Workout And Heart: ಜಾಸ್ತಿ ವ್ಯಾಯಾಮ ಮಾಡುವುದು ಹೃದಯದ ಆರೋಗ್ಯಕ್ಕೆ ಹಾನಿಕರವೇ?

ಜಿಮ್‌ ನಲ್ಲಿ ಹೆಚ್ಚು ವರ್ಕೌಟ್‌ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಅನೇಕ ಸಂಶೋಧನೆಗಳು ಮತ್ತು ತಜ್ಞರು ಸೂಚಿಸಿದ್ದಾರೆ. ತುಂಬಾ ಕಠಿಣ ವ್ಯಾಯಾಮಗಳು ವಿಶೇಷವಾಗಿ ವಯಸ್ಸಾದ ನಂತರ ಹೃದಯದ ಆರೋಗ್ಯಕ್ಕೆ ಹಾನಿಕರಕ ಆಗಬಹುದು. ಇದರ ಬಗ್ಗೆ ಸಂಶೋಧನೆ ಏನು ಹೇಳಿದೆ ಎಂದು ನೋಡೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನೀವು ಫಿಟ್ (Fit) ಆಗಿರಲು ವಿವಿಧ ರೀತಿಯ ವ್ಯಾಯಾಮ (Exercise), ಯೋಗಾಸನ (Yoga) ಮಾಡಬಹುದು. ಜಿಮ್‌ಗೆ (Jim) ಹೋಗಿ ಬೆವರಿಳಿಸಿ, ನಮ್ಮ ತೂಕವನ್ನು ಮ್ಯಾನೇಜ್ ಮಾಡಲು ಸಾಕಷ್ಟು ಹರಸಾಹಸ ಪಡುತ್ತಾರೆ. ಇದು ನಿಮ್ಮ ಹೃದಯದ ಆರೋಗ್ಯವನ್ನು (Heart Health) ಕಾಪಾಡಲು ಸಾಕಷ್ಟು ಸಹಾಯ ಮಾಡುತ್ತದೆ. ಆದರೆ ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲಿ ಹೃದ್ರೋಗ ಅಥವಾ ಹೃದಯಾಘಾತದಿಂದ ಸಾವನ್ನಪ್ಪುವುದು ಮತ್ತು ಹೃದ್ರೋಗದಿಂದ ಬಳಲುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ವಿಶೇಷವಾಗಿ ನಲವತ್ತು ವಯಸ್ಸಿನ ನಂತರದ ಜನರಲ್ಲಿ ಹೃದ್ರೋಗ ಸಮಸ್ಯೆ ಹೆಚ್ಚು ಬಾಧಿಸುತ್ತಿದೆ. ಅದರಲ್ಲೂ ತಮ್ಮನ್ನು ಫಿಟ್ ಆಗಿಟ್ಟುಕೊಳ್ಳಲು ನಿರಂತರವಾಗಿ ಜಿಮ್‌ಗೆ ಹೋಗುವವರಲ್ಲಿ ಈ ಸಮಸ್ಯೆ ಹೆಚ್ಚಿದೆ.

  ಜಿಮ್‌ ನಲ್ಲಿ ಹೆಚ್ಚು ವರ್ಕೌಟ್‌ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ ಆಗಿದೆ ಎಂದು ಅನೇಕ ಸಂಶೋಧನೆಗಳು ಮತ್ತು ತಜ್ಞರು ಸೂಚಿಸಿದ್ದಾರೆ. ತುಂಬಾ ಕಠಿಣ ವ್ಯಾಯಾಮಗಳು ವಿಶೇಷವಾಗಿ ವಯಸ್ಸಾದ ನಂತರ ಹೃದಯದ ಆರೋಗ್ಯಕ್ಕೆ ಹಾನಿಕರಕ ಆಗಬಹುದು. ಇದರ ಬಗ್ಗೆ ಸಂಶೋಧನೆ ಏನು ಹೇಳಿದೆ ಎಂದು ನೋಡೋಣ.

  ಭಾರೀ ವ್ಯಾಯಾಮಗಳು ಹೃದಯಕ್ಕೆ ಅಪಾಯಕಾರಿ

  US ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ ಜನರಿಗೆ ದೈಹಿಕ ಚಟುವಟಿಕೆ ಮಾರ್ಗಸೂಚಿ ನೀಡಿದೆ. ಈ ಮಾರ್ಗಸೂಚಿ ಪ್ರಕಾರ, ವಯಸ್ಕರರು ವಾರಕ್ಕೆ 150 ನಿಮಿಷ ಮಧ್ಯಮ ತೀವ್ರತೆಯ ವ್ಯಾಯಾಮ ಮತ್ತು 75 ನಿಮಿಷ ವ್ಯಾಯಾಮ ಮಾಡಬಹುದು.

  ಇದನ್ನೂ ಓದಿ: ಹಿಮಾಲಯ ಅಂಜೂರದಲ್ಲಿದೆ ಹಲವು ಪೋಷಕಾಂಶ! ಆರೋಗ್ಯಕ್ಕೆ ಬೆಸ್ಟ್

  ಕಷ್ಟಕರ ವ್ಯಾಯಾಮಗಳಲ್ಲಿ ಓಟ, ಬೈಕಿಂಗ್, ಈಜು, ವ್ಯಾಯಾಮ, ನೃತ್ಯ ತರಗತಿಗಳು ಮತ್ತು ಹೊರಾಂಗಣ ಕ್ರೀಡೆಗಳು ಸೇರಿವೆ. ಮತ್ತೊಂದೆಡೆ ವಾಕಿಂಗ್, ಹೈಕಿಂಗ್, ಗಾಲ್ಫ್, ಮನೆಯಲ್ಲಿ ವ್ಯಾಯಾಮ ಮತ್ತು ತೋಟಗಾರಿಕೆ ಮಧ್ಯಮ ತೀವ್ರತೆಯ ಚಟುವಟಿಕೆಗಳು ಎಂದು ಪರಿಗಣಿಸಲಾಗಿದೆ.

  ಈ ಮಾರ್ಗಸೂಚಿಯ ಪ್ರಕಾರ, ಸತತ ಇಪ್ಪತ್ತೈದು ವರ್ಷಗಳವರೆಗೆ ಒಟ್ಟು 3200 ಜನರ ಅಧ್ಯಯನದಲ್ಲಿ ಭಾಗಿ ಮಾಡಲಾಗಿದೆ. ಗುಂಪನ್ನು 2 ಭಾಗಗಳಾಗಿ ವಿಂಗಡಿಸಲಾಗಿದೆ. ಭಾಗವಹಿಸುವ ಎಲ್ಲರೂ ಯುವ ವಯಸ್ಕರರು ಆಗಿದ್ದಾಗ ಈ ಅಧ್ಯಯನ ಪ್ರಾರಂಭಿಸಲಾಯಿತು.

  ಇಪ್ಪತ್ತೈದು ವರ್ಷಗಳ ನಂತರ ಸಾಕಷ್ಟು ಕಠಿಣ ವ್ಯಾಯಾಮ ಮಾಡಿದ ಗುಂಪಿನಲ್ಲಿ ಮಧ್ಯವಯಸ್ಸಿನ ವೇಳೆಗೆ ಪರಿಧಮನಿಯ ಕ್ಯಾಲ್ಸಿಫಿಕೇಶನ್ 80 ಪ್ರತಿಶತ ಅಪಾಯಕ್ಕೆ ತುತ್ತಾಗಿದೆ ಎಂದು ಕಂಡು ಬಂದಿದೆ. CAC ಕ್ಯಾಲ್ಸಿಯಂ ಒಳಗೊಂಡಿರುವ ಪ್ಲೇಕ್ ಆಗಿದೆ. ಇದು ಹೃದ್ರೋಗದ ಸಾಧ್ಯತೆ ಹೆಚ್ಚಿಸಿದೆ.

  ಹೆಚ್ಚಿನ ಚಟುವಟಿಕೆ ಮಾಡುವ ಮಹಿಳೆಯರಿಗೆ ಹೃದ್ರೋಗದ ಅಪಾಯ

  ಕೋಪನ್ ಹ್ಯಾಗನ್ ಸಿಟಿ ಹಾರ್ಟ್ ಸ್ಟಡಿ ಪ್ರಕಾರ ಜಾಗಿಂಗ್ ಮಾಡುವ ಕಿರಿಯರಿಗೆ ಹೋಲಿಸಿದರೆ ಹೆಚ್ಚು ಜಾಗಿಂಗ್ ಮಾಡುವ ಯುವ ಜನರಲ್ಲಿ ಹೃದಯ ವೈಫಲ್ಯ 9 ಪ್ರತಿಶತ ಹೆಚ್ಚು ಸಾಮಾನ್ಯ. ಮಿಲಿಯನ್ ವುಮೆನ್ ಸ್ಟಡಿ ಸೈನ್ಸ್ ಜರ್ನಲ್ ಪ್ರಕಾರ, ಹೆಚ್ಚಿನ ಚಟುವಟಿಕೆ ಮಾಡುವ ಮಹಿಳೆಯರಿಗೆ ಮಧ್ಯಮ ವ್ಯಾಯಾಮ ಮಾಡುವವರಿಗಿಂತ ಹೃದಯ ಕಾಯಿಲೆ, ಪಾರ್ಶ್ವವಾಯು, ರಕ್ತ ಒಡೆಯುವ ಸಾಧ್ಯತೆ ಹೆಚ್ಚು.

  ಆದರೆ ಈ ಸಂಶೋಧನೆ ಉದ್ದೇಶ ವ್ಯಾಯಾಮವನ್ನು ತಳ್ಳಿ ಹಾಕುವುದು ಅಥವಾ ಕುಳಿತುಕೊಳ್ಳುವ ಜೀವನಶೈಲಿ ಪ್ರೋತ್ಸಾಹಿಸುವುದು ಅಲ್ಲ. ಬದಲು ತಜ್ಞರು ಹೃದಯದ ಆರೋಗ್ಯಕ್ಕಾಗಿ ಮಧ್ಯಮ ವಯಸ್ಸಿನಲ್ಲಿ ಆರೋಗ್ಯಕರ ಆಹಾರ ಮತ್ತು ಲಘು ವ್ಯಾಯಾಮ ಜೊತೆ ತೂಕ ನಿಯಂತ್ರಣ ಮಾಡುವುದು ಮುಖ್ಯ ಆಗಿದೆ.

  ರೋಗ ನಿಯಂತ್ರಣ ಮತ್ತು ತಡೆಗೆ US ಕೇಂದ್ರಗಳ ಮಾರ್ಗಸೂಚಿ ಪ್ರಕಾರ ಧೂಮಪಾನ, ಒತ್ತಡದ ತರಬೇತಿ ಅಭ್ಯಾಸ ಬೇಡವೆಂದು ಹೇಳುವ ಮೂಲಕ ಆರೋಗ್ಯಕರ ಆಹಾರದ ಜೊತೆ ಹೃದಯರಕ್ತನಾಳದ ಕಾಯಿಲೆ ಅಪಾಯ ಕಡಿಮೆ ಮಾಡುತ್ತದೆ.

  ವಯಸ್ಸಾದಂತೆ ಹೃದ್ರೋಗ ಅಪಾಯ ಹೆಚ್ಚು

  ಹೃದ್ರೋಗ ತಜ್ಞ ಡಾ. ಅಮಿತ್ ಸಿನ್ಹಾ ಪ್ರಕಾರ, ವಯಸ್ಸಾದಂತೆ ಹೃದ್ರೋಗದ ಅಪಾಯವೂ ಹೆಚ್ಚು. ಅಧಿಕ ರಕ್ತದೊತ್ತಡ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೊಂದಿರುತ್ತಾರೆ. ನಿಮ್ಮ ಆರೋಗ್ಯ ಕಾಪಾಡಲು ನಿಯಮಿತ ತಪಾಸಣೆ ಮಾಡಿಕೊಳ್ಳಿ. ನಲವತ್ತರ ನಂತರ ಎಂದಿಗೂ ಕಠಿಣ ವ್ಯಾಯಾಮ ಮಾಡಬೇಡಿ.

  ಇದನ್ನೂ ಓದಿ: ಕೂದಲು ಉದುರುವ ಸಮಸ್ಯೆ ಏಕೆ ಉಂಟಾಗುತ್ತದೆ? ಪರಿಹಾರವೇನು?

  ಅನಾರೋಗ್ಯದಲ್ಲಿ ವ್ಯಾಯಾಮ ಮಾಡಬೇಡಿ

  ಅನಾರೋಗ್ಯ, ಜ್ವರದಿಂದ ಬಳಲುತ್ತಿದ್ದರೆ ಜಿಮ್‌ಗೆ ಹೋಗಿ ಬೆವರು ಹರಿಸಬೇಡಿ. ಇದು ಹೃದಯದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಯಾವುದೇ ಸಮಸ್ಯೆಯಿಂದ ಒತ್ತಡ ಉಂಟಾದರೆ ಅದು ಕೂಡ ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಮಾನಸಿಕವಾಗಿ ಸದೃಢವಾಗಿರುವುದು ಮುಖ್ಯ. ಭಾರೀ ತೂಕದ ತರಬೇತಿ ಇದ್ದಕ್ಕಿದ್ದಂತೆ ಪ್ರಾರಂಭಿಸಬೇಡಿ.
  Published by:renukadariyannavar
  First published: