Breakfast Tips:ಬೆಳಗಿನ ತಿಂಡಿ ಬಗ್ಗೆ ಗೊಂದಲವಿದ್ದಲ್ಲಿ ಇಲ್ಲಿದೆ ಪರಿಹಾರ..

Healthy Food: ಬೆಳಗಿನ ತಿಂಡಿಗಳ ಮೇಲೆ ನಮ್ಮ ಇಡೀ ದಿನ ನಿರ್ಧಾರವಾಗುತ್ತದೆ. ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಬೆಳಗಿನ ಸಮಯದಲ್ಲಿ ಪೂರೈಕೆ ಆಗುವುದು ಆರೋಗ್ಯಕ್ಕೆ ಪ್ರಯೋಜನಕಾರಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆರೋಗ್ಯ ವಿಚಾರದದಲ್ಲಿ ಸ್ವಲ್ಪ ಏರುಪೇರಾದರೆ ಸಾಕು ನಾವು ಆಹಾರದ ವಿಚಾರದಲ್ಲಿ ಗೊಂದಲಕ್ಕೀಡಾಗುತ್ತೇವೆ. ದೇಹದ ತೂಕ ಹೆಚ್ಚಾದರೆ ಊಟ ತಿಂಡಿ ಬಿಟ್ಟು ಬಿಡುತ್ತೇವೆ. ಅದರಲ್ಲೂ ಕೆಲವರಂತೂ ಬೆಳಗಿನ ತಿಂಡಿಯನ್ನು ತಿನ್ನುವುದೇ ಇಲ್ಲ. ಆದರೆ ನಮ್ಮ ದೇಹದ ಆರೋಗ್ಯದ ದೃಷ್ಟಿಯಿಂದ ಬೆಳಗಿನ ತಿಂಡಿ ಬಹಳ ಮುಖ್ಯವಾಗುತ್ತದೆ. ಯಾವುದೇ ಕಾರಣಕ್ಕೂ ಅದನ್ನು ತಪ್ಪಿಸಬಾರದು. ತಿಂಡಿ ಪರಿಪೂರ್ಣವಾಗಿ ತಿನ್ನದಿದ್ದರೆ ಕೊನೆ ಪಕ್ಷ ದೇಹಕ್ಕೆ ಪೋಷಕಾಂಶಗಳನ್ನು ನೀಡುವ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಮುಖ್ಯವಾಗುತ್ತದೆ.

ಹಾಗಾದ್ರೆ ಯಾವ ಯಾವ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದರೆ ಪೋಷಕಾಂಶಗಳು ಸಿಗುತ್ತವೆ ಎಂಬ ಪಟ್ಟಿ ಇಲ್ಲಿದೆ.

ಬ್ಲ್ಯಾಕ್ ಟೀ ಅಥವಾ ಗ್ರೀನ್ ಟೀ

ಈ ಬ್ಲ್ಯಾಕ್ ಟೀ ಮತ್ತು ಗ್ರೀನ್ ಟೀ ಗಳಲ್ಲಿ ಕ್ಯಾಲೋರಿಯ ಅಂಶವಿರುವುದಿಲ್ಲ. ನೀವು ಇದನ್ನು ಬೆಳಗ್ಗೆ ಸೇವನೆ ಮಾಡುವುದರಿಂದ ರಿಫ್ರೆಶ್ ಆಗುತ್ತೀರಿ. ಇದು ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೇ ಗ್ರೀನ್ ಟೀ, ಹೃದಯಕ್ಕೆ ಸಂಬಂಧಿಸಿದ ರೋಗಗಳು ಬರುವುದನ್ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ತೂಕ ಇಳಿಸುವ ಆಲೋಚನೆಯಲ್ಲಿದ್ದರೆ ಇದು ಹೆಚ್ಚು ಸಹಾಯ ಮಾಡುತ್ತದೆ. ಇನ್ನು ಗ್ರೀನ್ ಟೀ ಸೇವನೆ ನಿಮ್ಮ ಮೋಡ್ ಬದಲಾಯಿಸುವ ಶಕ್ತಿಯನ್ನು ಹೊಂದಿದೆ. ನೀವು ಬೆಳಗ್ಗೆ ಎದ್ದು ಕೆಲಸ ಆರಂಭಿಸುವ ಮೊದಲು ಬ್ಲ್ಯಾಕ್ ಟೀ ಅಥವಾ ಗ್ರೀನ್ ಟೀ ಕುಡಿಯಿರಿ. ಇದು ರಾತ್ರಿಯ ಒತ್ತಡಗಳನ್ನು ನಿವಾರಣೆ ಮಾಡಿ, ದೇಹಕ್ಕೆ ಪೋಷಕಾಂಶಗಳು ಸಿಗುವಂತೆ ಮಾಡುತ್ತದೆ.

ಧಾನ್ಯಗಳು

ಧಾನ್ಯಗಳಲ್ಲಿ ಹೆಚ್ಚು ಆ್ಯಂಟಿ ಆಕ್ಸಿಡೆಂಟ್​ಗಳಿದ್ದು, ಅವು ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಧಾನ್ಯಗಳ ಸೇವನೆಯಿಂದ ಊರಿಯೂತ ಉಂಟು ಮಾಡುವ ತೊಂದರೆಗಳಿಂದ ಕಾಪಾಡುತ್ತದೆ. ಜೊತೆಗೆ ಅವುಗಳಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಸತು ಮತ್ತು ಕಬ್ಬಿಣದಂತಹ ಖನಿಜಗಳನ್ನು ತುಂಬಿವೆ. ಈ ಧಾನ್ಯಗಳು ಒಟ್ಟಾರೆಯಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಹೃದಯ ಸಂಬಂಧಿಸಿದ ಆರೋಗ್ಯ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳು ಬರದಂತೆ ರಕ್ಷಿಸುತ್ತದೆ. ಈ ಧಾನ್ಯಗಳಲ್ಲಿ ಕಂಡುಬರುವ ಬಿ ಜೀವಸತ್ವಗಳು ನಿಮ್ಮ ದೇಹವು ಆಹಾರವನ್ನು ಶಕ್ತಿಯಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಹಾಗಾಗಿ ಸಾಧ್ಯವಾದಷ್ಟು ಬೆಳಗಿನ ಉಪಹಾರದಲ್ಲಿ ಧಾನ್ಯಗಳನ್ನು ಸೇರಿಸಿ.

ಇದನ್ನೂ ಓದಿ: ಈ ಆಹಾರಗಳಲ್ಲಿದೆ ನಿಮ್ಮ ರೋಗ ನಿರೋಧಕ ಶಕ್ತಿಯ ಗುಟ್ಟು

ಪಾಲಕ್
ನೀವು ಬೆಳಗಿನ ಉಪಹಾರದಲ್ಲಿ ಮೊಟ್ಟೆಯನ್ನಾದರೂ ಸೇವಿಸಿ ಅಥವಾ ಧ್ಯಾನಗಳ ಪದಾರ್ಥವನ್ನಾದರು, ಅದರ ಜೊತೆ ಈ ಪಾಲಕ್ ಸೊಪ್ಪನ್ನು ಸೇರಿಸಿ ಸೇವಿಸುವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಗಳನ್ನು ನೀಡುತ್ತದೆ. ಮುಖ್ಯವಾಗಿ, ಪಾಲಕದಲ್ಲಿರುವ ಅಂಶಗಳು ನಿಮ್ಮ ಅಪಧಮನಿಗಳನ್ನು ಮಸಾಜ್ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ, ಪಾಲಕ್ ಸೊಪ್ಪಿನಲ್ಲಿರುವ ನೈಟ್ರೇಟ್‌ಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ವಿಶೇಷವಾಗಿ ಮಧುಮೇಹ ಹೊಂದಿರುವವರಿಗೆ ಇದು ಪ್ರಯೋಜನಕಾರಿ.

ಆವಕಾಡೊ ಅಥವಾ ಬೆಣ್ಣೆ ಹಣ್ಣು

ಈ ಹಣ್ಣುಗಳು ಹೃದಯಕ್ಕೆ ಬೇಕಾಗಿರುವ ಆರೋಗ್ಯಕರ ಕೊಬ್ಬು, ನೀರು ಮತ್ತು ಆಹಾರದ ನಾರುಗಳ ವಿಶಿಷ್ಟ ಮಿಶ್ರಣವನ್ನು ಹೊಂದಿವೆ. ಇದು ಮಧುಮೇಹಿಗಳಿಗೂ ಸಹಾಯವಾಗುತ್ತದೆ. ಈ ಹಣ್ಣು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕಡಲೆ ಕಾಯಿ ಬೆಣ್ಣೆ

ಕಡಲೆಕಾಯಿ ಬೆಣ್ಣೆಯಿಂದ ತಯಾರಿಸಿದ ಆಹಾರ ಪದಾರ್ಥ ಕೂಡ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ನೀಡುತ್ತದೆ. ಇದು ಹಲವಾರು ರೋಗಗಳಿಗೆ ಪರಿಹಾರ ನೀಡುದರ ಜೊತೆಗೆ ದೇಹದ ತೂಕವನ್ನು ಸಮತೋಲಿತವಾಗಿ ನಿಭಾಯಿಸಲು ಸಹಾಯ ಮಾಡುತ್ತದೆ.
Published by:Sandhya M
First published: