Breakfast Recipe: ಆರೋಗ್ಯಕ್ಕೂ ಉತ್ತಮ ಈ ಮಿಕ್ಸ್ ತರಕಾರಿ ದೋಸೆ - ನೀವೂ ಟ್ರೈ ಮಾಡಿ

Mix Vegetables Dosa Recipe: ಈಗ ದೋಸೆ ಹಿಟ್ಟನ್ನು ಒಂದು ಸೌಟಿನಲ್ಲಿ ತೆಗೆದುಕೊಂಡು ಹಿಟ್ಟು ಕಾವಲಿಯ ಎಲ್ಲಾ ಕಡೆಗೆ ಆವರಿಸುವಂತೆ ಹಾಕಿ. ಹೆಚ್ಚು ತೆಳುವಾಗಿರುವಂತೆ ಮಾಡಿ. ಅಗತ್ಯ ಎನಿಸಿದರೆ ಒಂದು ಚಮಚ ಎಣ್ಣೆಯನ್ನು ಅಂಚುಗಳಿಗೆ ಹಾಕಬಹುದು. ಈ ದೋಸೆಯನ್ನು ಮುಚ್ಚಳದಿಂದ ಮುಚ್ಚಿ ಸುಮಾರು ಒಂದರಿಂದ ಎರಡು ನಿಮಿಷ ಬೇಯಲು ಬಿಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತದ(South India) ಅತ್ಯಂತ ಜನಪ್ರಿಯ ತಿಂಡಿ(Breakfast) ಅಂದರೆ ದೋಸೆ(Dosa). ದೋಸೆಯಲ್ಲಿಯೇ ಹಲವಾರು ವಿಧಗಳನ್ನು ಮಾಡಲಾಗುತ್ತದೆ. ಮಧ್ಯಾಹ್ನದ ಊಟಕ್ಕೂ ಸಹ ಇದನ್ನು ಬೇಡವೆನ್ನುವವರಿಲ್ಲ. ದೋಸೆಗಳಲ್ಲಿ ಅಪಾರವಾದ ವಿಧಗಳಿವೆ. ಒಂದು ರಾತ್ರಿ ನೆನೆಸಿಡಬೇಕಾದ ಉದ್ದಿನ ದೋಸೆಯಿಂದ ಹಿಡಿದು ತಕ್ಷಣ ಮಾಡಬಹುದಾದ ಮೈದಾಹಿಟ್ಟಿನ ದೋಸೆ ಹಾಗೂ ನೀರುದೋಸೆ ಹೀಗೆ ಹಲವಾರು ವಿಧಗಳಿದೆ. ಇಂದು ದೋಸೆ ಹಿಟ್ಟು ಸಿದ್ಧ ರೂಪದಲ್ಲಿ ಅಂಗಡಿಗಳಲ್ಲಿ ಸಿಗುತ್ತಿರುವ ಕಾರಣ ನೆನೆಸಿಟ್ಟು ರುಬ್ಬುವ ತೊಂದರೆಯೇ ಇಲ್ಲ. ಆದರೆ ಮನೆಯಲ್ಲಿಯೇ ಅಕ್ಕಿ, ಉದ್ದಿನಬೇಳೆಯನ್ನು ನೆನೆಸಿಟ್ಟು ಮರುದಿನ ಬೆಳಿಗ್ಗೆ ರುಬ್ಬುವ ಮೂಲಕ ಹೆಚ್ಚಿನ ಕಷ್ಟವಿಲ್ಲದೇ ರುಚಿಕರ ದೋಸೆ ತಯಾರಿಸಬಹುದು.

ಹಿಂದಿನಿಂದಲೂ ಮಸಾಲೆ ದೋಸೆ ಎಲ್ಲರಿಗೂ ಇಷ್ಟ. ಮಸಾಲೆಯನ್ನು ಕೊಂಚ ಬದಲಿಸುವ ಮೂಲಕ ದೋಸೆಯ ರುಚಿಯನ್ನ ಭಿನ್ನವಾಗಿಸಿ ಇನ್ನಷ್ಟು ರುಚಿಕರವಾಗಿಸಬಹುದು. ಇನ್ನು ಕೆಲವರಿಗೆ ದೋಸೆ ಎಂದರೆ ಎಣ್ಣೆ ಜಾಸ್ತಿ ಎನ್ನುತ್ತಾರೆ. ಆದರೆ ಎಲ್ಲಾ ತರಕಾರಿಗಳನ್ನು ಸೇರಿಸಿ ದೋಸೆ ಮಾಡಿದರೆ ಅದರ ರುಚಿಯೇ ಬೇರೆ. ಈ ತರಕಾರಿ ದೋಸೆಯನ್ನು ಹೆಚ್ಚಿನ ಮನೆಗಳಲ್ಲಿ ಮಾಡುವುದಿಲ್ಲ. ಆದರೆ ಅದು ಹೆಚ್ಚು ರುಚಿಕರವಾಗಿರುತ್ತದೆ. ಹಾಗಾದ್ರೆ ಮಿಕ್ಸ್ ತರಕಾರಿ ದೋಸೆ ಮಾಡುವುದು ಹೇಗೆ ಎಂಬುದು ಇಲ್ಲಿದೆ.

ಮಿಕ್ಸ್ ತರಕಾರಿ ದೋಸೆ ಮಾಡಲು ಬೇಕಾಗಿರುವ ಸಾಮಾಗ್ರಿಗಳು

ಕ್ಯಾರೆಟ್​

ಬೀಟ್​ರೂಟ್​

ರುಬ್ಬಿದ ದೋಸೆ ಹಿಟ್ಟು  2½ ಕಪ್

ಈರುಳ್ಳಿ - 3 (2 ಮಧ್ಯಮ ಮತ್ತು 1 ಚಿಕ್ಕ).

ಎಣ್ಣೆ - 2 ಚಿಕ್ಕಚಮಚ

ಜೀರಿಗೆ - 1½ ಚಮಚ

ಇದನ್ನೂ ಓದಿ: ಒಂದೇ ರೀತಿ ಇಡ್ಲಿ ತಿನ್ನೋದು ಸಾಕು ಈ ಪಾಲಕ್ ಇಡ್ಲಿ ಎಷ್ಟು ರುಚಿಕರ ನೋಡಿ

ಬೆಳ್ಳುಳ್ಳಿ- 3 ರಿಂದ 4 ಎಸಳು(ಚಿಕ್ಕದಾಗಿ ಹೆಚ್ಚಿಕೊಳ್ಳಿ)

ಕೊತ್ತಂಬರಿ ಎಲೆಗಳು- ಸ್ವಲ್ಪ ಚಿಕ್ಕದಾಗಿ ಹೆಚ್ಚಿಕೊಳ್ಳಿಕೆಂಪು

ಮೆಣಸಿನ ಪುಡಿ - 1½ ಚಮಚ (ಕಾಶ್ಮೀರಿ ಚಿಲ್ಲಿ ಪೌಡರ್ ಹೆಚ್ಚು ಉತ್ತಮ)

ಹಸಿಮೆಣಸು - 2 (ಚಿಕ್ಕದಾಗಿ ಹೆಚ್ಚಿದ್ದು)

ಉಪ್ಪುರುಚಿಗೆ ತಕ್ಕಷ್ಟು

ನಿಮಗೆ ಬೇಕಾದ ತರಕಾರಿಗಳನ್ನು ಸ್ವಲ್ಪ ಸ್ವಲ್ಪ ತೆಗೆದುಕೊಳ್ಳಿ

ಮಿಕ್ಸ್ ತರಕಾರಿ ದೋಸೆ ಮಾಡುವ ವಿಧಾನ

ತರಕಾರಿಗಳನ್ನು ತೆಗೆದುಕೊಂಡು ಚನ್ನಾಗಿ ತೊಳೆಯಿರಿ. ನಂತರ ಒಂದು ಮಿಕ್ಸಿಯಲ್ಲಿ ಎಲ್ಲಾ ತರಕಾರಿಗಳನ್ನು ಹಾಕಿ ಮತ್ತು ಉಪ್ಪನ್ನು ಹಾಕಿ ನುಣ್ಣಗೆ ಪೇಸ್ಟ್ಮಾಡಿಕೊಳ್ಳಿ.

ನಂತರ ಒಂದು ಚಿಕ್ಕ ಪಾತ್ರೆ ಅಥವಾ ಬಾಣಲೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ ಇದಕ್ಕೆ ಜೀರಿಗೆಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಬೆಳ್ಳುಳ್ಳಿ ಹಾಕಿ ಹುರಿಯಿರಿ. ಬಳಿಕ ಈರುಳ್ಳಿ ಹಾಕಿ ಕೊಂಚವೇ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಮೆಣಸಿನ ಪುಡಿ, ಹಸಿಮೆಣಸು, ಕೊತ್ತಂಬರಿ ಎಲೆಗಳನ್ನು ಹಾಕಿ ಹುರಿದುಕೊಳ್ಳಿ. ಅದನ್ನು ಆರಲು ಬಿಡಿ. ಎಲ್ಲ ಪದಾರ್ಥಗಳು ಆರಿದ ನಂತರ ಮತ್ತೊಮ್ಮೆ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.

ಎಲ್ಲ ಪದಾರ್ಥಗಳು ಹೆಚ್ಚು ನುಣ್ಣಗೆ ಪೇಸ್ಟ್ಆಗಬೇಕು.  ನಂತರ ಒಂದು ಪಾತ್ರೆಯಲ್ಲಿ ದೋಸೆ ಹಿಟ್ಟನ್ನು ಹಾಕಿ ಇದಕ್ಕೆ ತಯಾರಿಸಿಕೊಂಡಿರುವ ಮಿಶ್ರಣ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಕೊಂಚ ಉಪ್ಪು ಸೇರಿಸಿ ಇನ್ನಷ್ಟು ಚೆನ್ನಾಗಿ ಮಿಶ್ರಣ ಮಾಡಿ.   ಈಗ ಮಿಕ್ಸ್​ ತರಕಾರಿ ದೋಸೆ ಹಿಟ್ಟು ರೆಡಿ. ನಂತರ ದೋಸೆ ಕಾವಲಿಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಚ್ಚಿ ಕಾಯಿಸಿ. ಕಾವಲಿ ನಾನ್ ಸ್ಟಿಕ್ ಆದರೆ ಎಣ್ಣೆ ಅಗತ್ಯವಿಲ್ಲ.

ಈಗ ದೋಸೆ ಹಿಟ್ಟನ್ನು ಒಂದು ಸೌಟಿನಲ್ಲಿ ತೆಗೆದುಕೊಂಡು ಹಿಟ್ಟು ಕಾವಲಿಯ ಎಲ್ಲಾ ಕಡೆಗೆ ಆವರಿಸುವಂತೆ ಹಾಕಿ. ಹೆಚ್ಚು ತೆಳುವಾಗಿರುವಂತೆ ಮಾಡಿ. ಅಗತ್ಯ ಎನಿಸಿದರೆ ಒಂದು ಚಮಚ ಎಣ್ಣೆಯನ್ನು ಅಂಚುಗಳಿಗೆ ಹಾಕಬಹುದು. ದೋಸೆಯನ್ನು ಮುಚ್ಚಳದಿಂದ ಮುಚ್ಚಿ ಸುಮಾರು ಒಂದರಿಂದ ಎರಡು ನಿಮಿಷ ಬೇಯಲು ಬಿಡಿ.

ಇದನ್ನೂ ಓದಿ: ಕೇವಲ 10 ನಿಮಿಷದಲ್ಲಿ ಮಾಡಿ ಬೆಳ್ಳುಳ್ಳಿ ರೈಸ್​- ಇಲ್ಲಿದೆ ರೆಸಿಪಿ

ನಂತರ ಅದನ್ನು ತೆಗೆದು ಒಂದು ಪ್ಲೇಟ್ನಲ್ಲಿ ಹಾಕಿದರೆ ಸವಿಯಲು ಸಿದ್ಧ. ಇದರಲ್ಲಿ ಹೆಚ್ಚಿನ ಮಸಾಲೆಗಳಿರುವುದರಿಂದ ನಿಮಗೆ ಚಟ್ನಿಯ ಅವಶ್ಯಕತೆ ಸಹ ಇರುವುದಿಲ್ಲ. ಆದರೆ ನಿಮಗೆ ಅಗತ್ಯವಿದ್ದರೆ ಕಾಯಿ ಚಟ್ನಿಯ ಜೊತೆ ಸೇವಿಸಬಹುದು.
Published by:Sandhya M
First published: