಬಳಸಬಹುದು ಎಂದೂ ರಿಲಯನ್ಸ್ ಫೌಂಡೇಷನ್‌ ಪ್ರಕಟಣೆಯಲ್ಲಿ ತಿಳಿಸಿದೆ.

Published by:Sandhya M
First published: