ಸೊಂಟದ ಬೊಜ್ಜು ಕರಗಿಸೋಕೆ ಪರದಾಡುತ್ತಿದ್ದೀರ?; ಅಡುಗೆ ಮನೆಯಲ್ಲೇ ಇದೆ ಸುಲಭ ಉಪಾಯ!

ಬಳುಕುವ ಬಳ್ಳಿಯಂತಾಗಲು ಸಾಧ್ಯವಾಗದಿದ್ದರೂ ಸೊಂಟದ ಸುತ್ತಲಿನ ಬೊಜ್ಜು ಕರಗಬೇಕು, ಆರಾಮಾಗಿ ಎದ್ದು, ಕೂತು, ಓಡಾಡಲು ಸಾಧ್ಯವಾಗಬೇಕು ಎಂಬ ಬಯಕೆ ಎಲ್ಲರಿಗೂ ಇರುತ್ತದೆ. ಅದಕ್ಕೆ ಇಲ್ಲಿದೆ ಸರಳ ಉಪಾಯ.

news18-kannada
Updated:November 18, 2019, 3:46 PM IST
ಸೊಂಟದ ಬೊಜ್ಜು ಕರಗಿಸೋಕೆ ಪರದಾಡುತ್ತಿದ್ದೀರ?; ಅಡುಗೆ ಮನೆಯಲ್ಲೇ ಇದೆ ಸುಲಭ ಉಪಾಯ!
ಪ್ರಾತಿನಿಧಿಕ ಚಿತ್ರ
  • Share this:
ಯಾವುದಾದರೂ ಫಂಕ್ಷನ್​ಗೆ ಹೋದಾಗ ಸಂಬಂಧಿಕರ ಹೆಂಗಸು ಸ್ವಲ್ಪ ತೆಳ್ಳಗಿದ್ದರೂ ಆಕೆಯನ್ನು ಪಕ್ಕಕ್ಕೆ ಕರೆದು, 'ತೆಳ್ಳಗಾಗೋಕೆ ಏನ್ರೀ ಮಾಡಬೇಕು? ತಿನ್ನೋದೆಲ್ಲ ಎಷ್ಟೇ ಕಡಿಮೆ ಮಾಡಿದರೂ ಹೊಟ್ಟೆ ಮಾತ್ರ ಇಳಿತಾ ಇಲ್ಲ ಕಣ್ರಿ. ಸುಲಭವಾಗಿ ಬೊಜ್ಜು ಕರಗಬೇಕೆಂದ್ರೆ ಏನು ಮಾಡ್ಬೇಕು? ನೀವು ಹೇಗೆ ಇಷ್ಟು ಸಣ್ಣಗಾದ್ರಿ?' ಎಂದು ಕೇಳದೆ ಸುಮ್ಮನೆ ಕೂರುವ ಜಾಯಮಾನ ಮಹಿಳೆಯರದ್ದು ಅಲ್ಲವೇ ಅಲ್ಲ.

ಶಿಲ್ಪಾ ಶೆಟ್ಟಿ ಮೈ ಬಳುಕಿಸುತ್ತಾ ಯೋಗಾಸನ ಮಾಡ್ತಾ ಇದ್ರೆ ಟಿವಿ ಮುಂದೆ ಕುಳಿತು ನೋಡೋ ಮಹಿಳೆಯರು ಬಾಯಿ ಬಿಟ್ಟುಕೊಂಡು ನೋಡೇ ಬಾಕಿ. ಮದುವೆಯಾಗಿ, ಮಕ್ಕಳಾದ ಮೇಲೆ ಹೊಟ್ಟೆಯಲ್ಲಿ 2-3 ಟೈರ್​ಗಳು ಮೂಡಿವೆ. ಮೊದಲು ನಾನೂ ಹೀಗೇ ಬಳ್ಳಿಯ ಹಾಗೇ ಇದ್ದೆ. ನಾನೂ ನಾಳೆಯಿಂದ ಈ ರೀತಿ ವ್ಯಾಯಾಮ, ಯೋಗ ಮಾಡಿ ಹೇಗಾದರೂ ತೂಕ ಇಳಿಸಿಕೊಳ್ಳಬೇಕು ಅಂತ ಪ್ರತಿದಿನವೂ ಯೋಚನೆ ಮಾಡ್ತಾರೆ. ಆದರೆ ಆ ಯೋಚನೆ ಎಂದೂ ಕಾರ್ಯ ರೂಪಕ್ಕೇ ಬರುವುದಿಲ್ಲ.

ರಾತ್ರಿ 12 ಗಂಟೆಯಾದ್ರೂ ನಿದ್ರೆ ಬರಲ್ವಾ? ಹಾಗಿದ್ರೆ ನೀವು ಈ ಸುದ್ದಿ ಓದಲೇಬೇಕು!

ಟಿವಿ, ಯೂಟ್ಯೂಬ್​ಗಳನ್ನು ನೋಡಿ ಯೋಗ, ಜಿಮ್​ನತ್ತ ವಾಲುತ್ತಿರುವ ಮಹಿಳೆಯರು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಲಾರಂಭಿಸಿದ್ದಾರೆ. ಇತ್ತೀಚಿನ ಜೀವನಶೈಲಿ, ಆಹಾರಕ್ರಮಗಳಿಂದಾಗಿ ಈ ಬಗೆಯ ಆರೋಗ್ಯ ಕಾಳಜಿ ಅಗತ್ಯವೂ ಹೌದು, ಅನಿವಾರ್ಯವೂ ಹೌದು. ತಿಂಗಳಿಗೆ ಸಾವಿರಾರು ರೂ. ಕೊಟ್ಟು ಜಿಮ್​ ಸೇರಿ ಬೆವರು ಹರಿಸುವ ಬದಲು ಆಹಾರ ಸೇವನೆಯಲ್ಲಿ ಸ್ವಲ್ಪ ಹೆಚ್ಚು ಜಾಗ್ರತೆ ವಹಿಸಿದರೂ ಸಾಕು, ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆ ಕಾಣಬಹುದು.

ಬಳುಕುವ ಬಳ್ಳಿಯಂತಾಗಲು ಸಾಧ್ಯವಾಗದಿದ್ದರೂ ಸೊಂಟದ ಸುತ್ತಲಿನ ಬೊಜ್ಜು ಕರಗಬೇಕು, ಆರಾಮಾಗಿ ಎದ್ದು, ಕೂತು, ಓಡಾಡಲು ಸಾಧ್ಯವಾಗಬೇಕು ಎಂಬ ಬಯಕೆ ಎಲ್ಲರಿಗೂ ಇರುತ್ತದೆ. ಅದರಲ್ಲೂ 40 ವರ್ಷವಾದ ನಂತರ ಮಹಿಳೆಯರ ಹಾರ್ಮೋನ್​ಗಳಲ್ಲಿಯೂ ವ್ಯತ್ಯಾಸ ಆಗುವುದರಿಂದ ಸೊಂಟದ ಸುತ್ತಲೂ ಬೊಜ್ಜು ಹೆಚ್ಚಾಗುತ್ತದೆ. ಸೊಂಟದ ಬೊಜ್ಜಿನಿಂದ ಡಯಾಬಿಟಿಸ್, ಕೆಲವು ರೀತಿಯ ಕ್ಯಾನ್ಸರ್​ನಂತಹ ಸಮಸ್ಯೆಗಳು ಶುರುವಾಗುತ್ತವೆ. ಹಾಗಿದ್ದರೆ ಸೊಂಟ ಅಥವಾ ಹೊಟ್ಟೆಯ ಬೊಜ್ಜನ್ನು ಕರಗಿಸುವುದು ಹೇಗೆ? ಯಾವ ರೀತಿಯ ಆಹಾರವನ್ನು ಸೇವಿಸುವುದರಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು? ಯಾವ ರೀತಿಯ ಜೀವನ ಕ್ರಮವನ್ನು ನಾವು ಅನುಸರಿಸಬೇಕು? ಇಲ್ಲವೆ ಕೆಲವು ಟಿಪ್ಸ್​...

ಚಿಲ್ಲಿ ಪೆಪ್ಪರ್​, ಕ್ಯಾಪ್ಸಿಕಂ ಬಳಸಿ:
ನಿಮ್ಮ ಆಹಾರದಲ್ಲಿ ಚಿಲ್ಲಿ ಪೆಪ್ಪರ್​ ಬಳಸುವುದರಿಂದ ದೇಹದ ಕೊಬ್ಬಿನಂಶವನ್ನು ಕರಗಿಸಲು ಸಾಧ್ಯವಿದೆ. ಇದನ್ನು ವಿಜ್ಞಾನಿಗಳೇ ಒಪ್ಪಿಕೊಂಡಿದ್ದು, ಚಿಲ್ಲಿ ಪೆಪ್ಪರ್​ ಅನ್ನು ಆಹಾರದಲ್ಲಿ ಬಳಸುವುದರಿಂದ ಡಯಟಿಂಗ್​ ಮಾಡುವವರಿಗೆ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯಕವಾಗಲಿದೆ. ಕ್ಯಾಪ್ಸಿಕಂ (ಡೊಳ್ಳು ಮೆಣಸಿನಕಾಯಿ) ಕೂಡ ತೂಕವನ್ನು ಇಳಿಸಿಕೊಳ್ಳಲು ಉಪಯುಕ್ತ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ.
Loading...

ಮೆಂತ್ಯೆಯನ್ನು ಬಳಸಿ:
ಮೆಂತ್ಯೆಯನ್ನು ಆಹಾರದಲ್ಲಿ ಹೆಚ್ಚೆಚ್ಚು ಬಳಸುವುದರಿಂದ ಸೊಂಟದ ಕೊಬ್ಬನ್ನು ಕರಗಿಸಬಹುದು. ಸ್ವಲ್ಪ ಮೆಂತ್ಯೆ ಕಾಳುಗಳನ್ನು ಹುರಿದು ಪುಡಿ ಮಾಡಿಟ್ಟುಕೊಳ್ಳಿ. ಅದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿಗೆ ಸೇರಿಸಿ ಕುಡಿಯಿರಿ. ಹಾಗೇ, ಮೆಂತ್ಯೆಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಆ ನೀರನ್ನು ಕುಡಿಯುವುದರಿಂದಲೂ ಬೊಜ್ಜು ಕರಗುತ್ತದೆ.

ಜ್ಯೂಸ್​ ಬದಲು ಹಣ್ಣುಗಳನ್ನೇ ತಿನ್ನಿ;
ಸಾಕಷ್ಟು ಜನ ಹಣ್ಣಿನ ಜ್ಯೂಸ್ ಅಥವಾ ಮಿಲ್ಕ್​ಶೇಕ್​​ ಮಾಡಿಕೊಂಡು ಕುಡಿಯುತ್ತಾರೆ. ಆದರೆ, ಅದಕ್ಕಿಂತಲೂ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ಪೂರ್ತಿ ಹಣ್ಣನ್ನು ತಿನ್ನುವುದರಿಂದ ಅದರಲ್ಲಿನ ನಾರಿನಂಶ ನಮ್ಮ ದೇಹವನ್ನು ಸೇರುತ್ತದೆ. ಹಾಗಾಗಿ, ಸಕ್ಕರೆ ಹಾಕಿರುವ ಅಥವಾ ಹಾಲು ಸೇರಿಸಿರುವ ಜ್ಯೂಸ್​ ಕುಡಿಯುವುದಕ್ಕಿಂತ ತಾಜಾ ಹಣ್ಣುಗಳನ್ನೇ ಸೇವಿಸುವುದು ಒಳ್ಳೆಯದು.

ಅಸ್ಸಾಂ ಜನರ ಕಂಗೆಡಿಸಿದ್ದ ಬಿನ್ ಲಾಡೆನ್ ನಿಧನ!; ಶಾಕ್ ಆಗಬೇಡಿ, ಇಲ್ಲಿದೆ ಅಸಲಿ ವಿಷಯ...

ಒಂದೇ ಬಾರಿ ತಿನ್ನಬೇಡಿ:
ಹಸಿವಾಗಿದೆ ಎಂದು ಒಂದೇ ಸಲ ರಾಶಿಗಟ್ಟಲೆ ತಿನ್ನುವ ಬದಲು ಆಗಾಗ ಸ್ವಲ್ಪ ಸ್ವಲ್ಪ ತಿನ್ನುತ್ತಾ ಇರುವುದರಿಂದ ಜೀರ್ಣಕ್ರಿಯೆಗೆ ಸುಲಭವಾಗುತ್ತದೆ. ಇದರಿಂದ ಕೊಬ್ಬು ಶೇಖರವಾಗುವುದು ತಪ್ಪುತ್ತದೆ. ಹಾಗೇ, ಊಟದಲ್ಲಿ ತರಕಾರಿ, ಶೇಂಗಾ ಎಣ್ಣೆಯನ್ನು ಬಳಸಿ. ಮೊಟ್ಟೆಯನ್ನು ತಿನ್ನುವುದಾದರೆ ಹಳದಿ ಭಾಗದ ಬದಲಾಗಿ ಬಿಳಿಯ ಭಾಗವನ್ನು ಮಾತ್ರ ತಿನ್ನಿ. ಹೆಚ್ಚೆಚ್ಚು ಪ್ರೋಟೀನ್​ ಮತ್ತು ನಾರಿನಂಶ ಇರುವ ಆಹಾರ ಸೇವಿಸಿ.

ಹಾಲಿನ ಉತ್ಪನ್ನಗಳನ್ನು ಕಡಿಮೆ ಬಳಸಿ:
ಹಾಲು ಅಥವಾ ಹಾಲಿನ ಉತ್ಪನ್ನಗಳು ತೂಕವನ್ನು ಹೆಚ್ಚಿಸುತ್ತದೆ. ಹಾಗಾಗಿ, ಡಯಟ್​ ಮಾಡುವವರು ಇಂತಹ ಆಹಾರವನ್ನು ಸೇವಿಸದೇ ಇರುವುದು ಉತ್ತಮ. ಐಸ್​ಕ್ರೀಂ, ಮೊಸರು, ಪೇಡಗಳನ್ನು ಅವಾಯ್ಡ್​ ಮಾಡಿ.

ಹೆಚ್ಚಿನ ಒತ್ತಡ ಒಳ್ಳೆಯದಲ್ಲ:
ದೈಹಿಕವಅಗಿ ಮತ್ತು ಮಾನಸಿಕವಾಗಿ ನೀವು ಒತ್ತಡಕ್ಕೆ ಒಳಗಾದಂತೆ ನಿಮ್ಮ ತೂಕವೂ ಹೆಚ್ಚತೊಡಗುತ್ತದೆ. ಒತ್ತಡ ಹೆಚ್ಚಾದಂತೆ ಸ್ಟ್ರೆಸ್​ ಹಾರ್ಮೋನ್ ಕಾಟ್ರಿಸಾಲ್​ ಉತ್ಪತ್ತಿಯಾಗಿ ಹಸಿವಿನ ಪ್ರಮಾಣವೂ ಹೆಚ್ಚುತ್ತದೆ. ಬಾಳೆಹಣ್ಣು, ಬಾದಾಮಿ, ಚೆರ್ರಿಯನ್ನು ಡಯಟ್​ನಲ್ಲಿ ಹೆಚ್ಚು ಬಳಸುವುದರಿಂದ ಒತ್ತಡವೂ ಕಡಿಮೆಯಾಗುತ್ತದೆ.

ಗರ್ಭಿಣಿ ಹೊಟ್ಟೆಯಲ್ಲಿತ್ತು 4 ಕೆಜಿ ಗಾಂಜಾ!; ತಪಾಸಣೆ ವೇಳೆ ಬಯಲಾಯ್ತು ಅಚ್ಚರಿಯ ಸತ್ಯ

ನಿಧಾನವಾಗಿ ಆಹಾರ ಸೇವಿಸಿ:
ಮನೆಯಲ್ಲಿ ನೀವೇನಾದರೂ ಗಬಗಬನೆ ತಿನ್ನುತ್ತಿದ್ದರೆ ಅಜ್ಜನೋ ಅಜ್ಜಿಯೋ ಅಥವಾ ಅಮ್ಮನೋ ಬಯ್ಯುವುದನ್ನು ನೋಡಿರಬಹುದು. ಅದಕ್ಕೆ ಕಾರಣವೂ ಇದೆ. ಆಯುರ್ವೇದದ ಪ್ರಕಾರ ನಾವು ಆಹಾರವನ್ನು ಎಷ್ಟು ನಿಧಾನವಾಗಿ ಸೇವಿಸುತ್ತೇವೋ ಅಷ್ಟು ಸರಿಯಾಗಿ ಜೀರ್ಣಕ್ರಿಯೆಯೂ ಆಗುತ್ತದೆ. ನಿಧಾನವಾಗಿ ಆಹಾರವನ್ನು ಸೇವಿಸುವುದರಿಂದ ನಮಗೆ ಎಷ್ಟು ಆಹಾರ ಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಲು ಮೆದುಳಿಗೆ ಸಹಾಯವಾಗುತ್ತದೆ. ನಾವು ತಿನ್ನುವ ಆಹಾರ ಸರಿಯಾಗಿ ಜೀರ್ಣವಾಗದಿರುವುದು ಕೂಡ ತೂಕ ಹೆಚ್ಚಾಗುವಿಕೆಗೆ ಒಂದು ಕಾರಣ. ಚಿಪ್ಸ್​ ಮುಂತಾದ ಎಣ್ಣೆತಿಂಡಿಗಳು, ಸಕ್ಕರೆ ಅಂಶ ಹೆಚ್ಚಾಗಿರುವ ಪದಾರ್ಥಗಳು, ಅತಿಯಾಗಿ ಸಿಹಿಯಾಗಿರುವ ಪಾನೀಯಗಳನ್ನು ಸೇವಿಸದಿರುವುದು ಉತ್ತಮ.
First published:November 18, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...