Child Care: ಮಕ್ಕಳ ಜೀವನಶೈಲಿ ಈ ರೀತಿ ಬದಲಾದ್ರೆ ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ

Children Healthy Lifestyle: ಇಂದಿನ ಮಕ್ಕಳು ಹೃದಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಂದಿನಿಂದಲೇ ಹೃದಯದ ಸಮಸ್ಯೆ ಬಗ್ಗೆ ಕಡ್ಡಾಯವಾಗಿ ಅರಿತಿರಬೇಕು, ಹೃದಯಾಘಾತವಾದ ಲಕ್ಷಣಗಳು, ಯಾರಿಗೆ ಈ ರಿಸ್ಕ್‌ ಹೆಚ್ಚು ಇರಲಿದೆ, ಹೃದಯಾಘಾತವಾದಾಗ ಪ್ರಥಮ ಚಿಕಿತ್ಸೆ ಏನು ಎಂಬಿತ್ಯಾದಿ ಮಾಹಿತಿಯನ್ನು ತಪ್ಪದೇ ತಿಳಿದುಕೊಳ್ಳಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇತ್ತೀಚಿನ ದಿನಗಳಲ್ಲಿ ಹೃದಯಾಘಾತ (Heart Attack) ಎನ್ನುವುದು ಸಾಮಾನ್ಯವಾಗಿದೆ. ಅದರಲ್ಲೂ 25 ರಿಂದ 40 ವರ್ಷ ಒಳಗಿನ ಯುವಕರೇ ಇದಕ್ಕೆ ಬಲಿಯಾಗುತ್ತಿರುವುದು ಇನ್ನಷ್ಟು ಆತಂಕ (Stress) ಸೃಷ್ಟಿಯಾಗಿದೆ. ಕಳೆದ ೧೦ ವರ್ಷಗ ಹಿಂದೆ ಯುವಕರು ಇಂಥ ಹೃದಯಾಘಾತಕ್ಕೆ ಒಳಗಾಗಬಹುದು ಎಂಬ ಸಣ್ಣ ಊಹೇಯೂ ಇರಲಿಲ್ಲ. ಆದರೆ, ಇಂದು ಯುವಕರೇ ಇದಕ್ಕೆ ಬಲಿಯಾಗುತ್ತಿದ್ದಾರೆ. ಭವಿಷ್ಯದಲ್ಲಿ ಇಂದಿನ ಮಕ್ಕಳು (Child Care) ಸಹ ಹೃದಯಾಘಾತಕ್ಕೆ ಒಳಗಾಗಬಹುದೇ ಎಂಬ ಆತಂಕ ಮನೆ ಮಾಡಿದೆ. ಹೌದು, ಇಂದು ಯುವಕರು ಹೃದಯಾಘಾತಕ್ಕೆ ಒಳಗಾಗಲು ಪ್ರಮುಖ ಕಾರಣವೇ ಬದಲಾದ ಜೀವನ ಶೈಲಿ (Lifestyle), ಆಹಾರ ಕ್ರಮ. ಈಗಿನ ಮಕ್ಕಳು ಸಣ್ಣ ವಯಸ್ಸಿನಲ್ಲಿಯೇ ಜಂಕ್‌ಫುಡ್‌, ಬೇಕರಿ ಫುಡ್‌ ಸೇರಿದಂತೆ ಅನೇಕ ಅನಾರೋಗ್ಯಕರ ಆಹಾರ ಕ್ರಮಗಳನ್ನು ಅಳವಡಿಸಿಕೊಂಡಿದ್ದಾರೆ. ಇದು ಭವಿಷ್ಯದಲ್ಲಿ ಹೆಚ್ಚು ಅಪಾಯ ತಂದೊಡ್ಡಬಹುದು. ಭವಿಷ್ಯದಲ್ಲಿ ಮಕ್ಕಳಲ್ಲೂ ಹೃದಯಾಘಾತ ಸಂಭವದ ಸಾಧ್ಯತೆ ಬಗ್ಗೆ ಹಾಗೂ ಮುನ್ನೆಚ್ಚರಿಕೆಯ ಬಗ್ಗೆ ಫೊರ್ಟಿಸ್‌ ಆಸ್ಪತ್ರೆಯ ಕನ್ಸಲ್ಟೆಂಟ್‌ ಇಂಟರ್‌ವೆನ್ಸಷನ್‌ ಕಾರ್ಡಿಯಾಲಜಿಟ್‌ ಡಾ. ಶಿವಾನಂದ್‌ ಎಸ್‌. ಪಾಟೀಲ್‌ ವಿವರಿಸಿದ್ದಾರೆ.

ಮಕ್ಕಳಲ್ಲೂ ಹೃದಯಾಘಾತ ಸಂಭವಿಸಬಹುದೇ?
ಹೌದು, ಇತ್ತೀಚಿನ ಬೆಳವಣಿಗೆ ಗಮನಿಸಿದರೆ ಭವಿಷ್ಯದಲ್ಲಿ ಮಕ್ಕಳಲ್ಲೂ ಹೃದಯಾಘಾತ ಸಂಭವಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಪ್ರಸ್ತುತ 10 ವರ್ಷ ಒಳಗಿನ ಮಕ್ಕಳಲಿ ವಿರಳಾತಿ ವಿರಳ ಹೃದಯಾಘಾತದಂಥ ಪ್ರಕರಣ ನೋಡುತ್ತಿದ್ದೇವೆ. ಅದೂ, ಚಿಕ್ಕ ವಯಸ್ಸಿನಲ್ಲಿಯೇ ಅತಿಯಾದ ಒಬೆಸಿಟಿ, ಡಯಾಬಿಟಿಸ್‌ ನಂತಹ ಸಮಸ್ಯೆ ಇರುವ ಮಕ್ಕಳಲ್ಲಿ. ಆದರೆ, ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಒಬೆಸಿಟಿ ಸಾಮಾನ್ಯವಾಗಿದೆ.

ಸಣ್ಣ ಮಕ್ಕಳು ವಯಸ್ಸಿಗೂ ಮೀರಿದ ತೂಕವನ್ನು ಹೊಂದುತ್ತಿದ್ದಾರೆ, ಜೊತೆಗೆ, ಅನಾರೋಗ್ಯಕರ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯನ್ನುರೂಢಿಸಿಕೊಂಡಿದ್ದಾರೆ. ಮೊಬೈಲ್‌, ಇಂಟರ್‌ನೆಟ್‌ ಬಂದ ಬಳಿಕ ಮಕ್ಕಳು ಹೆಚ್ಚಾಗಿ ಮೊಬೈಲ್‌ ಗೇಮ್‌ಗಳಿಗೆ ಅಡಿಕ್ಟ್‌ ಆಗಿರುವ ಕಾರಣ, ದೈಹಿಕ ಚಟುವಟಿಕೆಯಂಥ ಆಟಗಳಿಗೆ ಆಸಕ್ತಿ ತೋರುತ್ತಿಲ್ಲ. ಈ ಎಲ್ಲಾದರ ಪರೀಣಾಮ ಮಕ್ಕಳ ದೈಹಿಕ ಬೆಳವಣಿಗೆ ಏರುಪೇರಾಗುವ ಸಾಧ್ಯತೆ ಇದೆ.

ದೇಹದಲ್ಲಿ ಬೊಜ್ಜು, ಒಬೆಸಿಟಿ ಹೆಚ್ಚಾದಷ್ಟು, ಹೃದಯದಲ್ಲಿ ರಕ್ತ ಸಂಚಲನ ಸರಾಗವಾಗಿ ನಡೆಯುವುದಿಲ್ಲ. ಹೃದಯದ ರಕ್ತನಾಳಗಳಲ್ಲಿಯೂ ಸಹ ಬೊಜ್ಜು ತುಂಬಿಕೊಂಡು ಹೃದಯಸ್ಥಂಭನ ಉಂಟಾಗಬಹುದು.

ಅನುವಂಶೀಯ ಪ್ರಕರಣ ಹೆಚ್ಚಾಗಬಹುದು
ಇನ್ನೂ ಕೆಲವು ಪ್ರಕರಣಗಳಲ್ಲಿ ವ್ಯಕ್ತಿ ಎಷ್ಟೇ ಆರೋಗ್ಯವಾಗಿದ್ದರೂ ಹೃದಯಾಘಾತ ಅಥವಾ ಹೃದಯ ಸಂಬಂಧಿ ಇತಿಹಾಸ ಹೊಂದಿದ್ದರೆ ಅವರಲ್ಲಿಯೂ ಸಹ ಹೃದಯಾಘಾತ ಸಂಭವಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಮನೆಯಲ್ಲೇ ಸಿಂಪಲ್ ಮೇಕಪ್ ಮಾಡ್ಕೊಳ್ಳೋದು ಹೇಗೆ? ಬ್ಯೂಟಿಶಿಯನ್ ಹೇಳಿಕೊಡ್ತಾರೆ ನೋಡಿ

ಇದು ಮಕ್ಕಳಿಗೂ ಅನ್ವಯವಾಗಲಿದೆ. ಆದರೆ, ಚಿಕ್ಕವಯಸ್ಸಿನಿಂದಲೇ ಆರೋಗ್ಯಕರ ಜೀವನ ಶೈಲಿ, ವ್ಯಾಯಾಮದಂಥ ಅಭ್ಯಾಸ ಹೊಂದಿದ್ದರೆ ಅವರಲ್ಲಿ ಹೃದಯಾಘಾತದ ರಿಸ್ಕ್‌ ಕಡಿಮೆ ಇರಲಿದೆ. ಆದಾಗ್ಯೂ, ೨೫ ವರ್ಷದ ಬಳಿಕ ತಪ್ಪದೇ ವರ್ಷಕ್ಕೊಮ್ಮೆ ಹೃದಯದ ಚೆಕಪ್‌ ಮಾಡಿಸಿಕೊಳ್ಳುವುದು ಅನಿವಾರ್ಯ.

ವರ್ಷಕೊಮ್ಮೆ ಹೆಲ್ತ್‌ಚೆಕಪ್‌ ಡೇ ಆಚರಿಸಿ:
ಇಂದಿನ ಮಕ್ಕಳು ಹೃದಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಂದಿನಿಂದಲೇ ಹೃದಯದ ಸಮಸ್ಯೆ ಬಗ್ಗೆ ಕಡ್ಡಾಯವಾಗಿ ಅರಿತಿರಬೇಕು, ಹೃದಯಾಘಾತವಾದ ಲಕ್ಷಣಗಳು, ಯಾರಿಗೆ ಈ ರಿಸ್ಕ್‌ ಹೆಚ್ಚು ಇರಲಿದೆ, ಹೃದಯಾಘಾತವಾದಾಗ ಪ್ರಥಮ ಚಿಕಿತ್ಸೆ ಏನು ಎಂಬಿತ್ಯಾದಿ ಮಾಹಿತಿಯನ್ನು ತಪ್ಪದೇ ತಿಳಿದುಕೊಳ್ಳಬೇಕು.

ಇದು ನಿಮ್ಮ ಹಾಗೂ ನಿಮ್ಮ ಸುತ್ತಮುತ್ತಲಿನವರ ಆರೋಗ್ಯ ಕಾಪಾಡುವಲ್ಲಿ ಹೆಚ್ಚುಪರಿಣಾಮಕಾರಿಯಾಗಿರಲಿದೆ. ಪ್ರತಿವರ್ಷ ಹುಟುಹಬ್ಬವನ್ನು ಆಚರಿಸಿಕೊಳ್ಳುವಂತೆ ಪ್ರತಿವರ್ಷ ಹೆಲ್ತ್‌ಚೆಕಪ್‌ ದಿನವನ್ನಾಗಿ ಆಚರಿಸಿಕೊಳ್ಳಬೇಕು. ಆ ದಿನ ಸಂಪೂರ್ಣ ತಮ್ಮ ದೇಹದ ಚೆಕಪ್‌ ಮಾಡಿಸಿಕೊಳ್ಳುವುದು ಅಭ್ಯಾಸವಾಗಬೇಕು.

ಮಕ್ಕಳ ಜೀವನ ಶೈಲಿಯನ್ನು ಇಂದಿನಿಂದಲೇ ಬದಲಿಸಿ:
ಇಂದಿನ ಮಕ್ಕಳಲ್ಲಿ ಚಿಕ್ಕವಯಸ್ಸಿನಿಂದಲೇ ಒತ್ತಡ ಬದುಕಿನ ಭಾಗವಾಗಿ ಹೋಗಿದೆ, ಓದುವುದು, ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ಸೇರಿದಂತೆ ಪೋಷಕರ ಅತಿಯಾದ ನಿರೀಕ್ಷೆಯಿಂದ ಮಕ್ಕಳು ಒತ್ತಡದ ಜೀವನ ಅನುಭವಿಸುತ್ತಿದ್ದಾರೆ. ಇದು ಅವರ ಹೃದಯದ ಮೇಲೆ ಪರಿಣಾಮ ಬೀರಬಹುದು.

ಇದನ್ನೂ ಓದಿ: ಬಾಲಿವುಡ್​ ನಟ ಜಾನ್​ ಅಬ್ರಾಹಂ ಮೊಡವೆ ಹೋಗಲಾಡಿಸೋಕೆ ಹೀಗೆ ಮಾಡ್ತಿದ್ರಂತೆ

ಜೊತೆಗೆ, ಮಕ್ಕಳಿಗೆ ಇಂದಿನಿಂದಲೇ ಆರೋಗ್ಯಕರ ಆಹಾರ ಸೇವನೆಗೆ ಪ್ರೋತ್ಸಾಹಿಸಿ, ಚಾಕೊಲೆಟ್‌ ಐಸ್‌ಕ್ರೀಮ್‌, ಪಿಜ್ಜಾ, ಬರ್ಗರ್‌, ಎಣ್ಣೆಯಲ್ಲಿ ಕರಿದ ಆಹಾರ, ಸಂಸ್ಕರಿಸಿದ ಆಹಾರ ಇವುಗಳ ಸೇವನೆ ಬಗ್ಗೆ ಜಾಗೃತಿ ಮೂಡಿಸಿ. ಸೊಪ್ಪು, ತರಕಾರಿ, ಹಣ್ಣು ಇಂತಹ ಆಹಾರ ಸೇವನೆ ಬಗ್ಗೆ ಅರಿವು ಮೂಡಿಸಿ. ಅಷ್ಟೇ ಅಲ್ಲದೆ, ಪ್ರತಿ ದಿನ ಕನಿಷ್ಠ 1 ರಿಂದ 2 ಗಂಟೆಗಳ ಕಾಲ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸಿ. ಮಗುವು ತನ್ನ ವಯಸ್ಸಿಗಿಂತ ಮಿತಿಮೀರಿದ ದೇಹದ ತೂಕ ಹೊಂದಿದ್ದರೆ, ಅದನ್ನು ಕಡಿಮೆ ಮಾಡುವತ್ತ ಗಮನ ಹರಿಸುವುದು ಒಳ್ಳೆಯದು. ಮಕ್ಕಳನ್ನು ಮುದ್ದು ಮಾಡುವ ನೆಪದಲ್ಲಿ ಅನಾರೋಗ್ಯಕ್ಕೆ ದೂಡಬೇಡಿ.
Published by:Sandhya M
First published: