Bones Health: ಮೂಳೆಗಳ ಆರೋಗ್ಯಕರ ಬಲವರ್ಧನೆಗೆ ಯಾವ ಪದಾರ್ಥಗಳ ಸೇವನೆ ಪ್ರಯೋಜನಕಾರಿ?

30 ವರ್ಷ ವಯಸ್ಸಿನ ನಂತರ ಸಾಕಷ್ಟು ಮೂಳೆ ದ್ರವ್ಯರಾಶಿ ನಿರ್ಮಾಣವಾಗಲ್ಲ. ಅಥವಾ ಮೂಳೆ ನಷ್ಟವು ಸಂಭವಿಸಿದರೆ ದುರ್ಬಲ ಮೂಳೆಗಳ ಸಮಸ್ಯೆ ಅಪಾಯ ಹೆಚ್ಚುತ್ತದೆ. ಮೂಳೆಗಳ ಪೋಷಣೆ ಮತ್ತು ಜೀವನಶೈಲಿ ಅಭ್ಯಾಸಗಳು ಬಲವಾದ ಮೂಳೆಗಳ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನಿಮ್ಮ ಮೂಳೆಗಳ ಆರೋಗ್ಯ (Bones Health) ಕಾಪಾಡಲು ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ (Calcium) ಬೇಕು. ಮತ್ತು ಕ್ಯಾಲ್ಸಿಯಂ ಹೀರಿಕೊಳ್ಳಲು ನಿಮ್ಮ ದೇಹಕ್ಕೆ (Body) ವಿಟಮಿನ್ ಡಿ (Vitamin D) ಅಗತ್ಯವಿದೆ. ಕಳಪೆ ಮೂಳೆ ಆರೋಗ್ಯವು ರಿಕೆಟ್ಸ್ ಮತ್ತು ಆಸ್ಟಿಯೊಪೊರೋಸಿಸ್ನಂತಹ ಪರಿಸ್ಥಿತಿಗೆ ಕಾರಣ ಆಗುತ್ತದೆ. ಇದು ದೀರ್ಘಾವಧಿಯಲ್ಲಿ ಮೂಳೆ ಮುರಿತದ ಅಪಾಯ ಹೆಚ್ಚಿಸುತ್ತದೆ. ಅಂತಹ ಸ್ಥಿತಿಯಲ್ಲಿ ಮೂಳೆಗಳ ಬಲ ವರ್ಧನೆಗೆ ತುಂಬಾ ಮುಖ್ಯ. ಬಾಲ್ಯ, ಹದಿಹರೆಯ ಮತ್ತು ಪ್ರೌಢಾವಸ್ಥೆಯಲ್ಲಿ ನಿಮ್ಮ ಮೂಳೆಗಳ ಆರೋಗ್ಯಕ್ಕೆ ಖನಿಜಗಳ ಪದಾರ್ಥಗಳ ಸೇವನೆ ಮುಖ್ಯವಾಗಿ ಬೇಕು. ಆದರೆ 30 ವರ್ಷ ವಯಸ್ಸಿನ ನಂತರ, ಈ ಪ್ರಕ್ರಿಯೆ ನಿಲ್ಲುತ್ತದೆ.

    ಈ ಸಮಯದಲ್ಲಿ ಸಾಕಷ್ಟು ಮೂಳೆ ದ್ರವ್ಯರಾಶಿ ನಿರ್ಮಾಣವಾಗದಿದ್ದರೆ ಅಥವಾ ಮೂಳೆ ನಷ್ಟವು ನಂತರದ ಜೀವನದಲ್ಲಿ ಸಂಭವಿಸಿದರೆ, ದುರ್ಬಲ ಮೂಳೆಗಳ ಸಮಸ್ಯೆ ಅಭಿವೃದ್ಧಿಪಡಿಸುವ ಅಪಾಯ ಹೆಚ್ಚುತ್ತದೆ. ಮೂಳೆಗಳ ಪೋಷಣೆ ಮತ್ತು ಜೀವನಶೈಲಿ ಅಭ್ಯಾಸಗಳು ಬಲವಾದ ಮೂಳೆಗಳ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ. ಮತ್ತು ನಿಮಗೆ ವಯಸ್ಸಾದಂತೆ ಮೂಳೆಗಳ ದೌರ್ಬಲ್ಯ ಹೆಚ್ಚುತ್ತದೆ.

    ದುರ್ಬಲ ಮೂಳೆಗಳಿಂದ ಉಂಟಾಗುವ ಕಾಯಿಲೆಗಳು ಯಾವವು?

    ಮೂಳೆ ಕ್ಯಾನ್ಸರ್, ಮೂಳೆ ಸಾಂದ್ರತೆ, ಮೂಳೆ ಸೋಂಕು, ಆಸ್ಟಿಯೋಜೆನೆಸಿಸ್ ತೊಂದರೆ, ಆಸ್ಟಿಯೊಪೊರೋಸಿಸ್ ಸಮಸ್ಯೆ, ಬೊಂಬೆಯ ಮೂಳೆ ರೋಗ, ರಿಕೆಟ್ಸ್ ಕಾಯಿಲೆ ಉಂಟಾಗುತ್ತದೆ.

    ಇದನ್ನೂ ಓದಿ: ಪಿತ್ತ, ಕಫ ಸಮಸ್ಯೆ ನಿವಾರಣೆಗೆ ಮೆಂತ್ಯ ಬೀಜಗಳನ್ನು ಹೀಗೆ ಬಳಸಿದರೆ ಉತ್ತಮ!

    ಆಹಾರದಲ್ಲಿ ಬಲವರ್ಧಿತ ಹಾಲು

    ನಿಮ್ಮ ಮೂಳೆಗಳಿಗೆ ಪ್ರಮುಖ ಪೋಷಕಾಂಶ ತಲುಪಿಸಲು ಹಾಲು ಉತ್ತಮ ಪಾನೀಯ. ಸಿಡಿಸಿ ಪ್ರಕಾರ, ಬಲವರ್ಧಿತ ಹಾಲು ಮತ್ತು ಹಾಲಿನ ಪರ್ಯಾಯ ಪದಾರ್ಥಗಳು ವಿಟಮಿನ್ ಡಿ, ಕ್ಯಾಲ್ಸಿಯಂ ಮತ್ತು ಪ್ರೋಟೀನ್ ನ್ನು ಒಳಗೊಂಡಿದೆ. ಇದು ಮೂಳೆಯ ಆರೋಗ್ಯ ಕಾಪಾಡುತ್ತದೆ.

    ಹಸುವಿನ ಹಾಲು ಬಲವರ್ಧಿತ ಹಾಲು ಆಗಿದೆ. ಅದು ಹೆಚ್ಚುವರಿ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ. ಇದು ನೈಸರ್ಗಿಕವಾಗಿ ಸಾಮಾನ್ಯ ಹಾಲಿನಲ್ಲಿ ಗಮನಾರ್ಹ ಪ್ರಮಾಣದಲ್ಲಿ ಇರುವುದಿಲ್ಲ. ನೀವು ಲ್ಯಾಕ್ಟೋಸ್‌ ಅಲರ್ಜಿ ಹೊಂದಿದ್ದರೆ ಅಥವಾ ಹಸುವಿನ ಹಾಲನ್ನು ಇಷ್ಟ ಪಡದೇ ಹೋದರೆ ನೀವು ಸೋಯಾ, ಓಟ್ಸ್, ಅಕ್ಕಿ, ತೆಂಗಿನಕಾಯಿ, ಗೋಡಂಬಿ ಮತ್ತು ಬಾದಾಮಿ ಸೇರಿದಂತೆ ಇತರೆ ಸಸ್ಯ ಆಧಾರಿತ ಹಾಲಿನ ಪರ್ಯಾಯ ಸೇವಿಸಿ.

    ಹಸಿರು ಎಲೆಗಳ ತರಕಾರಿ ಸೇವನೆ

    ನೀವು ಡೈರಿ ಆಹಾರ ಸೇವನೆ ಮಾಡದೇ ಹೋದರೆ ಕ್ಯಾಲ್ಸಿಯಂ ಪಡೆಯಲು ಪಾಲಕ್ ಮತ್ತು ಇತರ ಹಸಿರು ಎಲೆಗಳ ತರಕಾರಿಗಳನ್ನು ಸೇವಿಸಿ. ಹಸಿರು  ಎಲೆಗಳ ತರಕಾರಿಗಳು ಕ್ಯಾಲ್ಸಿಯಂನ ಉತ್ತಮ ಮೂಲಗಳಾಗಿವೆ. ಪಾಲಕ್ ನಿಮ್ಮ ಸ್ಮೂಥಿಗೆ ಸೇರಿಸಲು ವಿಶೇಷವಾಗಿ ಉತ್ತಮ ಎಲೆಗಳ ತರಕಾರಿ ಆಗಿದೆ.

    ಪಾಲಕ್ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಲೇಟ್ ನ್ನು ಹೊಂದಿದೆ. ಇದು ಕ್ಯಾಲ್ಸಿಯಂನ್ನು ಬಂಧಿಸುವ ನೈಸರ್ಗಿಕ ಸಂಯುಕ್ತ ಆಗಿದೆ. ಇದು ಮೂತ್ರಪಿಂಡದ ಕಲ್ಲುಗಳಿಗೆ ಕಾರಣ ಆಗುವ ಸಾಧ್ಯತೆ ಹೆಚ್ಚು. ಪಾಲಕ್ ಪದಾರ್ಥಕ್ಕೆ ಪರ್ಯಾಯವಾಗಿ ಎಲೆಕೋಸು ಸೇವಿಸಬಹುದು.

    ಆರೋಗ್ಯಕರ ಮೂಳೆ ಪಡೆಯಲು ಹಾಲು ಮತ್ತು ಮೊಸರು

    ನಿಮಗೆ ಹಾಲು ಕುಡಿಯೋಕೆ ಇಷ್ಟವಿಲ್ಲದಿದ್ದರೆ ಆಹಾರದಲ್ಲಿ ಸೇರಿಸಿ. ಸ್ಮೂಥಿಗಳಿಗೆ ಹಾಲು ಸೇರಿಸಿ. ಇದು ಮೂಳೆಗಳು ಆರೋಗ್ಯಕರವಾಗಿರಲು ಸಹಾಯ ಮಾಡುವ ಉತ್ತಮ ಮಾರ್ಗವಾಗಿದೆ. ಕಡಿಮೆ-ಕೊಬ್ಬಿನ ಹಾಲು, ಮೊಸರು, ಮತ್ತು ಬಲವರ್ಧಿತ ಸೋಯಾ ಹಾಲು ಮುಂತಾದ ಪರ್ಯಾಯಗಳು ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಪ್ರೊಟೀನ್ಗಳ ಎಲ್ಲಾ ಉತ್ತಮ ಮೂಲಗಳಾಗಿವೆ.

    ಮೂಳೆಗಳನ್ನು ಬಲಪಡಿಸಲು ಪ್ರೂನ್ ಜ್ಯೂಸ್

    ಜೀರ್ಣಕ್ರಿಯೆ ಸಮತೋಲನದಲ್ಲಿಡಲು ಹಣ್ಣುಗಳು ಸಹಾಯ ಮಾಡುತ್ತವೆ. ಇದು ಪಿಹೆಚ್ ಮಟ್ಟವನ್ನು ನಿರ್ವಹಿಸುತ್ತದೆ. ಇದು ಕ್ಯಾಲ್ಸಿಯಂ ಮಟ್ಟವನ್ನು ನಿಯಂತ್ರಿಸುತ್ತದೆ. ಒಣಗಿದ ಪ್ಲಮ್ ಅಂದ್ರೆ ಒಣದ್ರಾಕ್ಷಿಗಳು ನಿಮ್ಮ ಮೂಳೆಯ ಆರೋಗ್ಯ ಸುಧಾರಿಸುತ್ತವೆ.

    ಇದನ್ನೂ ಓದಿ: ಪ್ರತಿದಿನ ಹೆಚ್ಚು ಸಕ್ಕರೆ ಸೇವನೆ ಮಾಡುವುದು ಈ ಸಮಸ್ಯೆಗಳಿಗೆ ಕಾರಣವಾಗುತ್ತದೆ

    ದಿನಕ್ಕೆ ಸುಮಾರು 6 ರಿಂದ 12 ಒಣಗಿದ ಪ್ಲಮ್  ಸೇವಿಸುವುದು ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ ಮೂಳೆ ನಷ್ಟಕ್ಕೆ ಸಂಬಂಧಿಸಿದ ಉರಿಯೂತ ಸಮಸ್ಯೆ ಕಡಿಮೆ ಮಾಡುತ್ತದೆ. ಕಿತ್ತಳೆ ರಸ ಕುಡಿಯಬಹುದು. ಇದು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ. ಇದು ಮೂಳೆಯ ಆರೋಗ್ಯ ಕಾಪಾಡುತ್ತದೆ.
    Published by:renukadariyannavar
    First published: