Fish VS Chicken: ಆರೋಗ್ಯಕರ ಜೀವನಶೈಲಿಗೆ ಮೀನು ಮತ್ತು ಚಿಕನ್ ಎರಡರಲ್ಲಿ ಯಾವುದು ಬೆಸ್ಟ್?

ನಿಮ್ಮ ಆಹಾರದ ತಟ್ಟೆಯಲ್ಲಿ ಜೀವಸತ್ವ, ಪ್ರೋಟೀನ್‌, ಕ್ಯಾಲ್ಸಿಯಂ ಮತ್ತು ಕಬ್ಬಿಣ ಸೇರಿದಂತೆ ಎಲ್ಲಾ ಪೋಷಕಾಂಶಗಳು ಇರುವ ಪದಾರ್ಥಗಳಿರುವುದು ತುಂಬಾ ಮುಖ್ಯ. ಆರೋಗ್ಯಕರ ಆಹಾರದ ವಿಷಯಕ್ಕೆ ಬಂದ್ರೆ ಮೀನು ಮತ್ತು ಚಿಕನ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಎರಡೂ ವಸ್ತುಗಳನ್ನು ಪ್ರೋಟೀನ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಆರೋಗ್ಯ (Health) ಹಾಗೂ ಉತ್ತಮ ಡಯಟ್ ಗಾಗಿ (Diet) ಜನರು ಮೀನು ಮತ್ತು ಚಿಕನ್ (Fish and Chicken) ನನ್ನು ತಮ್ಮ ಆಹಾರ ಕ್ರಮದಲ್ಲಿ (Food Chart) ಸೇರಿಸುತ್ತಾರೆ. ಮತ್ತು ದೀರ್ಘಾವಧಿಯ ಜೀವನಕ್ಕಾಗಿ  ಜನರು ವಿಟಮಿನ್, ಖನಿಜ, ಪೋಷಕಾಂಶಭರಿತ ಆಹಾರ ಪದಾರ್ಥಗಳನ್ನು ಸೇರಿಸುತ್ತಾರೆ. ನಿತ್ಯದ ಹಾಗೂ ಉತ್ತಮ ಡಯಟ್ ಗಾಗಿ ನಿಮ್ಮ ಆಹಾರದಲ್ಲಿ ಆರೋಗ್ಯಕರ ಪೋಷಕಾಂಶಗಳಿಂದ ಸಮೃದ್ಧವಾದ ಪದಾರ್ಥಗಳನ್ನು ಸೇರಿಸಬೇಕು ಎಂಬುದು ವೈದ್ಯರ ಹಾಗೂ ಪೌಷ್ಟಿಕ ತಜ್ಞರ ಸಲಹೆ ಕೂಡ ಆಗಿದೆ. ಆರೋಗ್ಯಕರ ಪದಾರ್ಥಗಳನ್ನು ಸೇವಿಸುವ ಮೂಲಕ ಅರ್ಧಕ್ಕಿಂತ ಹೆಚ್ಚು ಆರೋಗ್ಯ ಸಮಸ್ಯೆಗಳನ್ನು ಕೊನೆಗೊಳಿಸಬಹುದು ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ.

    ಮೀನು ಮತ್ತು ಚಿಕನ್ ಪ್ರೊಟೀನ್ ನ ಉತ್ತಮ ಮೂಲ

    ನಿಮ್ಮ ಆಹಾರದ ತಟ್ಟೆಯಲ್ಲಿ ಜೀವಸತ್ವ, ಪ್ರೋಟೀನ್‌, ಕ್ಯಾಲ್ಸಿಯಂ ಮತ್ತು ಕಬ್ಬಿಣ ಸೇರಿದಂತೆ ಎಲ್ಲಾ ಪೋಷಕಾಂಶಗಳು ಇರುವ ಪದಾರ್ಥಗಳಿರುವುದು ತುಂಬಾ ಮುಖ್ಯ. ಆರೋಗ್ಯಕರ ಆಹಾರದ ವಿಷಯಕ್ಕೆ ಬಂದ್ರೆ ಮೀನು ಮತ್ತು ಚಿಕನ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಎರಡೂ ವಸ್ತುಗಳನ್ನು ಪ್ರೋಟೀನ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ.

    ರುಚಿಯ ಬಗ್ಗೆ ಹೇಳೋದಾದ್ರೆ ಮೀನು ಮತ್ತು ಚಿಕನ್ ಎರಡೂ ಅದ್ಭುತವಾಗಿದೆ. ಮೀನು ಮತ್ತು ಚಿಕನ್ ಅನ್ನು ಹಲವು ರೀತಿಯ ರೆಸಿಪಿ ಮಾಡಿ ಸವಿಯಲಾಗುತ್ತದೆ. ತೂಕ ಇಳಿಸುವ ಜನರು ಸಾಮಾನ್ಯವಾಗಿ ಮೀನು ಮತ್ತು ಚಿಕನ್ ನ್ನು ಸುಟ್ಟು ತಿನ್ನುತ್ತಾರೆ. ಕೋಳಿಯನ್ನು ಪ್ರೋಟೀನ್‌ನ ಪ್ರಬಲ ಮೂಲವೆಂದು ಹಾಗೂ ಮೀನು ಪ್ರೋಟೀನ್‌ನೊಂದಿಗೆ ಒಮೆಗಾ-3 ಕೊಬ್ಬಿನಾಮ್ಲಗಳ ಉಗ್ರಾಣವೆಂದು ಹೇಳಲಾಗಿದೆ.

    ಇದನ್ನೂ ಓದಿ: ಹೇಗಪ್ಪಾ ತೂಕ ಇಳಿಸೋದು ಎಂಬ ಚಿಂತೆನಾ? ಹಾಗಿದ್ರೆ ತಜ್ಞರು ಹೇಳಿರುವ ಈ ಟಿಪ್ಸ್ ಫಾಲೋ ಮಾಡಿ

    ಫ್ಯಾಟ್ ಟು ಸ್ಲಿಮ್ ಮತ್ತು ನ್ಯೂಟ್ರಿಷನಿಸ್ಟ್ ಮತ್ತು ಡಯೆಟಿಷಿಯನ್ ನಿರ್ದೇಶಕರಾದ ಶಿಖಾ ಅಗರ್ವಾಲ್ ಶರ್ಮಾ ಹೇಳುವ ಪ್ರಕಾರ, ಅನೇಕ ಜನರು ಮೀನು ಇಷ್ಟ ಪಡುವುದಿಲ್ಲ. ಇನ್ನು ಕೆಲವರು ಚಿಕನ್ ತಿನ್ನುವುದಿಲ್ಲ. ಅಲ್ಲದೆ, ಕೋಳಿ ಮತ್ತು ಮೀನುಗಳಲ್ಲಿ ಯಾವುದು ಆರೋಗ್ಯಕರ ಆಹಾರ ಎಂಬ ಪ್ರಶ್ನೆ ಎದುರಾದಾಗ ಉತ್ತರಿಸೋದು ಕಷ್ಟ ಎನ್ನುತ್ತಾರೆ ಶಿಖಾ.

    ಮೀನು ತಿನ್ನುವುದರ ಆರೋಗ್ಯ ಪ್ರಯೋಜನಗಳು

    ಮೀನು ತಿನ್ನುವುದರಿಂದ ದೇಹಕ್ಕೆ ಪ್ರೊಟೀನ್ ಸಿಗುತ್ತದೆ. ದೊಡ್ಡ ಪ್ರಯೋಜನವೆಂದರೆ ಅದು ದೇಹಕ್ಕೆ ಒಮೆಗಾ -3 ಕೊಬ್ಬಿನಾಮ್ಲಗಳನ್ನು ಒದಗಿಸುತ್ತದೆ. ಇದು ದೇಹದ ಉರಿಯೂತ ಮತ್ತು ಒತ್ತಡ ಕಡಿಮೆ ಮಾಡುತ್ತದೆ. ಮೀನು ನಿಮ್ಮ ಟ್ರೈಗ್ಲಿಸರೈಡ್‌ಗಳ ಮಟ್ಟವನ್ನು ನಿಯಂತ್ರಿಸುತ್ತದೆ. ಮತ್ತು ವಿಟಮಿನ್ ಡಿ ಮಟ್ಟ ಹೆಚ್ಚಿಸುತ್ತದೆ.

    ಮೀನು ಪ್ರೋಟೀನ್‌ನ ಉತ್ತಮ ಮೂಲ

    ಮೀನಿನಲ್ಲಿ ಉತ್ತಮ ಪ್ರಮಾಣದ ಪ್ರೊಟೀನ್ ಇದೆ. ಇದು ಸ್ನಾಯುಗಳ ಬೆಳವಣಿಗೆ ಹಾಗೂ ತೂಕ ಕಡಿಮೆ ಮಾಡಲು ಸಹಕಾರಿ. ಇದು ದೇಹವನ್ನು ಬಲಪಡಿಸಲು, ಸ್ನಾಯುಗಳನ್ನು ನಿರ್ಮಿಸಲು ಮತ್ತು ಶಕ್ತಿಯ ಮಟ್ಟ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

    ಚಿಕನ್ ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು

    ತೂಕ ನಿಯಂತ್ರಿಸಲು ಚಿಕನ್ ಅತ್ಯುತ್ತಮ ಆಯ್ಕೆಯಾಗಿದೆ. ಚಿಕನ್ ಬಹಳಷ್ಟು ಆರೋಗ್ಯಕರ ಪೋಷಕಾಂಶ ಹೊಂದಿದೆ. ಇದು ತೂಕ ನಷ್ಟಕ್ಕೆ ಉತ್ತೇಜಿಸುತ್ತದೆ. ಮೂಳೆಗಳನ್ನು ಬಲಪಡಿಸುವುದು, ಹಸಿವನ್ನು ಕಡಿಮೆ ಮಾಡುತ್ತದೆ. ಸ್ನಾಯುಗಳನ್ನು ನಿರ್ಮಿಸುತ್ತದೆ.

    ಕೋಳಿ ಪ್ರೋಟೀನ್‌ನ ಉಗ್ರಾಣ

    ಕೋಳಿ ಮಾಂಸದಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಚಿಕನ್‌ ಸೇವನೆ ವಿಟಮಿನ್‌ ಮತ್ತು ಖನಿಜಗಳ ಜೊತೆಗೆ 27 ಗ್ರಾಂ ಪ್ರೋಟೀನ್ ಹೊಂದಿದೆ. ತೂಕ ನಷ್ಟ, ಆರೋಗ್ಯಕರ ಮತ್ತು ಫಿಟ್ ದೇಹವನ್ನು ನಿರ್ಮಿಸುತ್ತದೆ. ನಿಯಮಿತವಾಗಿ ಚಿಕನ್ ಸೇವನೆ ಮೂಳೆಗಳನ್ನು ಬಲಪಡಿಸುತ್ತದೆ.

    ಮೀನು ಮತ್ತು ಕೋಳಿ ಎರಡರಲ್ಲಿ ತೂಕ ಇಳಿಸಿಕೊಳ್ಳಲು ಯಾವುದು ಉತ್ತಮ?

    ಮೀನು ಸೇವನೆ ಹೃದಯದ ಆರೋಗ್ಯ ಉತ್ತೇಜಿಸುತ್ತದೆ. ಆದರೆ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮ ಆಯ್ಕೆ. ಮೀನು ತಿನ್ನುವುದು ತ್ವರಿತ ತೂಕ ನಷ್ಟ ಉತ್ತೇಜಿಸುತ್ತದೆ. ಒಂದು ಅಧ್ಯಯನದ ಪ್ರಕಾರ ವಾರಕ್ಕೆ ಮೂರು ಬಾರಿ ಮೀನು ತಿನ್ನುವುದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

    ಚಿಕನ್ ಸೇವನೆ ದೇಹಕ್ಕೆ ಸಾಕಷ್ಟು ಪ್ರೋಟೀನ್ ನೀಡುತ್ತದೆ. ಮತ್ತು ತೂಕ ಕಡಿಮೆ ಮಾಡುವುದರ ಜೊತೆಗೆ ಅನೇಕ ಪ್ರಯೋಜನ ನೀಡುತ್ತದೆ. ಚಿಕನ್ ನ ಸ್ತನವನ್ನು ಅತ್ಯುತ್ತಮ ಎಂದು ಹೇಳಲಾಗುತ್ತದೆ.

    ಇದನ್ನೂ ಓದಿ: ಸಿಗರೇಟ್ ಸೇದುವುದರಿಂದ ಕೂದಲು ಉದುರುತ್ತವೆಯೇ? ಪೌಷ್ಟಿಕ ತಜ್ಞರು ಹೇಳಿದ್ದೇನು?

    ನೀವು ಯಾವುದನ್ನು ಆಯ್ಕೆ ಮಾಡಬೇಕು?

    ಮೀನಿನ ಪ್ರಯೋಜನಗಳು ಕೋಳಿಗಿಂತ ಸ್ವಲ್ಪ ಹೆಚ್ಚು. ಮೀನಿನಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ಅಂಶವಿರುವುದೇ ಇದಕ್ಕೆ ಕಾರಣವಾಗಿದೆ. ಆರೋಗ್ಯದ ವಿಷಯಕ್ಕೆ ಬಂದ್ರೆ ಚಿಕನ್ ತಿನ್ನುವುದಕ್ಕಿಂತ ಮೀನು ತಿನ್ನುವುದು ಆರೋಗ್ಯಕರ ಆಯ್ಕೆ ಆಗಿದೆ. ಏನೇ ಇರಲಿ ಆರೋಗ್ಯಕರ ಜೀವನಶೈಲಿಗಾಗಿ ಎರಡೂ ಪದಾರ್ಥ ತಿನ್ನಬಹುದು.
    Published by:renukadariyannavar
    First published: