• Home
 • »
 • News
 • »
 • lifestyle
 • »
 • Morning Breakfast: ಬೆಳಗಿನ ತಿಂಡಿಗೆ ಆರೋಗ್ಯಕರ ಸೋಯಾ ವೆಜ್ ಪ್ಯಾನ್‌ಕೇಕ್‌ ಮಾಡುವುದು ಹೇಗೆ?

Morning Breakfast: ಬೆಳಗಿನ ತಿಂಡಿಗೆ ಆರೋಗ್ಯಕರ ಸೋಯಾ ವೆಜ್ ಪ್ಯಾನ್‌ಕೇಕ್‌ ಮಾಡುವುದು ಹೇಗೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಪ್ಯಾನ್‌ ಕೇಕ್‌ ಸೇವನೆ ಮಾಡಲು ಇಷ್ಟ ಪಡುತ್ತಾರೆ. ಯಾಕಂದ್ರೆ ಅವುಗಳನ್ನು ತ್ವರಿತವಾಗಿ ತಯಾರಿಸಲಾಗುತ್ತದೆ. ಇದರಲ್ಲಿ ಕೊಬ್ಬು ತುಂಬಾ ಹೆಚ್ಚಿಗೆ ಇರುತ್ತದೆ. ಆದರೆ ಇಂದು ನಾವು ನಿಮಗೆ ರುಚಿ ಮತ್ತು ಆರೋಗ್ಯಪೂರ್ಣ ಸಂಯೋಜನೆಯಾದ ಸೋಯಾ ವೆಜ್ ಪ್ಯಾನ್‌ಕೇಕ್‌ ಪಾಕ ವಿಧಾನದ ಬಗ್ಗೆ ನೋಡೋಣ.

ಮುಂದೆ ಓದಿ ...
 • Share this:

  ಸಾಮಾನ್ಯವಾಗಿ ಪ್ರತೀ ಮನೆಗಳಲ್ಲಿ (Every Home) ಬೆಳಗಿನ ಉಪಾಹಾರಕ್ಕಾಗಿ (Morning Breakfast) ಹಲವು ಪದಾರ್ಥಗಳನ್ನು (Ingredients) ತಯಾರಿಸುತ್ತಾರೆ. ಕೆಲವರು ಬೆಳಗಿನ ತಿಂಡಿಯನ್ನು ನಿರ್ಲಕ್ಷ್ಯ ಮಾಡುತ್ತಾರೆ. ಇನ್ನು ಕೆಲವರು ಬೆಳಗಿನ ತಿಂಡಿಯಲ್ಲಿ ಆರೋಗ್ಯಕರ (Healthy) ಹಲವು ಪದಾರ್ಥಗಳನ್ನು ಸೇವನೆ ಮಾಡಲು ಹುಡುಕಾಡುತ್ತಾರೆ. ಕೆಲವು ಆರೋಗ್ಯಕರ ಪದಾರ್ಥಗಳ ಸೇವನೆ ನಿಮ್ಮ ದೇಹದ ಆರೋಗ್ಯಕರ ಅಂಶಗಳನ್ನು ನೀಡುತ್ತದೆ. ಇನ್ನು ಪ್ರತಿಯೊಬ್ಬರೂ ದಿನವೂ ಬೆಳಗಿನ ತಿಂಡಿ ಬೇರೆ ಬೇರೆ ಆಗಿರಬೇಕೆಂದು ಬಯಸುತ್ತಾರೆ. ದಿನವೂ ಒಂದೇ ರೀತಿಯ ಆಹಾರ ಸೇವನೆ ಮಾಡಲು ಬೋರ್ ಆಗುತ್ತದೆ. ಹಾಗಾಗಿ ರುಚಿಕರ ರೆಸಿಪಿಗಳನ್ನು ಹುಡುಕುತ್ತಲೇ ಇರುತ್ತಾರೆ. ಆದರೆ ಇದು ಎಂದಿಗೂ ಮುಗಿಯದ ಪ್ರಕ್ರಿಯೆ.


  ರುಚಿಕರ ರೆಸಿಪಿ


  ಎಲ್ಲರೂ ಯಾವಾಗಲೂ ರುಚಿಕರವಾದ ಏನನ್ನಾದರೂ ತಿನ್ನಲು ಇಷ್ಟ ಪಡುತ್ತಾರೆ. ಜೊತೆಗೆ ಅದು ಹೆಲ್ದೀ ಕೂಡ ಆಗಿರಬೇಕು ಎಂದುಕೊಳ್ತಾರೆ. ಆದರೆ ಅಂತಹ ಪದಾರ್ಥಗಳನ್ನು ಹುಡುಕಾಡಬೇಕಾಗುತ್ತದೆ. ನೀವು ಇತ್ತೀಚಿನ ದಿನಗಳಲ್ಲಿ ಆರೋಗ್ಯಕರ ಉಪಹಾರ ಆಯ್ಕೆಗಳ ಕೊರತೆ ಎದುರಿಸುತ್ತಿದ್ದರೆ ಡೋಂಟ್ ವರಿ.


  ಯಾಕೆಂದರೆ ನಾವು ಇವತ್ತು ಆರೋಗ್ಯಕರ ಬೆಳಗಿನ ತಿಂಡಿಗೆ ಸೋಯಾ ವೆಜ್ ಪ್ಯಾನ್‌ಕೇಕ್‌ ರೆಸಿಪಿ ತಂದಿದ್ದೇವೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಪ್ಯಾನ್‌ ಕೇಕ್‌ ಸೇವನೆ ಮಾಡಲು ಇಷ್ಟ ಪಡುತ್ತಾರೆ. ಯಾಕಂದ್ರೆ ಅವುಗಳನ್ನು ತ್ವರಿತವಾಗಿ ತಯಾರಿಸಲಾಗುತ್ತದೆ.


  ಇದನ್ನೂ ಓದಿ: ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಬೇಕು ಎಂದರೆ ಈ ಆಹಾರಗಳನ್ನು ಸೇವಿಸಿ


  ಇದರಲ್ಲಿ ಕೊಬ್ಬು ತುಂಬಾ ಹೆಚ್ಚಿಗೆ ಇರುತ್ತದೆ. ಇಂದು ನಾವು ನಿಮಗೆ ರುಚಿ ಮತ್ತು ಆರೋಗ್ಯಪೂರ್ಣ ಸಂಯೋಜನೆಯಾದ ಸೋಯಾ ವೆಜ್ ಪ್ಯಾನ್‌ಕೇಕ್‌ ಪಾಕ ವಿಧಾನದ ಬಗ್ಗೆ ನೋಡೋಣ.


  ಸೋಯಾ ವೆಜ್ ಪ್ಯಾನ್‌ಕೇಕ್‌ ಪ್ರಯೋಜನಗಳು


  ಸೋಯಾ ವೆಜ್ ಪ್ಯಾನ್‌ ಕೇಕ್‌ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೂ ಇದರಲ್ಲಿರುವ ಪ್ರೊಟೀನ್ ಪ್ರಮಾಣ ದೇಹಕ್ಕೆ ಉತ್ತಮ. ಹಾಗಾಗಿ ಜಿಮ್‌ಗೆ ಹೋಗಿ ತಮ್ಮ ದೈನಂದಿನ ಪ್ರೋಟೀನ್ ಸೇವನೆ ಪೂರೈಸಲು ಹೆಣಗಾಡುವವರಿಗೆ ಈ ಪಾಕವಿಧಾನ ಸೂಕ್ತವಾಗಿದೆ.


  ಜೊತೆಗೆ ಸೋಯಾಬೀನ್ ಕಾರ್ಬೋಹೈಡ್ರೇಟ್ ಮತ್ತು ಕೊಬ್ಬು ಎರಡರ ಉತ್ತಮ ಮೂಲವಾಗಿದೆ. ಅವು ಐಸೊಫ್ಲೇವೊನ್‌ಗಳಂತಹ ವಿವಿಧ ಜೀವಸತ್ವ, ಖನಿಜ ಮತ್ತು ಸಸ್ಯ ಸಂಯುಕ್ತಗಳ ಸಮೃದ್ಧ ಮೂಲವೂ ಆಗಿದೆ. ಹಾಗಿದ್ದರೆ ಸೋಯಾ ವೆಜ್ ಪ್ಯಾನ್‌ಕೇಕ್‌ ಮಾಡುವುದು ಹೇಗೆ ಎಂದು ಇಲ್ಲಿ ತಿಳಿಯೋಣ.


  ಸೋಯಾ ವೆಜ್ ಪ್ಯಾನ್‌ಕೇಕ್‌ ತಯಾರಿಸಲು ಬೇಕಾದ ಪದಾರ್ಥಗಳು


  ಒಂದೂವರೆ ಕಪ್ ನೆರೆಸಿದ ಸೋಯಾ ಚಂಕ್ಸ್, ಮುಕ್ಕಾಲು ಕಪ್ ನೆನೆಸಿದ ಅಕ್ಕಿ, ಒಂದೂವರೆ ಕಪ್ ಮೊಸರು, ಎರಡು ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ, ಒಂದು ಟೀಸ್ಪೂನ್ ತುರಿದ ಶುಂಠಿ, ಅರ್ಧ ಕಪ್ ಸಣ್ಣದಾಗಿ ಹೆಚ್ಚಿದ ಕ್ಯಾಪ್ಸಿಕಂ, ಅರ್ಧ ಕಪ್ ತುರಿದ ಕ್ಯಾರೆಟ್, ಒಂದು ಸಣ್ಣಗೆ ಹೆಚ್ಚಿದ ಟೊಮೆಟೊ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಟೀಸ್ಪೂನ್ ಜೀರಿಗೆ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಅಡುಗೆ ಸೋಡಾ.


  ಸೋಯಾ ವೆಜ್ ಪ್ಯಾನ್‌ ಕೇಕ್‌ ತಯಾರಿಸುವ ವಿಧಾನ


  ಮೊದಲು ಹಿಟ್ಟನ್ನು ತಯಾರಿಸುವ ವಿಧಾನ


  ಸೋಯಾಬೀನ್ ಮತ್ತು ಅಕ್ಕಿಯನ್ನು ಪ್ರತ್ಯೇಕವಾಗಿ ನೀರಿನಲ್ಲಿ 2 ಗಂಟೆಗಳ ಕಾಲ ನೆನೆಸಿ. ನಂತರ ಸೋಯಾಬೀನ್ ಅನ್ನು ಹಿಸುಕಿ ಮಿಕ್ಸರ್ ಜಾರ್‌ ಗೆ ಹಾಕಿ ರುಬ್ಬಿ. ನಂತರ ಒಂದು ತಟ್ಟೆಗೆ ಹೊರ ತೆಗೆಯಿರಿ. ಮಿಕ್ಸರ್ ಜಾರ್‌ಗೆ ನೆನೆಸಿದ ಅಕ್ಕಿ, ಮೊಸರು, ಹಸಿಮೆಣಸಿನಕಾಯಿ ಮತ್ತು ಶುಂಠಿ ಹಾಕಿ. ಅವುಗಳನ್ನು ನುಣ್ಣಗೆ ರುಬ್ಬಿರಿ.


  ಒಂದು ಬಟ್ಟಲಿನಲ್ಲಿ ಅಕ್ಕಿ ಪೇಸ್ಟ್ ಮತ್ತು ರುಬ್ಬಿದ ಸೋಯಾಬೀನ್, ಸಣ್ಣದಾಗಿ ಕೊಚ್ಚಿದ ಕ್ಯಾಪ್ಸಿಕಂ, ತುರಿದ ಕ್ಯಾರೆಟ್, ಸಣ್ಣದಾಗಿ ಕೊಚ್ಚಿದ ಟೊಮೆಟೊ, ಉಪ್ಪು, ಜೀರಿಗೆ ಮತ್ತು ಕೊಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದರೆ ಒಂದು ಚಮಚ ನೀರು ಸೇರಿಸಿ ಮತ್ತೆ ಮಿಶ್ರಣ ಮಾಡಿ.


  ಹಿಟ್ಟು ಚೆನ್ನಾಗಿ ಮಿಶ್ರಣವಾದ ನಂತರ ಕಾಲು ಟೀಸ್ಪೂನ್ಗಿಂತ ಕಡಿಮೆ ಅಡಿಗೆ ಸೋಡಾ ಬೆರೆಸಿ ಮತ್ತು ಮಿಶ್ರಣ ಮಾಡಿ. ಈಗ ಪ್ಯಾನ್ ಕೇಕ್ ಹಿಟ್ಟು ಸಿದ್ಧವಾಗಿದೆ.


  ಇದನ್ನೂ ಓದಿ: ಪೈಲ್ಸ್ ಸಮಸ್ಯೆ ಹೊಂದಿರುವವರು ಈ ಆಹಾರ ದೂರವಿರಿ!


  ಸೋಯಾ ವೆಜ್ ಪ್ಯಾನ್‌ ಕೇಕ್‌ ತಯಾರಿಸುವ ಬಗೆ


  ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಅದಕ್ಕೆ 2 ಚಮಚ ಹಿಟ್ಟು ಹಾಕಿ ರೌಂಡ್ ಆಕಾರಕ್ಕೆ ತನ್ನಿ. ಈಗ ಅದನ್ನು ಮುಚ್ಚಿ. ಮತ್ತು ಕಡಿಮೆ ಮಧ್ಯಮ ಉರಿಯಲ್ಲಿ ಎರಡು ನಿಮಿಷ ಬೇಯಿಸಿ. ಎರಡು ನಿಮಿಷಗಳ ನಂತರ  ಸ್ವಲ್ಪ ಎಣ್ಣೆ ಸಿಂಪಡಿಸಿ ಪ್ಯಾನ್ ಕೇಕ್ ನ ಮತ್ತೊಂದು ಬದಿಯನ್ನು ಚೆನ್ನಾಗಿ ಬೇಯಿಸಿ. ನಂತರ ತಟ್ಟೆಗೆ ಹಾಕಿ. ಈಗ ನಿಮ್ಮ ನೆಚ್ಚಿನ ಸೋಯಾ ವೆಜ್ ಪ್ಯಾನ್‌ ಕೇಕ್‌ ಸಿದ್ಧವಾಗಿದೆ.

  Published by:renukadariyannavar
  First published: