ಕೆಲವೊಮ್ಮೆ ಪುರುಷರಿಗೆ ಸ್ತನಗಳು ಬರೋದೇಕೆ, ಪರಿಹಾರಗಳೇನು? ಇಲ್ಲಿದೆ ಉತ್ತರ

ಸಾಮಾನ್ಯವಾಗಿ, ಎದೆ ಜೋತು ಬಿದ್ದಂತೆ ಕಾಣುವುದು ಒಂದು ರೀತಿಯ ಮುಜುಗರ ಉಂಟು ಮಾಡುತ್ತದೆ. ಎಲ್ಲರ ಎದರು ಶರ್ಟ್​ ತೆಗೆದು ನಿಲ್ಲಬೇಕು ಎಂದಾಗ ಅಸಾಧ್ಯ ಎನಿಸಿಬಿಡುತ್ತದೆ.

news18-kannada
Updated:June 23, 2020, 12:42 PM IST
ಕೆಲವೊಮ್ಮೆ ಪುರುಷರಿಗೆ ಸ್ತನಗಳು ಬರೋದೇಕೆ, ಪರಿಹಾರಗಳೇನು? ಇಲ್ಲಿದೆ ಉತ್ತರ
Health tips
  • Share this:
ದೇಹ ಪ್ರಕೃತಿ ಗಂಡು ಮಕ್ಕಳಲ್ಲಿ ಹಾಗೂ ಹೆಣ್ಣು ಮಕ್ಕಳಿಗೆ ಬೇರೆ ಬೇರೆ ರೀತಿಯಾಗಿರುತ್ತದೆ. ಗಂಡು ಮಕ್ಕಳಿಗೆ ಅವರದ್ದೇ ಆದ ಕೆಲ ಲಕ್ಷಣಗಳು ಇದ್ದರೆ, ಹೆಣ್ಣುಮಕ್ಕಳಿಗೂ ಅದರದ್ದೇ ಆದ ಕೆಲ ಲಕ್ಷಣಗಳಿರುತ್ತವೆ. ಆದರೆ, ಕೆಲವೊಮ್ಮೆ  ಇದು ಅದಲು ಬದಲಾಗುವ ಮೂಲಕ ಸಮಸ್ಯೆ ಎದುರಿಸಬೇಕಾಗುತ್ತದೆ. ಇದರಲ್ಲಿ ಪುರಷ ಸ್ತನ ಅಥವಾ ಗೈನೆಕೊಮಾಸ್ಟಿಯಾ ಸಮಸ್ಯೆ ಕೂಡ ಒಂದು.

ಕೆಲ ಗಂಡಸರಿಗೆ ಸ್ತನ ಕಾಣಿಸಿಕೊಳ್ಳುತ್ತದೆ. ಅಂದರೆ ಎದೆ ಭಾಗ ಜೋತು ಬಿದ್ದಂತೆ ಕಾಣುತ್ತದೆ. ದೇಹದಲ್ಲಿ ಬೊಜ್ಜಿನ ಅಂಶ ಹೆಚ್ಚಾದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಕೆಲವರು ಹೇಳುತ್ತಾರೆ. ಆದರೆ, ವೈದ್ಯರು ಹೇಳುವ ಪ್ರಕಾರ ಹಾರ್ಮೋನ್​ ಸಮಸ್ಯೆ ಎದುರಾದರೆ ಈ ರೀತಿಯ ಸಮಸ್ಯೆ ಎದುರಾಗುತ್ತದೆಯಂತೆ.

ಸಾಮಾನ್ಯವಾಗಿ, ಎದೆ ಜೋತು ಬಿದ್ದಂತೆ ಕಾಣುವುದು ಒಂದು ರೀತಿಯ ಮುಜುಗರ ಉಂಟು ಮಾಡುತ್ತದೆ. ಎಲ್ಲರ ಎದರು ಶರ್ಟ್​ ತೆಗೆದು ನಿಲ್ಲಬೇಕು ಎಂದಾಗ ಅಸಾಧ್ಯ ಎನಿಸಿಬಿಡುತ್ತದೆ. ಇದಕ್ಕೆ ಕಾರಣ ಜೋತು ಬಿದ್ದ ಎದೆ. ಇದರಿಂದ ಕೆಲವರು ಟೀಕೆಗೆ ಒಳಗಾಗುವ ಸಾಧ್ಯತೆಯೂ ಇರುತ್ತದೆ.

ಬೊಜ್ಜು ಹೆಚ್ಚಾಗುವುದರಿಂದ ಸಾಮಾನ್ಯವಾಗಿ ಗೈನೆಕೊಮಾಸ್ಟಿಯಾ ಕಾಣಿಸಿಕೊಳ್ಳುತ್ತದೆ. ಹೀಗಾಗಿ, ವಾಕಿಂಗ್​ ಮಾಡದೆ ಇರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಇನ್ನು, ಆಹಾರದಲ್ಲಿ ನಿಯಂತ್ರಣ ಇಲ್ಲದಿದ್ದರೂ ಈ ಸಮಸ್ಯೆ ಎದುರಾಗುವ ಸಾಧ್ಯತೆ ಇದೆಯಂತೆ.

ಇನ್ನು, ಇದರ ನಿಯಂತ್ರಣಕ್ಕೂ ಕೆಲ ಟಿಪ್ಸ್​ಗಳನ್ನು ನೀಡುತ್ತಾರೆ ವೈದ್ಯರು. ಅದರಲ್ಲಿ ಪ್ರಮುಖವಾದುದು ವಾಕಿಂಗ್​.  ಹೌದು, ನಿತ್ಯ ವಾಕಿಂಗ್​ ಮಾಡುವುದರಿಂದ ದೇಹದಲ್ಲಿ ಬೊಜ್ಜಿನ ಅಂಶ ಕಡಿಮೆ ಆಗುತ್ತದೆ. ಇದರಿಂದ ಎದೆ ಜೋತು ಬೀಳುವುದು ತಪ್ಪುತ್ತದೆ.

 

  

 

URL: Why breast grows in some men what are the solution Here is a details

SEO TITLE: ಕೆಲವೊಮ್ಮೆ ಪುರುಷರಿಗೆ ಸ್ತನಗಳು ಬರೋದೆಕೆ, ಪರಿಹಾರಗಳೇನು? ಇಲ್ಲಿದೆ ಉತ್ತರ | Why breast grows in some men what are the solution Here is a details

 

Excerpt: ಸಾಮಾನ್ಯವಾಗಿ, ಎದೆ ಜೋತು ಬಿದ್ದಂತೆ ಕಾಣುವುದು ಒಂದು ರೀತಿಯ ಮುಜುಗರ ಉಂಟು ಮಾಡುತ್ತದೆ. ಎಲ್ಲರ ಎದರು ಶರ್ಟ್​ ತೆಗೆದು ನಿಲ್ಲಬೇಕು ಎಂದಾಗ ಅಸಾಧ್ಯ ಎನಿಸಿಬಿಡುತ್ತದೆ.

 

Description: Why breast grows in some men what are the solution Here is a details, ಸಾಮಾನ್ಯವಾಗಿ, ಎದೆ ಜೋತು ಬಿದ್ದಂತೆ ಕಾಣುವುದು ಒಂದು ರೀತಿಯ ಮುಜುಗರ ಉಂಟು ಮಾಡುತ್ತದೆ. ಎಲ್ಲರ ಎದರು ಶರ್ಟ್​ ತೆಗೆದು ನಿಲ್ಲಬೇಕು ಎಂದಾಗ ಅಸಾಧ್ಯ ಎನಿಸಿಬಿಡುತ್ತದೆ.
First published:June 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading