• Home
 • »
 • News
 • »
 • lifestyle
 • »
 • Glowing Skin: ಆರೋಗ್ಯಕರ ಹಾಗೂ ಹೊಳೆಯುವ ತ್ವಚೆಗಾಗಿ ಈ ಟಿಪ್ಸ್​ ಫಾಲೋ ಮಾಡಿ

Glowing Skin: ಆರೋಗ್ಯಕರ ಹಾಗೂ ಹೊಳೆಯುವ ತ್ವಚೆಗಾಗಿ ಈ ಟಿಪ್ಸ್​ ಫಾಲೋ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚರ್ಮದ ಬಗ್ಗೆ ಸರಿಯಾದ ಕಾಳಜಿ ನಿಯಮಿತವಾಗಿ ತೆಗೆದುಕೊಂಡರೆ ನೀವು ನಿಮ್ಮ ಚರ್ಮದ ಸಮಸ್ಯೆ ತೊಡೆದು ಹಾಕಬಹುದಾಗಿದೆ. ಇದು ನಿಮ್ಮ ತ್ವಚೆಯ ಎಲ್ಲಾ ರೀತಿಯ ಸಮಸ್ಯೆ ನಿರ್ಮೂಲನೆ ಮಾಡುತ್ತದೆ. ಡ್ಯಾಜ್ಲಿಂಗ್ ಸ್ಕಿನ್ ಕೇರ್ ನ ಮಾಲಕಿ ಹಾಗೂ ತ್ವಚೆ ತಜ್ಞೆ ಅನಿತಾ ತಲ್ವಾರ್ ಅವರು ಕೆಲವು ಸಲಹೆ ನೀಡಿದ್ದಾರೆ.

ಮುಂದೆ ಓದಿ ...
 • Share this:

  ಪ್ರತಿಯೊಬ್ಬರೂ ತನ್ನ ಚರ್ಮವು (Skin) ಕಲೆಗಳಿಲ್ಲದೆ ಬಿಳಿಯಾಗಬೇಕು (White). ಸಾಫ್ಟ್ ಮತ್ತು ಗ್ಲೋಯಿಂಗ್ (Soft And Glowing) ಆಗಿರಬೇಕು ಅಂತಾ ಇಷ್ಟ ಪಡ್ತಾರೆ. ಆದ್ರೆ ಎಲ್ಲರಿಗೂ ಇದು ಸಾಧ್ಯವಿಲ್ಲ. ಯಾಕಂದ್ರೆ ಪ್ರತಿಯೊಬ್ಬರ ಸ್ಕಿನ್ ಟೋನ್  ಬೇರೆ ಆಗಿರುತ್ತದೆ. ಹಾಗಂತ ನೀವು ಹೊಳೆಯುವ ಚರ್ಮ ಹೊಂದಲು ಸಾಧ್ಯವಿಲ್ಲ ಎಂದೇನಿಲ್ಲ. ಚರ್ಮದ ಬಗ್ಗೆ ಸರಿಯಾದ ಕಾಳಜಿ ನಿಯಮಿತವಾಗಿ ತೆಗೆದುಕೊಂಡರೆ ನೀವು ನಿಮ್ಮ ಚರ್ಮದ ಸಮಸ್ಯೆ ತೊಡೆದು ಹಾಕಬಹುದಾಗಿದೆ. ಇದು ನಿಮ್ಮ ತ್ವಚೆಯ ಎಲ್ಲಾ ರೀತಿಯ ಸಮಸ್ಯೆ ನಿರ್ಮೂಲನೆ ಮಾಡುತ್ತದೆ. ಆದರೆ ಮಾಹಿತಿಯ ಕೊರತೆಯಿಂದಾಗಿ ಕೆಲವರು ಚರ್ಮದ ಮೇಲೆ ಅನೇಕ ಉತ್ಪನ್ನಗಳನ್ನು ಬಳಸಿ, ಚರ್ಮವನ್ನು ಕೆಡಿಸಿಕೊಳ್ತಾರೆ.


  ಹೊಳೆಯುವ ಚರ್ಮ ಪಡೆಯಲು ಏನು ಮಾಡ್ಬೇಕು?  


  ನೀವು ಚರ್ಮದ ಮೇಲೆ ಯಾವ್ಯಾವುದೋ ಪದಾರ್ಥಗಳನ್ನು ಬಳಸಿದರೆ ಚರ್ಮವು ಆರೋಗ್ಯಕರವಾಗಿ ಕಾಣುವ ಬದಲು ಶುಷ್ಕ ಮತ್ತು ನಿರ್ಜೀವವಾಗಿ ಕಾಣಲು ಶುರು ಆಗುತ್ತದೆ. ಇಲ್ಲಿ ಡ್ಯಾಜ್ಲಿಂಗ್ ಸ್ಕಿನ್ ಕೇರ್ ನ ಮಾಲಕಿ ಹಾಗೂ ತ್ವಚೆ ತಜ್ಞೆ ಅನಿತಾ ತಲ್ವಾರ್ ಅವರು ಕೆಲವು ಸಲಹೆ ನೀಡಿದ್ದಾರೆ.


  ಅನಿತಾ ಅವರು ತ್ವಚೆಯನ್ನು ಆರೋಗ್ಯವಾಗಿಡಲು ನೀಡಿರುವ ಸಲಹೆ ನೀವು ಟ್ರೈ ಮಾಡಿ. ಆರೋಗ್ಯಕರ ಚರ್ಮಕ್ಕಾಗಿ ಅವರು ನೀಡಿರುವ ಸಲಹೆಗಳು ಇಲ್ಲಿವೆ. ಸಾಮಾನ್ಯವಾಗಿ ಮಹಿಳೆಯರು ಚರ್ಮದ ಆರೈಕೆಯಲ್ಲಿ ಅನೇಕ ತಪ್ಪು ಮಾಡ್ತಾರೆ. ಈ ತಪ್ಪು ಮಾಡದೇ ಹೋದ್ರೆ ಆರೋಗ್ಯಕರ ಮತ್ತು ಹೊಳೆಯುವ ಚರ್ಮ ಪಡೆಯಬಹುದು.
  ಚರ್ಮದ ಆರೈಕೆಗೆ ಹೈಡ್ರೇಟ್ ಮಾಡಿ


  ಸಾಮಾನ್ಯವಾಗಿ ಚರ್ಮವನ್ನು ಶುದ್ಧೀಕರಿಸಿದ ನಂತರ, ಅದು ಹೈಡ್ರೀಕರಿಸುವುದಿಲ್ಲ. ದೀರ್ಘಕಾಲದವರೆಗೆ ಚರ್ಮದ ಮೇಲೆ ಮಾಯಿಶ್ಚರೈಸರ್ ಅನ್ವಯಿಸಲಾಗುತ್ತದೆ. ಸ್ನಾನದ ನಂತರ ಚರ್ಮದ ನೈಸರ್ಗಿಕ ತೈಲಗಳು ಹೊರ ಬರುತ್ತವೆ. ತೇವಾಂಶದ ಕೊರತೆಯಿಂದ ಕೆಲವರ ಬೆನ್ನಿನಲ್ಲಿ ತುರಿಕೆ ಆಗುತ್ತದೆ. ಮುಖ ಅಥವಾ ದೇಹವಾಗಿರಲಿ ಶುದ್ಧೀಕರಣದ ನಂತರ ಚರ್ಮದ ತೇವಾಂಶ ಉಳಿಸಬೇಕು. ಹೈಡ್ರೇಟಿಂಗ್ ಉತ್ಪನ್ನ ಅನ್ವಯಿಸಿ.


  ಸ್ನಾನದ ನೀರು ತುಂಬಾ ಮೆದುವಾಗಿರದಂತೆ ನೋಡಿಕೊಳ್ಳಿ


  ಸ್ನಾನದ ನೀರು ತುಂಬಾ ಮೆದುವಾಗಿದ್ದರೆ, ಅದು ಸಾಬೂನನ್ನು ಚೆನ್ನಾಗಿ ತೆಗೆದು ಹಾಕುವುದಿಲ್ಲ. ಇದು ಚರ್ಮದ ಮೇಲೆ ಸೋಪ್ ಅನ್ನು ಬಿಡುತ್ತದೆ. ಇದರಲ್ಲಿ ಗಟ್ಟಿಯಾದ ನೀರು ಸುಲಭವಾಗಿ ನೊರೆ ಉಂಟು ಮಾಡಲ್ಲ. ನೀವು ಇನ್ನಷ್ಟು ಕ್ಲೆನ್ಸರ್ ಅನ್ನು ಬಳಸುವಂತೆ ಮಾಡುತ್ತದೆ. ಇದು ಶುಷ್ಕತೆಗೆ ಕಾರಣವಾಗುತ್ತದೆ.


  ನೀರು ತುಂಬಾ ಮೆದು ಮತ್ತು ಗಟ್ಟಿಯಾಗಿರುವುದು ಎರಡೂ ಚರ್ಮಕ್ಕೆ ಹಾನಿಕಾರಕ. ಹಾಗಾಗಿ ತುಂಬಾ ಗಟ್ಟಿಯಾದ ಅಥವಾ ತುಂಬಾ ಮೃದುವಾದ ನೀರನ್ನು ಬಳಸಬೇಡಿ. ಮಧ್ಯಮ ರೀತಿಯ ನೀರು ಉತ್ತಮ.


  ಒತ್ತಡ ನಿಯಂತ್ರಿಸಿ


  ಒತ್ತಡದಿಂದ ಚರ್ಮ ಸೇರಿದಂತೆ ದೇಹದ ಪ್ರತಿಯೊಂದು ಭಾಗಕ್ಕೂ ಹಾನಿ ಉಂಟಾಗುತ್ತದೆ. ಕಡಿಮೆ ಒತ್ತಡ ಅನುಭವಿಸುವ ವಿದ್ಯಾರ್ಥಿಗಳಿಗಿಂತ ಪರೀಕ್ಷೆಯ ಸಮಯದಲ್ಲಿ ಒತ್ತಡ ಅನುಭವಿಸಿದ ವಿದ್ಯಾರ್ಥಿಗಳು ಮೊಡವೆ ಸಮಸ್ಯೆ ಹೆಚ್ಚು ಪಡೆಯುತ್ತಾರೆ ಎಂದು ಸಂಶೋಧನೆಯೊಂದು ಹೇಳಿದೆ.


  ಒತ್ತಡವು ದೇಹದಲ್ಲಿ ಕಾರ್ಟಿಸೋಲ್‌ನಂತಹ ಹಾರ್ಮೋನ್‌ಗಳ ಉತ್ಪಾದನೆ ಹೆಚ್ಚಿಸುತ್ತದೆ, ಇದು ಚರ್ಮವನ್ನು ಎಣ್ಣೆಯುಕ್ತವಾಗಿಸುತ್ತದೆ. ಇದು ಮೊಡವೆಗೆ ಕಾರಣವಾಗುತ್ತದೆ. ಒತ್ತಡ ನಿವಾರಿಸಲು, ಧ್ಯಾನ, ಯೋಗ, ಉಸಿರಾಟದ ವ್ಯಾಯಾಮ ಮಾಡಿ. ಸೈಕ್ಲಿಂಗ್, ವಾಕಿಂಗ್, ಓಡುವುದು ಸಹ ಚರ್ಮವನ್ನು ಆರೋಗ್ಯವಾಗಿಸುತ್ತದೆ.


  ಮನೆಯೊಳಗೆ ಸೂರ್ಯನ ಕಿರಣಗಳ ಪ್ರಭಾವ


  ಮನೆಯೊಳಗೆ ಬರುವ UV ಕಿರಣಗಳು, ವಿಶೇಷವಾಗಿ UVA ಕಿರಣಗಳು ಸುಕ್ಕುಗಳು ಮತ್ತು ವರ್ಣದ್ರವ್ಯದ ನೋಟಕ್ಕೆ ಕಾರಣವಾಗುತ್ತದೆ. ಯಾವಾಗಲೂ SPF ಇರುವ ಮಾಯಿಶ್ಚರೈಸರ್ ಹಚ್ಚಿರಿ. ಇದು ನಿಮ್ಮ ಚರ್ಮಕ್ಕೆ ರಕ್ಷಣೆ ನೀಡುತ್ತದೆ.


  ಇದನ್ನೂ ಓದಿ: ಕೂದಲ ಆರೋಗ್ಯಕ್ಕೆ ಎಣ್ಣೆ ಹಚ್ಚುವ ಸರಿಯಾದ ವಿಧಾನ ಯಾವುದು?


  ಚರ್ಮದ ಎಕ್ಸ್ಫೋಲಿಯೇಟ್ ಮಾಡುವುದು


  ವಯಸ್ಸಾಗುವಿಕೆಯಿಂದ ತ್ವಚೆಯವ ಮೇಲೆ ಪರಿಣಾಮ ಉಂಟಾಗುತ್ತದೆ. ವಯಸ್ಸಾದಂತೆ ಕಾಲಜನ್ ನಷ್ಟವು ಸೂಕ್ಷ್ಮ ರೇಖೆ ಉಂಟು ಮಾಡುತ್ತದೆ. ಸತ್ತ ಚರ್ಮವು ಶೇಖರಣೆಯಾಗುತ್ತದೆ. ಮುಖ ಮತ್ತು ದೇಹದ ಮೇಲೆ ಡೆಡ್ ಸ್ಕಿನ್ ಸೆಲ್ ಆಗುತ್ತವೆ. ತ್ವಚೆ ಡಲ್ ಆಗುತ್ತದೆ. ಹಾಗಾಗಿ ಆಗಾಗ್ಗೆ ತ್ವಚೆಯನ್ನು ಎಕ್ಸ್ ಫೋಲಿಯೇಟ್ ಮಾಡಿ.

  Published by:renukadariyannavar
  First published: