ಸದೃಢ ದೇಹ ಮೆದುಳನ್ನು ಚುರುಕಾಗಿ ಇರಿಸುತ್ತದೆ

news18
Updated:June 20, 2018, 5:04 PM IST
ಸದೃಢ ದೇಹ ಮೆದುಳನ್ನು ಚುರುಕಾಗಿ ಇರಿಸುತ್ತದೆ
news18
Updated: June 20, 2018, 5:04 PM IST
ಸುಜಾತಾ ನಾರಾಯಣ ರಾವ್, ನ್ಯೂಸ್ 18 ಕನ್ನಡ

ದೇಹ ಸದೃಢವಾಗಿದ್ದರೆ, ಆರೋಗ್ಯದ ಜೊತೆಗೆ ಮೆದುಳು ಚುರುಕಾಗಿರುತ್ತದೆ. ಹೀಗೆಂದು ಹೇಳುತ್ತಿರುವುದು ಆಸ್ಟ್ರೇಲಿಯಾದ ವೆಸ್ಟ್ರನ್ ಸಿಡ್ನಿ ವಿಶ್ವವಿದ್ಯಾನಿಲಯದ ಅಧ್ಯಯನ ವರದಿ.

ದೇಹದ ಸದೃಢತೆಗೂ ಮೆದುಳಿನ ಆರೋಗ್ಯಕ್ಕೂ ಸ್ಪಷ್ಟವಾದ ಸಂಬಂಧವಿರುವುದನ್ನು ಈ ಅಧ್ಯಯನ ನಡೆಸಿರುವ ವಿಶ್ವವಿದ್ಯಾನಿಲಯದ ಸಿಬ್ಬಂದಿ ಜೋಸೆಫ್ ಫಿರ್ತ್ ಸಾಬೀತುಮಾಡಿದ್ದಾರೆ.

ಬ್ರಿಟನ್ ಮೂಲದ 475,397 ಜನರಿಂದ ಮಾಹಿತಿ ಸಂಗ್ರಹಿಸಿರುವ ವಿಶ್ವವಿದ್ಯಾನಿಲಯ, ಅವರಲ್ಲಿ ದೇಹ ಸದೃಢವಾಗಿರುವವರು ಬುದ್ಧಿವಂತಿಕೆಗೆ ಸಂಭಂದಿತ ಕಾರ್ಯಗಳಲ್ಲಿ ಉತ್ತಮವಾದ ಫಲಿತಾಂಶ ಸಾಧಿಸಿರುವುದನ್ನು ಗಮನಿಸಲಾಗಿದೆ.

ಸಂಶೋಧನೆಯಲ್ಲಿ ವೇಗ ಪ್ರತಿಕ್ರಿಯೆ, ತಾರ್ಕಿಕ ಸಮಸ್ಯೆ ಪರಿಹಾರ, ಮತ್ತು ನೆನಪಿನ ವಿಭಿನ್ನ ಪರೀಕ್ಷೆಗಳನ್ನು ಮಾಡಲಾಗಿತ್ತು. ಅಧ್ಯಯನದ ಪ್ರಕಾರ ವಯಸ್ಸು, ಲಿಂಗ, ದೇಹದ ತೂಕ ಮತ್ತು ಶಿಕ್ಷಣದಂತಹ ಅನೇಕ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ, ದೃಢವಾದ ದೇಹವುಳ್ಳ ಜನರಿಗೆ ಮೆದುಳು ಉತ್ತಮ ಕಾರ್ಯನಿರ್ವಹಿಸುತ್ತದೆ ಎಂದು ತಿಳಿದು ಬಂದಿದೆ.

ಈ ಫಲಿತಾಂಶದಿಂದ ಮೆದುಳನ್ನು ಚುರುಕಾಗಿರಿಸಲು ಸದೃಢ ದೇಹಕಾಯವೂ ಸಹ ಮುಖ್ಯ ಎಂದು ತಿಳಿದು ಬಂದಿದೆ. ನೀವು ವಾರದಲ್ಲಿ ಕನಿಷ್ಠ ಎರಡು ಮೂರು ಬಾರಿ ದೈಹಿಕ ವ್ಯಾಯಾಮ ಹೆಚ್ಚಿನ ತೀವ್ರತೆಯಿಂದ ಮಾಡಿದರೆ ನಿಮ್ಮ ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಈ ರೀತಿ ದೇಹದ ಸದೃಡತೆ ನಿಮ್ಮ ಮೆದುಳಿಗೆ ಗರಿಷ್ಠ ಲಾಭವನ್ನು ನೀಡುತ್ತದೆ.

 
First published:June 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ