Vitamin D ಸಮೃದ್ಧವಾಗಿರುವ ಈ ಆಹಾರಗಳನ್ನ ಸೇವಿಸದೆ ಇರಲು ಮರೆಯಬೇಡಿ..

Healthy Foods: ಮೊಟ್ಟೆಯು ಅದ್ಭುತವಾದ ವಿಟಮಿನ್ ಎ, ಬಿ, ಡಿ ಹೊಂದಿರುವ ಆಹಾರಗಳಲ್ಲಿ ಒಂದಾಗಿದೆ. ಸಂಪೂರ್ಣ ಮೊಟ್ಟೆಯು ದೇಹಕ್ಕೆ ಬೇಕಾದ ಹಲವಾರು ಪೋಷಕಾಂಶಗಳನ್ನು ಒದಗಿಸುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಿಟಮಿನ್ ಡಿ (Vitamin D) ದೇಹದ(Body) ಬೆಳವಣಿಗೆ ಮತ್ತು ಆರೋಗ್ಯಕ್ಕೆ(Health) ಅವಶ್ಯಕವಾಗಿರುವ ವಿಟಮಿನ್(Vitamin) ಆಗಿದೆ. ವಿಟಮಿನ್ ಡಿ ಸತ್ವದ ಕೊರತೆಯಿಂದಾಗಿ ಹಲವು ಸೊಂಕು ಮತ್ತು ಕಾಯಿಲೆಗಳಿಗೆ ತುತ್ತಾಗಬಹುದು. ಅದರಲ್ಲೂ ಪ್ರಮುಖವಾಗಿ ಮೂಳೆಗಳಿಗೆ(Bone) ಸಂಬಂಧಿಸಿದ ಸಮಸ್ಯೆಗಳಿಗೆ(Problem) ಕಾರಣವಾಗಬಹುದು. ವಿಟಮಿನ್ ಡಿ ಯ ಪ್ರಮುಖ ಪ್ರಯೋಜನವೆಂದರೆ ಅದು ಮೂಳೆಗಳು, ಸ್ನಾಯುಗಳು ಮತ್ತು ನರಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಅಲ್ಲದೇ ಕೂದಲ ಪೋಷಣೆ, ಸ್ಕಿನ್(Skin) ಸಮಸ್ಯೆಗಳ ನಿವಾರಣೆ, ಆರೋಗ್ಯಕರ ರೋಗನಿರೋಧಕ ವ್ಯವಸ್ಥೆಗೆ ಸಹಕಾರಿಯಾಗಿದೆ.

ನಮಗೆಲ್ಲಾ ತಿಳಿದಂತೆ ಸೂರ್ಯನ ಬೆಳಕಿನಿಂದ(Sunlight) ನಾವು ಸಾಕಷ್ಟು ವಿಟಮಿನ್ ಡಿ ಪಡೆಯುತ್ತೇವೆ. ಸೂರ್ಯನ ಕಿರಣಗಳೇ ವಿಟಮಿನ್ ಡಿ ಯ ಪ್ರಮುಖ ಮೂಲವಾಗಿದೆ. ಆದರೂ ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಪಡೆಯಲು ಆಗದೇ ಇದ್ದಾಗ ವಿಟಮಿನ್ ಡಿ ಇರುವ ಆಹಾರಗಳನ್ನು ಸೇವಿಸುವ ಮೂಲಕ ನಾವು ಪೋಷಕಾಂಶ ಪಡೆಯಬಹುದು. ಯಾವೆಲ್ಲಾ ಆಹಾರಗಳಲ್ಲಿ ವಿಟಮಿನ್ ಡಿ ಹೆಚ್ಚಾಗಿ ಲಭಿಸುತ್ತದೆ ಎಂಬುವುದರ ಬಗ್ಗೆ ಮುಂಬೈನ ಮಸಿನಾ ಆಸ್ಪತ್ರೆಯ ಚರ್ಮಶಾಸ್ತ್ರಜ್ಞರಾದ ಡಾ. ರಾಶಿ ಮೆಹ್ತಾ ತಿಳಿಸಿಕೊಟ್ಟಿದ್ದಾರೆ. ಈ ಆಹಾರಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ದೇಹದಲ್ಲಿ ವಿಟಮಿನ್ ಡಿ ಪ್ರಮಾಣ ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಅತಿಯಾದರೆ ಅಮೃತವೂ ವಿಷ : ಸಿ ವಿಟಮಿನ್ ಅಧಿಕವಾದ್ರೆ ಕಾಡಲಿವೆ ಅನೇಕ ರೋಗಗಳು

ವಿಟಮಿನ್ ಡಿ ನಮ್ಮ ದೇಹದಲ್ಲಿನ ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಮಟ್ಟವನ್ನು ಹೀರಿಕೊಳ್ಳಲು ಮತ್ತು ನಿಯಂತ್ರಿಸಲು ಸಹಾಯ ಮಾಡುತ್ತದೆ. ವಿಟಮಿನ್ ಡಿ ಸಾಮಾನ್ಯವಾಗಿ ಎರಡು ರೂಪಗಳಲ್ಲಿ ಇರುತ್ತದೆ –

1) ಎರ್ಗೋ ಕ್ಯಾಲ್ಸಿಫೆರಾಲ್ (D2)

2) ಕೋಲ್‌ಕ್ಯಾಲ್ಸಿಫೆರಾಲ್ (D3)

ಇವು ಮೆದುಳು, ನರ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಸೋಂಕುಗಳ ವಿರುದ್ಧ ಹೋರಾಡಲು ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಹಾಗಾದರೆ ಡಾ. ರಾಶಿ ಮೆಹ್ತಾ ಸೂಚಿಸಿರುವ ವಿಟಮಿನ್ ಡಿ ಮಟ್ಟವನ್ನು ಹೆಚ್ಚಿಸುವ ಆಹಾರಗಳ ಬಗ್ಗೆ ತಿಳಿದು ಕೊಳ್ಳೋಣ.

1) ಮೀನು ಮತ್ತು ಮೀನಿನ ಯಕೃತ್ತಿನ ಎಣ್ಣೆ: ವಿಟಮಿನ್ ಡಿ ಸಮೃದ್ಧ ಆಹಾರಗಳಲ್ಲಿ ಟ್ರೌಟ್, ಸಾಲ್ಮನ್, ಟ್ಯೂನ ಮತ್ತು ಮ್ಯಾಕೆರೆಲ್ ಮೀನುಗಳು ಮುಖ್ಯವಾಗಿವೆ. ಹೆಚ್ಚು ದುಬಾರಿಯಾದ ಈ ಮೀನುಗಳು ವಿಟಮಿನ್ ಡಿ ಅಲ್ಲದೆ ಒಳ್ಳೆಯ ಕೊಬ್ಬಿನಾಂಶವನ್ನು ಸಹ ಹೊಂದಿವೆ. ಕಾಡ್-ಲಿವರ್ ಎಣ್ಣೆಯಂತಹ ಫಿಶ್ ಲಿವರ್ ಆಯಿಲ್ ವಿಟಮಿನ್ ಡಿ ಆಹಾರದಲ್ಲಿ ಶ್ರೀಮಂತ ಮೂಲಗಳಾಗಿವೆ. ವಿಟಮಿನ್ ಡಿ ಇದರಲ್ಲಿ ನೈಸರ್ಗಿಕವಾಗಿ ಇರುತ್ತದೆ.

ಇದನ್ನೂ ಓದಿ: https://kannada.news18.com/news/lifestyle/taking-to-much-c-vitamin-cause-side-effect-amk-mrq-669367.html

2)ಮೊಟ್ಟೆಗಳು: ಮೊಟ್ಟೆಯು ಅದ್ಭುತವಾದ ವಿಟಮಿನ್ ಎ, ಬಿ, ಡಿ ಹೊಂದಿರುವ ಆಹಾರಗಳಲ್ಲಿ ಒಂದಾಗಿದೆ. ಸಂಪೂರ್ಣ ಮೊಟ್ಟೆಯು ದೇಹಕ್ಕೆ ಬೇಕಾದ ಹಲವಾರು ಪೋಷಕಾಂಶಗಳನ್ನು ಒದಗಿಸುತ್ತದೆ. ಮೊಟ್ಟೆಯಲ್ಲಿನ ಹೆಚ್ಚಿನ ಪ್ರೋಟೀನ್ ಬಿಳಿ ಬಣ್ಣದಲ್ಲಿ ಕಂಡುಬಂದರೆ, ಕೊಬ್ಬು, ಜೀವಸತ್ವಗಳು ಮತ್ತು ಖನಿಜಗಳು ಹೆಚ್ಚಾಗಿ ಹಳದಿ ಭಾಗದಲ್ಲಿ ಕಂಡುಬರುತ್ತವೆ. ಮೀನುಗಳನ್ನು ಸೇವಿಸದವರು ಮೊಟ್ಟೆಯನ್ನು ತೆಗೆದುಕೊಳ್ಳಬಹುದು.

3)ಅಣಬೆಗಳು: ಅಣಬೆಗಳು ವಿಟಮಿನ್ ಡಿ ಸತ್ವ ಹೊಂದಿರುವ ಉತ್ತಮ ಮೂಲವಾಗಿದೆ. ಇವು ಮನುಷ್ಯರಂತೆ ಸೂರ್ಯನ ಬೆಳಕಿಗೆ ಒಡ್ಡಿದಾಗ ವಿಟಮಿನ್ ಅನ್ನು ಸಂಶ್ಲೇಷಿಸುವ ಶಕ್ತಿಯನ್ನು ಹೊಂದಿದೆ. ಇವುಗಳನ್ನು ಸೇವಿಸುವುದರಿಂದ ವಿಟಮಿನ್ ಡಿ ಕೊರತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಆದಷ್ಟೂ ನೈಸರ್ಗಿಕವಾಗಿ ದೊರೆಯುವ ಅಣಬೆಗಳನ್ನು ಸೇವಿಸುವುದು ಉತ್ತಮ.

4) ಡೈರಿ ಆಹಾರಗಳು: ಪೋಷಕಾಂಶಗಳ ಕೊರತೆಯ ವಿರುದ್ಧ ಹೋರಾಡಲು ಸರಳ ಮತ್ತು ಅತ್ಯಂತ ಪ್ರಾಯೋಗಿಕ ಮಾರ್ಗವೆಂದರೆ ನಾವು ದಿನ ನಿತ್ಯ ಸಾಮಾನ್ಯವಾಗಿ ಸೇವಿಸುವ ಆಹಾರಗಳು. ಹಾಲು, ಚೀಸ್, ಮೊಸರು ಮತ್ತು ಐಸ್ ಕ್ರೀಮ್‌ನಂತಹ ಡೈರಿ ಉತ್ಪನ್ನಗಳಲ್ಲಿ ವಿಟಮಿನ್ ಹೆಚ್ಚಾಗಿರುತ್ತದೆ. ಹಸುವಿನ ಹಾಲಿನಲ್ಲಿ ಸ್ವಾಭಾವಿಕವಾಗಿ ಕ್ಯಾಲ್ಸಿಯಂ, ಫಾಸ್ಫರಸ್ ಮತ್ತು ರಿಬೋಫ್ಲಾವಿನ್ ಸೇರಿದಂತೆ ಅನೇಕ ಪೋಷಕಾಂಶಗಳು ಅಡಗಿವೆ. ಅದರಲ್ಲೂ ಚೀಸ್‌ನಲ್ಲಿ ವಿಟಮಿನ್ ಡಿ ಪ್ರಮಾಣ ಹೆಚ್ಚಿರುತ್ತದೆ.

5) ಹಾಲಿನ ಪರ್ಯಾಯಗಳು: ನೀವು ಹಾಲು ಕುಡಿಯುವುದನ್ನು ಕಡೆಗಣಿಸಿದರೆ ನಿಮ್ಮ ಆಹಾರದಿಂದ ಸಾಕಷ್ಟು ವಿಟಮಿನ್ ಡಿ ಕೊರತೆಯಾಗುತ್ತದೆ. ಹಾಗಾಗಿ ಹಸುವಿನ ಹಾಲಿನ ಬದಲಾಗಿ ನಾವು ಸೋಯಾ ಹಾಲು, ಬಾದಾಮಿ ಹಾಲು, ತೆಂಗಿನ ಹಾಲು ಮತ್ತು ಅಕ್ಕಿ ಹಾಲುಗಳಂತಹ ಹಾಲಿನ ಪರ್ಯಾಯಗಳನ್ನು ಸೇವಿಸುವುದರಿಂದ ಕೂಡ ವಿಟಮಿನ್ ಡಿ ಸಮೃದ್ಧವಾಗಿ ಸಿಗುತ್ತದೆ.

ಇದನ್ನೂ ಓದಿ: ನಿಮ್ಮ ದೇಹಕ್ಕೆ ಯಾವ ಕೊಬ್ಬು ಉತ್ತಮ? ಯಾವ ಆಹಾರವನ್ನು ಚಿಂತೆ ಇಲ್ಲದೆ ತಿನ್ನಬಹುದು?

ಸಾಂಕ್ರಾಮಿಕ ರೋಗದಿಂದ ಸುರಕ್ಷಿತವಾಗಿರಲು ನಮ್ಮಲ್ಲಿ ಹೆಚ್ಚಿನವರು ಮನೆಗಳಿಗೆ ಸೀಮಿತವಾಗಿದ್ದರೆ, ಅಲ್ಲದೇ ಮನೆಯಿಂದಲೇ ಕೆಲಸ ಮಾಡುವವರು ನಿಮ್ಮ ವಿಟಮಿನ್ ಡಿ ಮಟ್ಟವನ್ನು ಹೆಚ್ಚಿಸಲು ಈ ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ಉತ್ತಮ.
Published by:ranjumbkgowda1 ranjumbkgowda1
First published: