• Home
  • »
  • News
  • »
  • lifestyle
  • »
  • Carbs For Diabetes: ಮಧುಮೇಹಿಗಳು ಈ ಕಾರ್ಬೋಹೈಡ್ರೇಟ್ ಆಹಾರಗಳನ್ನ ತಿಂದ್ರೆ ಒಳ್ಳೆಯದಂತೆ

Carbs For Diabetes: ಮಧುಮೇಹಿಗಳು ಈ ಕಾರ್ಬೋಹೈಡ್ರೇಟ್ ಆಹಾರಗಳನ್ನ ತಿಂದ್ರೆ ಒಳ್ಳೆಯದಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Healthy Carbs for Diabetes: ಸುಷ್ಮಾ, ಕ್ಲಿನಿಕಲ್ ಡಯೆಟಿಷಿಯನ್ ಮತ್ತು ನ್ಯೂಟ್ರಿಷನಿಸ್ಟ್, ಕೇರ್ ಹಾಸ್ಪಿಟಲ್ಸ್, ಬಂಜಾರಾ ಹಿಲ್ಸ್, ಹೈದರಾಬಾದ್ ಅವರು ಸೂಚಿಸಿರುವಂತೆ ನೀವು ನಿಮ್ಮ ಆಹಾರದಲ್ಲಿ ಸೇರಿಸಬೇಕಾದ 5 ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳು ಇಲ್ಲಿವೆ.

  • Share this:

ಮಧುಮೇಹ (Diabetes) ಇಂದಿನ ಕಾಲದ ಗಂಭೀರ ಸಮಸ್ಯೆಗಳಲ್ಲಿ (Problem) ಒಂದಾಗಿದೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ದೇಹದಲ್ಲಿ ಸಕ್ಕರೆಯನ್ನು (Sugar) ನಿಯಂತ್ರಿಸುವುದು ಮಧುಮೇಹ ರೋಗಿಗಳಿಗೆ ಕಠಿಣ ಕೆಲಸವಾಗಿದೆ. ಇದಕ್ಕಾಗಿ, ಆಹಾರ ಮತ್ತು ಜೀವನಶೈಲಿಯ (Lifestyle) ಮೇಲೆ ಸರಿಯಾದ ನಿಗಾ ಇಡೋದು ಮುಖ್ಯ. ಸ್ವಲ್ಪ ನಿರ್ಲಕ್ಷ್ಯ ಮಾಡೋದ್ರಿಂದ ಸಕ್ಕರೆ ಮಟ್ಟ ಹೆಚ್ಚುತ್ತದೆ. ಆರೋಗ್ಯ ತಜ್ಞರ ಪ್ರಕಾರ, ತಪ್ಪು ಆಹಾರ ಮತ್ತು ಕಳಪೆ ದಿನಚರಿಯಿಂದಾಗಿ, ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದಕ್ಕಾಗಿ, ಮಧುಮೇಹ ರೋಗಿಗಳು ಸಿಹಿ ಆಹಾರಗಳನ್ನು ತಪ್ಪಿಸೋದು ಮುಖ್ಯ. ನೀವೂ ಸಹ ಮಧುಮೇಹದ ರೋಗಿಯಾಗಿದ್ದರೆ ಮತ್ತು ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಬಯಸಿದರೆ, ಪ್ರತಿದಿನ ಸಮತೋಲಿತ ಆಹಾರ ಸೇವಿಸಿ, ವ್ಯಾಯಾಮ ಮಾಡಿ, ಸಾಕಷ್ಟು ನಿದ್ರೆ ಮಾಡಿ, ಒತ್ತಡದಿಂದ ದೂರವಿರಿ ಮತ್ತು ಮುಖ್ಯವಾಗಿ ಸಕ್ಕರೆಯನ್ನು ಸೇವಿಸಬೇಡಿ.


ಮಧುಮೇಹವು ಚಯಾಪಚಯ ಸಮಸ್ಯೆ ಅನಿಯಂತ್ರಿತ ರಕ್ತದಲ್ಲಿನ ಸಕ್ಕರೆ ಮಟ್ಟ, ಹೃದಯ, ಮೂತ್ರಪಿಂಡ, ರಕ್ತನಾಳ, ಕಣ್ಣುಗಳಿಗೆ ಹಾನಿಕಾರಕ ಪರಿಣಾಮಗಳುಂಟಾಗಲು ಕಾರಣವಾಗಬಹುದು. ಆಹಾರದ ವಿಷಯಕ್ಕೆ ಬಂದಾಗ, ಮಧುಮೇಹ ಹೊಂದಿರುವ ಜನರು ತಮ್ಮ ಆಹಾರದಿಂದ ಕಾರ್ಬೋಹೈಡ್ರೇಟ್ ಮೂಲವಿರುವ ಆಹಾರಗಳನ್ನು ಸೇವಿಸುವುದಿಲ್ಲ. ಕಾರ್ಬೋಹೈಡ್ರೆಟ್‌ ಆಹಾರಗಳು ಗ್ಲೂಕೋಸ್‌ ಮಟ್ಟವನ್ನು ಹೆಚ್ಚಿಸುತ್ತವೆ ಎಂದು ಊಹಿಸುತ್ತಾರೆ. ಆದರೆ ಇದು ತಪ್ಪಾದ ಮಾಹಿತಿ.


BMJ ನಿಯತಕಾಲಿಕೆ ಏನ್‌ ಹೇಳಿದೆ?


BMJ ನಿಯತಕಾಲಿಕದಲ್ಲಿ ಪ್ರಕಟವಾದ ಲೇಖನವು “ತರಕಾರಿಗಳು, ಹಣ್ಣುಗಳು, ಧಾನ್ಯಗಳು, ಕಾಳುಗಳು, ಬೀಜಗಳು ಮತ್ತು ಡೈರಿಗಳಲ್ಲಿ ಸಮೃದ್ಧವಾಗಿರುವ ಆಹಾರಗಳು, ಕಾರ್ಬೋಹೈಡ್ರೇಟ್‌ಗಳ ಎಲ್ಲಾ ಮೂಲಗಳು ಮಧುಮೇಹ ನಿರ್ವಹಣೆಗೆ ಮುಖ್ಯವಾಗಿದೆ” ಎಂದು ಹೇಳಿದೆ.


ಸುಷ್ಮಾ, ಕ್ಲಿನಿಕಲ್ ಡಯೆಟಿಷಿಯನ್ ಮತ್ತು ನ್ಯೂಟ್ರಿಷನಿಸ್ಟ್, ಕೇರ್ ಹಾಸ್ಪಿಟಲ್ಸ್, ಬಂಜಾರಾ ಹಿಲ್ಸ್, ಹೈದರಾಬಾದ್ ಅವರು ಸೂಚಿಸಿರುವಂತೆ ನೀವು ನಿಮ್ಮ ಆಹಾರದಲ್ಲಿ ಸೇರಿಸಬೇಕಾದ 5 ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳು ಇಲ್ಲಿವೆ.


ಮಧುಮೇಹಿಗಳು ತಮ್ಮ ಆಹಾರದಲ್ಲಿ ಸೇರಿಸಬೇಕಾದ 5 ಆರೋಗ್ಯಕರ ಕಾರ್ಬೋಹೈಡ್ರೆಟ್‌ ಆಹಾರಗಳು


ಧಾನ್ಯಗಳು


ಗೋಧಿ, ಜೋಳ, ರಾಗಿ, ಓಟ್ಸ್, ನಂತಹ ಆಹಾರ ಪದಾರ್ಥಗಳು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ. ಈ ಆಹಾರಗಳು ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ ಮತ್ತು ರಕ್ತದಲ್ಲಿ ಗ್ಲೂಕೋಸ್ ಬಿಡುಗಡೆಯನ್ನು ಸ್ಥಿರಗೊಳಿಸುತ್ತದೆ, ಇದು ಮಧುಮೇಹ ರೋಗಿಗಳಿಗೆ ಒಳ್ಳೆಯದು.
ಮತ್ತೊಂದೆಡೆ, ಅಕ್ಕಿ, ಮೈದಾ ಮತ್ತು ಸಕ್ಕರೆಗಳಂತಹ ಸಂಸ್ಕರಿಸಿದ ಧಾನ್ಯಗಳು ಮತ್ತು ಆಹಾರಗಳು ರಕ್ತದಲ್ಲಿ ಗ್ಲೂಕೋಸ್ ಅನ್ನು ತಕ್ಷಣವೇ ಬಿಡುಗಡೆ ಮಾಡುತ್ತವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ವೇಗವಾಗಿ ಹೆಚ್ಚಿಸುತ್ತದೆ. ಆದ್ದರಿಂದ, ಈ ಸರಳ ಕಾರ್ಬೋಹೈಡ್ರೇಟ್‌ಗಳನ್ನು ತಪ್ಪಿಸಬೇಕು.


ಇದನ್ನೂ ಓದಿ: ಪ್ರೋಟೀನ್ ಕೊರತೆ ಇದ್ರೆ ಈ ಹಣ್ಣುಗಳೇ ಪರಿಹಾರವಂತೆ


ಪ್ರೋಟೀನ್‌ಗಳು ಮತ್ತು ಕಾಳುಗಳು


ಮಧುಮೇಹಿ ರೋಗಿಗಳಿಗೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಎಲ್ಲಾ ರೀತಿಯ ದ್ವಿದಳ ಧಾನ್ಯಗಳಾದ ರಾಜ್ಮಾ, ಕಡಲೆ ಬೇಳೆ ಮತ್ತು ಉದ್ದಿನಬೇಳೆಗಳನ್ನು ಸೇವಿಸಲು ಸಲಹೆ ನೀಡಲಾಗುತ್ತದೆ. ಪ್ರಾಣಿ ಪ್ರೋಟೀನ್‌ಗಳ ವಿಷಯದಲ್ಲಿ, ಕೋಳಿ, ಮೀನು ಮತ್ತು ಮೊಟ್ಟೆಗಳಂತಹ ಮಾಂಸವನ್ನು ಸೇವಿಸಬಹುದು. ಕೆಂಪು ಮಾಂಸ ಮತ್ತು ಆರ್ಗನ್ ಮಾಂಸಗಳನ್ನು ತ್ಯಜಿಸಬೇಕು. ಏಕೆಂದರೆ ಅವುಗಳಲ್ಲಿ ಕೊಲೆಸ್ಟ್ರಾಲ್ ಅಧಿಕವಾಗಿರುತ್ತದೆ.


ಹಣ್ಣುಗಳು


ಹೆಚ್ಚಿನ ಕ್ಯಾಲೋರಿ ಹೊಂದಿರುವ ಹಣ್ಣುಗಳಾದ ಮಾವು, ಸೀತಾಫಲ, ಬಾಳೆಹಣ್ಣು, ದ್ರಾಕ್ಷಿ ಮತ್ತು ಚಿಕ್ಕು ಹಣ್ಣನ್ನು ತಿನ್ನಬಾರದು.   ಬದಲಾಗಿ, ಸೇಬು, ಪೇರಳೆ, ಕಿತ್ತಳೆ, ದಾಳಿಂಬೆ, ಪಪ್ಪಾಯಿ ಮತ್ತು ಕಲ್ಲಂಗಡಿಗಳಂತಹ ಹೆಚ್ಚಿನ ಫೈಬರ್ ಹಣ್ಣುಗಳನ್ನು ದಿನಕ್ಕೆ ಕಡಿಮೆ ಪ್ರಮಾಣದಲ್ಲಿ ಸೇವಿಸಬಹುದು.


ನೈಸರ್ಗಿಕ ಸಕ್ಕರೆ ಅಥವಾ ಫ್ರುಕ್ಟೋಸ್ ಎಂಬುದು ಹಣ್ಣುಗಳಲ್ಲಿ ಇರುವ ಕಾರ್ಬೋಹೈಡ್ರೇಟ್‌ಗಳ ಒಂದು ರೂಪವಾಗಿದೆ. ನೀವು ಅವುಗಳನ್ನು ಊಟದ ನಡುವೆ ಸಣ್ಣ ಪ್ರಮಾಣದಲ್ಲಿ ಸೇವಿಸಬಹುದು.


ತರಕಾರಿಗಳು


ಹಸಿರು  ತರಕಾರಿಗಳನ್ನು ದೈನಂದಿನ ಆಹಾರದಲ್ಲಿ ಸೇರಿಸಬೇಕು, ಏಕೆಂದರೆ ಇವು ಫೈಬರ್‌ನ ಉತ್ತಮ ಮೂಲವಾಗಿವೆ. ಬೀಟ್ರೂಟ್ ಮತ್ತು ಆಲೂಗಡ್ಡೆಗಳಂತಹ ಪಿಷ್ಟದ ಬೇರು ತರಕಾರಿಗಳನ್ನು ಸೇವಿಸುವುದು ಕಡಿಮೆ ಮಾಡಿ. ಬದಲಿಗೆ, ಪಿಷ್ಟರಹಿತವಾದ ಸಿಹಿ ಆಲೂಗಡ್ಡೆಗಳನ್ನು ಸೇವಿಸಬೇಕೆಂದು ಸಲಹೆ ನೀಡಲಾಗುತ್ತದೆ. ಏಕೆಂದರೆ ಇವು ಫೈಬರ್ ಮತ್ತು ವಿಟಮಿನ್ ಎ ಯ ಉತ್ತಮ ಮೂಲವಾಗಿವೆ.


ಇದನ್ನೂ ಓದಿ: ತಾಯಿಯಿಂದ ಮಗುವಿಗೂ ಹರಡುತ್ತಾ ಏಡ್ಸ್​? ಮಾರಕ ಕಾಯಿಲೆ ಬಗ್ಗೆ ವೈದ್ಯರು ಏನಂತಾರೆ?


ಡ್ರೈ ಫ್ರೂಟ್ಸ್​ ಮತ್ತು ಬೀಜಗಳು


ಒಣದ್ರಾಕ್ಷಿ ಮತ್ತು ಖರ್ಜೂರಗಳು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುವುದರಿಂದ ಅವುಗಳನ್ನು ಸೇವಿಸುವುದನ್ನು ನಿಲ್ಲಿಸುವುದು ಅಥವಾ ಕಡಿಮೆ ಮಾಡುವುದು ಉತ್ತಮ. ಆದರೆ, ನೀವು ಪ್ರತಿದಿನ ವಾಲ್‌ನಟ್ಸ್ ಮತ್ತು ಬಾದಾಮಿಗಳನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಬಹುದು.

Published by:Sandhya M
First published: