• Home
  • »
  • News
  • »
  • lifestyle
  • »
  • Heart Attack: ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ಹೆಚ್ಚು- ಈ ವಿಷಯಗಳ ಬಗ್ಗೆ ಇರಲಿ ಗಮನ

Heart Attack: ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ಹೆಚ್ಚು- ಈ ವಿಷಯಗಳ ಬಗ್ಗೆ ಇರಲಿ ಗಮನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಳಿಗಾಲದಲ್ಲಿ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಂತ ಮಹತ್ವದ್ದಾಗಿದೆ. ಹೇಗೆ ಚಳಿಗಾಲದಲ್ಲಿ ಹೃದಯಾಘಾತದಿಂದ ತಪ್ಪಿಸಿಕೊಳ್ಳೋದು ಅಂತೀರಾ, ಇಲ್ಲಿದೆ ನೋಡಿ ಕೆಲವು ಮಾರ್ಗಗಳು.

  • Trending Desk
  • 5-MIN READ
  • Last Updated :
  • Share this:

ಮಳೆಗಾಲ(Rainy Season) ಕಳೆದು ಚಳಿಗಾಲ(Winter Season) ಬರುವುದರ ಜೊತೆಜೊತೆಯಲ್ಲಿಯೇ ಅದರ ಹಿಂದೆ ರೋಗಗಳ ಸರಮಾಲೆ ಕೂಡ ಉಚಿತವಾಗಿ ಬರುತ್ತವೆ ಎನ್ನಬಹುದು. ಚಳಿಗಾಲದಲ್ಲಿ ಈ ಶೀತ, ನೆಗಡಿ, ಕೆಮ್ಮು, ಅಲರ್ಜಿ, ಒಣಚರ್ಮ, ಕೂದಲು ಉದುರುವಿಕೆಗಳು ಸರ್ವೇ ಸಾಮಾನ್ಯ. ಇವುಗಳಲ್ಲಿ ಚಳಿಗಾಲದಲ್ಲಿ ಉಂಟಾಗುವ ಅತ್ಯಂತ ಗಂಬೀರ ಸಮಸ್ಯೆ ಎಂದರೆ ಅದು ಹೃದಯಾಘಾತ(Heart Attack).


ಕಾನ್ಪುರದಲ್ಲಿ ಹೃದಯಾಘಾತಕ್ಕೆ 98 ಜನ ಬಲಿ


ದೇಶದಲ್ಲಿ ಶೀತ ಹವೆ ಹೆಚ್ಚಾಗಿದ್ದು, ಹಲವು ಸಾವುಗಳು ಹೃದಯಾಘಾತದಿಂದ ಸಂಭವಿಸುತ್ತಿವೆ. ಎಲ್ಪಿಎಸ್ (LPS) ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ನೀಡಿದ ವರದಿಯ ಪ್ರಕಾರ, ಕಾನ್ಪುರದಲ್ಲಿ ಒಂದು ವಾರದ ಅವಧಿಯಲ್ಲಿ 98 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.


24 ಗಂಟೆಯೊಳಗೆ 14 ರೋಗಿಗಳು ನಗರದ ಹೃದ್ರೋಗ ಸಂಸ್ಥೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿಸಿದೆ.


ನವದೆಹಲಿಯ ಮ್ಯಾಕ್ಸ್ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ. ಮನೋಜ್ ಕುಮಾರ್ ಈ ಬಗ್ಗೆ ಮಾತನಾಡಿ "ಚಳಿಗಾಲದ ಚಳಿಯು ವಯಸ್ಸಾದವರಿಗೆ ಮಾತ್ರವಲ್ಲದೆ ಯುವಕರಿಗೂ ಮಾರಕವಾಗಬಹುದು.


ಇದನ್ನೂ ಓದಿ: Daily Shower: ಚಳಿಗಾಲದಲ್ಲಿ ಪ್ರತಿದಿನ ಸ್ನಾನ ಮಾಡೋದು ಒಳ್ಳೆಯದಾ? ತಜ್ಞರು ಹೇಳೋದೇನು?


ಈ ಅವಧಿಯಲ್ಲಿ ಆದಷ್ಟು ಬೆಚ್ಚಗಿನ ವಾತಾವರಣದಲ್ಲಿರುವುದು ಒಳ್ಳೆಯದು. ವೃದ್ಧರು, ಮಕ್ಕಳು, ಯುವಕರು ಎಲ್ಲರೂ ಹೆಚ್ಚಿನ ನಿಗಾ ವಹಿಸಬೇಕು" ಎಂದು ಸಲಹೆ ನೀಡಿದ್ದಾರೆ.


ಚಳಿಗಾಲದಲ್ಲಿಯೇ ಹೆಚ್ಚು ಹಾರ್ಟ್‌ ಅಟ್ಯಾಕ್‌ಗಳು ಸಂಭಿಸುವುದು ಏಕೆ?


ಚಳಿಗಾಲದಲ್ಲಿ ಶೀತದಿಂದಾಗಿ ಮನುಷ್ಯನ ದೇಹದ ನರಮಂಡಲದ ರಕ್ತನಾಳಗಳು ಕಿರಿದಾಗುತ್ತವೆ. ಇದನ್ನು ವಾಸೋಕನ್ಸ್ಟ್ರಿಕ್ಷನ್ (Vasoconstriction) ಅಥವಾ ರಕ್ತನಾಳಗಳ ಗೋಡೆಗಳ ಸಣ್ಣ ಸ್ನಾಯುಗಳಿಂದ ಕಿರಿದಾಗುವಿಕೆ ಎಂದು ಕರೆಯಲಾಗುತ್ತದೆ.


ಇದು ನಮ್ಮ ಹೃದಯ ಬಡಿತ, ರಕ್ತದೊತ್ತಡ, ಕೊಲೆಸ್ಟ್ರಾಲ್‌ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಪ್ರಕ್ರಿಯೆ ಉಲ್ಬಣಗೊಳಿಸುತ್ತದೆ.


ಪರಿಧಮನಿಯ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿ ಹೃದಯಾಘಾತ ಸಂಭವಿಸುತ್ತದೆ. ಚಳಿಗಾಲದಲ್ಲಿ ನಮ್ಮ ದೇಹದಲ್ಲಿನ ಫೈಬ್ರಿನೊಜೆನ್ ಮಟ್ಟವು ಶೇಕಡಾ 23 ರಷ್ಟು ಹೆಚ್ಚಾಗುತ್ತದೆ ಜೊತೆಗೆ ರಕ್ತದ ಪ್ಲೇಟ್ಲೆಟ್ ಸಂಖ್ಯೆಯೂ ಹೆಚ್ಚಾಗುತ್ತದೆ.


ಇದು ರಕ್ತ ಹೆಪ್ಪುಗಟ್ಟುವಂತೆ ಮಾಡುತ್ತದೆ. ಮತ್ತು ಈ ಎಲ್ಲಾ ಅಂಶಗಳು ಅಂತಿಮವಾಗಿ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಹೃದ್ರೋಗ ತಜ್ಞರು.


ಉಷ್ಣತೆಯು 95 ಫ್ಯಾರನ್ಹೀಟ್ ಗಿಂತ ಕಡಿಮೆಯಾದರೆ, ದೇಹದ ಒಟ್ಟಾರೆ ಉಷ್ಣತೆ ಕುಸಿತವಾಗುತ್ತದೆ. ಇದು ನೇರವಾಗಿ ಹೃದಯ ಸ್ತಂಭನಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ವೈದ್ಯರು.


ಹೃದಯಾಘಾತದ ಎಚ್ಚರಿಕೆ ಚಿಹ್ನೆಗಳು:


ಸಾಮಾನ್ಯ ಎದೆನೋವು
ವಾಕರಿಕೆ
ತಲೆತಿರುಗುವಿಕೆ
ಉಸಿರಾಡಲು ತೊಂದರೆ
ದವಡೆ, ಕುತ್ತಿಗೆ ಅಥವಾ ಭುಜಗಳಲ್ಲಿ ನೋವು ಅಥವಾ ಮರಗಟ್ಟಿದ ಭಾವನೆ
ನಿರಂತರ ಆಯಾಸ


ಇದನ್ನೂ ಓದಿ: Curd: ಈ ಪದಾರ್ಥಗಳನ್ನು ಅಪ್ಪಿತಪ್ಪಿಯೂ ಮೊಸರಿನೊಂದಿಗೆ ತಿನ್ನಬೇಡಿ!


ಚಳಿಗಾಲದಲ್ಲಿ ಹೃದಯಾಘಾತದಿಂದ ತಪ್ಪಿಸಿಕೊಳ್ಳೋದು ಹೇಗೆ?


ಚಳಿಗಾಲದಲ್ಲಿ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಂತ ಮಹತ್ವದ್ದಾಗಿದೆ. ಹೇಗೆ ಚಳಿಗಾಲದಲ್ಲಿ ಹೃದಯಾಘಾತದಿಂದ ತಪ್ಪಿಸಿಕೊಳ್ಳೋದು ಅಂತೀರಾ, ಇಲ್ಲಿದೆ ನೋಡಿ ಕೆಲವು ಮಾರ್ಗಗಳು.


* ಬೆಳ್ಳಂಬೆಳಿಗ್ಗೆ ವಾಕಿಂಗ್‌ ಮಾಡಬೇಡಿ: ಚಳಿಗಾಲದಲ್ಲಿ ಬೆಳಿಗ್ಗೆ ಹೆಚ್ಚಿನ ಶೀತ ಇರುವ ಕಾರಣ ಈ ಅವಧಿಯಲ್ಲಿಯೇ ಹೆಚ್ಚಿನ ಹೃದಯಾಘಾತಗಳು ಸಂಭವಿಸುತ್ತವೆ.


ಬೆಳಿಗ್ಗೆ ತಂಪಾಗಿರುವುದರಿಂದ ದೇಹದ ಉಷ್ಣತೆಯು ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ ಹೃದಯಾಘಾತ ಉಂಟಾಗುವ ಸಾಧ್ಯತೆಗಳಿವೆ.


ಸಂಶೋಧಕರ ಪ್ರಕಾರ, ಬೆಳಿಗ್ಗೆ 4 ರಿಂದ 10 ಗಂಟೆಗೆ, ಎಪಿನ್ಫ್ರಿನ್, ನೊರ್ಪೈನ್ಫ್ರಿನ್ ಮತ್ತು ಕಾರ್ಟಿಸೋಲ್ನಂತಹ ಕೆಲವು ಹಾರ್ಮೋನುಗಳು ಹೆಚ್ಚು ಸಕ್ರಿಯವಾಗುತ್ತವೆ.


ಇದು ಆಮ್ಲಜನಕದ ಬೇಡಿಕೆ ಮತ್ತು ರಕ್ತದೊತ್ತಡದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದ್ದರಿಂದ ಸೂರ್ಯೋದಯಕ್ಕೆ ಮುನ್ನ ವಾಕಿಂಗ್‌ ಮಾಡುವುದನ್ನು ಚಳಿಗಾಲದಲ್ಲಿ ತಪ್ಪಿಸಿ


* ಚಳಿಗಾಲದಲ್ಲಿ ಆದಷ್ಟು ಬೆಚ್ಚನೆಯ ಬಟ್ಟೆ ಧರಿಸಿ
* ವಿಟಮಿನ್ ಡಿ ಕೊರತೆಯು ಹೃದಯಾಘಾತವನ್ನು ಉಂಟುಮಾಡುವ ಕಾರಣಗಳಲ್ಲಿ ಒಂದಾಗಿರುವುದರಿಂದ ಚಳಿಗಾಲದಲ್ಲಿ ವಿಟಮಿನ್ ಡಿ ಪೂರಕಗಳನ್ನು ತೆಗೆದುಕೊಳ್ಳೋದನ್ನ ಮರೆಯಬೇಡಿ
* ವಿಟಮಿನ್ ಡಿ ಸಮೃದ್ಧವಾಗಿರುವ ಸಾಲ್ಮನ್ ಮೀನು, ಸಾರ್ಡೀನ್ ಮೀನು, ಟೂನಾ ಮೀನು, ಮೊಟ್ಟೆಯ ಹಳದಿ ಭಾಗವನ್ನು ಸೇವಿಸಿ
* ನಿಯಮಿತವಾಗಿ ನಿಮ್ಮ ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿ.
* ಕೊಬ್ಬಿನ ಮತ್ತು ಎಣ್ಣೆಯಲ್ಲಿ ಕರಿದ ಆಹಾರವನ್ನು ದೂರವಿಡಿ
* ಧೂಮಪಾನ ಮತ್ತು ಮದ್ಯ ಸೇವನೆಯನ್ನು ಮಿತಿಗೊಳಿಸಿ 

Published by:Latha CG
First published: