ಮೊದಲೆಲ್ಲಾ ಹೃದಯಕ್ಕೆ ಸಂಬಂಧಿಸಿದ ಕೆಲ ಕಾಯಿಲೆಗಳನ್ನು ಅದರಲ್ಲೂ ಈ ಹಾರ್ಟ್ ಅಟ್ಯಾಕ್ ಅನ್ನು (Heart Attack Signs) ಸಾಮಾನ್ಯವಾಗಿ ವೃದ್ಧರ ಕಾಯಿಲೆ ಎಂದು ಪರಿಗಣಿಸಲಾಗಿತ್ತು. ಅಂದರೆ ವಯಸ್ಸಾದವರಲ್ಲಿ ಈ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಈಗ ವಯಸ್ಸಿನ ಯಾವುದೇ ಮಿತಿ ಇಲ್ಲದೇ ಹಠಾತ್ ಸಾವಿಗೆ ಕಾರಣವಾಗಿರುವ ಕೆಲ ಹೃದಯ (Heart Health) ರೋಗಗಳು ಸಂಭವಿಸುತ್ತಿವೆ. ಅದಕ್ಕೆ ನಮ್ಮ-ನಿಮ್ಮ ಮುಂದೆ ಹಲವಾರು ನಿದರ್ಶನ ಕೂಡ ಇವೆ.
ಹೀಗಾಗಿ ವಯಸ್ಸಿನ ಬಗ್ಗೆ ಯೋಚಿಸದೇ ಈಗ ಹೃದಯವನ್ನು ಕಾಳಜಿ ಮಾಡುವುದು ಮುಖ್ಯವಾಗಿದೆ. ಯಾವುದೇ ರೋಗ ಆಗಲಿ ಬಂದ ಮೇಲೆ ಆರೈಕೆ ಮಾಡಿಕೊಳ್ಳುವುದಕ್ಕಿಂತ ಬರುವ ಮುನ್ನ ಎಚ್ಚರ ವಹಿಸುವುದು ಮುಖ್ಯ.
ಹೃದಯಾಘಾತದ ಸಾಮಾನ್ಯ ಚಿಹ್ನೆಗಳಿವು
ಅಂತೆಯೇ ಒಬ್ಬರು ಹೃದಯಾಘಾತಕ್ಕೆ ಒಳಗಾಗಬಹುದು ಎಂದು ಸೂಚಿಸುವ ಸಾಮಾನ್ಯ ಚಿಹ್ನೆಗಳ ಸಹ ಇವೆ. ಇಂತಹ ಐದು ಸಾಮಾನ್ಯ ಚಿಹ್ನೆಗಳನ್ನು ನ್ಯೂಯಾರ್ಕ್‌ನ ಕಾರ್ಡಿಯಾಲಜಿ ಆಸ್ಪತ್ರೆಯ ಹೃದ್ರೋಗ ಶಾಸ್ತ್ರಜ್ಞ ಡಾ ದೀಪಕ್ ಭಟ್ ವಿವರಿಸಿದ್ದಾರೆ.
ಸಡನ್ ಆಗಿ ಆಗಲ್ಲ!
ಹೃದಯಾಘಾತವು ಇದ್ದಕ್ಕಿದ್ದಂತೆ ಸಂಭವಿಸುವುದಿಲ್ಲ, ಅದು ನಮ್ಮ ಜೀವನಶೈಲಿಯ ಅಧಾರದ ಮೇಲೆ ಅವಲಂಬಿತವಾಗಿರುತ್ತದೆ. ಜೀವನಶೈಲಿ ಎಷ್ಟು ಉತ್ತಮವಾಗಿರುತ್ತದೆಯೋ ನಮ್ಮ ಆರೋಗ್ಯ ಅಷ್ಟೇ ಉತ್ತಮವಾಗಿರುತ್ತದೆ. ಇಲ್ಲಿ ಸ್ವಲ್ಪ ಏರುಪೇರಾದರೂ ಇನ್ನಿಲ್ಲದ ಆರೋಗ್ಯ ಸಮಸ್ಯೆಗಳು ಆಹ್ವಾನ ನೀಡದೇ ಬಂದು ಬಿಡುತ್ತವೆ.
ಹೀಗೆ ಒಬ್ಬರು ಈ ಕೆಳಗಿನ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಅವರು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚು ಎಂದಿದ್ದಾರೆ. ಹಾಗಾದರೆ ತಜ್ಞರು ವಿವರಿಸಿರುವ ಆ ಐದು ಸಾಮಾನ್ಯ ಚಿಹ್ನೆಗಳನ್ನು ನೋಡೋಣ ಬನ್ನಿ.
* ಆತಂಕ
ನಮ್ಮ ಕೆಲಸ, ವೇಳಾಪಟ್ಟಿ, ಜೀವನಶೈಲಿ ಎಲ್ಲವೂ ನೇರವಾಗಿ ನಮ್ಮ ಆತಂಕಕ್ಕೆ ಕಾರಣವಾಗಿದ್ದು, ಈ ಆತಂಕ ನಮ್ಮ ಹೃದಯದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಆತಂಕ ಮತ್ತು ಹೃದಯರೋಗ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.
ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರು 2015 ರಲ್ಲಿ ನಡೆಸಿದ ಅಧ್ಯಯನವು ಆತಂಕವು ಪರಿಧಮನಿಯ ಕಾಯಿಲೆಯ ಅಪಾಯವನ್ನು (ಸಿಎಡಿ) 21 ಪ್ರತಿಶತದಷ್ಟು ಮಾರಕವಾಗಿ ಪರಿವರ್ತಿಸುತ್ತದೆ ಎಂದು ಕಂಡುಹಿಡಿದಿದೆ. ಅಂದರೆ ಹೆಚ್ಚಾಗಿ ಯಾರು ಒತ್ತಡ, ಆತಂಕ, ಖಿನ್ನತೆಯಿಂದಾಲೇ ಜೀವನ ನಡೆಸುತ್ತಾರೋ ಅಂಥವರಲ್ಲಿ ಈ ಹೃದ್ರೋಗದ ಅಪಾಯ ಹೆಚ್ಚು.
* ಬೆವರುವುದು
ಯಾವುದಾದರೂ ದೈಹಿಕ ಕೆಲಸ ಮಾಡಿದರೆ ಸಹಜವಾಗಿ ಕೆಲವರು ಬೆವರುತ್ತಾರೆ. ಆದರೆ ಏನೂ ಮಾಡದೇ ಸುಖಾಸುಮ್ಮನೆ ಬೆವರಿದರೆ ಅದು ಸಾಮಾನ್ಯವಲ್ಲ. ಇದು ಭವಿಷ್ಯದ ಹಾರ್ಟ್ ಅಟ್ಯಾಕ್ ಸಂಕೇತ ಎನ್ನುತ್ತಾರೆ ದೀಪಕ್ ಭಟ್. ಬೇಗ ಬೆವರುವುದು, ವ್ಯಕ್ತಿಯು ಯಾವುದೇ ದೈಹಿಕ ಚಟುವಟಿಕೆಯಲ್ಲಿ ಭಾಗವಹಿಸದಿದ್ದಾಗಲೂ ಬೆವರುವುದು ಹೃದಯಾಘಾತದ ಮೊದಲ ಚಿಹ್ನೆಗಳಲ್ಲಿ ಒಂದು ಎಂದು ಅವರು ಎಚ್ಚರಿಸುತ್ತಾರೆ.
* ಕಾಲು ನೋವು
ಕಾಲು ನೋವು ಅಂದರೆ ವಯಸ್ಸಾಗ್ತಿದೆ ಹೀಗಾಗಿ ಇದೆಲ್ಲಾ ಸಹಜ ಎಂದು ಭಾವಿಸಿ ಸುಮ್ಮನಾಗಿಬಿಡುತ್ತಾರೆ. ಆದರೆ ಡಾ. ದೀಪಕ್ ಈ ಲಕ್ಷಣವನ್ನು ಹೃದ್ರೋಗದ ಅನಿರೀಕ್ಷಿತ ಸಿಗ್ನಲ್ ಎಂದಿದ್ದಾರೆ. ಕಾಲುಗಳಲ್ಲಿ ಜುಮ್ಮೆನಿಸುವಿಕೆ ಮತ್ತು ನೋವು ವಾಸ್ತವವಾಗಿ ಭವಿಷ್ಯದ ಹೃದಯಘಾತದ ಪ್ರಮುಖ ಲಕ್ಷಣಗಳಾಗಿವೆ ಎಂದಿದ್ದಾರೆ.
ಇದನ್ನೂ ಓದಿ: Helping Adolescents: ಪಾಲಕರು ಹದಿಹರೆಯದಲ್ಲಿ ಮಕ್ಕಳಿಗೆ ಹೇಳಿಕೊಡಲೇಬೇಕಾದ ವಿಷಯ ಇದು
* ಆಯಾಸ
ಕೆಲಸ ಮಾಡಿ ದಿನದ ಕೊನೆಯಲ್ಲಿ ದಣಿವಾಗುವುದು ಸಹಜ, ಆದರೆ ದಿನಂಪ್ರತಿ ಇದೇ ಆಯಾಸ, ಸುಸ್ತು ಇದ್ದರೆ ಇದಕ್ಕೆ ಬೇರೆಯದ್ದೇ ಕಾರಣವಿರುತ್ತದೆ. ಹೀಗೆ ಹೃದಯಘಾತದ ಅಪಾಯದ ಲಕ್ಷಣಗಳಲ್ಲಿ ಈ ಆಯಾಸ ಕೂಡ ಒಂದು ಎನ್ನುತ್ತಾರೆ ವೈದ್ಯರು. ಯಾರಾದರೂ ತುಂಬಾ ದಿನಗಳಿಂದ ಆಯಾಸದಿಂದ ಬಳಲುತ್ತಿದ್ದರೆ, ವೈದ್ಯರನ್ನು ತಕ್ಷಣ ಭೇಟಿ ಮಾಡಿ ಎನ್ನುತಾರೆ ಡಾ. ದೀಪಕ್
ಇದನ್ನೂ ಓದಿ: Corona Vaccine: ಹೃದಯಾಘಾತಕ್ಕೆ ಕಾರಣವಾಗ್ತಿದ್ಯಾ ಕೋವಿಶೀಲ್ಡ್? ತಜ್ಞರು ಹೇಳುತ್ತಿರುವುದೇನು?
* ಹೊಟ್ಟೆಯ ತೊಂದರೆಗಳು
ಹೃದ್ರೋಗದಿಂದ ಬಳಲುತ್ತಿರುವವರಲ್ಲಿ ಸಾಮಾನ್ಯವಾಗಿ ಹೊಟ್ಟೆ ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳು ಕಂಡು ಬರುತ್ತವೆ. ಹೃದಯರಕ್ತನಾಳದ ಸ್ಥಿತಿಯು ಹದಗೆಟ್ಟಾಗ ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು ಸಂಭವಿಸುತ್ತವೆ. ಇದು ಮೊದಲಿಗೆ ಸಾಮಾನು ಹೊಟ್ಟೆ ನೋವು ಎಂದೆನಿಸಿದರೂ ಈ ಲಕ್ಷಣ ಹಾರ್ಟ್ ಅಟ್ಯಾಕ್‌ಗೆ ನೇರವಾಗಿ ಸಂಬಂಧಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ