ರಾತ್ರಿ 12 ಗಂಟೆಯಾದ್ರೂ ನಿದ್ರೆ ಬರಲ್ವಾ? ಹಾಗಿದ್ರೆ ನೀವು ಈ ಸುದ್ದಿ ಓದಲೇಬೇಕು!

Health Tips: ದಿನವಿಡೀ ಕಾರ್ಯನಿರತವಾಗಿರುವ ದೇಹಕ್ಕೆ 7ರಿಂದ 8 ಗಂಟೆಯಾದರೂ ವಿಶ್ರಾಂತಿ ಬೇಕು. ಆಗ ಮಾತ್ರ ನಮ್ಮ ದೇಹವೆಂಬ ಯಂತ್ರ ಮಾರನೇ ದಿನ ಚೆನ್ನಾಗಿ ಕೆಲಸ ಮಾಡಲು ಸಾಧ್ಯ. ಆ ಯಂತ್ರಕ್ಕೆ ಸರಿಯಾದ ವಿಶ್ರಾಂತಿ ಸಿಗಲಿಲ್ಲವೆಂದಾಗ ಸಮಸ್ಯೆಗಳು ಕಾಣಿಸಿಕೊಳ್ಳತೊಡಗುತ್ತವೆ.

news18-kannada
Updated:November 14, 2019, 1:42 PM IST
ರಾತ್ರಿ 12 ಗಂಟೆಯಾದ್ರೂ ನಿದ್ರೆ ಬರಲ್ವಾ? ಹಾಗಿದ್ರೆ ನೀವು ಈ ಸುದ್ದಿ ಓದಲೇಬೇಕು!
ಸಾಂದರ್ಭಿಕ ಚಿತ್ರ
  • Share this:
'ರಾತ್ರಿ ಎಷ್ಟೇ ಬೇಗ ಮಲಗಿದ್ರೂ ನಿದ್ರೆಯೇ ಬರೋದಿಲ್ಲ. ಬೆಳಗ್ಗೆ ಬೇಗ ಎದ್ದ ಆಫೀಸಿಗೆ ಹೋದರೆ ದಿನಪೂರ್ತಿ ಕಣ್ಣು ಉರಿ. ರಾತ್ರಿಯೆಲ್ಲ ನಿದ್ರೆ ಬರದೇ ಹೊರಳಾಡಿ ಸಾಕಾಗುತ್ತೆ. ನಿದ್ರೆ ಬರದ ಕಾರಣ ರಾತ್ರಿಯಿಡೀ ಮೊಬೈಲ್ ಹಿಡಿದುಕೊಂಡು ಕೂರೋ ಹಾಗಾಗಿದೆ' ಇವೆಲ್ಲ ಇಂದಿನ ಪೀಳಿಗೆಯ ಹುಡುಗೀರ ಸಾಮಾನ್ಯ ಸಮಸ್ಯೆ. ನಿದ್ರೆ ಮಾಡಿದಷ್ಟೂ ಆರೋಗ್ಯ ಚೆನ್ನಾಗಿರುತ್ತದೆ. ಆದರೆ, ದಿನವಿಡೀ ಕಂಪ್ಯೂಟರ್ ಮುಂದೆ ಕುಳಿತು, ಮನೆಗೆ ಬಂದಕೂಡಲೆ ಟಿವಿ ಮುಂದೋ, ಮೊಬೈಲ್ ಹಿಡಿದೋ ಕೂರುವ ಇಂದಿನ ಕಾಲದವರಿಗೆ ನಿದ್ರೆ ಸ್ವಲ್ಪ ದೂರವೇ. ಆದರೆ, ಇದರಿಂದ ಏನೆಲ್ಲ ಅಪಾಯಗಳಿವೆ ಎಂಬುದು ನಿಮಗೆ ಗೊತ್ತಾ?

ನಾವು ಆರೋಗ್ಯಪೂರ್ಣವಾಗಿರಬೇಕು ಎಂದರೆ ಚೆನ್ನಾಗಿ ನಿದ್ರೆ ಮಾಡಬೇಕು. ದಿನವಿಡೀ ಕಾರ್ಯನಿರತವಾಗಿರುವ ದೇಹಕ್ಕೆ 7ರಿಂದ 8 ಗಂಟೆಯಾದರೂ ವಿಶ್ರಾಂತಿ ಬೇಕು. ಆಗ ಮಾತ್ರ ನಮ್ಮ ದೇಹವೆಂಬ ಯಂತ್ರ ಮಾರನೇ ದಿನ ಚೆನ್ನಾಗಿ ಕೆಲಸ ಮಾಡಲು ಸಾಧ್ಯ. ಆ ಯಂತ್ರಕ್ಕೆ ಸರಿಯಾದ ವಿಶ್ರಾಂತಿ ಸಿಗಲಿಲ್ಲವೆಂದಾಗ ಸಮಸ್ಯೆಗಳು ಕಾಣಿಸಿಕೊಳ್ಳತೊಡಗುತ್ತವೆ. ಈ ಬಗ್ಗೆ ಸಂಶೋಧನೆಯೊಂದನ್ನು ನಡೆಸಲಾಗಿದ್ದು, ಅದರಿಂದ ಹೊರಬಿದ್ದ ಮಾಹಿತಿ ನಿದ್ರೆಗೆಡಿಸುವಂತಿದೆ!ಕಡಿಮೆ ನಿದ್ರೆ ಮಾಡುವುದರಿಂದ ಮೂಳೆಯ ಖನಿಜ ಸಾಂದ್ರತೆ (ಬಿಎಂಡಿ) ಮತ್ತು ಆಸ್ಟಿಯೊಪೊರೋಸಿಸ್ ಬೆಳವಣಿಗೆಯ ಹೆಚ್ಚಿನ ಅಪಾಯದೊಂದಿಗೆ ಸಂಬಂಧ ಹೊಂದಿದೆ ಎಂದು ಸಂಶೋಧನೆಯೊಂದು ಹೇಳಿದೆ. ಆಸ್ಟಿಯೊಪೊರೋಸಿಸ್ ಸಮಸ್ಯೆಯಿಂದ ಮೂಳೆ ದುರ್ಬಲಗೊಳ್ಳುವುದರಿಂದ ಮೂಳೆ ಮುರಿಯುವ ಅಪಾಯವಿರಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

ವಾರದ ನಿದ್ರೆಯನ್ನೆಲ್ಲ ವೀಕೆಂಡ್​ನಲ್ಲಿ ಮುಗಿಸಿಬಿಡ್ತೀರಾ?; ಇನ್ನು ಹಾಗೆ ಮಾಡಬೇಡಿ

ನಮ್ಮ ಅಧ್ಯಯನದ ಪ್ರಕಾರ, ಕಡಿಮೆ ನಿದ್ರೆಯಿಂದ ಮೂಳೆಯ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ ಎಂದು ಅಮೆರಿಕದ ಯುನಿವರ್ಸಿಟಿಯ ಈ ಅಧ್ಯಯನದ ಪ್ರಮುಖ ಲೇಖಕ ಹೀದರ್ ಓಚ್ಸ್-ಬಾಲ್ಕಾಮ್ ಹೇಳಿದ್ದಾರೆ. ಈ ಅಧ್ಯಯನಕ್ಕಾಗಿ ಋತುಮತಿಯರಾಗಿದ್ದ11,084 ಮಹಿಳೆಯರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ರಾತ್ರಿ 5 ಗಂಟೆ ಅಥವಾ ಅದಕ್ಕಿಂತ ಕಡಿಮೆ ನಿದ್ರೆ ಮಾಡುವ ಮಹಿಳೆಯರು ಬಿಎಂಡಿ ಸಮಸ್ಯೆಗೆ ಒಳಗಾಗಿರುವುದು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.


Loading...

ರಾತ್ರಿ ವೇಳೆ 5 ಗಂಟೆಗಿಂತ ಕಡಿಮೆ ನಿದ್ರೆ ಮಾಡುವ ಮಹಿಳೆಯರಲ್ಲಿ ಶೇ. 22ರಷ್ಟು ಜನ ಮೂಳೆಯ ಸಮಸ್ಯೆ ಮತ್ತು ಶೇ. 63ರಷ್ಟು ಮಹಿಳೆಯರು ಸೊಂಟದ ಆಸ್ಟಿಯೊಪೊರೋಸಿಸ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಹೀಗಾಗಿ, ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ನಿದ್ರಾಹೀನತೆಯಿಂದ ಸಾಕಷ್ಟು ಸಮಸ್ಯೆಗೆ ಒಳಗಾಗುತ್ತಾರೆ. ಆದ್ದರಿಂದ ಮಹಿಳೆಯರು ನಿದ್ರೆಗೆಡುವ ಮುನ್ನ ಎಚ್ಚರ!

 

 
First published:November 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...