Robotic TKA: ಬಿಡದೇ ಕಾಡುವ ನೋವನ್ನು ಕಡಿಮೆ ಮಾಡುವ ರೋಬೋಟಿಕ್ ಟಿಕೆಎ ಚಿಕಿತ್ಸೆ! ಏನಿದು ಹೊಸ ಟ್ರೀಟ್ಮೆಂಟ್?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರಾಣ ಹಿಂಡುವ ಮತ್ತು ಭಯಂಕರವಾಗಿ ಕಾಡುವ ಸಂಧಿವಾತ ಮತ್ತು ಆಸ್ಟಿಯೋಥ್ರೈಟಿಸ್ ಸಮಸ್ಯೆ ನಿವಾರಣೆಗೆ ಕೆಲವೊಂದು ಚಿಕಿತ್ಸೆಗಳಿವೆ. ಅವುಗಳಲ್ಲಿ ರೊಬೊಟಿಕ್ ಟಿಕೆಎ ಎಂಬ ಚಿಕಿತ್ಸೆ ಸಹ ಒಂದಾಗಿದೆ. ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಡಾ. ಸಮರ್ಥ ಆರ್ಯ.

  • Share this:

    ಇತ್ತೀಚಿನ ದಿನಗಳಲ್ಲಿ ತುಂಬಾ ಜನರು (People) ಮಂಡಿನೋವು (Knee Pain), ಮೂಳೆ ನೋವು (Bones Pain) ಮತ್ತು ಸಂಧಿವಾತ ಸಮಸ್ಯೆಯಿಂದ (Arthritis Problem) ಬಳಲುತ್ತಿದ್ದಾರೆ. ತುಂಬಾ ಜನರು ನೋವು ನಿವಾರಕ ಮಾತ್ರೆ ಸೇವನೆ ಮಾಡ್ತಾರೆ. ಇನ್ನು ಕೆಲವರು ನೋವು ನಿವಾರಣೆಗೆ ಹಲವು ಚಿಕಿತ್ಸೆ ಪಡೆಯಲು ನೋಡ್ತಾರೆ. ವಯಸ್ಸಾದಂತೆ ಮೂಳೆಗಳು ಸವೆಯುತ್ತವೆ. ಆಗ ಸಂಧಿವಾತ ಸಮಸ್ಯೆ ಹೆಚ್ಚುತ್ತದೆ. ಇನ್ನು ಕೆಲವು ಪ್ರಸಂಗಗಳಲ್ಲಿ ಕ್ಯಾಲ್ಸಿಯಂ ಕೊರತೆ, ಅನುವಂಶೀಯತೆ, ಬೊಜ್ಜು ಸಹ ಈ ಇದಕ್ಕೆ ಮುಖ್ಯ ಕಾರಣವಾಗುತ್ತದೆ. ವ್ಯಕ್ತಿಯ ದೈಹಿಕ ಚಟುವಟಿಕೆ ಕೊರತೆ, ಸಾಕಷ್ಟು ವಿಟಮಿನ್ ಡಿ ಪಡೆಯದೇ ಇರುವುದು ಸೇರಿದಂತೆ ಹಲವು ಕಾರಣಗಳಿಂದ ಮಂಡಿ ನೋವು ಸಮಸ್ಯೆ ಹೆಚ್ಚುತ್ತದೆ.


    ರೊಬೊಟಿಕ್ ಟಿಕೆಎ (Robotic TKA) ಚಿಕಿತ್ಸೆ


    ಇಂತಹ ಪ್ರಾಣ ಹಿಂಡುವ ಮತ್ತು ಭಯಂಕರವಾಗಿ ಕಾಡುವ ಸಂಧಿವಾತ ಮತ್ತು ಆಸ್ಟಿಯೋಥ್ರೈಟಿಸ್ ಸಮಸ್ಯೆ ನಿವಾರಣೆಗೆ ಕೆಲವೊಂದು ಚಿಕಿತ್ಸೆಗಳಿವೆ. ಅವುಗಳಲ್ಲಿ ರೊಬೊಟಿಕ್ ಟಿಕೆಎ ಎಂಬ ಚಿಕಿತ್ಸೆ ಸಹ ಒಂದಾಗಿದೆ. ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಡಾ. ಸಮರ್ಥ ಆರ್ಯ.


    ರೊಬೊಟಿಕ್ ಟಿಕೆಎ ಎಂದರೇನು?


    ರೊಬೊಟಿಕ್ TKA ಎಂಬುದು ತಂತ್ರಜ್ಞಾನ ಆಧಾರಿತ ಚಿಕಿತ್ಸೆ ಆಗಿದೆ. ಇದರಲ್ಲಿ ಮುಖ್ಯವಾಗಿ ವೈದ್ಯರು ರೋಗಿಯ ಮೊಣಕಾಲಿನ ಸ್ಥಿರತೆ, ಜೋಡಣೆ ಮತ್ತು ಮೊಣಕಾಲಿನ ವ್ಯಾಪ್ತಿಯ ಚಲನೆಯನ್ನು ಮೊದಲು ನಿರ್ಣಯಿಸುತ್ತಾರೆ. ನಂತರ ಮೂಳೆ ಛೇದನ ಮತ್ತು ಪ್ರಾಸ್ಥೆಸಿಸ್‌ ಸ್ಥಾನೀಕರಣದ ಇಂಟ್ರಾಪರೇಟಿವ್ ಜೋಡಣೆ ಮಾಡುವ ಸಾಧ್ಯತೆಯ ಬಗ್ಗೆ ಪರೀಕ್ಷಿಸುತ್ತಾರೆ.




    ರೊಬೊಟಿಕ್ ಟಿಕೆಎ ಮತ್ತು ಯುನಿಕಾಂಡಿಲರ್ ಎಂಬುದು ಮೊಣಕಾಲು ಮರು ಜೋಡಣೆ ಅಂದ್ರೆ ಬದಲಿ ಜೋಡಣೆ ಮಾಡುವ ಚಿಕಿತ್ಸೆ ಆಗಿದೆ. ರೋಬೋಟ್ ಎಂಬ ಪದವು ಪೋಲಿಷ್ ಪದದ ರೋಬೋಟಾ ಎಂಬುದರಿಂದ ಬಂದಿದೆ. ಇದರ್ಥ ಒತ್ತಾಯಪೂರ್ವಕ ಅಥವಾ ಬಲವಂತದ ಕೆಲಸ ಎಂಬರ್ಥ ಕೊಡುತ್ತದೆ.


    ರೊಬೊಟಿಕ್ ಟಿಕೆಎ ಚಿಕಿತ್ಸೆಯಲ್ಲಿ ಯಂತ್ರದ ಸಹಾಯದಿಂದ ಮೂಳೆ ಮತ್ತು ಮೊಣಕಾಲು ಮರು ಜೋಡಣೆ ಮಾಡಲಾಗುತ್ತದೆ. ಇಲ್ಲಿ ಬಹು ಕಾರ್ಯಗಳು ಸ್ವಯಂಚಾಲಿತವಾಗಿ ಆಗುತ್ತವೆ. ಮುಖ್ಯವಾಗಿ ಮೊಣಕಾಲು ನೋವಿನ ಚಿಕಿತ್ಸೆಯಲ್ಲಿ ರೊಬೊಟಿಕ್ ಟಿಕೆಎ ಚಿಕಿತ್ಸೆಯು ಆರ್ತ್ರೋಪ್ಲ್ಯಾಸ್ಟಿ (TKA) ನಲ್ಲಿ ತುಂಬಾ ಪರಿಣಾಮಕಾರಿಯಾಗಿದ್ದು, ಸಾಕಷ್ಟು ಸುಧಾರಣೆ ಕಂಡಿದೆ.


    ಅಸ್ಥಿ ಸಂಧಿವಾತ ಮತ್ತು ಆರ್ಥ್ರೋಪ್ಲಾಸ್ಟಿ ಸಮಸ್ಯೆ


    ಮೊಣಕಾಲಿನ ಆರ್ತ್ರೋಪ್ಲ್ಯಾಸ್ಟಿ (UKA), ಅಸ್ಥಿಸಂಧಿವಾತ (OA) ಹೊಂದಿರುವ ರೋಗಿಗಳಿಗೆ ನೋವು ಕಡಿಮೆ ಮಾಡಲು ಸಮಸ್ಯೆ ತೆಗೆದು ಹಾಕಲು ರೊಬೊಟಿಕ್ ಟಿಕೆಎ ಚಿಕಿತ್ಸೆ ಪರಿಣಾಮಾಮಕಾರಿಯಾಗಿದೆ. ಇನ್ನು ಮೂಳೆ ತಯಾರಿಕೆ ಮತ್ತು ಘಟಕಗಳ ಜೋಡಣೆಯ ನಿಖರತೆ ಸಹ ನೀಡುತ್ತದೆ.


    ಡಾ. ಸಮರ್ಥ ಆರ್ಯ


    ಅಸ್ಥಿರಜ್ಜು ಕೊರತೆ ನಿವಾರಣೆಗೂ ಇದು ಸಹಕಾರಿ ಆಗಿದೆ. ಯುನಿ-ವಿಭಾಗದ ಮೊಣಕಾಲು ಆರ್ತ್ರೋಪ್ಲ್ಯಾಸ್ಟಿ (UKA) ಮತ್ತು ಒಟ್ಟು ಮೊಣಕಾಲಿನ ಆರ್ತ್ರೋಪ್ಲ್ಯಾಸ್ಟಿ (TKA) ಎರಡರಲ್ಲೂ ಈ ಚಿಕಿತ್ಸೆ ಸಹಾಯ ಮಾಡುತ್ತದೆ. ಇದು ಮೂಳೆ ಅಪಾಯ ತಪ್ಪಿಸುತ್ತದೆ.


    ಮೂಳೆಗಳ ಅಸಮ ವಿತರಣೆಯು ಇದು ಮುಂಚಿನ ರೇಡಿಯೊಗ್ರಾಫಿಕ್ ಲೈಸಿಸ್ ಮತ್ತು ನಂತರದ ಅಸೆಪ್ಟಿಕ್ ಸಡಿಲವಾಗುವ ಅಪಾಯಕ್ಕೂ ಕಾರಣವಾಗುತ್ತದೆ. ಹಾಗಾಗಿ ರೋಬೋಟಿಕ್ ಸಿಸ್ಟಮ್‌ಗಳನ್ನು ಇಂಪ್ಲಾಂಟ್ ಗಾತ್ರದಲ್ಲಿ ನಿಖರತೆ ಹೆಚ್ಚಳಕ್ಕೆ ಅಭಿವೃದ್ಧಿಪಡಿಸಲಾಗಿದೆ.


    ಜೊತೆಗೆ ಘಟಕಗಳ ಸ್ಥಾನೀಕರಣ ಮತ್ತು ಮೂಳೆಯ ತಯಾರಿಕೆ ಅಪಾಯ ಕಡಿಮೆ ಮಾಡುತ್ತದೆ. ಪ್ರಾಯೋಗಿಕ ಫಲಿತಾಂಶ ಮತ್ತು ದೀರ್ಘಾವಧಿಯವರೆಗೆ ನೋವು ರಹಿತವಾಗಿ ಬದುಕಲು ಸಹಾಯ ಮಾಡುತ್ತದೆ.


    ರೊಬೊಟಿಕ್ ವಿನ್ಯಾಸಗಳು ಹೀಗಿವೆ…


    ಆಕ್ಟಿವ್: ಶಸ್ತ್ರಚಿಕಿತ್ಸಕರೂ ಇಲ್ಲದಿದ್ದರೂ ಸ್ವತಂತ್ರವಾಗಿ ಕೆಲಸ ಮಾಡುವುದು.


    ಸಾಂದರ್ಭಿಕ ಚಿತ್ರ


    ಪ್ಯಾಸಿವ್ : ಸಂಪೂರ್ಣ ಚಿಕಿತ್ಸೆಯು ನಿರಂತರವಾಗಿ ಮತ್ತು ನೇರವಾಗಿ ಶಸ್ತ್ರ ಚಿಕಿತ್ಸಕಕರ ನಿಯಂತ್ರಣದಲ್ಲಿರುತ್ತದೆ.


    ಸೆಮಿಯಾಕ್ಟಿವ್: ಇಲ್ಲಿ ಶಸ್ತ್ರಚಿಕಿತ್ಸಕರು ಬೇಕು. ಇದರಲ್ಲಿ ವೈದ್ಯರು ಫೀಡ್ ಬ್ಯಾಕ್ ಕೊಡುತ್ತಾರೆ.


    ರೊಬೊಟಿಕ್ ಟಿಕೆಎ ಚಿಕಿತ್ಸೆಯ ಅನುಕೂಲಗಳು


    ನಿಖರವಾಗಿ ಚಿಕಿತ್ಸೆ ನೀಡಲಾಗುತ್ತದೆ.


    ಆಘಾತ ಕಡಿಮೆಯಾಗಿರುತ್ತದೆ.


    ಹೆಚ್ಚು ಸುರಕ್ಷಿತ


    ಹೆಚ್ಚು ಸ್ಥಿರ ಮತ್ತು ನಿಖರವಾಗಿದೆ


    ವೇಗವಾಗಿ ಚೇತರಿಕೆ ಕಾಣಬಹುದು


    ಬೇಗ ಹೊಂದಿಕೊಳ್ಳುತ್ತದೆ.


    ಆತ್ಮವಿಶ್ವಾಸ


    ಶಸ್ತ್ರಚಿಕಿತ್ಸಕಕರು ನಿಯಂತ್ರಿಸಬಹುದಷ್ಟೇ, ಶಸ್ತ್ರಚಿಕಿತ್ಸಕರ ಮೇಲೆ ಇದು ಅವಲಂಬಿತವಾಗಿಲ್ಲ


    ಸುಧಾರಿತ ಉಪಕರಣ ಬಳಕೆ ಮಾಡಲಾಗುತ್ತದೆ


    ಪ್ರಾಯೋಗಿಕವಾಗಿ ಸಾಬೀತುಪಡಿಸಲಾಗಿದೆ


    ಇದನ್ನೂ ಓದಿ: ಅಸ್ತಮಾ ಚಿಕಿತ್ಸೆಯಲ್ಲಿ ಸ್ಟೀರಾಯ್ಡ್ ಬಳಸುತ್ತಾರಾ? ಅದು ರೋಗಿಯ ತೂಕ ಹೆಚ್ಚಿಸುತ್ತಾ?


    ಮಿತಿಗಳು


    ಈ ಚಿಕಿತ್ಸೆ ಬಗ್ಗೆ ದೀರ್ಘಾವಧಿಯ ಫಲಿತಾಂಶದ ಅಧ್ಯಯನಗಳು ಲಭ್ಯವಿಲ್ಲ. ವೆಚ್ಚ ಹೆಚ್ಚಾಗುವ ಸಾಧ್ಯತೆಯೂ ಇದೆ.

    Published by:renukadariyannavar
    First published: