Winter Health: ಚಳಿಗಾಲದಲ್ಲಿ ತಪ್ಪದೇ ಈ ತರಕಾರಿಗಳನ್ನು ಸೇವಿಸಿ.. ಏಕೆ ಅನ್ನೋ ಗುಟ್ಟು ಇಲ್ಲಿದೆ

Vegetables: ನವಿಲುಕೋಸಿನಲ್ಲಿ ಹಲವಾರು ಆಂಟಿ ಆಕ್ಸಿಡೆಂಟುಗಳು ಸಮೃದ್ಧ ಪ್ರಮಾಣದಲ್ಲಿವೆ. ವಿಟಮಿನ್ ಸಿ, ಆಂಥೋಸಯಾನಿನ್ ಗಳು ಐಸೊಥಿಯೊಸೈನೇಟ್‌ಗಳು, ಇತ್ಯಾದಿ. ಇವು ಸಸ್ಯಜನ್ಯ ಸಂಯುಕ್ತಗಳಾಗಿದ್ದು, ಅದು ನಮ್ಮ ಜೀವಕೋಶಗಳನ್ನು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಧಾಳಿಯಿಂದ ರಕ್ಷಿಸುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನಾವು ಪ್ರತಿ ದಿನ ಹಲವು ಬಗೆಯ ತರಕಾರಿಗಳನ್ನು(Vegetables) ವಿವಿಧ ಬಗೆಯ ಅಡುಗೆ(Meals) ಪದಾರ್ಥಗಳನ್ನಾಗಿ ಬಳಕೆ ಮಾಡಿಕೊಂಡು ಸೇವನೆ ಮಾಡುತ್ತಲೇ ಇರುತ್ತೇವೆ. ಆದರೆ ಅವುಗಳ ಆರೋಗ್ಯ(Health) ಪ್ರಯೋಜನಗಳು ಮಾತ್ರ ನಮಗೆ ಗೊತ್ತೇ ಇರುವುದಿಲ್ಲ.. ಹಸಿರು ತರಕಾರಿಗಳಲ್ಲಿರೋಗ ನಿರೋಧಕ ಶಕ್ತಿ(Immunity), ಎ, ಬಿ, ಸಿ ಜೀವಸತ್ವಗಳು, ಖನಿಜಾಂಶ, ನಾರಿನಂಶ ವಿಪುಲವಾಗಿದ್ದು, ಇವು ನಮ್ಮ ಸದೃಢ ಆರೋಗ್ಯಕ್ಕೆ ಸಹಕಾರಿಯಾಗಿವೆ. ಆರೋಗ್ಯಕರ ಆಹಾರಕ್ರಮಕ್ಕೆ(Healthy Food) ನೀವು ತರಕಾರಿ ಆಹಾರಗಳನ್ನು ಸೇವಿಸಿದರೆ ಹೃದಯ, ಮಧುಮೇಹ (Diabetes) ಮತ್ತು ಕ್ಯಾನ್ಸರ್(Cancer) ನಂತಹ ರೋಗಗಳನ್ನು ದೂರವಿಡಬಹುದು. ತರಕಾರಿ ವಿವಿಧ ವಿಧಗಳಲ್ಲಿರುತ್ತದೆ. ಇದರಲ್ಲಿ ಬೀಜದ ತರಕಾರಿ, ಬೇರಿನ ತರಕಾರಿ, ಎಲೆ ತರಕಾರಿ ಮತ್ತು ಹೂವಿನ ತರಕಾರಿಗಳು. ಇದರಲ್ಲಿ ಹಲವಾರು ರೀತಿಯ ಲಾಭಗಳಿವೆ.. ಅದ್ರಲ್ಲೂ ಚಳಿಗಾಲದಲ್ಲಿ ಫಿಟ್ ಮತ್ತು ಆರೋಗ್ಯಕರವಾಗಿರಲು ನಿಮ್ಮ ಆಹಾರದಲ್ಲಿ ಕೆಲವು ತರಕಾರಿಗಳನ್ನು ಸೇರಿಸಿಕೊಳ್ಳುವುದು ಬಹಳ ಮುಖ್ಯ. ಯಾವುದೇ ಋತುವೇ ಆಗಿರಲಿ ಆ ಋತುಮಾನದ ತರಕಾರಿಗಳನ್ನು ತಿನ್ನುವುದು ತುಂಬಾ ಪ್ರಯೋಜನಕಾರಿಯಾಗಿದೆ.. ಹೀಗಾಗಿ ಚಳಿಗಾಲದಲ್ಲಿ ತಪ್ಪದೆ ಈ ತರಕಾರಿಗಳನ್ನ ಸೇವಿಸಿ.

  1) ಪಾಲಕ್ ಸೊಪ್ಪು: ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಸಿ, ಕಬ್ಬಿಣಾಂಶವಿದ್ದು, ಇದು ಚಯಾಪಚಯ ಉತ್ತಮಪಡಿಸುವ ಜತೆಗೆ ವೇಗವಾಗಿ ಕ್ಯಾಲರಿ ದಹಿಸಲು ನೆರವಾಗುವುದು. ಪಾಲಕ್ ಸೊಪ್ಪಿನಲ್ಲಿ ಆಂಟಿಆಕ್ಸಿಡೆಂಟ್, ವಿಟಮಿನ್ ಗಳು, ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಫಾಲಿಕ್ ಆಮ್ಲವು ಇದೆ. ಇದು ಹೃದಯದ ಆರೋಗ್ಯಕ್ಕೆ ತುಂಬಾ ಸಹಕಾರಿ. ಈ ಎಲ್ಲಾ ವಿಟಮಿನ್ ಗಳು ರಕ್ತ ಸಂಚಾರವನ್ನು ಉತ್ತಮಪಡಿಸುವುದು ಮತ್ತು ರಕ್ತನಾಳವು ಬ್ಲಾಕ್ ಆಗದಂತೆ ಮಾಡುವುದು. ಇನ್ನು ಪಾಲಕ್ ಸೊಪ್ಪಿನಲ್ಲಿ ಇರುವಂತಹ ಫ್ಲಾವನಾಯ್ಡ್ ಅಂಶವು ಗರ್ಭಕೋಶದ ಕ್ಯಾನ್ಸರ್ ಅಪಾಯವನ್ನು ತಗ್ಗಿಸುವುದು ಎಂದು ಕ್ಯಾನ್ಸರ್ ಬಗ್ಗೆ ನಡೆಸಿರುವಂತಹ ಅಧ್ಯಯನಗಳು ಹೇಳಿವೆ.

  ಇದನ್ನೂ ಓದಿ: ತೂಕ ಇಳಿಸುವುದರಿಂದ ಹೃದಯದ ಆರೋಗ್ಯದವರೆಗೆ ಪೇರಲೆ ಹಣ್ಣಿನ ಪ್ರಯೋಜನಗಳು ಒಂದೆರೆಡಲ್ಲ

  2) ಮೂಲಂಗಿ: ಮೂಲಂಗಿಯನ್ನು ದಿವ್ಯೌಷಧಿ ಗುಣಗಳ ತರಕಾರಿ ಎಂದೇ ಪರಿಗಣಿಸಲಾಗಿದೆ. ಮೂಲಂಗಿಯಲ್ಲಿ ಅನೇಕ ಪೋಷಕಾಂಶಗಳಿವೆ. ಸಸಾರಜನಕ, ಪಿಷ್ಠ, ಮೇದಸ್ಸು, ಖನಿಜಾಂಶ, ನಾರಿನಂಶ, ರಂಜಕ, ಸೋಡಿಯಂ, ಪೊಟ್ಯಾಷಿಯಂ, ಸುಣ್ಣ, ಕಬ್ಬಿಣ, ಥಿಯಾಮಿನ್, ರಿಬೋಫ್ಲಾವಿನ್, ಆಕ್ಸಾಲಿಕ್ ಆಮ್ಲ, ಎ ಮತ್ತು ಸಿ ಜೀವಸತ್ವ ಇದರಲ್ಲಿದೆ. ಮೂಲಂಗಿಯಿಂದ ಅನೇಕ ಪ್ರಯೋಜನಗಳಂಟು. ಜೀರ್ಣಕ್ರಿಯೆಗೆ ಮಲಬದ್ದತೆ, ಮೂಲವ್ಯಾಧಿ ಮತ್ತು ಮೂಲವೃಣ ನಿವಾರಣೆಗೆ ಇದು ಗುಣಕಾರಿ. ಇನ್ನು ಮೂಲಂಗಿಯಲ್ಲಿ ಅಧಿಕ ಮಟ್ಟದಲ್ಲಿ ಪೋಟ್ಯಾಶಿಯಂ ಅಂಶವಿರುತ್ತದೆ. ನಿಮ್ಮ ಡಯೆಟ್ ನಲ್ಲಿ ಮೂಲಂಗಿ ಬಳಸುವುದರಿಂದ ದೇಹದಲ್ಲಿ ಸೋಡಿಯಂ ಹಾಗೂ ಪೋಟ್ಯಾಶಿಯಂ ನಿಯಂತ್ರಣದಲ್ಲಿರುತ್ತದೆ. ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದರೆ ಮೂಲಂಗಿ ತಪ್ಪದೇ ಸೇವಿಸುವುದು ಉತ್ತಮವಾಗಿರುತ್ತದೆ..

  3) ಕ್ಯಾರೆಟ್ : ಚಳಿಗಾಲ ಪ್ರಾರಂಭವಾದ ತಕ್ಷಣ ಕ್ಯಾರೆಟ್ ಕೂಡ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇದು ಶಾಖಾಹಾರಿಗಳಿಗೆ ಹೇಳಿ ಮಾಡಿಸಿದ ಆಹಾರವಾಗಿದೆ. ಇದು ವರ್ಷವಿಡಿ ಸುಲಭವಾಗಿ ದೊರೆಯುತ್ತದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಬಿ ನಂತಹ ಮಿಟಮಿನ್‌ಗಳಿವೆ. ಇನ್ನು ಪ್ರತಿದಿನ ಕ್ಯಾರೆಟ್ ಅಥವಾ ಅದರ ಜ್ಯೂಸ್​ನನ್ನು ಸೇವಿಸುವುದರಿಂದ ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಇದರಿಂದ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಬಹುದಂತೆ.

  4) ದಂಟಿನ ಸೊಪ್ಪು: ದಂಟನ್ನು ಕೇವಲ ಹಸಿರು ಸೊಪ್ಪಗಿಯೂ ಅಲ್ಲದೇ ತೇವಾಂಶ ಕೊಬ್ಬು ಪುಷ್ಟಿ ಸಾರಜನಕ ಕಬ್ಬಿಣದ ಅಂಶ ವಿಟಮಿನ್ ಎ ವಿಟಮಿನ್ ಬಿ ಪೋಷಕಾಂಶಗಳನ್ನು ತುಂಬಿದ ಆರೋಗ್ಯಕ್ಕೆ ಪೂರಕವಾದ ಔಷದೀಯ ಗುಣಗಳನ್ನು ಹೊಂದಿರುವ ಸಸ್ಯ..ದಂಟು ಮಧುಮೇಹ, ರಕ್ತಹೀನತೆ ಮತ್ತು ಕ್ಯಾನ್ಸರ್ ಅನ್ನು ತಡೆಯುತ್ತದೆ. ದಂಟಿನ ಸೊಪ್ಪು ಕಾರ್ಬೋಹೈಡ್ರೇಟ್ಗಳು ಮತ್ತು ಫೈಬರ್ನ ಉತ್ತಮ ಮೂಲವಾಗಿದೆ.

  5) ಬತುವಾ ಸಾಗ್: ಚಳಿಗಾಲದಲ್ಲಿ ಬತುವಾ ಸೊಪ್ಪನ್ನು ಸೇವಿಸುವುದು ಸಹ ನಿಮಗೆ ಪ್ರಯೋಜನವನ್ನು ನೀಡುತ್ತದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಡಿ, ಕ್ಯಾಲ್ಸಿಯಂ, ರಂಜಕ, ಕಬ್ಬಿಣ ಮತ್ತು ಪೊಟ್ಯಾಸಿಯಮ್ ಇದೆ. ಬತುವಾ ಸೊಪ್ಪನ್ನು ತಿನ್ನುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ಮಲಬದ್ಧತೆ ನಿವಾರಣೆಯಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರೊಂದಿಗೆ ರಕ್ತವನ್ನು ಶುದ್ಧೀಕರಿಸಲು ಮತ್ತು ರಕ್ತ ಪರಿಚಲನೆಗೆ ಸಹಕಾರಿಯಾಗಿದೆ. ಇದರಿಂದ ಹುಳಿ ತೇಗಿನ ಸಮಸ್ಯೆಯೂ ದೂರವಾಗುತ್ತದೆ.

  ಇದನ್ನೂ ಓದಿ: ಬೆಳಗಿನ ತಿಂಡಿ ಬಿಟ್ಟು ತೂಕ ಇಳಿಸಿಕೊಳ್ಳುವ ಬದಲು ಈ ಕ್ರಮ ಅನುಸರಿಸಿ

  6) ನವಿಲುಕೋಸು: ನವಿಲುಕೋಸಿನಲ್ಲಿ ಹಲವಾರು ಆಂಟಿ ಆಕ್ಸಿಡೆಂಟುಗಳು ಸಮೃದ್ಧ ಪ್ರಮಾಣದಲ್ಲಿವೆ. ವಿಟಮಿನ್ ಸಿ, ಆಂಥೋಸಯಾನಿನ್ ಗಳು ಐಸೊಥಿಯೊಸೈನೇಟ್‌ಗಳು, ಇತ್ಯಾದಿ. ಇವು ಸಸ್ಯಜನ್ಯ ಸಂಯುಕ್ತಗಳಾಗಿದ್ದು, ಅದು ನಮ್ಮ ಜೀವಕೋಶಗಳನ್ನು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಧಾಳಿಯಿಂದ ರಕ್ಷಿಸುತ್ತದೆ, ತನ್ಮೂಲಕ ನಮಗೆ ಎದುರಾಗಬಹುದಾದ ಹಲವಾರು ರೋಗಗಳಿಂದ ರಕ್ಷಣೆ ಒದಗಿಸುತ್ತವೆ. ನವಿಲುಕೋಸಿನಲ್ಲಿ ವಿಟಮಿನ್ ಬಿ 6 ಅಧಿಕ ಪ್ರಮಾಣದಲ್ಲಿದೆ, ಇದು ಪ್ರೋಟೀನುಗಳು ಜೀವ ರಾಸಾಯನಿಕ ಕ್ರಿಯೆಗೆ ಒಳಪಡಲು, ಕೆಂಪು ರಕ್ತ ಕಣಗಳ ಉತ್ಪಾದನೆ ಮತ್ತು ರೋಗನಿರೋಧಕ ಕ್ರಿಯೆ ಬಲಗೊಳಿಸುವುದು ಸೇರಿದಂತೆ ಇನ್ನೂ ಹಲವಾರು ಕಾರ್ಯಗಳಿಗೆ ಅಗತ್ಯವಾಗಿದೆ. ಅಷ್ಟೇ ಅಲ್ಲ, ನವಿಲುಕೋಸು ವಿಟಮಿನ್ ಸಿ ಯ ಅತ್ಯುತ್ತಮ ಮೂಲವೂ ಆಗಿದೆ, ಇದು ಬಿಳಿ ರಕ್ತ ಕಣಗಳ ಕಾರ್ಯವನ್ನು ಬೆಂಬಲಿಸುತ್ತದೆ ಮತ್ತು ಅಂತಿಮವಾಗಿ, ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಇನ್ನಷ್ಟು ಬಲಪಡಿಸುತ್ತದೆ.
  Published by:ranjumbkgowda1 ranjumbkgowda1
  First published: