Periods And Anemia: ಮುಟ್ಟಿನ ಸಮಯದಲ್ಲಿ ಹೆಚ್ಚು ರಕ್ತಸ್ರಾವ ರಕ್ತಹೀನತೆಯ ಲಕ್ಷಣವೇ? ತಜ್ಞರು ಹೇಳೋದೇನು?

ಋತುಚಕ್ರದ ವೇಳೆ ಮಹಿಳೆಯರು ಹೆಚ್ಚು ರಕ್ತಸ್ರಾವ ಪ್ರಾರಂಭಿಸಿದರೆ ಅದು ರಕ್ತಹೀನತೆಗೆ ಕಾರಣ ಆಗುತ್ತದೆ. ಏಕೆಂದರೆ ನಿಮ್ಮ ದೇಹವು ಕೆಂಪು ರಕ್ತದ ಕಣಗಳನ್ನು ತಯಾರಿಸುವುದಕ್ಕಿಂತ ಹೆಚ್ಚಿನ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಅಡ್ಡಿ ಉಂಟು ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ರಕ್ತಹೀನತೆ (Anemia) ಎಂಬುದು ರಕ್ತ ಸಂಬಂಧಿ ಕಾಯಿಲೆ (Blood Related Disease) ಆಗಿದೆ. ಇದು ನಿಮ್ಮ ದೇಹದ (Body) ಕೆಂಪು ರಕ್ತ ಕಣಗಳು ಮತ್ತು ಹಿಮೋಗ್ಲೋಬಿನ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಿಮೋಗ್ಲೋಬಿನ್ ಕೆಂಪು ರಕ್ತ ಕಣಗಳಲ್ಲಿ ಇರುವ ಪ್ರೋಟೀನ್ ಆಗಿದೆ. ಅದು ನಿಮ್ಮ ಶ್ವಾಸಕೋಶದಿಂದ ನಿಮ್ಮ ದೇಹದ ಎಲ್ಲಾ ಅಂಗಾಂಶಗಳು ಮತ್ತು ಅಂಗಗಳಿಗೆ ಆಮ್ಲಜನಕ ಸಾಗಿಸುವ ಕೆಲಸ ಮಾಡುತ್ತದೆ. ಸಾಮಾನ್ಯವಾಗಿ ನಿಮ್ಮ ದೇಹದಲ್ಲಿ ಕಬ್ಬಿಣದ ಕೊರತೆ ಉಂಟಾದಾಗ ರಕ್ತಹೀನತೆ ಸಮಸ್ಯೆ ಉಂಟಾಗುತ್ತದೆ. ಕಬ್ಬಿಣವು ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ರಕ್ತಹೀನತೆಗೆ ಹಲವು ಕಾರಣಗಳಿದ್ದು, ಅದರಲ್ಲಿ ಋತುಚಕ್ರ ಕೂಡ ಒಂದಾಗಿದೆ.

    ಋತುಚಕ್ರದ ವೇಳೆ ರಕ್ತಹೀನತೆ ಸಮಸ್ಯೆ

    NCBI ಪ್ರಕಾರ, ಪುರುಷರಿಗಿಂತ ಮಹಿಳೆಯರು ರಕ್ತಹೀನತೆಗೆ ಹೆಚ್ಚು ಒಳಗಾಗುತ್ತಾರೆ. 5,776 ಮಂದಿಯ ಮೇಲೆ ನಡೆಸಿದ ಸಂಶೋಧನೆಯು 53.2% ರಕ್ತಹೀನತೆ ಹೊಂದಿದ್ದಾರೆ ಎಂದು ಕಂಡು ಹಿಡಿದಿದೆ. ಅದರಲ್ಲಿ 45.1% ಪುರುಷರು, 54.6% ಮಹಿಳೆಯರು. ಇದಲ್ಲದೇ ಶೇ.33.5ರಷ್ಟು ಗರ್ಭಿಣಿಯರಲ್ಲಿ ರಕ್ತಹೀನತೆ ಇರುವುದು ಕಂಡು ಬಂದಿದೆ. ಇದಕ್ಕೆ ಕಾರಣ ಮಹಿಳೆಯರ ಪ್ರತಿ ತಿಂಗಳ ಋತುಚಕ್ರ ಆಗಿದೆ.

    ಮುಟ್ಟಿನ ಸಮಯದಲ್ಲಿ ಹೆಚ್ಚು ರಕ್ತಸ್ರಾವ ಆಗುವುದು

    ವಾಸ್ತವದಲ್ಲಿ ಋತುಚಕ್ರದ ವೇಳೆ ಮಹಿಳೆಯರು ಹೆಚ್ಚು ರಕ್ತಸ್ರಾವ ಪ್ರಾರಂಭಿಸಿದರೆ ಅದು ರಕ್ತಹೀನತೆಗೆ ಕಾರಣ ಆಗುತ್ತದೆ. ಏಕೆಂದರೆ ನಿಮ್ಮ ದೇಹವು ಕೆಂಪು ರಕ್ತದ ಕಣಗಳನ್ನು ತಯಾರಿಸುವುದಕ್ಕಿಂತ ಹೆಚ್ಚಿನ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಅಡ್ಡಿ ಉಂಟು ಮಾಡುತ್ತದೆ.

    ಇದನ್ನೂ ಓದಿ: ಕಣ್ಣುಗಳಲ್ಲಿ ಉಂಟಾಗುವ ಈ ಸಮಸ್ಯೆಗಳು ಗಂಭೀರ ತೊಂದರೆಗೆ ಕಾರಣವಾಗುತ್ತವೆ

    ಈ ಕಾರಣದಿಂದ ಹಿಮೋಗ್ಲೋಬಿನ್ ಉತ್ಪಾದನೆಯಲ್ಲಿ ಸಮಸ್ಯೆಗಳು ಉದ್ಭವ ಆಗುತ್ತವೆ. ಮುಟ್ಟಿನ ಸಮಯದಲ್ಲಿ ಭಾರೀ ರಕ್ತಸ್ರಾವ ಆಗುವ ಸಮಸ್ಯೆಯನ್ನು ಮೆನೊರ್ಹೇಜಿಯಾ ಎಂದು ಕರೆಯುತ್ತಾರೆ.

    ದೇಹದಲ್ಲಿ ರಕ್ತದ ಕೊರತೆಯಿದ್ದಾಗ ಯಾವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ?  

    ಆಯಾಸ

    ದೌರ್ಬಲ್ಯ

    ಉಸಿರಾಟದ ಸಮಸ್ಯೆ

    ತೆಳು ಚರ್ಮ

    ತಲೆಸುತ್ತು

    ತಲೆನೋವು

    ಭಾರೀ ರಕ್ತಸ್ರಾವ ಸಮಸ್ಯೆ ಉಂಟಾಗುವುದು ಏಕೆ?

    ಸಿಡಿಸಿ ಪ್ರಕಾರ, ಪ್ರತಿ ಐದು ಮಹಿಳೆಯರಲ್ಲಿ ಒಬ್ಬರು ಋತುಚಕ್ರದ ಸಮಯದಲ್ಲಿ ಭಾರೀ ರಕ್ತಸ್ರಾವ ಸಮಸ್ಯೆ ಎದುರಿಸುತ್ತಾರೆ. ಹಾರ್ಮೋನುಗಳ ಅಸಮತೋಲನದಿಂದ ಈ ಸಮಸ್ಯೆ ಉಂಟಾಗುತ್ತದೆ. ಪ್ರೊಜೆಸ್ಟರಾನ್ ಮತ್ತು ಈಸ್ಟ್ರೊಜೆನ್ ಹಾರ್ಮೋನುಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಲ್ಲದೆ, ಮಹಿಳೆಯರು ಈ ಸಮಸ್ಯೆ ಎದುರಿಸಲು ಹಲವು ಕಾರಣಗಳಿವೆ.

    ಗರ್ಭಾಶಯದ ಫೈಬ್ರಾಯ್ಡ್ಗಳು

    ಎಂಡೊಮೆಟ್ರಿಯೊಸಿಸ್

    ಅಂಡೋತ್ಪತ್ತಿ ಸಮಸ್ಯೆಗಳು

    ಗರ್ಭಾಶಯದ ಅಂಗಾಂಶದ ನಷ್ಟ

    ಗರ್ಭಾಶಯದ ಸಾಧನ

    ಆಸ್ಪಿರಿನ್ ಮತ್ತು ಹೆಪ್ಪುರೋಧಕಗಳಂತಹ ಔಷಧಗಳು

    ರಕ್ತ ಸಂಬಂಧಿತ ರೋಗಗಳು

    ಭಾರೀ ರಕ್ತಸ್ರಾವ ಗುರುತಿಸುವುದು ಹೇಗೆ?

    ಸತತ ಗಂಟೆಗಳವರೆಗೆ ಪ್ರತಿ ಗಂಟೆಗೆ ಪ್ಯಾಡ್‌ಗಳು ಅಥವಾ ಟ್ಯಾಂಪೂನ್‌ಗಳನ್ನು ಬದಲಾಯಿಸುವುದು

    ಎರಡು ಪ್ಯಾಡ್ ಬಳಕೆ ಮಾಡುವುದು

    ರಾತ್ರಿ ಪ್ಯಾಡ್‌ ಅಥವಾ ಟ್ಯಾಂಪೂನ್‌ಗಳನ್ನು ಆಗಾಗ್ಗೆ ಬದಲಾಯಿಸುವುದು

    ಪಿರಿಯಡ್ಸ್ 7 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಇರುವುದು

    ರಕ್ತ ಹೆಪ್ಪುಗಟ್ಟುವಿಕೆ

    ಮುಟ್ಟಿನ ಸಮಯದಲ್ಲಿ ದುರ್ಬಲ ಅಥವಾ ದಣಿದ ಭಾವನೆ.

    ರಕ್ತಸ್ರಾವ ಸಮಸ್ಯೆ ವೇಳೆ ಯಾವ ಪದಾರ್ಥಗಳ ಸೇವನೆ ಮಾಡಬೇಕು?

    ಮೊದಲ ಬಾರಿಗೆ ಅವಧಿ ಪ್ರಾರಂಭವಾದ ತಕ್ಷಣ, ನಿಮ್ಮ ಆಹಾರದಲ್ಲಿ ಕೆಲವು ವಿಶೇಷ ಪದಾರ್ಥಗಳನ್ನು ಸೇರಿಸಿ ಸೇವನೆ ಮಾಡಿ. ಮಹಿಳೆಯರಿಗೆ ಹೆಚ್ಚು ಕಬ್ಬಿಣದ ಅಗತ್ಯವಿದೆ. ಹೀಗಾಗಿ ನಿಮ್ಮ ಆಹಾರದಲ್ಲಿ ಕೆಂಪು ಮಾಂಸ, ಪಾಲಕ, ದ್ವಿದಳ ಧಾನ್ಯಗಳು, ಚಿಪ್ಪುಮೀನು, ಟರ್ಕಿ ಮತ್ತು ಕ್ವಿನೋವಾ, ಕುಂಬಳಕಾಯಿ ಬೀಜಗಳನ್ನು ಸೇರಿಸಿ.

    ಇದನ್ನೂ ಓದಿ: ಮೂಳೆಗಳಲ್ಲಿ ಕಿರ್ ಎಂಬ ಶಬ್ಧ ಉಂಟಾಗುವುದು ಏಕೆ? ಇದಕ್ಕೆ ಕಾರಣವೇನು?

    ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುವ ಆಹಾರ ಸೇವಿಸಿ. ವಿಟಮಿನ್ ಸಿ ನಿಮ್ಮ ದೇಹವು ಕಬ್ಬಿಣ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಪೇರಲ, ಕಿವಿ, ಕೋಸುಗಡ್ಡೆ, ಬ್ರಸೆಲ್ಸ್ ಮೊಗ್ಗುಗಳು, ನಿಂಬೆ, ಸ್ಟ್ರಾಬೆರಿ, ಕಿತ್ತಳೆ ಮತ್ತು ಕೇಲ್ ಸೇವಿಸಿ. ಕಾಫಿ ಮತ್ತು ಟೀ ಸೇವನೆ ಕಡಿಮೆ ಮಾಡಿ. ಕ್ಯಾಲ್ಸಿಯಂ ಭರಿತ ಆಹಾರ ಸೇವಿಸಿ.
    Published by:renukadariyannavar
    First published: