Heart Attack At Gym: ಜಿಮ್​ನಲ್ಲೇ ಹೆಚ್ಚು ಹೃದಯಾಘಾತ ಆಗೋದೇಕೆ? ತಡೆಯುವುದು ಹೇಗೆ?

ಹೃದಯ ಸ್ತಂಭನ ಎಂಬುದು ಕ್ರಮಬದ್ಧವಾದ ರಕ್ತಪರಿಚಲನೆಯು ಹೃದಯಕ್ಕೆ ಪರಿಣಾಮಾತ್ಮಕವಾಗಿ ಸೇರಲು ವಿಫಲವಾಗಿ ಹೃದಯ ಬಡಿತ ಅಂತ್ಯ ಅಥವಾ ತಾತ್ಕಾಲಿಕ ಅಂತ್ಯವನ್ನು ಕಾಣುತ್ತದೆ. ಮತ್ತು ಈ ಅನಿರೀಕ್ಷಿತ ಘಟನೆಯನ್ನು ಹಠಾತ್ ಹೃದಯ ಸ್ತಂಭನ ಅಥವಾ ಎಸ್‍ಸಿಎ ಎಂದು ಕರೆಯಲಾಗುತ್ತದೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
  ಇತ್ತೀಚಿಗೆ ಜಿಮ್​ಗಳಲ್ಲಿ (Gym)  ವರ್ಕ್ ಔಟ್ ಮಾಡುವಾಗಲೇ ಹೃದಯಾಘಾತವಾಗಿ (Heart Attack) ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ಅತಿಯಾದ ವ್ಯಾಯಾಮವೂ ದೇಹಕ್ಕೆ ಒಳ್ಳೆಯದಲ್ವಾ ಅನ್ನೋ ಪ್ರಶ್ನೆಗಳು ಹಲವರನ್ನು ಕಾಡುತ್ತಿವೆ. ಇಂಡಿಯನ್ ಎಕ್ಸ್‍ಪ್ರೆಸ್‍ನೊಂದಿಗೆ ಮಾತನಾಡಿದ , ಹೃದ್ರೋಗ ತಜ್ಞ, ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಅಧ್ಯಕ್ಷ ಪ್ರೋಫೆಸರ್ ಕೆ ಶ್ರೀನಾಥ್ ರೆಡ್ಡಿ (Professor K Srinath Reddy), ವ್ಯಾಯಾಮ (Exercise) ಅಥವಾ ಭಾರೀ ದೈಹಿಕ ಚಟುವಟಿಕೆಯ ಸಮಯದಲ್ಲಿ ಹಠಾತ್ ಹೃದಯ ಸ್ತಂಭನವು (Cardiac Arrest) ಹೆಚ್ಚಾಗಿ ಕಾಣಿಸಿಕೊಂಡು ಬಿಡುತ್ತದೆ. ರೋಗನಿರ್ಣಯ ಅಥವಾ ರೋಗನಿರ್ಣಯ ಮಾಡದ ಕಾರಣ ಸಂಭವಿಸಬಹುದು ಹೃದಯಾಘಾತ ಆಹಬಹುದು ಎಂದು ಹೇಳಿದ್ದಾರೆ. ಹೃದಯದಲ್ಲಿ, ಜೀವಕೋಶಗಳು ಮತ್ತು ಕೊಲೆಸ್ಟರಾಲ್ ಕಣಗಳು ಎಂಡೋಥೀಲಿಯಲ್ ಕೋಶಗಳ ತಡೆಗೋಡೆಯನ್ನು ಭೇದಿಸಿ ಮತ್ತು ಅಪಧಮನಿಯ ಒಳಪದರಕ್ಕೆ ಒಳನುಗ್ಗುತ್ತದೆ.

  ಇದರ ಪರಿಣಾಮವಾಗಿ ಹೃದಯದಲ್ಲಿ ಅಡಚಣೆಗಳು ಉಂಟಾಗುತ್ತವೆ. ಇದು ಅಪಧಮನಿಯಲ್ಲಿ ಪ್ಲೇಕ್ ಎಂಬ ಉಬ್ಬು ರಚನೆಗೆ ಕಾರಣವಾಗುತ್ತದೆ. ಹೆಚ್ಚಿನ ದೈಹಿಕ ಒತ್ತಡವನ್ನು ಉಂಟುಮಾಡಬಹುದು ಎಂದು ಪ್ರೋಫೆಸರ್ ರೆಡ್ಡಿ ಹೇಳುತ್ತಾರೆ. ಇದು ಹೃದಯ ಸ್ತಂಭನಕ್ಕೆ ಕಾರಣವಾಗುತ್ತದೆಯಂತೆ.

  ಹೃದಯ ಸ್ತಂಭನ ಹೇಗಾಗುತ್ತೆ?
  ಹೃದಯ ಸ್ತಂಭನ ಎಂಬುದು ಕ್ರಮಬದ್ಧವಾದ ರಕ್ತಪರಿಚಲನೆಯು ಹೃದಯಕ್ಕೆ ಪರಿಣಾಮಾತ್ಮಕವಾಗಿ ಸೇರಲು ವಿಫಲವಾಗಿ ಹೃದಯ ಬಡಿತ ಅಂತ್ಯ ಅಥವಾ ತಾತ್ಕಾಲಿಕ ಅಂತ್ಯವನ್ನು ಕಾಣುತ್ತದೆ. ಮತ್ತು ಈ ಅನಿರೀಕ್ಷಿತ ಘಟನೆಯನ್ನು ಹಠಾತ್ ಹೃದಯ ಸ್ತಂಭನ ಅಥವಾ ಎಸ್‍ಸಿಎ ಎಂದು ಕರೆಯಲಾಗುತ್ತದೆ. ಹೃದಯ ಸ್ತಂಭನವು ಹೃದಯಾಘತಕ್ಕಿಂತ ಭಿನ್ನವಾಗಿದ್ದು, ಹೃದಯದ ಸ್ನಾಯುಭಾಗದಲ್ಲಿನ ರಕ್ತಸಂಚಾರದ ಏರಿಳಿತವು ದುರ್ಬಲವಾಗುತ್ತದೆ.

  ರಕ್ತಸಂಚಾರದಲ್ಲಿ ಸ್ತಂಭನವಾದಾಗ ದೇಹಕ್ಕೆ ಆಮ್ಲಜನಕವು ಸರಬರಾಜಾಗುವುದನ್ನು ತಡೆಯುತ್ತದೆ. ಇದರಿಂದ ಮೆದುಳಿಗೆ ಆಮ್ಲಜನಿಕ ಸರಬರಾಜು ಪ್ರಮಾಣದಲ್ಲಿ ಕಡಿಮೆಯಾಗಿ ಪ್ರಜ್ಞೆ ಹೋಗುವುದಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಉಸಿರಾಟ ಪ್ರಮಾಣವು ಹೆಚ್ಚಾಗುತ್ತದೆ ಅಥವಾ ನಿಲ್ಲುತ್ತದೆ. ಈ ರೀತಿಯ ಹೃದಯ ಸ್ತಂಭನ ಉಂಟಾದಾಗ ಐದು ನಿಮಿಷಗಳ ವರೆಗೆ ಚಿಕಿತ್ಸೆ ನೀಡದೇ ಹೋದಲ್ಲಿ ಬ್ರೈನ್ ಇಂಜುರಿಯಾಗುವ ಸಾಧ್ಯತೆಗಳಿವೆ. ಇಂತಹ ಸಂದರ್ಭದಲ್ಲಿ ಆ ರೋಗಕ್ಕೆ ತುತ್ತಾದವರನ್ನು ಬದುಕಿಸಲು ಮತ್ತು ನರಶಾಸ್ತ್ರೀಯ ಗುಣಮುಖಕ್ಕೆ ತಕ್ಷಣದ ಮತ್ತು ನಿರ್ಧಿಷ್ಟವಾದ ಚಿಕಿತ್ಸೆ ಅತಿ ಅವಶ್ಯಕವಾಗಿದೆ.

  ಇದನ್ನೂ ಓದಿ: Mini Heart Attack Symptoms: ಲಘು ಹೃದಯಾಘಾತ ಎಂದರೇನು? ಅದರ ಲಕ್ಷಣಗಳು ಇಲ್ಲಿವೆ ನೋಡಿ

  ವ್ಯಾಯಾಮವು ಆರೋಗ್ಯಕರ ಅಭ್ಯಾಸನಾ?
  ವ್ಯಾಯಾಮವು ಆರೋಗ್ಯಕರ ಅಭ್ಯಾಸವಲ್ಲ ಎಂದು ಇದರ ಅರ್ಥವಲ್ಲ. ಉತ್ತಮ ಜೀವನಶೈಲಿಯನ್ನು ಅನುಸರಿಸುವ ವ್ಯಕ್ತಿಗಳು ಮತ್ತು ಅವರ ಆಹಾರ ಕ್ರಮವನ್ನು ಪರಿಶೀಲಿಸುವುದರಿಂದ ಅವರ ನಿಯಮಿತ ದಿನಚರಿಯನ್ನು ಅನುಸರಿಸಬಹುದು. ಮತ್ತು ಜಿಮ್‍ಗೆ ಹೋಗಬಹುದು. ನೀವು ನಿಯಮಿತವಾಗಿ ಜಿಮ್‍ಗೆ ಹೋಗುವವರಾಗಿದ್ದರೆ, ಮತ್ತು ಹೃದಯ ಸಂಬಂಧಿ ಕಾಯಿಲೆ ಹೊಂದಿದ್ದರೆ, ಈ ಕೆಳಗಿನ ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

  ಪೌಷ್ಟಿಕಾಂಶ-ಭರಿತ ಆಹಾರ ಸೇವಿಸಿ
  ಜಿಮ್‍ನಲ್ಲಿ ವ್ಯಾಪಕವಾದ ದೈಹಿಕ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿಯಾಗಿ, ದೇಹದ ಅಗತ್ಯಕ್ಕೆ ಅನುಗುಣವಾಗಿ ಪೌಷ್ಟಿಕಾಂಶ-ಭರಿತ ಆಹಾರವನ್ನು ಸೇವಿಸುವುದು ಮುಖ್ಯವಾಗಿದೆ. ಎಣ್ಣೆಯುಕ್ತ ಅಥವಾ ಜಂಕ್ ಫುಡ್ ತಿನ್ನುವುದನ್ನು ತಪ್ಪಿಸಿ. ನಿಮ್ಮ ರಕ್ತದ ಒತ್ತಡವನ್ನುನಿಯಂತ್ರಣದಲ್ಲಿಡಲು ಉಸಿರಾಟದ ವ್ಯಾಯಾಮಗಳನ್ನು ಅಭ್ಯಾಸ ಮಾಡಿಕೊಳ್ಳಿ. ಮತ್ತು ತೀವ್ರವಾದ ತಾಲೀಮು ಅವಧಿಯಲ್ಲಿ ದೇಹಕಕ್ಕೆ ವಿಶ್ರಾಂತಿ ಬೇಕು.

  ಇದನ್ನೂ ಓದಿ: Heart Attack Symptoms: ನೀವು ಈ ಎಲ್ಲಾ ಸಮಸ್ಯೆ ಅನುಭವಿಸ್ತಿದ್ರೆ ಹೃದಯಾಘಾತದ ಲಕ್ಷಣವಂತೆ, ನಿರ್ಲಕ್ಷ್ಯ ಮಾಡದೇ ಡಾಕ್ಟರ್ ಹತ್ರ ಹೋಗಿ

  ಆರೋಗ್ಯ ಸರಿ ಇಲ್ಲದಾಗ ಜಿಮ್‍ಗೆ ಹೋಗಬೇಡಿ
  ನಿಮ್ಮ ಆರೋಗ್ಯ ಸರಿ ಇಲ್ಲದ ದಿನಗಳಲ್ಲಿ ಜಿಮ್ ಅನ್ನು ಬಿಟ್ಟುಬಿಡಿ. ಅಂತಹ ದಿನಗಳಲ್ಲಿ ನೀವು ಜಿಮ್‍ಗೆ ಹೋಗುವುದ ಅಪಾಯ. ನಿಮ್ಮ ದೈಹಿಕ ಸಾಮಥ್ರ್ಯಗಳಿಗೆ ಅನುಗುಣವಾಗಿ ವ್ಯಾಯಾಮವನ್ನು ಮಾಡಿ. ಪ್ರತಿಯೊಬ್ಬರ ದೇಹವು ತನ್ನದೇ ಆದ ಸಾಮಥ್ರ್ಯಗಳನ್ನು ಹೊಂದಿದೆ. ನಿಮ್ಮ ದೇಹದ ಸಾಮಥ್ರ್ಯವನ್ನು ಅರಿತುಕೊಳ್ಳದೆ ಇತರರೊಂದಿಗೆ ಸ್ಪರ್ಧಿಸುವುದು ನಿಮಗೆ ಆರೋಗ್ಯದ ಅಪಾಯವನ್ನುಂಟುಮಾಡುತ್ತದೆ

  ಈ ಕ್ರಮಗಳ ಜೊತೆಗೆ, ಹೃದಯ ಸ್ತಂಭನದ ಅಪಾಯವನ್ನು ತಪ್ಪಿಸಲು ನಿಮ್ಮ ಹೃದಯದ ಆರೋಗ್ಯವನ್ನು ಪತ್ತೆಹಚ್ಚಲು ನಿಯಮಿತ ಆರೋಗ್ಯ ತಪಾಸಣೆಗಳನ್ನು ಕೈಗೊಳ್ಳಬೇಕು.
  Published by:Savitha Savitha
  First published: