• Home
  • »
  • News
  • »
  • lifestyle
  • »
  • Baby Care: ನಿಮ್ಮ ಮಗು ಚೆನ್ನಾಗಿ ಊಟ ಮಾಡುತ್ತಿಲ್ಲವೇ? ಇಲ್ಲಿದೆ ಸಲಹೆ

Baby Care: ನಿಮ್ಮ ಮಗು ಚೆನ್ನಾಗಿ ಊಟ ಮಾಡುತ್ತಿಲ್ಲವೇ? ಇಲ್ಲಿದೆ ಸಲಹೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Baby Care: ಶಿಶುಗಳು ತಮಗೆ ಬೇರೆ ಏನೋ ಹೊಸದನ್ನು ತಿನ್ನಿಸುತ್ತಿದ್ದಾರೆ ಅಂತ ಅರ್ಥ ಮಾಡಿಕೊಂಡರೂ ಸಹ ಸ್ವಲ್ಪ ಗೊಂದಲಮಯವಾಗಿ ಪುಟ್ಟ ಮಕ್ಕಳು ವರ್ತಿಸಬಹುದು.

  • Trending Desk
  • 3-MIN READ
  • Last Updated :
  • Share this:

‘ಏನಪ್ಪಾ ಇದು ಒಂದು ಗಂಟೆಯಿಂದ (Hour) ಅನ್ನದ ಬಟ್ಟಲು ಕೈಯಲ್ಲಿ ಹಿಡಿದುಕೊಂಡು ಮಗುವಿನ ಅಕ್ಕ ಪಕ್ಕ ತಿರುಗುತ್ತಾ ಗೊತ್ತಿರೋ ಎಲ್ಲಾ ಹಾಡುಗಳನ್ನು(Song) ಮತ್ತು ಕಥೆಗಳನ್ನು (Story) ಹೇಳಿದರೂ ಸಹ ಮಗು ಊಟ ಮಾಡುತ್ತಿಲ್ಲವಲ್ಲಾ’ ಅಂತ ಅನೇಕ ಮಂದಿ ತಾಯಂದಿರು (Mother) ಹೇಳುವುದನ್ನು ನಾವೆಲ್ಲಾರೂ ಕೇಳಿರುತ್ತೇವೆ. ಹೌದು ಕೆಲವು ಮಕ್ಕಳು ಅನ್ನದ ಬಟ್ಟಲು ನೋಡಿದ ತಕ್ಷಣವೇ ಖುಷಿ (Happy) ಪಡುತ್ತವೆ, ಇನ್ನೂ ಕೆಲವು ಮಕ್ಕಳು ಅನ್ನವನ್ನು ನೋಡಿದರೆ ಸಾಕು ದೂರ ಓಡುತ್ತವೆ (Run) ಅಂತ ಹೇಳಬಹುದು.


ಅದರಲ್ಲೂ ಮಗುವಿಗೆ 6 ತಿಂಗಳು ತುಂಬಿದಾಗ, ಮಗುವಿಗೆ ಘನ ಆಹಾರವನ್ನು ತಿನ್ನಿಸಲು ಶುರು ಮಾಡುತ್ತಾರೆ. ನಿಮ್ಮ ಪುಟ್ಟ ಮಗು ತಿಂದರೆ, ನಿಮಗೆ ತುಂಬಾನೇ ಖುಷಿ ಆಗುತ್ತದೆ. ಆದರೆ ಹೆಚ್ಚಿನ ಶಿಶುಗಳು ಆ ಬದಲಾವಣೆಯನ್ನು ಸುಲಭವಾಗಿ ಮತ್ತು ತ್ವರಿತವಾಗಿ ಸ್ವೀಕರಿಸುವುದಿಲ್ಲ ಎಂದು ಹೇಳಬಹುದು. ಶಿಶುಗಳು ತಮಗೆ ಬೇರೆ ಏನೋ ಹೊಸದನ್ನು ತಿನ್ನಿಸುತ್ತಿದ್ದಾರೆ ಅಂತ ಅರ್ಥ ಮಾಡಿಕೊಂಡರೂ ಸಹ ಸ್ವಲ್ಪ ಇದು ಗೊಂದಲಮಯ ಪ್ರಕ್ರಿಯೆಯಾಗಿದೆ ಎಂದು ಹೇಳಬಹುದು.


ಆ ವಯಸ್ಸಿನಲ್ಲಿ ಶಿಶುಗಳು ಹೊಸ ರುಚಿಗಳು, ಹೊಸ ವಿನ್ಯಾಸಗಳನ್ನು ನೋಡುತ್ತವೆ, ಆದರೆ ಕೆಲವೊಮ್ಮೆ ಅದನ್ನು ನಿರಾಕರಿಸುತ್ತವೆ. ಆದರೆ, ನಿಮ್ಮ ಮಗು ಏಕೆ ಆಹಾರ ತಿನ್ನುತ್ತಿಲ್ಲ ಎಂಬುದಕ್ಕೆ ಅನೇಕ ಕಾರಣಗಳಿವೆ. ಇಲ್ಲಿ ನಿಮ್ಮ ಮಗುವು ಆಹಾರವನ್ನು ಏಕೆ ನಿರಾಕರಿಸುತ್ತಿದೆ ಎಂಬುದಕ್ಕೆ ಕೆಲವು ಕಾರಣಗಳು ಇವೆ ಮತ್ತು ನಿಮ್ಮ ಮಗುವಿಗೆ ಹೇಗೆ ಊಟ ಮಾಡಿಸಬೇಕು ಎನ್ನುವುದರ ಬಗ್ಗೆ ಕೆಲವು ಸಲಹೆಗಳನ್ನು ಕೂಡ ನೀಡಲಾಗಿದೆ.




  • ನಿಮ್ಮ ಮಗು ಏಕೆ ಆಹಾರ ತಿನ್ನುತ್ತಿಲ್ಲ?


ನಿಮ್ಮ ಮಗು ಸರಿಯಾಗಿ ಊಟ ಮಾಡುತ್ತಿಲ್ಲ ಅಂತ ನೀವು ನೋಡಿದಾಗ ಇದು ಒಂದು ಸಮಸ್ಯೆ ಅಂತ ನಿಮಗೆ ಅನ್ನಿಸಬಹುದು. ನಿಮ್ಮ ಮಗುವು ಆಹಾರವನ್ನು ನಿರಾಕರಿಸಲು ಪ್ರಮುಖ ಕಾರಣಗಳು ಇಲ್ಲಿವೆ ನೋಡಿ.


1. ತುಂಬಾ ದ್ರವ ಆಹಾರ ನೀಡುವುದು


ನಿಮ್ಮ ಮಗುವಿಗೆ ಹೆಚ್ಚು ದ್ರವ ಆಹಾರ ನೀಡುವುದು ಆಹಾರವನ್ನು ನಿರಾಕರಿಸಲು ಒಂದು ಕಾರಣವಾಗಿರಬಹುದು. ಅದು ಹಣ್ಣಿನ ರಸವೇ ಆಗಿರಲಿ ಅಥವಾ ತಾಯಿಯ ಎದೆಹಾಲೇ ಆಗಿರಲಿ, ನೀವು ಘನ ಆಹಾರ ನೀಡುವ ಸ್ವಲ್ಪ ಮೊದಲು ನಿಮ್ಮ ಮಗುವಿಗೆ ಹೆಚ್ಚು ದ್ರವವನ್ನು ನೀಡಿದ್ದರೆ, ಮಗುವು ಆಹಾರವನ್ನು ನಿರಾಕರಿಸುತ್ತದೆ.


2. ಟಿವಿ ಹಾಕಿರುವುದು ಮತ್ತು ಹೊರಗಿನ ಶಬ್ದದಿಂದ ವಿಚಲಿತರಾಗುವುದು


ಟಿವಿ, ಹೊರಗಿನ ಶಬ್ದ, ಜೋರಾದ ಸಂಗೀತ ಮುಂತಾದ ಕೆಲವೊಂದು ಅಂಶಗಳು ನಿಮ್ಮ ಮಗುವನ್ನು ವಿಚಲಿತವಾಗಿಸಬಹುದು. ಶಿಶುಗಳು ತಮ್ಮ ಪರಿಸರವನ್ನು ವಿಭಿನ್ನವಾಗಿ ಸಂಸ್ಕರಿಸುತ್ತವೆ, ಮತ್ತು ಶಬ್ದದಷ್ಟು ಸರಳವಾದ ಅಂಶವು ಅವರ ಗಮನವನ್ನು ಆಹಾರದಿಂದ ದೂರ ಸೆಳೆಯುತ್ತದೆ.


3. ಈಗಾಗಲೇ ಹೊಟ್ಟೆ ತುಂಬಿರುವುದು


ಕೆಲವೊಮ್ಮೆ, ಮಗುವು ಊಟವನ್ನು ಮಾಡದಿರಬಹುದು ಇದಕ್ಕೆ ಕಾರಣ ನೀವು ಮಗುವಿನ ಹಿಂದಿನ ದಿನ ತಿನ್ನಿಸಿದ ತಿಂಡಿ ಅಥವಾ ಊಟದಿಂದ ಮಗುವಿನ ಹೊಟ್ಟೆ ತುಂಬಿರಬಹುದು. ನಿಮ್ಮ ಮಗುವು ತಿನ್ನಲು ನಿರಾಕರಿಸುತ್ತಿದ್ದರೆ, ಬಾಯಿಯನ್ನು ಮುಚ್ಚಿ ಪ್ರತಿರೋಧ ತೋರಿಸುತ್ತಿದ್ದರೆ ಮತ್ತು ಚಮಚವನ್ನು ದೂರ ತಳ್ಳುತ್ತಿದ್ದರೆ, ಮಗು ಈಗಾಗಲೇ ಸಾಕಷ್ಟು ಆಹಾರವನ್ನು ಸೇವಿಸಿದೆ ಎಂದರ್ಥವಾಗಿದೆ.


4. ಹೊಸದನ್ನು ಬಯಸುವುದಿಲ್ಲ


ಮಗುವು ನೀವು ನೀಡುತ್ತಿರುವ ಹೊಸ ಆಹಾರವನ್ನು ಇಷ್ಟಪಡದಿದ್ದರೆ, ಅವನು ಅದನ್ನು ನಿರಾಕರಿಸುವ ಸಾಧ್ಯತೆಯಿದೆ. ಪೋಷಕರಾಗಿ, ನೀವು ಈ ಪರಿಸ್ಥಿತಿಯನ್ನು ನಿಭಾಯಿಸಬಹುದು ಮತ್ತು ಈ ಸ್ಥಿತಿಯಿಂದ ಹೊಸ ಆಹಾರಕ್ಕೆ ಮಗುವ ಪರಿವರ್ತನೆಗೊಳ್ಳಲು ಸಮಯ ನೀಡಿ.


5. ಅಲರ್ಜಿ ಸಹ ಇರಬಹುದು


ನಿಮ್ಮ ಪುಟ್ಟ ಮಗುವಿಗೆ ಕೆಲವು ಆಹಾರಗಳಿಂದ ಅಲರ್ಜಿ ಸಹ ಇರಬಹುದು ಮತ್ತು ಈ ನಿರ್ದಿಷ್ಟ ವಸ್ತುವು ಮಗುವಿಗೆ ಒಳ್ಳೆಯದಲ್ಲ ಎಂದು ನಿಮಗೆ ಹೇಳಲು ಪ್ರಯತ್ನಿಸುತ್ತದೆ. ಮಗುವಿನ ವರ್ತನೆಯನ್ನು ಗಮನಿಸಿ, ಅಲರ್ಜಿಯ ಪ್ರತಿಕ್ರಿಯೆಯನ್ನು ಪರೀಕ್ಷಿಸಿ ಮತ್ತು ದೈಹಿಕ ತೊಂದರೆಯಲ್ಲಿದೆಯೇ ಎಂದು ಪರೀಕ್ಷಿಸಿ.


6. ಮಗುವಿನ ಚಟುವಟಿಕೆ


ನಿಮ್ಮ ಮಗುವಿನ ಹಸಿವು ಎಷ್ಟು ಸಕ್ರಿಯವಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಪ್ರತಿ ಆಹಾರದ ಮೊದಲು ಅಥವಾ ನಂತರ ಮಗುವಿನ ಚಟುವಟಿಕೆ ಹೇಗಿರುತ್ತದೆ ಅಂತ ಗಮನಿಸಬೇಕು. ದಿನವಿಡೀ ಸೂಕ್ತ ಮಧ್ಯಂತರಗಳಲ್ಲಿ ಸಾಕಷ್ಟು ಚಟುವಟಿಕೆಗಳು ಸ್ಥಳಾವಕಾಶ ಹೊಂದಿವೆ ಎಂದು ಖಚಿತಪಡಿಸಿಕೊಳ್ಳಿ. ಸಕ್ರಿಯವಾಗಿರುವ ಚಟುವಟಿಕೆಯಿಂದಿರುವ ಮಗುವು ಚೆನ್ನಾಗಿ ತಿನ್ನುತ್ತದೆ ಮತ್ತು ಕಡಿಮೆ ಸಕ್ರಿಯ ಮಗುವು ಆಹಾರವನ್ನು ನಿರಾಕರಿಸುತ್ತದೆ.


7. ಊಟದ ಸಮಯ


ನೀವು ಮಗುವಿಗೆ ಒಂದು ಊಟದ ಸಮಯವನ್ನು ನಿರ್ದಿಷ್ಟ ಪಡಿಸಿದ್ದೀರಾ ಅಂತ ನೋಡಿಕೊಳ್ಳಿ. ಏಕೆಂದರೆ ಸಮಯದ ಯಾವುದೇ ಬದಲಾವಣೆಯು ಅತಿಯಾದ ಹಸಿವು ಅಥವಾ ಹಸಿವಿನ ನಷ್ಟಕ್ಕೆ ಕಾರಣವಾಗಬಹುದು. ಮಗುವಿನ ಊಟದ ಸಮಯವನ್ನು ಎಂದಿಗೂ ಬದಲಾಯಿಸಬೇಡಿ.




  • ನಿಮ್ಮ ಮಗುವು ಚೆನ್ನಾಗಿ ಆಹಾರ ತಿನ್ನುವಂತೆ ಮಾಡಲು ಈ ಸಲಹೆಗಳನ್ನು ಅನುಸರಿಸಿ:


1. ಮಗುವನ್ನು ಸ್ವತಂತ್ರವಾಗಿರಲು ಅನುಮತಿಸಿ


ನಿಮ್ಮ ಮಗುವು ಸ್ವತಃ ತಾನೇ ಆಹಾರವನ್ನು ತಿನ್ನಲು ಇಷ್ಟ ಪಡುತ್ತಿದ್ದರೆ, ಅದಕ್ಕೆ ಅವಕಾಶ ನೀಡಿ ಮತ್ತು ಬಲವಂತವಾಗಿ ಆಹಾರವನ್ನು ನೀವು ತಿನ್ನಿಸಲು ಹೋಗಬೇಡಿ. ಮಗುವು ತನ್ನ ಆಹಾರವನ್ನು ಸ್ವತಃ ತಾನೇ ತಿನ್ನುತ್ತಿದ್ದರೆ, ಆಹಾರವನ್ನು ತಿನ್ನಲು ಮಗುವನ್ನು ಪ್ರೋತ್ಸಾಹಿಸಿ.


2. ಆಹಾರಗಳನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿ


ನಿಮ್ಮ ಮಗುವು ಆಹಾರವನ್ನು ಸೇವಿಸುವುದನ್ನು ನೋಡಲು ನೀವು ಬಯಸಿದರೆ, ನಂತರ ವಿವಿಧ ಆರೋಗ್ಯಕರ ಆಹಾರ ಆಯ್ಕೆಗಳನ್ನು ನೀಡಿ. ನಿಮ್ಮ ಮಗುವಿಗೆ ನೀವು ಅಡುಗೆ ಮಾಡುವ ಯಾವುದರೊಂದಿಗೂ ಕ್ರಿಯಾತ್ಮಕವಾಗಿಸಿ. ಬಣ್ಣಬಣ್ಣದ ತರಕಾರಿಗಳು ಮತ್ತು ಹಣ್ಣುಗಳೊಂದಿಗೆ ಪ್ರಯೋಗ ಮಾಡಿ ಮಕ್ಕಳು ಬಣ್ಣಕ್ಕೆ ಆಕರ್ಷಿತರಾಗುತ್ತಾರೆ ಮತ್ತು ಅವರು ಆಕರ್ಷಕವಾಗಿ ಕಾಣುವ ಆಹಾರಗಳನ್ನು ತಿನ್ನುತ್ತವೆ.


3. ಬೆದರಿಕೆಗಳು ಕೆಲಸ ಮಾಡುವುದಿಲ್ಲ


ಊಟ ಮಾಡಲು ಮಗುವನ್ನು ಬೆದರಿಸದಿರಿ ಇದರಿಂದ ಮಕ್ಕಳು ಇನ್ನಷ್ಟು ಹೆಚ್ಚು ಹಠಮಾರಿಯಾಗುತ್ತಾರೆ. ಇಂತಹ ಬೆದರಿಕೆಗಳಿಗೆ ನಿಮ್ಮ ಮಗು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.


4. ಆಮಿಷ ತೋರಿಸಬೇಡಿ


ಬೆದರಿಕೆಯು ಹೇಗೆ ಕೆಲಸ ಮಾಡುವುದಿಲ್ಲವೋ, ಮಕ್ಕಳಿಗೆ ಎಲ್ಲಾ ಸಮಯದಲ್ಲಿ ಈ ಆಮಿಷ ತೋರಿಸುವುದು ಸಹ ಕೆಲಸ ಮಾಡುವುದಿಲ್ಲ. "ಮತ್ತೊಂದು ತುತ್ತು ತಿಂದರೆ ನಿನಗೆ ಕುಕೀ ಕೊಡುತ್ತೇನೆ" ಎಂದೆಲ್ಲಾ ಹೇಳುವ ಪೋಷಕರಲ್ಲಿ ನೀವೂ ಒಬ್ಬರಾಗಿದ್ದರೆ, ಅದನ್ನು ಮೊದಲು ಬಿಟ್ಟುಬಿಡಿ.


5. ಕುಟುಂಬದ ಸದಸ್ಯರೆಲ್ಲಾ ಒಟ್ಟಿಗೆ ಊಟ ಮಾಡಿ


ಒಬ್ಬರೇ ಊಟ ಮಾಡುವ ಬದಲಿಗೆ ಮಗುವನ್ನು ತನ್ನ ಒಡಹುಟ್ಟಿದವರ ಅಥವಾ ತಂದೆ ತಾಯಿಯ ಊಟ ಮಾಡುವ ಸಮಯದಲ್ಲಿಯೇ ಊಟ ಮಾಡುವುದನ್ನು ಅಭ್ಯಾಸ ಮಾಡಿಸಿ. ನಿಮ್ಮ ಪುಟ್ಟ ಮಗುವು ಒಡಹುಟ್ಟಿದವರು ಅಥವಾ ಪೋಷಕರು ಆಹಾರವನ್ನು ತಿನ್ನುವುದನ್ನು ನೋಡಿದರೆ, ಅದು ಸಹ ಹಾಗೆಯೇ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.


6. ಆಹಾರವನ್ನು ನಿರಾಕರಿಸಿದರೆ ಅದನ್ನು ಮೆನುವಿನಿಂದ ತೆಗೆದುಹಾಕಬೇಡಿ


ಮಗು ನಿರ್ದಿಷ್ಟ ಆಹಾರವನ್ನು ಇಷ್ಟಪಡುವುದಿಲ್ಲ ಎಂದು ದೃಢವಾಗಿ ಹೇಳಿದರೆ, ಅದನ್ನು ಆಹಾರ ಪಟ್ಟಿಯಿಂದ ತೆಗೆದುಹಾಕಬೇಡಿ. ಶಿಶುಗಳು ನಿಧಾನವಾಗಿ ಹೊಸ ಅಭಿರುಚಿಗಳಿಗೆ ಹೊಂದಿಕೊಳ್ಳುತ್ತವೆ, ಮತ್ತು ಅವರಿಗೆ ಯಾವುದೇ ಆಯ್ಕೆಗಳಿಲ್ಲ ಎಂದು ಅರಿತುಕೊಳ್ಳುವವರೆಗೆ ಮತ್ತು ಆ ಆಹಾರವನ್ನು ಮಗುವು ಮತ್ತೊಮ್ಮೆ ಪ್ರಯತ್ನಿಸುವವರೆಗೂ ನೀವು ಅವರ ಆಹಾರದಲ್ಲಿ ಅದೇ ಆಹಾರಗಳನ್ನು ಪದೇ ಪದೇ ಪರಿಚಯಿಸಬೇಕು. ನಿಮ್ಮ ಮಗುವು ಈ ರೀತಿಯಾಗಿ ಹೆಚ್ಚಿನ ಆರೋಗ್ಯಕರ ಆಹಾರಗಳಿಗೆ ಒಗ್ಗಿಕೊಳ್ಳುತ್ತದೆ.


ಇದನ್ನೂ ಓದಿ: ಈ ಆಹಾರಗಳನ್ನು ಪ್ರತಿದಿನ ತಿಂದ್ರೆ ನಿಮ್ಮ ಶ್ವಾಸಕೋಶ ಸೇಫ್ ಆಗಿರುತ್ತೆ

7. ಆಹಾರದ ವಿನ್ಯಾಸ ನಿಧಾನವಾಗಿ ಬದಲಿಸಿ


ನೀವು ಘನ ಆಹಾರಕ್ಕೆ ಬದಲಾದ ನಂತರ, ನೀವು ನಿಧಾನವಾಗಿ ವಿನ್ಯಾಸಗಳನ್ನು ಪರಿಚಯಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಮಗುವಿಗೆ ದೊಡ್ಡ ತುತ್ತು ಅಥವಾ ಹಣ್ಣಿನ ತುಂಡುಗಳನ್ನು ನೀಡಬೇಡಿ. ಮಗು ಅವುಗಳನ್ನು ತುಂಡರಿಸಲು ಸಾಧ್ಯವಾಗುವುದಿಲ್ಲ. ನೀವು ಈಗಾಗಲೇ ಸೂಪ್‌ಗಳು ಮತ್ತು ರಸಗಳನ್ನು ಪರಿಚಯಿಸಿದ್ದರೆ ಮಗುವು ಇನ್ನೂ ಬೇಯಿಸಿದ ಇತರ ಘನ ಆಹಾರಗಳನ್ನು ತಿನ್ನಲು ಸಿದ್ಧವಾಗಿಲ್ಲದಿದ್ದರೆ, ನೀವು ತಾತ್ಕಾಲಿಕವಾಗಿ ಸೂಪ್ ಅನ್ನು ಮಗುವಿಗೆ ನೀಡಬಹುದು ನಂತರ ಘನ ಆಹಾರವನ್ನು ಒಂದೊಂದಾಗಿ ಮಗುವಿಗೆ ಮತ್ತೆ ಪರಿಚಯಿಸಬಹುದು.


8. ಮಗುವು ಹೇಗೆ ಆಹಾರ ತಿನ್ನುತ್ತದೆಯೋ ಹಾಗೆ ತಿನ್ನಲು ಬಿಡಿ


ಊಟದ ಸಮಯದಲ್ಲಿ ನಿಮ್ಮ ಮಗುವು ಊಟವನ್ನು ತಮಗೆ ಹೇಗೆ ಬೇಕೋ ಹಾಗೆ ತಿನ್ನಲು ಪ್ರಯತ್ನಿಸುತ್ತದೆ. ಪ್ರತಿ ಊಟದ ಸಮಯವು ಮಗುವಿಗೆ ರೋಮಾಂಚನಕಾರಿಯಾಗಿ ತೋರಬೇಕು. ಅವರು ಬಯಸಿದ ರೀತಿಯಲ್ಲಿ ಅವರು ಆಹಾರಗಳನ್ನು ತಿನ್ನಲು ಬಿಡಬೇಕು.


9. ಆಹಾರ ಇಷ್ಟವಾಗದಿದ್ದರೆ, ಅದರ ಬಣ್ಣ ಬದಲಾಯಿಸಿ


ಅವರು ಒಂದು ನಿರ್ದಿಷ್ಟ ಆಹಾರವನ್ನು ಇಷ್ಟಪಡದಿದ್ದರೆ, ಅದರ ನೋಟವನ್ನು ಬದಲಾಯಿಸಿ ಮತ್ತು ಅದರ ಬಗ್ಗೆ ಅವರನ್ನು ಉತ್ತೇಜಿಸಿ. ಅವರು ಇಷ್ಟಪಡದ ಆಹಾರಗಳನ್ನು ಅವರು ಇಷ್ಟಪಡುವ ಆಹಾರಗಳಲ್ಲಿ ಮರೆಮಾಡಿ. ಅವರು ಇಷ್ಟಪಡದ ಆಹಾರಗಳನ್ನು ಗುರುತಿಸಲು ಅಥವಾ ಬೇರ್ಪಡಿಸಲು ಸಾಧ್ಯವಾಗದಂತೆ ಕ್ರಿಯಾತ್ಮಕವಾಗಿ ಅವರಿಗೆ ಆಹಾರಗಳನ್ನು ನೀಡಿ.


10. ತಜ್ಞರ ಸಲಹೆ ಪಡೆಯಿರಿ


ನಿಮ್ಮ ಮಗು 2 ವರ್ಷ ವಯಸ್ಸಿನದಾಗಿದ್ದು, ಆಹಾರವನ್ನು ತಿನ್ನಲು ನಿರಾಕರಿಸಿದರೆ ಕೂಡಲೇ ತಜ್ಞರ ಸಲಹೆ ಪಡೆಯುವುದು ಉತ್ತಮ. ಪೌಷ್ಟಿಕಾಂಶ ತಜ್ಞರು ಅಥವಾ ಮಕ್ಕಳ ತಜ್ಞರಾಗಿರಬಹುದು, ಅವರು ನಿಮ್ಮ ಮಗುವಿಗೆ ಆಹಾರದ ಅವಶ್ಯಕತೆಗಳನ್ನು ಅವಲಂಬಿಸಿ ಸೂಕ್ತವಾದ ಪರಿಹಾರವನ್ನು ಸೂಚಿಸಬಹುದು.


ನಿಮ್ಮ ಮಗುವಿನ ಆಹಾರ ಅಭ್ಯಾಸಗಳು ಹೆಚ್ಚಾಗಿ ಮಗುವಿಗೆ ಎಷ್ಟು ಹಸಿವಾಗಿದೆ ಮತ್ತು ಅದು ಯಾವ ಆಹಾರವನ್ನು ಇಷ್ಟಪಡುತ್ತಾದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ, ನೀವು ನಿಮ್ಮ ಮಗುವನ್ನು ವೈದ್ಯರ ಅಥವಾ ಮಕ್ಕಳ ತಜ್ಞರ ಬಳಿ ಕರೆದುಕೊಂಡು ಹೋಗುವುದು ಒಳ್ಳೆಯದು.


ಇದನ್ನೂ ಓದಿ: ಮೇಕಪ್ ಮಾಡಿ ಮುಖದ ಮೇಲೆ ಮೊಡವೆ ಆಗಿದ್ರೆ ಇಲ್ಲೊಂದು ಹ್ಯಾಕ್ಸ್​ ಇದೆ

ನೀವು ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?


ನಿಮ್ಮ ಮಗುವು ಆಹಾರವನ್ನು ನಿರಾಕರಿಸಿದಾಗ ಕೆಲವು ದಿನಗಳವರೆಗೆ ಅವರ ಆಹಾರ ಪದ್ಧತಿಯ ಮೇಲೆ ನಿಗಾ ಇರಿಸಿ. ಇದು ಕೆಲವೇ ದಿನಗಳು ಆಗಿದ್ದರೆ, ಗಾಬರಿಯಾಗಬೇಡಿ. ಕೆಲವು ದಿನಗಳ ನಂತರ, ಮಗುವು ಇನ್ನೂ ಆರೋಗ್ಯಕರ ಆಹಾರವನ್ನು ತಿನ್ನಲು ನಿರಾಕರಿಸಿದರೆ, ಮಕ್ಕಳ ತಜ್ಞರ ಬಳಿಗೆ ಕರೆದೊಯ್ಯುವುದು ಉತ್ತಮ. ಅಲರ್ಜಿಗಳ ಸಂದರ್ಭದಲ್ಲಿ, ನೀವು ನಿಮ್ಮ ಮಗುವನ್ನು ತಕ್ಷಣವೇ ವೈದ್ಯರ ಬಳಿಗೆ ಕರೆದೊಯ್ಯಬೇಕು.


ನಿಮ್ಮ ಮಗುವಿನಲ್ಲಿ ಈ ರೋಗಲಕ್ಷಣಗಳನ್ನು ನೀವು ನೋಡಿದರೆ, ಮಕ್ಕಳ ತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು:


- ವಾಂತಿ


- ಮಲದಲ್ಲಿ ರಕ್ತ


- ಬಲವಂತದ ವಾಂತಿ


- ನಿರ್ಜಲೀಕರಣ


- ವಿಪರೀತ ತೂಕ ನಷ್ಟ


- ನಿರಂತರ ಅತಿಸಾರ


- ಕಿಬ್ಬೊಟ್ಟೆಯ ನೋವು


ನಿಮ್ಮ ಮಗು ಆಹಾರವನ್ನು ನಿರಾಕರಿಸಿದರೆ, ತುಂಬಾ ಚಿಂತಿಸುವ ಅಗತ್ಯವಿಲ್ಲ. ಇದಕ್ಕೆ ಒಂದು ಸಾಮಾನ್ಯ ಕಾರಣವೆಂದರೆ ನಿಮ್ಮ ಪುಟ್ಟ ಮಗುವು ಕೆಲವು ಆಹಾರಗಳನ್ನು ಇಷ್ಟಪಡುವುದಿಲ್ಲ ಎಂಬುದನ್ನು ನಿಮಗೆ ತಿಳಿಸುತ್ತಿದೆ. ಆದ್ದರಿಂದ, ನಿಮ್ಮ ಮಗು ಆಹಾರವನ್ನು ನಿರಾಕರಿಸಿದಾಗ ವಿಚಲಿತರಾಗಬೇಡಿ.


First published: