ಪ್ರತಿಯೊಬ್ಬರೂ ಮನೆಯಲ್ಲಿ (Home) ಬಿಸಿ ಬಿಸಿ ಆಹಾರ (Hot Food) ಸೇವನೆ ಮಾಡಲು ಬಯಸುತ್ತಾರೆ. ಹೀಗಾಗಿ ತುಂಬಾ ಜನರು (People) ಬೆಳಗ್ಗೆ ಮಾಡಿದ ಪದಾರ್ಥಗಳನ್ನು ಫ್ರಿಜ್ ನಲ್ಲಿ ಸಂಗ್ರಹಿಸಿಟ್ಟು, ಸಾಯಂಕಾಲದ ವೇಳೆಗೆ ಮತ್ತೆ ಬಿಸಿ ಮಾಡಿಕೊಂಡು ತಿನ್ನುತ್ತಾರೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ತುಂಬಾ ಜನರು ಕರಿದ ಪದಾರ್ಥಗಳನ್ನು (Fried Ingredients) ತಿನ್ನಲು ಹೆಚ್ಚು ಇಷ್ಟ ಪಡುತ್ತಾರೆ. ಅವುಗಳನ್ನು ಕೊಂಡು ತಂದು ಮತ್ತೆ ಬಿಸಿ ಮಾಡಿಕೊಂಡು ತಿನ್ನುತ್ತಾರೆ. ಆದರೆ ಹೀಗೆ ಪದೇ ಪದೇ ಬಿಸಿ ಮಾಡಿ ಸೇವನೆ ಮಾಡುವ ಕೆಲವು ಪದಾರ್ಥಗಳು ಆರೋಗ್ಯಕ್ಕೆ (health) ಹಾನಿ ಉಂಟು ಮಾಡುತ್ತವೆ ಎಂದು ಹೇಳಲಾಗಿದೆ.
ಮೈಕ್ರೋವೇವ್ ನಲ್ಲಿ ಪದಾರ್ಥ ಬಿಸಿ ಮಾಡುವುದು
ಬಿಸಿ ಆಹಾರ ಆರೋಗ್ಯಕ್ಕೆ ಒಳ್ಳೆಯದು. ಆದರೆ ನೀವು ಆಹಾರವನ್ನು ಪದೇ ಪದೇ ಬಿಸಿ ಮಾಡಿದರೆ ಅದರ ಪೌಷ್ಟಿಕಾಂಶ ಮೌಲ್ಯ ಕಡಿಮೆಯಾಗುತ್ತದೆ. ಕೆಲವೊಮ್ಮೆ ಇದು ಆಹಾರದ ರುಚಿಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
ತುಂಬಾ ಜನರು ಆಹಾರವನ್ನು ಬಿಸಿ ಮಾಡಿಯೇ ಊಟ ಮಾಡ್ತಾರೆ. ಆದರೆ ಪದೇ ಪದೇ ಹೀಗೆ ಆಹಾರ ಬಿಸಿ ಮಾಡಿ ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮವಲ್ಲ ಅಂತಾರೆ ತಜ್ಞರು. ಅದರಲ್ಲೂ ಮೈಕ್ರೊವೇವ್ ನಲ್ಲಿ ಆಹಾರ ಬಿಸಿ ಮಾಡುವುದು ಹೆಚ್ಚು ಒಳ್ಳೆಯದಲ್ಲ.
ಮೈಕ್ರೋವೇವ್ ನಲ್ಲಿ ಬಿಸಿ ಮಾಡಿ ಸೇವಿಸುವ ಪದಾರ್ಥಗಳು ನಿಮ್ಮ ಆಹಾರದ ಪಟ್ಟಿಯಲ್ಲಿವೆಯೇ? ಪದೇ ಪದೇ ಬಿಸಿ ಮಾಡಿದ ಪದಾರ್ಥ ಸೇವನೆ ಯಾವೆಲ್ಲಾ ಅಡ್ಡ ಪರಿಣಾಮ ಉಂಟು ಮಾಡುತ್ತದೆ ನೋಡೋಣ.
ತರಕಾರಿಗಳನ್ನು ಎಣ್ಣೆಯಲ್ಲಿ ಪದೇ ಪದೇ ಫ್ರೈ ಮಾಡುವುದು
ಡಾ.ಅದಿತಿ ಶರ್ಮಾ ಅವರ ಪ್ರಕಾರ, ತರಕಾರಿಯನ್ನು ಪದೇ ಪದೇ ಎಣ್ಣೆಯಲ್ಲಿ ಬಿಸಿ ಮಾಡಿದಾಗ ಎಣ್ಣೆಯೂ ಅಷ್ಟೊಂದು ಬಾರಿ ಬಿಸಿಯಾಗುತ್ತದೆ. ಇದು ಟ್ರಾನ್ಸ್‌ಪ್ಯಾಚ್ ಗೆ ಕಾರಣವಾಗುತ್ತದೆ. ಇದು ದೇಹದ ಪೋಷಕಾಂಶಗಳ ಲಭ್ಯತೆ ಕಡಿಮೆ ಮಾಡುತ್ತದೆ ಎಂದು ಹೇಳುತ್ತಾರೆ.
ಇದರ ಪರಿಣಾಮವು ಹೃದಯ ಮತ್ತು ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುತ್ತದೆ. ಅಡುಗೆ ಮಾಡಿದ ತಕ್ಷಣ ಆಹಾರ ಸೇವಿಸಿದರೆ ಅದರಿಂದ ದೇಹವು ಹಲವು ಪ್ರಯೋಜನ ಪಡೆಯುತ್ತದೆ.
ಮೊಟ್ಟೆ, ಕೋಳಿ ಮತ್ತು ಅಣಬೆ ಪದಾರ್ಥ ಪದೇ ಪದೇ ಬಿಸಿ ಮಾಡುವುದು
ಮೊಟ್ಟೆ, ಚಿಕನ್ ಮತ್ತು ಅಣಬೆ ಎಲ್ಲಾ ಪ್ರೋಟೀನ್ ಪೋಷಕಾಂಶದಿಂದ ಸಮೃದ್ಧವಾಗಿದೆ. ಅವುಗಳನ್ನು ಬೇಯಿಸಿದ ತಕ್ಷಣ ಅವು ಒಡೆಯುತ್ತವೆ. ನಿರ್ದಿಷ್ಟವಾಗಿ ಕೋಳಿಯ ಪ್ರೋಟೀನ್ ಸಂಯೋಜನೆಯು ಕೆಂಪು ಮಾಂಸಕ್ಕಿಂತ ಹೆಚ್ಚಿನ ಪ್ರೋಟೀನ್ ಅಂಶ ಹೊಂದಿದೆ.
ಇದನ್ನು ಪದೇ ಪದೇ ಬಿಸಿ ಮಾಡಿದರೆ ಬದಲಾಗುತ್ತಾ ಹೋಗುತ್ತದೆ. ಹಾಗೂ ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚುವರಿ ಒತ್ತಡ ಉಂಟು ಮಾಡುತ್ತದೆ.
ಅನ್ನ
ಬೇಯಿಸಿದ ಅನ್ನದಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆ ಅಪಾಯ ಹೆಚ್ಚು. ಇದು ಆಹಾರ ವಿಷಕ್ಕೆ ಕಾರಣವಾಗಬಹುದು. ಅನ್ನವನ್ನು ಮತ್ತೆ ಬಿಸಿ ಮಾಡಲು ಬಯಸಿದರೆ ಅದನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿಡುವುದು ಮುಖ್ಯ.
ಕೋಣೆಯ ಉಷ್ಣಾಂಶದಲ್ಲಿ ಅನ್ನ ಇಟ್ಟರೆ ಬ್ಯಾಕ್ಟೀರಿಯಾಗಳು ಬೇಗನೆ ಬೆಳೆಯುತ್ತವೆ. ಈ ಸಮಸ್ಯೆ ತಪ್ಪಿಸಲು ಸ್ವಲ್ಪ ಪ್ರಮಾಣದ ಅನ್ನ ಮಾಡಿ ತಾಜಾ ಸೇವಿಸಿ.
ವಿಟಮಿನ್ ಬಿ ಮತ್ತು ಸಿ ನಾಶವಾಗುತ್ತದೆ
ವಿಟಮಿನ್ ಸಿ ಸಮೃದ್ಧ ಪೇರಲ, ನಿಂಬೆ, ಕಿತ್ತಳೆ, ಟ್ಯಾಂಗರಿನ್ ಅನ್ನು ಪದೇ ಪದೇ ಬಿಸಿ ಮಾಡಿ ಸೇವನೆ ಮಾಡುವುದು ತಪ್ಪಿಸಿ. ಅಡುಗೆ ಮಾಡುವಾಗ ವಿಟಮಿನ್ ಸಿ ಸಮೃದ್ಧ ನಿಂಬೆ ಸೇರಿಸುವುದನ್ನು ತಪ್ಪಿಸಿ.
ಊಟದ ಮಧ್ಯದಲ್ಲಿ ನಿಂಬೆ ರಸ ಸೇರಿಸಿದರೆ ಆಹಾರದ ರುಚಿ ಹಾಳಾಗುತ್ತದೆ. ಪೋಹಾ ಮಾಡಿದ ನಂತರವೇ ನಿಂಬೆ ರಸ ಹಿಂಡಿ. ವಿಟಮಿನ್ ಬಿ ಸಮೃದ್ಧ ಆಹಾರ ಬೇಯಿಸಬೇಡಿ. ಗ್ರೇವಿ ಬೇಯಿಸಿದ ನಂತರವೇ ಪನೀರ್ ಹಾಕಿ.
ನೈಟ್ರೇಟ್ ಸಮೃದ್ಧ ತರಕಾರಿಗಳು
ನೈಟ್ರೇಟ್ ಸಮೃದ್ಧ ಪಾಲಕ್, ಬೀಟ್ರೂಟ್, ಕ್ಯಾರೆಟ್, ಮೆಂತ್ಯ ಮತ್ತು ಬಾತುವಾ ತರಕಾರಿಗಳು ಸ್ನಾಯುಗಳನ್ನು ಬಲಪಡಿಸುತ್ತವೆ. ಇದು ದೇಹದಲ್ಲಿ ರಕ್ತದ ಹರಿವು ಹೆಚ್ಚಿಸುತ್ತದೆ.
ಇದನ್ನೂ ಓದಿ: ಮೂಳೆಗಳ ಊತ ಹಾಗೂ ಪಾದಗಳ ಸುಡುವ ಸಂವೇದನೆ ಸಮಸ್ಯೆಗೆ ಕಾರಣವೇನು?
ಪದೇ ಪದೇ ಬಿಸಿ ಮಾಡಿದರೆ ಅದು ಮೊದಲಿಗಿಂತ ಹೆಚ್ಚು ವಿಷಕಾರಿಯಾಗುತ್ತದೆ. ಹಾಗಾಗಿ ಹಸಿಯಾಗಿಯೇ ಅಂದ್ರೆ ಕಚ್ಚಾ ಕ್ಯಾರೆಟ್, ಸೆಲರಿ ಮತ್ತು ಬೀಟ್ರೂಟ್ ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ