• Home
 • »
 • News
 • »
 • lifestyle
 • »
 • World Heart Day: ಹೃದಯ ಸಂಬಂಧಿ ಕಾಯಿಲೆಗಳ ಈ ಲಕ್ಷಣಗಳ ಬಗ್ಗೆ ನಿರ್ಲಕ್ಷ್ಯ ಬೇಡ!

World Heart Day: ಹೃದಯ ಸಂಬಂಧಿ ಕಾಯಿಲೆಗಳ ಈ ಲಕ್ಷಣಗಳ ಬಗ್ಗೆ ನಿರ್ಲಕ್ಷ್ಯ ಬೇಡ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೃದಯ ಸಂಬಂಧಿ ಕಾಯಿಲೆ ಇರುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ವೇಗವಾಗಿ ಹೆಚ್ಚುತ್ತಿದೆ. ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಜನರಲ್ಲಿ ಸಂಪೂರ್ಣ ಅರಿವಿನ ಕೊರತೆ ಇದಕ್ಕೆ ಪ್ರಮುಖ ಕಾರಣ. ಹೃದಯ ವೈಫಲ್ಯ ಹಲವು ಲಕ್ಷಣಗಳನ್ನು ತೋರಿಸುತ್ತದೆ.

 • Share this:

  ವಿಶ್ವ ಹೃದಯ ದಿನವನ್ನು ( World Heart Day ) ಪ್ರತಿ ವರ್ಷ ಸೆಪ್ಟೆಂಬರ್ 29 ರಂದು ಆಚರಣೆ (Celebrate) ಮಾಡಲಾಗುತ್ತದೆ. ಈ ದಿನದ ಆಚರಣೆಯನ್ನು ವರ್ಲ್ಡ್ ಹಾರ್ಟ್ ಫೆಡರೇಶನ್ (World Heart Federation) ಪ್ರಾರಂಭ ಮಾಡಿತು. ಪ್ರಪಂಚದಾದ್ಯಂತ ಹೃದಯ ಸಂಬಂಧಿ ಕಾಯಿಲೆಗಳ (Disease) ಅಪಾಯಕಾರಿ ಅಂಶ, ಕಾರಣ ಮತ್ತು ಅದನ್ನು ತಡೆಗಟ್ಟುವ ವಿಧಾನಗಳು ಇತ್ಯಾದಿಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಆಚರಣೆಯ ಮುಖ್ಯ ಉದ್ದೇಶ ಆಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಹೃದ್ರೋಗಗಳು ಜಾಗತಿಕವಾಗಿ ಸಾವಿಗೆ ಪ್ರಮುಖ ಕಾರಣ ಆಗಿದೆ. ಹೃದಯ ಸಂಬಂಧಿ ಕಾಯಿಲೆಗಳಿಂದ ಪ್ರತಿ ವರ್ಷ ಅಂದಾಜು 17.9 ಮಿಲಿಯನ್ ಜನರು ಮೃತಪಡುತ್ತಾರೆ.


  ಹೃದಯ ಅಸ್ವಸ್ಥತೆ


  ಹೃದಯ ಅಸ್ವಸ್ಥತೆಗಳ ಬಗ್ಗೆ ಹೇಳುವುದಾದರೆ ಅದರಲ್ಲಿ ಸಿವಿಡಿ, ಪರಿಧಮನಿಯ ಹೃದಯ ಕಾಯಿಲೆ, ಸೆರೆಬ್ರೊವಾಸ್ಕುಲರ್ ಕಾಯಿಲೆ, ಸಂಧಿವಾತ ಹೃದಯ ಕಾಯಿಲೆ ಮತ್ತು ಇತರ ಸ್ಥಿತಿಗಳು ಇವೆ. ಮುಂಬೈನಲ್ಲಿರುವ ಸರ್ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕನ್ಸಲ್ಟೆಂಟ್ ಕಾರ್ಡಿಯಾಕ್ ಸರ್ಜನ್ ಡಾ.ಬಿಪಿನ್‌ಚಂದ್ರ ಭಾಮ್ರೆ ಅವರು ಹೇಳುವ ಪ್ರಕಾರ,


  ಹೃದಯ ಸಂಬಂಧಿ ಕಾಯಿಲೆ ಇರುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ವೇಗವಾಗಿ ಹೆಚ್ಚುತ್ತಿದೆ. ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಜನರಲ್ಲಿ ಸಂಪೂರ್ಣ ಅರಿವಿನ ಕೊರತೆ ಇದಕ್ಕೆ ಪ್ರಮುಖ ಕಾರಣ. ಹೃದಯ ವೈಫಲ್ಯ ಹಲವು ಲಕ್ಷಣಗಳನ್ನು ತೋರಿಸುತ್ತದೆ. ಹೃದಯದ ಆರೋಗ್ಯ ಹದಗೆಟ್ಟಂತೆ ದೇಹದಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.


  ಇದನ್ನೂ ಓದಿ: ನವರಾತ್ರಿಯ ಒಂಬತ್ತು ದಿನಗಳ ಉಪವಾಸದಲ್ಲಿ ಕೆಲವು ನೈಸರ್ಗಿಕ ಪಾನೀಯ ಸೇವನೆ ಆರೋಗ್ಯಕ್ಕೆ ಲಾಭಕಾರಿ!


  ಆದರೆ ಈ ರೋಗ ಲಕ್ಷಣಗಳ ಬಗ್ಗೆ ಹೆಚ್ಚಿನ ಜನರು ತಿಳಿದಿಲ್ಲ. ಹಾಗಾಗಿ ಅದನ್ನು ನಿರ್ಲಕ್ಷ್ಯ ಮಾಡ್ತಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಹೃದಯಾಘಾತ ಮತ್ತು ಹೃದಯ ವೈಫಲ್ಯ ಅಪಾಯ ಮಾರಣಾಂತಿಕವಾಗುತ್ತದೆ.


  ಹೃದಯ ವೈಫಲ್ಯ ಎಂದರೇನು?


  ಹೃದಯ ಸ್ನಾಯು ಹಾನಿಗೊಳಗಾದಾಗ ಅಥವಾ ಪರಿಣಾಮಕಾರಿಯಾಗಿ ಪಂಪ್ ಮಾಡುವ ಹೃದಯದ ಸಾಮರ್ಥ್ಯ ಕಡಿಮೆಯಾದಾಗ ಹೃದಯ ವೈಫಲ್ಯ ಉಂಟಾಗುತ್ತದೆ. ಹೃದಯ ಕವಾಟ ದೋಷ, ಅಧಿಕ ರಕ್ತದೊತ್ತಡ, ಆನುವಂಶಿಕ ಕಾಯಿಲೆ ಹೃದಯ ವೈಫಲ್ಯಕ್ಕೆ ಕಾರಣವಾಗುತ್ತವೆ.


  ಹೃದಯಾಘಾತಕ್ಕೆ ಕಾರಣ ಏನೇ ಇರಬಹುದು. ಹೃದಯಕ್ಕೆ ಆಮ್ಲಜನಕ-ಸಮೃದ್ಧ ರಕ್ತದ ಅಗತ್ಯತೆಯನ್ನು ಪಂಪ್ ಮಾಡಲು ಸಾಧ್ಯವಿಲ್ಲದೇ ಹೋದಾಗ ಹೃದಯಾಘಾತ ಸಂಭವಿಸುತ್ತದೆ.


  ಹೃದಯ ವೈಫಲ್ಯದ ಲಕ್ಷಣಗಳು


  ಆಯಾಸ


  ದೇಹದ ಶಕ್ತಿಯ ಅಗತ್ಯತೆ ಪೂರೈಸಲು ಬೇಕಾದಷ್ಟು ಹೃದಯವು ಆಮ್ಲಜನಕ-ಸಮೃದ್ಧ ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದೇ ಇದ್ದಾಗ ವ್ಯಕ್ತಿಯು ಆಯಾಸ ಅನುಭವಿಸುತ್ತಾನೆ. ಹೀಗಾಗಿ ವ್ಯಕ್ತಿಯು ತನ್ನ ದೈನಂದಿನ ಕಾರ್ಯಗಳನ್ನು ಸುಲಭವಾಗಿ ಮಾಡಲು ಸಾಧ್ಯ ಆಗಲ್ಲ.


  ಹೃದಯಾಘಾತದಿಂದ ಬಳಲುತ್ತಿರುವ ಜನರು, ತಮ್ಮ ದೈನಂದಿನ ಚಟುವಟಿಕೆಗಳನ್ನು ಸುಲಭವಾಗಿ ಮಾಡಿಕೊಳ್ಳಲು ತೊಂದರೆ ಅನುಭವಿಸುತ್ತಾರೆ. ಚಿಕ್ಕ ಚಿಕ್ಕ ಚಟುವಟಿಕೆ ಮಾಡಿದಾಗಲೂ ಅವರು ದಣಿಯುತ್ತಾರೆ. ಮತ್ತು ಉಸಿರಾಟದ ತೊಂದರೆ ಅನುಭವಿಸುತ್ತಾರೆ. ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯ ಆಗಲ್ಲ.


  ಉಸಿರಾಟದ ತೊಂದರೆ


  ಹೃದಯಾಘಾತ ಮತ್ತು ಹೃದಯ ಸಂಬಂಧಿ ಕಾಯಿಲೆ ಹೊಂದಿರುವ ಜನರು ಯಾವಾಗಲೂ ಕೆಮ್ಮು, ಹೆದರಿಕೆ ಮತ್ತು ಉಸಿರಾಟದ ತೊಂದರೆ ಲಕ್ಷಣಗಳನ್ನು ಹೊಂದಿರುತ್ತಾರೆ. ಅಂತಹ ರೋಗ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬಾರದು.


  ಪಾದದ ಎಡಿಮಾ ಅಥವಾ ಊತ


  ಬಳಸಿದ ರಕ್ತವನ್ನು ಕೆಳ ತುದಿಗಳಿಂದ ಪಂಪ್ ಮಾಡಲು ಹೃದಯವು ಪಂಪ್ ಮಾಡುವ ಶಕ್ತಿಯನ್ನು ಹೊಂದಿಲ್ಲದೇ ಹೋದಾಗ ಕಣಕಾಲು, ಕಾಲು, ತೊಡೆ ಮತ್ತು ಹೊಟ್ಟೆಯಲ್ಲಿ ದ್ರವವು ಸಂಗ್ರಹವಾಗುತ್ತದೆ. ಹೆಚ್ಚಿನ ದ್ರವವು ಅನೇಕ ಜನರಲ್ಲಿ ತೂಕ ಹೆಚ್ಚಿಸುತ್ತದೆ.


  ಹಸಿವಿನ ನಷ್ಟ ಮತ್ತು ವಾಕರಿಕೆ


  ಒಬ್ಬರ ಜೀರ್ಣಾಂಗ ವ್ಯವಸ್ಥೆಯು ಕಡಿಮೆ ರಕ್ತ ಪಡೆಯುತ್ತಿದ್ದರೆ ಇದು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಹಸಿವು ಮತ್ತು ವಾಕರಿಕೆ ನಷ್ಟದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.


  ಇದನ್ನೂ ಓದಿ: ಮುಟ್ಟಿನ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಇದ್ರೆ; ಈ ಪರಿಹಾರ ಬಳಸಿ


  ಹೆಚ್ಚಿದ ಹೃದಯ ಬಡಿತ


  ನಿಮ್ಮ ಹೃದಯ ಬಡಿತವು ವೇಗವಾಗಿ ಹೆಚ್ಚಾಗುತ್ತಿದ್ದರೆ ನಿರ್ಲಕ್ಷಿಸಬೇಡಿ. ವೈದ್ಯರನ್ನು ಸಂಪರ್ಕಿಸಿ. ಈ ರೋಗ ಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಿ, ಚಿಕಿತ್ಸೆ ಪಡೆಯಿರಿ.

  Published by:renukadariyannavar
  First published: