ಅತಿಯಾದ ಕಾಳಜಿಯೇ ಮಕ್ಕಳಿಗೆ ಮುಳುವಾದೀತು

news18
Updated:June 20, 2018, 6:47 PM IST
ಅತಿಯಾದ ಕಾಳಜಿಯೇ ಮಕ್ಕಳಿಗೆ ಮುಳುವಾದೀತು
news18
Updated: June 20, 2018, 6:47 PM IST
ನ್ಯೂಸ್​18 ಕನ್ನಡ

ನೀವು ನಿಮ್ಮ ಮಗುವನ್ನು ಅತಿಯಾದ ಮುದ್ದಿನಿಂದ ಬೆಳೆಸುತ್ತಿದ್ದೀರಾ? ಅವರ ಕೆಲಸವನ್ನು ಮಾಡಿಕೊಳ್ಳಲಾಗಷ್ಟು ನಿಮ್ಮ ಮೇಲೆ ಅವಲಂಬಿತರಾಗಿದ್ದಾರಾ? ಹಾಗಾದರೆ ಈ ಅಧ್ಯಯನವನ್ನು ಒಮ್ಮೆ ಓದಿ ನೋಡಿ.

ಕೆಲವರಿಗೆ ತಮ್ಮ ಮಕ್ಕಳ ಮೇಲೆ ಅತಿಯಾದ ಕಾಳಜಿ ಇರುತ್ತದೆ. ಅವರು ಹೊರಗೆ ಆಡಲು ಹೋದರೆ ಪೋಷಕರೂ ಜೊತೆಯಲ್ಲಿಯೇ ಹೋಗುತ್ತಾರೆ. ಮಕ್ಕಳೂ ಕೂಡ ಇದರಿಂದಾಗಿ ಏನೇ ಮಾಡಬೇಕೆಂದರೂ ಪೋಷಕರ ಸಹಾಯವಿಲ್ಲದೆ ಏನೂ ಮಾಡಲಾಗದಂತಹ ಪರಿಸ್ಥಿತಿಗೆ ಬರುತ್ತಾರೆ. ಇದರಿಂದಾಗಿ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮವಾಗುತ್ತದೆ.

ಮಕ್ಕಳು ತಮ್ಮ ಕಾಳಜಿಯನ್ನು ತಾವು ನೋಡಿಕೊಳ್ಳುವಷ್ಟು ದೊಡ್ಡವರಾದ ನಂತರ ಅವರನ್ನು ಬೆಳೆಯಲು ಬಿಟ್ಟುಬಿಡಬೇಕು. ಅದರೆ, ಹಲವು ಪೋಷಕರು ಎಲ್ಲದಕ್ಕೂ ಕಂಡೀಷನ್​ ಹಾಕುತ್ತ ಮಕ್ಕಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ನೋಡುತ್ತಾರೆ. ಯಾವ ಆಟ ಆಡಬೇಕು, ಯಾರ ಜೊತೆ ಹೋಗಬೇಕು, ಏನನ್ನು ತಿನ್ನಬೇಕು, ಎಷ್ಟು ತಿನ್ನಬೇಕು ಎಂಬುದನ್ನೆಲ್ಲ ತಾವೇ ನಿರ್ಧರಿಸುತ್ತಾರೆ.ಹೀಗೆ ಮಾಡುವುದರಿಂದ ಮಕ್ಕಳು ಬಹಳ ಅವಲಂಬಿತರಾಗುವುದು ಮಾತ್ರವಲ್ಲದೆ ಸ್ವತಂತ್ರವಾಗಿ ಯೋಚನೆ ಮಾಡುವಲ್ಲಿ ಸೋಲುತ್ತಾರೆ. ಇಂತಹ ಮಕ್ಕಳು ಶಾಲೆಯಲ್ಲಿ ಬೇರೆ ಮಕ್ಕಳೊಂದಿಗೆ ಸುಲಭವಾಗಿ ಬೆರೆಯಲಾರರು. ಸಮಾಜದಲ್ಲಿಯೂ ಬೇರೆಯರಂತೆ ಸ್ವಚ್ಛಂದವಾಗಿ ಇರಲಾರರು.

ಡೆವಲಪ್​ಮೆಂಟಲ್​ ಸೈಕಾಲಜಿ ಜರ್ನಲ್​ನಲ್ಲಿ ಪ್ರಕಟವಾದ ಸಂಶೋಧನಾ ಪ್ರಬಂಧದಲ್ಲಿ ಈ ವಿಷಯದ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ಹೀಗೆ ತಮ್ಮ ಮಕ್ಕಳನ್ನು ಸದಾ ಕಂಟ್ರೋಲ್​ನಲ್ಲಿ ಇಟ್ಟುಕೊಳ್ಳುವ, ಅತಿಯಾದ ಕಾಳಜಿ ತೋರುವ ಪೋಷಕರನ್ನು 'ಹೆಲಿಕಾಪ್ಟರ್​ ಪೇರೆಂಟ್ಸ್​' ಎಂದು ಕರೆಯಲಾಗುತ್ತದೆ ಎಂದು ಮಿನ್ನೆಸೋಟ ಯುನಿವರ್ಸಿಟಿಯ ಪ್ರಸಿದ್ಧ ಲೇಖಕರಾದ ನಿಕೋಲ್​ ಬಿ.ಎ ಪೆರ್ರಿ ಹೇಳಿದ್ದಾರೆ.
Loading...

ಈ ಸಂಶೋಧನೆಗಾಗಿ 8 ವರ್ಷಗಳ ಕಾಲ 422 ಮಕ್ಕಳನ್ನು ಪ್ರಯೋಗಕ್ಕೆ ಒಳಪಡಿಸಲಾಯಿತು. ಅವರಲ್ಲಿ 2, 5, 10 ವರ್ಷಗಳ ಮಕ್ಕಳನ್ನು ಬೇರೆ ಬೇರೆ ತಂಡವನ್ನಾಗಿ ಮಾಡಲಾಯಿತು. ಇವರಲ್ಲಿ ಹೆಲಿಕಾಪ್ಟರ್​ ಪೇರೆಂಟ್ಸ್​ ಇರುವ ಮಕ್ಕಳು ಬೇರೆಯವರಿಗಿಂತ ಭಾವನಾತ್ಮಕವಾಗಿ ಮತ್ತು ಸಾಮಾಜಿಕವಾಗಿ ಬಹಳ ವೀಕ್​ ಇದ್ದರು ಎಂದು ಪೆರ್ರಿ ವಿವರಣೆ ನೀಡಿದ್ದಾರೆ.

 
First published:June 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...