ಇನ್ನೇನು ಬೇಸಿಗೆ (Summer) ಆರಂಭವಾಯಿತು. ಬಿಸಿಲಿನ ತಾಪಮಾನ (Temperature) ಹೆಚ್ಚುತ್ತಲೇ ಇದೆ. ಈ ಮಧ್ಯೆ ದೇಶದ (Country) ಹಲವು ಭಾಗಗಳಲ್ಲಿ ಬಿಸಿ ಗಾಳಿ (Heat Wave) ಮತ್ತು ತಾಪಮಾನ ಹೆಚ್ಚುತ್ತಿದೆ. ಬಿಸಿ ಗಾಳಿಯನ್ನು ತಪ್ಪಿಸಲು ಸರ್ಕಾರ ಸಹ ಹಲವು ಮಾರ್ಗಸೂಚಿ ಹೊರಡಿಸಿದೆ. ಇದು ಶಾಖದ ಅಲೆಯ ಹೊಡೆತದಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತದೆ. ಶಾಖದ ಅಲೆಯ ಹೊಡೆತದಿಂದ ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಲು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಬಗ್ಗೆ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಶಾಖದ ಅಲೆಯು ತಾಪಮಾನದ ಒಂದು ಸ್ಥಿತಿ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಏರುತ್ತಿರುವ ತಾಪಮಾನದ ಹೊಡೆತದಿಂದ ತಪ್ಪಿಸಿಕೊಳ್ಳುವುದು ಹೇಗೆ?
ಬೇಸಿಗೆಯ ರಣ ಬಿಸಿಲು ಭೂಮಿಯನ್ನು ಒಣಗಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಶಾಖದ ಮಟ್ಟ ಹೆಚ್ಚುತ್ತಲೇ ಇದೆ. ಅದರಲ್ಲೂ ಬೇಸಿಗೆಯಲ್ಲಿ ಶಾಖದ ಮಟ್ಟವು ಮಾರಣಾಂತಿಕ ರೂಪ ಪಡೆಯುತ್ತದೆ. ಬೃಹತ್ ನಗರಗಳಲ್ಲಿ ಬಿಸಿಲಿನ ಧಗೆಗೆ ಜನರು ಒದ್ದಾಡುವಂತಾಗಿದೆ. ಶಾಖದ ಹೊಡೆತದಿಂದ ತಪ್ಪಿಸಿಕೊಳ್ಳಲು ಕೂಲ್ ಆಗಿರಲು ಹೆಚ್ಚು ಪ್ರಯತ್ನ ಮಾಡ್ತಾರೆ.
ಇನ್ನು ಬೆಳಗ್ಗೆ ಹನ್ನೊಂದು ಗಂಟೆಯ ನಂತರ ಜನರು ಮನೆಯಿಂದ ಹೊರಗೆ ಬರಲು ಆಗದೇ ಒದ್ದಾಡುತ್ತಾರೆ. ರಣ ಬಿಸಿಲು ಚರ್ಮದ ಸಮಸ್ಯೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯದ ಅಪಾಯ ಹೆಚ್ಚಿಸುತ್ತದೆ. ತಾಪಮಾನದ ಹವೆಯು, ಬಿಸಿ ಗಾಳಿಯಿಂದಾಗಿ ಜನರು ದೈಹಿಕ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ.
ಶಾಖದ ಏರಿಕೆಯ ಮಟ್ಟವು ಆರೋಗ್ಯ ಸಮಸ್ಯೆ ಹೆಚ್ಚು ಮಾಡುತ್ತದೆ. ಹಾಗಾಗಿ ಇದರಿಂದ ಪಾರಾಗಲು ಏನು ಮಾಡಬೇಕು? ಯಾವೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ನೋಡೋಣ.
ಬಿಸಿಗಾಳಿ ತಪ್ಪಿಸಲು ಹೀಗೆ ಮಾಡಿ
ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಿ
ಬಿಸಿ ಗಾಳಿ ಮತ್ತು ಒಣ ಹವೆ, ತಾಪಮಾನದ ಏರಿಕೆಯ ಸಮಸ್ಯೆಯಿಂದ ಪಾರಾಗಲು ಸಾಧ್ಯವಾದಷ್ಟು ಬೆಳಗ್ಗೆ ಹನ್ನೊಂದು ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಬಿಸಿಲಿಗೆ ಹೋಗುವುದನ್ನು ತಪ್ಪಿಸಿ. ಇದು ಮಧ್ಯಾಹ್ನದ ಉರಿ ಬಿಸಿಲು ಮತ್ತು ಬಿಸಿ ಗಾಳಿ ಸಮಸ್ಯೆಯಿಂದ ಪಾರಾಗಲು ಇದು ಸಹಾಯ ಮಾಡುತ್ತದೆ.
ಬಿಸಿಲಿನಲ್ಲಿ ಮಕ್ಕಳನ್ನು ಹೊರಗೆ ಆಟವಾಡಲು ಬಿಡಬೇಡಿ
ಮಧ್ಯಾಹ್ನದ ಬಿರು ಬಿಸಿಲು ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಇದು ಬೆಳೆಯುವ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಮಧ್ಯಾಹ್ನ ಮಕ್ಕಳನ್ನು ಬಿಸಿಲಿಗೆ ಆಟವಾಡಲು ಬಿಡಬೇಡಿ. ನೇರ ಸೂರ್ಯನ ಬೆಳಕಿನಲ್ಲಿ ಯಾವುದೇ ಕೆಲಸ ಮಾಡಬೇಡಿ. ಯಾವುದೇ ಕೆಲಸವಿದ್ದರೂ ಅದನ್ನೂ ಬೆಳಿಗ್ಗೆ ಅಥವಾ ಸಂಜೆ ಕಂಪ್ಲೀಟ್ ಮಾಡಿ.
ಕಾರ್ಬೊನೇಟೆಡ್ ಪಾನೀಯ ಸೇವನೆ ತಪ್ಪಿಸಿ
ಚಹಾ, ಕಾಫಿ, ಆಲ್ಕೋಹಾಲ್, ಹಾಗೆಯೇ ಕಾರ್ಬೊನೇಟೆಡ್ ತಂಪು ಪಾನೀಯಗಳ ಸೇವನೆ ಕಡಿಮೆ ಮಾಡಿ. ಈ ವಸ್ತುಗಳು ನಿಮ್ಮ ದೇಹವನ್ನು ಡೀಹೈಡ್ರೇಟ್ ಮಾಡುತ್ತವೆ. ಇದು ದೇಹದಲ್ಲಿ ನಿರ್ಜಲೀಕರಣ ಉಂಟು ಮಾಡುತ್ತದೆ. ತಂಪು ಪಾನೀಯ ಕುಡಿಯುವುದನ್ನು ತಪ್ಪಿಸಿ. ಇದು ದೇಹದಲ್ಲಿ ನೀರಿನ ಕೊರತೆ ಸಮಸ್ಯೆ ಹೆಚ್ಚಿಸುತ್ತದೆ.
ಹೆಚ್ಚು ನೀರು ಕುಡಿಯಿರಿ
ಬೇಸಿಗೆಯಲ್ಲಿ ಹೆಚ್ಚು ಹೆಚ್ಚು ನೀರು ಕುಡಿಯಿರಿ. ನೀರು ಕುಡಿಯದೇ ಇರುವುದು ಹಲವು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಇದು ಶಾಖ ಮತ್ತು ದೇಹದಲ್ಲಿ ಹೀಟ್ ಮಟ್ಟವನ್ನು ಹೆಚ್ಚಿಸುತ್ತದೆ. ಆಗಾಗ್ಗೆ ಹೆಚ್ಚು ನೀರು ಸೆವಿಸಿ.
ತಣ್ಣಗಾದ ನಿನ್ನೆ, ಮೊನ್ನೆಯ ಆಹಾರ ಸೇವನೆ ತಪ್ಪಿಸಿ
ನೀವು ಹೆಚ್ಚಿನ ಪ್ರೋಟೀನ್ ಆಹಾರ ಸೇವನೆ ಕಡಿಮೆ ಮಾಡಿ. ತಣ್ಣಗಾದ ಮತ್ತು ನಿನ್ನೆ ಮೊನ್ನೆಯ ಆಹಾರ ಸೇವನೆ ತಪ್ಪಿಸಿ. ಅನೇಕ ಜನರು ಬೆಳಿಗ್ಗೆ ಭೋಜನ ಸವಿಯುತ್ತಾರೆ. ರಾತ್ರಿ ಊಟವನ್ನು ತಿನ್ನುತ್ತಾರೆ. ಇದನ್ನು ಕಡಿಮೆ ಮಾಡಿ ಸಲಾಡ್ ಮತ್ತು ಆರೋಗ್ಯಕರ ಲಘು ಆಹಾರ ಸೇವಿಸಿ. ಇದು ಬೇಸಿಗೆಗೆ ಉತ್ತಮ. ಇದು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಹೊರಗೆ ಹೋಗುವಾಗ ಜಾಗ್ರತೆ ವಹಿಸಿ
ಬಿಸಿಲಿಗೆ ಹೋಗುವ ಮೊದಲು ಬಿಳಿ ಬಣ್ಣದ ಕಾಟನ್, ತೆಳುವಾದ ಬಟ್ಟೆ ಧಿರಿಸಿ. ಸಡಿಲವಾದ, ಹತ್ತಿ ಬಟ್ಟೆಗಳನ್ನು ಧರಿಸುವುದು ಮುಂತಾದ ಕೆಲವು ಮುನ್ನೆಚ್ಚರಿಕೆ ಕ್ಮರಕ್ಕೆ ಸಹಕಾರಿ. ಬಿರು ಬಿಸಲಿನಿಂದ ರಕ್ಷಣೆ ಪಡೆಯಲು ಕನ್ನಡಕ, ಛತ್ರಿ, ಕ್ಯಾಪ್, ಶೂ ಧರಿಸಿ.
ಇದನ್ನೂ ಓದಿ:
ನೀರು ಬಾಟಲಿ ಜೊತೆಗಿರಿಸಿ
ನೀವು ಎಲ್ಲಿಗೆ ಹೋದರೂ ಅಥವಾ ಪ್ರಯಾಣಿಸಿದರೂ, ನಿಮ್ಮೊಂದಿಗೆ ನೀರಿನ ಬಾಟಲಿಯನ್ನು ಇಟ್ಟುಕೊಳ್ಳಿ. ಆಗಾಗ್ಗೆ ನೀರು ಕುಡಿಯಿರಿ. ಒದ್ದೆ ಬಟ್ಟೆಯಿಂದ ನಿಮ್ಮನ್ನು ತಂಪಾಗಿರಿಸಿ. ಲಸ್ಸಿ, ಮಜ್ಜಿಗೆ, ನಿಂಬೆ ನೀರು ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ