• Home
  • »
  • News
  • »
  • lifestyle
  • »
  • Hemorrhoids Symptoms: ಪೈಲ್ಸ್​ ಸಮಸ್ಯೆಯಲ್ಲೂ ಹಲವಾರು ವಿಧಗಳಿದೆ, ಇಲ್ಲಿದೆ ಮಾಹಿತಿ

Hemorrhoids Symptoms: ಪೈಲ್ಸ್​ ಸಮಸ್ಯೆಯಲ್ಲೂ ಹಲವಾರು ವಿಧಗಳಿದೆ, ಇಲ್ಲಿದೆ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Hemorrhoids Symptoms and Causes: ಮೂಲವ್ಯಾಧಿಗೆ ಔಷಧಿಗಳೂ ಸಹ ಲಭ್ಯವಿದ್ದು ಎಲ್ಲ ಔಷಧೀಯ ಅಂಗಡಿಗಳಲ್ಲಿ ದೊರೆಯುತ್ತವೆ. ಆದರೆ ಅವುಗಳನ್ನು ತೆಗೆದುಕೊಳುವ ಮುಂಚೆ ವೈದ್ಯರನ್ನು ಸಂಪರ್ಕಿಸಿ ಅವರಿಂದ ಒಪ್ಪಿಗೆ ಪಡೆಯುವುದು ಉತ್ತಮ.

  • Share this:

ಸಾಮಾನ್ಯವಾಗಿ ಪೈಲ್ಸ್ (Piles) ಎಂದೆ ಎಲ್ಲೆಡೆ ಕರೆಯಲ್ಪಡುವ ಮೂಲವ್ಯಾಧಿಯು ಬಹಳಷ್ಟು ಜನರು ಅನುಭವಿಸುವ ಒಂದು ಆರೋಗ್ಯ ಸಮಸ್ಯೇಯೇ (Health Problems) ಆಗಿದೆ. ಮನುಷ್ಯನು ಮಲ ವಿಸರ್ಜಿಸುವ ಮಾರ್ಗವಾದ ಗುದ ದ್ವಾರದ ಒಳ ಭಾಗದಲ್ಲಿ ಶೇಖರಣೆಗೊಳ್ಳುವ ಉರಿಯುತದ, ಬಾವು ಬಂದಂತಿರುವ ಅಂಗಾಂಶಗಳನ್ನೇ ಪೈಲ್ಸ್ ಅಥವಾ ಮೂಲವ್ಯಾಧಿ ಎಂದು ಕರೆಯುತ್ತಾರೆ. ಗುದ ದ್ವಾರದ ಹೊರ  ಹಾಗೂ ಒಳ ಎರಡೂ ಭಾಗಗಳಲ್ಲಿ ಕಂಡುಬರುವ ಈ ಮೂಲವ್ಯಾಧಿಯು ವಿವಿಧ ಗಾತ್ರ ಮತ್ತು ಅಳತೆಗಳಲ್ಲಿರುತ್ತದೆ. ಗುದ ದ್ವಾರದ ಒಳ ಭಾಗದಲ್ಲುಂಟಾಗುವ ಮೂಲವ್ಯಾಧಿಯು ಗುದದ್ವಾರದ ಒಳ ಭಾಗದ ಮೇಲ್ಮುಖದಲ್ಲಿ ಸುಮಾರು 2-4 ಸೆ.ಮೀ ಒಳಗೆ ಉಂಟಾದರೆ ಹೊರ ಭಾಗದಲ್ಲುಂಟಾಗುವ ಮೂಲವ್ಯಾಧಿಯು ಗುದದ್ವಾರದ ಸುತ್ತಲಿನ ಅಂಚುಗಳಲ್ಲಿ ಕಂಡುಬರುತ್ತದೆ. ಮಲ ವಿಸರ್ಜನೆಗೆ ಸಂಬಂಧಿಸಿದಂತೆ ಇದು ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತದೆ.  


ಇದರ ಲಕ್ಷಣಗಳು


ಬಹಳಷ್ಟು ಪ್ರಕರಣಗಳಲ್ಲಿ ಬಹಳಷ್ಟು ಜನರಲ್ಲಿ ಮೂಲವ್ಯಾಧಿ ಕಾಣಿಸಿಕೊಂಡರೂ ಸಹ ಅದು ಅಷ್ಟೊಂದು ಗಂಭೀರ ಸಮಸ್ಯೆಗಳನ್ನು ತಂದೊಡ್ಡುವುದಿಲ್ಲ. ಕೆಲದಿನಗಳ ಬಳಿಕ ತಾನಾಗಿಯೇ ಅದು ಮಾಯವಾಗಿ ಹೋಗಿ ಬಿಡುತ್ತದೆ. ಆದರೆ, ಅದು ಉಲ್ಬಣಗೊಂಡಾಗ ಮಾತ್ರ ಮನುಷ್ಯ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗಿ ಬರುತ್ತದೆ. ಆದಾಗ್ಯೂ ಪೈಲ್ಸ್ ಇರುವಂತೆ ಸೂಚಿಸುವ ಕೆಲ ಲಕ್ಷಣಗಳು ಈ ಕೆಳಗಿನಂತಿವೆ.


* ಗುದದ್ವಾರದ ಬಳಿ ಗಟ್ಟಿಯಾದ ಹಾಗೂ ನೋವಿನಿಂದ ಕೂಡಿರುವ ಗಂಟಿನ ಉಪಸ್ಥಿತಿಯನ್ನು ಮನುಷ್ಯ ಅನುಭವಿಸುತ್ತಾನೆ. ಇಂತಹ ಗಂಟಿನಲ್ಲಿ ರಕ್ತವಿದ್ದರೆ ಇದನ್ನು ಥ್ರೊಂಬೋಸ್ಡ್ ಎಕ್ಸ್ಟರ್ನಲ್ ಹ್ಯುಮರಾಯಿಡ್ಸ್ ಎಂದು ಕರೆಯುತ್ತಾರೆ.  


* ಮೂಲವ್ಯಾಧಿಯಿಂದ ಬಳಲುವ ಮನುಷ್ಯ ಮಲ ವಿಸರ್ಜಿಸಿದ ನಂತರವೂ ಅವನಲ್ಲಿ ಪೂರ್ಣವಗಿ ವಿಸರ್ಜಿತವಾಗಿದೆ ಎಂಬ ಸಮಾಧಾನ ಅಥವಾ ತೃಪ್ತಿ ಎಂಬುದು ಇರುವುದಿಲ್ಲ.


* ಮಲದ ಜೊತೆ ರಕ್ತದ ಹನಿಗಳು ವಿಸರ್ಜಿತವಾಗುವುದು.


* ಮಲ ವಿಸರ್ಜನವಾಗುವ ಗುದ ದ್ವಾರದ ಬಳಿ ಕೆರೆತದ ಅನುಭವ, ಕೆಂಪಾಗುವಿಕೆ ಹಾಗೂ ಬಾವು ಕಾಣುವುದು.


* ಮಲ ವಿಸರ್ಜನೆಯ ಸಂದರ್ಭದಲ್ಲೂ ನೋವು ಉಂಟಾಗುವುದು.


ಒಮ್ಮೊಮ್ಮೆ ಇದು ತನ್ನಿಂದ ತಾನಾಗಿಯೇ ಹೋಗದಿದ್ದರೆ ಅಥವಾ ಇದನ್ನು ಉಪಚರಿಸದಿದ್ದರೆ ಪೈಲ್ಸ್ ಎಂಬುದು ಗಂಭೀರ ಪರಿಣಾಮಗಳನ್ನೂ ಸಹ ಉಂಟು ಮಾಡಬಲ್ಲುದು. ಉದಾಹರಣೆಗೆ


* ಮಲ ವಿಸರ್ಜನೆಯ ಸಂದರ್ಭದಲ್ಲಿ ಅತಿಯಾದ ರಕ್ತಸ್ರಾವ ಉಂಟಾಗುವುದು, ಕೊನೆಗೆ ಇದು ಅನೇಮಿಯಾ ಉಂಟು ಮಾಡಬಲ್ಲುದು.


* ಸೋಂಕು ಉಂಟಾಗುವುದು.


* ಮಲ ವಿಸರ್ಜನೆಯ ಮೇಲೆ ನಿಯಂತ್ರಣ ಕಳೆದುಕೊಳ್ಳುವುದು.


* ಗುದ ದ್ವಾರದ ಬಳಿ ಅಥವಾ ಒಳ ಭಾಗದಲ್ಲಿ ಹೊಸದಾದ ಚಾನೆಲ್ ಒಂದು ಸೃಷ್ಟಿಯಾಗುವಿಕೆ.


ಮೂಲವ್ಯಾಧಿಯನ್ನು ನಾಲ್ಕು ಭಾಗಗಳಲ್ಲಿ ವಿಂಗಡಿಸಲಾಗಿದೆ


ಗ್ರೇಡ್ I : ಈ ಪ್ರಕಾರದ ಮೂಲವ್ಯಾಧಿಯಲ್ಲಿ ಗುದದ್ವಾರದ ಲೈನಿಂಗ್ ಗಳಲ್ಲಿ ಚಿಕ್ಕದಾದ ಉಬ್ಬುಗಳು ಇರುತ್ತವೆ ಹಾಗೂ ಬಾಹ್ಯವಾಗಿ ಇವು ಕಂಡುಬರುವುದಿಲ್ಲ.


ಗ್ರೇಡ್ II : ಈ ಪ್ರಕಾರದ ಪೈಲ್ಸ್ ಗಳು ಮೊದಲನೇ ಗ್ರೇಡ್ ಪೈಲ್ಸ್ ಗಳಿಗಿಂತಲೂ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿರುತ್ತವೆ. ಮಲ ವಿಸರ್ಜನೆಯಾಗುವಾಗ ಇವೂ ಸಹ ತಳ್ಳಲ್ಪಟ್ಟಂತಹ ಅನುಭವ ನೀಡುತ್ತವೆ. 


ಗ್ರೇಡ್ III : ಇವು ಎರಡನೇ ಪ್ರಕಾರಕ್ಕಿಂತ ಇನ್ನೂ ಸ್ವಲ್ಪ ದೊಡ್ಡ ಗಾತ್ರದ್ದಾಗಿದ್ದು ಗುದದ್ವಾರದಿಂದ ಜೋತು ಬೀಳುತ್ತಿರುತ್ತವೆ. ಇವುಗಳನ್ನು ಮತ್ತೆ ಒಳ ನೂಕಬಹುದಾಗಿರುತ್ತದೆ. 


ಗ್ರೇಡ್ IV : ಈ ಪ್ರಕಾರದ ಪೈಲ್ಸ್ ಗಳು ದೊಡ್ಡದಾಗಿದ್ದು ಇವುಗಳನ್ನು ಮತ್ತೆ ಒಳ ಹಾಕಲು ಸಾಧ್ಯವಾಗುವುದಿಲ್ಲ. ಇವುಗಳಿಗೆ ಚಿಕಿತ್ಸೆಯ ಅವಶ್ಯಕತೆಯಿರುತ್ತದೆ. 


ಬಾಹ್ಯವಾಗಿ ಉಂಟಾಗುವ ಮೂಲವ್ಯಾಧಿಯು ಗುದದ್ವಾರದ ಸುತ್ತ ಗಂಟುಗಳನ್ನು ನಿರ್ಮಿಸುತ್ತವೆ. ರಕ್ತ ಹೆಪ್ಪುಗಟ್ಟಿದ ಸಂದರ್ಭದಲ್ಲಿ ಅವು ವಿಪರೀತವಾದ ಕೆರೆತ ಹಾಗೂ ನೋವನ್ನು ಉಂಟು ಮಾಡುತ್ತವೆ. ಈ ಸಂದರ್ಭದಲ್ಲಿ ಇದನ್ನು ಉಪಚರಿಸಬೇಕಾಗಿರುವುದು ಅನಿವಾರ್ಯವಾಗುತ್ತದೆ. 


ಮೂಲವ್ಯಾಧಿ ಉಂಟಾಗಲು ಕಾರಣಗಳು


ಕೆಳ ಭಾಗದ ಗುದನಾಳದಲ್ಲಿ ಅತಿಯಾದ ಒತ್ತಡದಿಂದ ಸಾಮಾನ್ಯವಾಗಿ ಮೂಲವ್ಯಾಧಿ ಉಂಟಾಗುತ್ತದೆ. ನಮಗೆಲ್ಲ ತಿಳಿದಿರುವಂತೆ ಗುದ ಭಾಗದೊಳಗೆ ರಕ್ತನಾಳಗಳಿರುತ್ತವೆ. ಇವುಗಳ ಮೇಲೆ ಒತ್ತಡ ಬಿದ್ದಾಗ ಇವು ಹಿಗ್ಗಿ ಮೂಲವ್ಯಾಧಿ ಉಂಟಾಗುವಂತೆ ಮಾಡುತ್ತವೆ. ಹಾಗಾದರೆ, ಇವುಗಳ ಮೇಲೆ ಒತ್ತಡ ಹೇಗೆ ಬೀಳಬಹುದು ಎಂಬ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಉತ್ತರವೆಂದರೆ


* ತೀವ್ರವಾದ ಅಥವಾ ನಿರಂತರವಾದ ಮಲಬದ್ಧತೆ ಅನುಭವಿಸಿದಾಗ ಗುದ ಭಾಗದೊಳಗಿನ ರಕ್ತನಾಳಗಳ ಮೇಲೆ ಒತ್ತಡ ಬೀಳುತ್ತದೆ.


* ಅತಿಯಾದ ಭೇದಿ ಉಂಟಾದ ಸಂದರ್ಭಗಳಲ್ಲೂ ರಕ್ತನಾಳಗಳ ಮೇಲೆ ಒತ್ತಡ ಬೀಳುವ ಸಾಧ್ಯತೆ ಇರುತ್ತದೆ.


* ಒಮ್ಮೊಮ್ಮೆ ಅತಿಯಾದ ಭಾರ ಎತ್ತುವಿಕೆಯಿಂದಲೂ ರಕ್ತನಾಳಗಳ ಮೇಲೆ ಒತ್ತಡ ಬೀಳುವ ಸಾಧ್ಯತೆ ಇರುತ್ತದೆ.


* ಗರ್ಭಧರಿಸಿದಾಗಲೂ ರಕ್ತನಾಳಗಳ ಮೇಲೆ ಒತ್ತಡ ಬೀಳುವ ಸಾಧ್ಯತೆ ಇರುತ್ತದೆ.


* ಬಲವಂತವಾಗಿ ಮಲ ವಿಸರ್ಜಿಸುವಾಗಲೂ ರಕ್ತನಾಳಗಳ ಮೇಲೆ ಒತ್ತಡ ಬೀಳುವ ಸಾಧ್ಯತೆ ಇರುತ್ತದೆ.


ಇದನ್ನೂ ಓದಿ: ಫಸ್ಟ್​ ಟೈಮ್​ ಐ ಮೇಕಪ್​ ಮಾಡಿಕೊಳ್ಳುವವರಿಗೆ ಇಲ್ಲಿದೆ ಸಿಂಪಲ್ ಟಿಪ್ಸ್


ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ವಯಸ್ಸಾದಂತೆ ಮೂಲವ್ಯಾಧಿಗೊಳಪಡುವ ಸಂಭವನೀಯತೆ ಹೆಚ್ಚಾಗತೊಡಗುತ್ತದೆ. 


ಪತ್ತೆ ಹಚ್ಚುವುದು


ನಿಮಗೆ ಮೇಲೆ ಹೇಳಿದಂತೆ ಮಲ ವಿಸರ್ಜಿಸುವಾಗ ಲಕ್ಷಣಗಳು ಕಂಡು ಬಂದರೆ ಒಂದೊಮ್ಮೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ವೈದ್ಯರು ಕೆಲವು ಪ್ರಶ್ನೆಗಳನ್ನು ಕೇಳುವುದರ ಮೂಲಕ ಹಾಗೂ ಕೆಲವು ದೈಹಿಕ ತಪಾಸಣೆಗಳನ್ನು ನಡೇಸುವ ಮೂಲಕ ನಿಮಗೆ ಮೂಲವ್ಯಾಧಿಯಾಗಿರುವುದನ್ನು ಸುಲಭವಾಗಿ ಪತ್ತೆ ಹಚ್ಚಬಲ್ಲರು. ಸಾಮಾನ್ಯವಾಗಿ, ಈ ಸಂದರ್ಭದಲ್ಲಿ ನೀವು ವೈದ್ಯರಿಂದ ಎದುರಿಸಬಹುದಾದ ಪ್ರಶ್ನೆಗಳು ಹೀಗಿರುತ್ತವೆ:


* ನಿಮ್ಮ ಹತ್ತಿರದ ಯಾವ ಸಂಬಂಧಿಕರು ಈಗಾಗಲೇ ಪೈಲ್ಸ್ ನಿಂದ ಬಳಲುತ್ತಿದ್ದಾರೆಯೆ?


* ಮಲ ವಿಸರ್ಜಿಸುವಾಗ ರಕ್ತ ಅಥವಾ ಗಂಟುಗಂಟಾದ ಪದಾರ್ಥ ವಿಸರ್ಜಿತವಾಗಿದೆಯೆ?


* ಇತ್ತೀಚಿಗಷ್ಟೆ ನಿಮ್ಮ ತೂಕದಲ್ಲಿ ಇಳಿಕೆ ಆಗಿದೆಯೆ?


* ನೀವು ಮಲವಿಸರ್ಜಿಸುವ ಪದ್ಧತಿಯಲ್ಲಿ ಇತ್ತೀಚೆಗೆ ಏನಾದರೂ ಬದಲಾವಣೆ ಆಗಿದೆಯೆ?


* ಮಲದ ಬಣ್ಣದಲ್ಲಿ ಏನಾದರೂ ಬಣ್ಣದ ಬದಲಾವಣೆ ನಿಮಗೆ ಕಂಡಿದೆಯೇ?


ಇವು ಕೆಲವು ಸಾಮಾನ್ಯ ಪ್ರಶ್ನೆಗಳಾಗಿದ್ದು ನೀವು ಕೊಡುವ ಸಮರ್ಪಕ ಉತ್ತರಗಳು ವೈದ್ಯರಿಗೆ ನಿಮಗಾಗಿರುವ ಮೂಲವ್ಯಾಧಿ ಅಥವಾ ಇದು ಮೂಲವ್ಯಾಧಿಯೆ ಎಂಬುದನ್ನು ನಿರ್ಧರಿಸಲು ಸಾಕಷ್ಟು ಸಹಾಯ ಮಾಡುತ್ತವೆ. 


ಇನ್ನು, ಆಂತರಿಕವಾಗಿ ಉಂಟಾಗುವ ಮೂಲವ್ಯಾಧಿಯ ಪತ್ತೆ ಹಚ್ಚುವಿಕೆಗಾಗಿ ವೈದ್ಯರು ಡಿಜಿಟಲ್ ರೆಕ್ಟಲ್ ಎಕ್ಸಾಮಿನೇಶನ್ (DRE) ಮಾಡುತ್ತಾರೆ ಇಲ್ಲವೆ ಪ್ರೊಕ್ಟೋಸ್ಕೋಪ್ ಅನ್ನು ಬಳಸಿ ಗಮನಿಸುತ್ತಾರೆ. ಇದೊಂದು ಕೊಳವೆಯಂತಹ ರಚನೆಯಾಗಿದ್ದು ಲೈಟನ್ನು ಹೊಂದಿರುತ್ತದೆ. ಇದನ್ನು ಗುದದ್ವಾರದ ಒಳ ಭಾಗದಲ್ಲಿ ಹಾಯಿಸುವ ಮೂಲಕ ಅಲ್ಲಿ ಉಂಟಾಗಿರುವ ಗಂಟುಗಳನ್ನು ವೈದ್ಯರು ವೀಕ್ಷಿಸಬಹುದಾಗಿದೆ. ಅಲ್ಲಿಂದ ಅವರು ಅವಶ್ಯಕವೆನಿಸಿದರೆ ಚಿಕ್ಕ ಮಾದರಿಯನ್ನು ತೆಗೆದುಕೊಂಡು ಅದನ್ನು ಪ್ರಯೋಗಾಲಯಕ್ಕೆ ನಿಖರವಾಗಿ ತಿಳಿಯಲೆಂದು ಕಳುಹಿಸಿಕೊಡುತ್ತಾರೆ. 


ಚಿಕಿತ್ಸೆಗಳು


ಹೆಚ್ಚಿನ ಸಂದರ್ಭಗಳಲ್ಲಿ, ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲದೆಯೇ ಪೈಲ್ಸ್ ತನ್ನಷ್ಟಕ್ಕೆ ತಾನೇ ಪರಿಹರಿಸಲ್ಪಡುತ್ತದೆ. ಆದಾಗ್ಯೂ, ಕೆಲವು ಚಿಕಿತ್ಸೆಗಳು ಮೂಲವ್ಯಾಧಿಯಿಂದ ಬಳಲುತ್ತಿರುವ ಅನೇಕ ಜನರು ಅನುಭವಿಸುವ ಅಸ್ವಸ್ಥತೆ ಮತ್ತು ತುರಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತವೆ.


ಜೀವನಶೈಲಿ ಬದಲಾವಣೆ ಎಂಬುದು ಮೂಲವ್ಯಾಧಿಯನ್ನು ನಿಯಂತ್ರಣದಲ್ಲಿರಿಸಲು ಸಾಕಷ್ಟು ಸಹಾಯ ಮಾಡುತ್ತದೆ. 


ಇದನ್ನೂ ಓದಿ: ಮಹಿಳೆಯರಲ್ಲಿ ಈ ಸಮಸ್ಯೆ ಕಾಣಿಸಿಕೊಂಡ್ರೆ ಅದು ಥೈರಾಯ್ಡ್​ ಲಕ್ಷಣವಂತೆ


ಆಹಾರ ಪದ್ಧತಿ : ಬೊವೆಲ್ ಮೂಮೆಂಟ್ ಇದ್ದಾಗ ಆಯಾಸಗೊಳ್ಳುವುದರಿಂದ ಪೈಲ್ಸ್ ಸಂಭವಿಸಬಹುದು. ಅತಿಯಾದ ಆಯಾಸ ಆಗುವಿಕೆ ಮಲಬದ್ಧತೆಯ ಪರಿಣಾಮವಾಗಿದೆ. ಹಾಗಾಗಿ ಮಲಬದ್ಧತೆ ಉಂಟಾಗದಂತೆ ಮಾಡಿಕೊಳ್ಳುವುದು ಮುಖ್ಯವಾಗಿದ್ದು ಅದಕ್ಕಾಗಿ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಪ್ರಮುಖವಾಗಿದೆ. ಹಣ್ಣು ಮತ್ತು ತರಕಾರಿಗಳಂತಹ ಹೆಚ್ಚು ಫೈಬರ್ ಯುಕ್ತ ಆಹಾರ ಸೇವನೆಯಿಂದ, ಅವಶ್ಯಕ ಪ್ರಮಾಣದಷ್ಟು ನೀರು ಕುಡಿಯುವುದರಿಂದ ಹಾಗೂ ದೈಹಿಕ ಚಟುವಟಿಕೆಗಳನ್ನು ಮಾಡುವುದರಿಂದ ಮಲ ಬದ್ಧತೆಯ ಹೋಗಲಾಡಿಸಿ ಆ ಮೂಲಕ ಅದರಿಂದುಂಟಾಗಬಹುದಾಗಿದ್ದ ಮೂಲವ್ಯಾಧಿಯನ್ನು ಬರದಂತೆ ತಡೆಗಟ್ಟಬಹುದು. 


ಔಷಧಿಗಳು


ಮೂಲವ್ಯಾಧಿಗೆ ಔಷಧಿಗಳೂ ಸಹ ಲಭ್ಯವಿದ್ದು ಎಲ್ಲ ಔಷಧೀಯ ಅಂಗಡಿಗಳಲ್ಲಿ ದೊರೆಯುತ್ತವೆ. ಆದರೆ ಅವುಗಳನ್ನು ತೆಗೆದುಕೊಳುವ ಮುಂಚೆ ವೈದ್ಯರನ್ನು ಸಂಪರ್ಕಿಸಿ ಅವರಿಂದ ಒಪ್ಪಿಗೆ ಪಡೆಯುವುದು ಉತ್ತಮ. ಇನ್ನು ಗಂಭೀರ ಸ್ವರೂಪ ಪಡೆದ ಮೂಲವ್ಯಾಧಿಯ ನಿವಾರಣೆಗೆ ಶಸ್ತ್ರ ಚಿಕಿತೆಗಳು ಲಭ್ಯವಿದ್ದು ತಜ್ಞವೈದ್ಯರ ನಿಗ್ರಾವಣೆಯಲ್ಲಿ ಇದನ್ನು ಮಾಡಲಾಗುತ್ತದೆ. 

Published by:Sandhya M
First published: