Health Tips: ಆಹಾರದಲ್ಲಿ ಪ್ರೋಟೀನ್ ಸೇವನೆ ಹೇಗಿರಬೇಕು..? ಯಾವ ಸಮಯದಲ್ಲಿ ತೆಗೆದುಕೊಳ್ಳಬೇಕು..?

ಹಾಲು, ಮೊಸರು, ಪನ್ನೀರ್‌, ಚಿಕನ್, ಮೊಟ್ಟೆ, ಟೋಫು, ಕಾಳು, ಧಾನ್ಯಗಳು, ತರಕಾರಿ, ಹಣ್ಣುಗಳು ಹೀಗೆ ಪ್ರೋಟೀನ್ ಅಧಿಕವಿರುವ ಆಹಾರಗಳನ್ನು ನೀವು ಹೆಚ್ಚು ಸೇವಿಸಬೇಕಾಗುತ್ತದೆ.

ಪ್ರೋಟೀನ್​ಯುಕ್ತ ಆಹಾರ

ಪ್ರೋಟೀನ್​ಯುಕ್ತ ಆಹಾರ

  • Share this:

ನಮ್ಮ ದೈನಂದಿನ ಆಹಾರದಲ್ಲಿ ಪ್ರೋಟೀನ್ ಅತ್ಯಂತ ಪ್ರಮುಖವಾಗಿದ್ದು ದೇಹದ ಕೋಶಗಳು ಹಾಗೂ ಅಂಗಾಂಶಗಳ ಅಭಿವೃದ್ಧಿಗೆ ಪ್ರೋಟೀನ್ ಅತ್ಯಗತ್ಯವಾಗಿದೆ. ತೂಕ ಇಳಿಸುವಿಕೆಯನ್ನು ಆರೋಗ್ಯಯುತ ವಿಧಾನದಲ್ಲಿ ಅನುಸರಿಸಬೇಕು ಎಂಬುದು ನಿಮ್ಮ ಇಚ್ಛೆಯಾಗಿದ್ದಲ್ಲಿ ನಿಮ್ಮ ಆಹಾರದಲ್ಲಿ ನೀವು ಹೆಚ್ಚಿನ ಪ್ರೋಟೀನ್ ಮೂಲಗಳನ್ನು ಸೇವಿಸಬೇಕಾಗುತ್ತದೆ. ಹಾಲು, ಮೊಸರು, ಪನ್ನೀರ್‌, ಚಿಕನ್, ಮೊಟ್ಟೆ, ಟೋಫು, ಕಾಳು, ಧಾನ್ಯಗಳು, ತರಕಾರಿ, ಹಣ್ಣುಗಳು ಹೀಗೆ ಪ್ರೋಟೀನ್ ಅಧಿಕವಿರುವ ಆಹಾರಗಳನ್ನು ನೀವು ಹೆಚ್ಚು ಸೇವಿಸಬೇಕಾಗುತ್ತದೆ. ಇನ್ನು ಪ್ರೋಟೀನ್‌ಗಳನ್ನು ಹೇಗೆ ತೆಗೆದುಕೊಳ್ಳಬೇಕು? ಯಾವ ಸಮಯದಲ್ಲಿ ತೆಗೆದುಕೊಳ್ಳಬೇಕು? ಎಂಬ ಅಂಶವನ್ನು ಲೇಖನದಲ್ಲಿ ತಿಳಿದುಕೊಳ್ಳೋಣ.


1. ತೂಕ ನಿರ್ವಹಣೆಗೆ:


ಪ್ರೋಟೀನ್ ಅಧಿಕ ಆಹಾರ ಸೇವನೆ ನಿಯಂತ್ರಿಸಿ ಆರೋಗ್ಯಕರವಾಗಿ ತೂಕ ನಿರ್ವಹಿಸುವಲ್ಲಿ ಸಹಕಾರಿಯಾಗಿದೆ. ಕಾರ್ಬೋಹೈಡ್ರೇಟ್ಸ್ ಹಾಗೂ ಫ್ಯಾಟ್ ಅಂಶ ಕಡಿಮೆ ಮಾಡಿ ನಿಮ್ಮ ಆಹಾರದಲ್ಲಿ ಪ್ರೋಟೀನ್ ಸೇವನೆಯನ್ನು ಹೆಚ್ಚು ಮಾಡಿದಂತೆ ತೂಕ ಇಳಿಕೆಯಾಗಿ ಆರೋಗ್ಯಕರ ದೇಹ ಪಡೆಯಬಹುದಾಗಿದೆ. ದಿನದ ಆರಂಭದಲ್ಲಿ ಉಪಾಹಾರವು ಚಯಾಪಚಯ ಕ್ರಿಯೆಯನ್ನು ವೇಗವಾಗಿ ಮಾಡುತ್ತದೆ. ರಾತ್ರಿಯ ಊಟದ ಸಮಯದಲ್ಲಿ ಅರ್ಧಭಾಗ ಕಾರ್ಬೊಹೈಡ್ರೇಟ್ (ಅನ್ನ, ಚಪಾತಿ ಇತ್ಯಾದಿ), ಕಾಲು ಭಾಗ ಪ್ರೋಟೀನ್ ಆಹಾರ ಸೇವಿಸಿ. ಪ್ರೋಟೀನ್‌ನಿಂದ 25% ಒಟ್ಟು ಕ್ಯಾಲೊರಿಯನ್ನು ನೀವು ಪಡೆಯಬೇಕಾಗುತ್ತದೆ.


ಇದನ್ನೂ ಓದಿ:NDA ಪರೀಕ್ಷೆ ಬರೆಯಲು ಮಹಿಳೆಯರಿಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್​

2. ಸ್ನಾಯುಗಳನ್ನು ಬಲಪಡಿಸಲು:


ಸ್ನಾಯುವಿನ ಸಾಮರ್ಥ್ಯ ಹೆಚ್ಚಿಸಲು ಹಾಗೂ ಅವುಗಳನ್ನು ಬಲಪಡಿಸಲು ನೀವು ಆದ್ಯತೆ ನೀಡುತ್ತಿದ್ದೀರಿ ಎಂದಾದಲ್ಲಿ ಪ್ರೋಟೀನ್‌ವುಳ್ಳ ಆಹಾರಗಳನ್ನು ನೀವು ಹೆಚ್ಚು ಸೇವಿಸಬೇಕಾಗುತ್ತದೆ. ಸ್ನಾಯುವಿನ ಆರೋಗ್ಯಕ್ಕೂ ಇದು ಪ್ರಮುಖವಾಗಿದೆ. ವ್ಯಾಯಾಮಕ್ಕೂ ಮುನ್ನ ಸ್ವಲ್ಪ ಪ್ರಮಾಣದಲ್ಲಿ ಪ್ರೋಟೀನ್ ಸೇವಿಸಿ.


3. ಮಧುಮೇಹ:


ಸ್ನಾಯುವಿನ ಸಾಮರ್ಥ್ಯ ಬಲಪಡಿಸಲು ಪ್ರೋಟೀನ್‌ಗಳು ಅಗತ್ಯ ಎಂಬುದನ್ನು ನಾವು ತಿಳಿಸಿದ್ದೇವೆ. ಇದೇ ರೀತಿ ಉತ್ತಮ ಪ್ರೋಟೀನ್ ಸೇವನೆಯಿಂದ ಮಧುಮೇಹ ನಿಯಂತ್ರಣದಲ್ಲಿಡಬಹುದು ಎಂಬುದು ನಿಮಗೆ ಗೊತ್ತೇ..? ಹೌದು ಮಧುಮೇಹಿಗಳು ಸಮತೋಲಿತ ಆಹಾರ ಸೇವಿಸುವುದರಿಂದ ಮಧುಮೇಹ ನಿಯಂತ್ರಣದಲ್ಲಿಡಬಹುದು ಹಾಗೂ ಸಾಮಾನ್ಯ ಜೀವನ ನಡೆಸಬಹುದು.


4. ಗರ್ಭಧಾರಣೆ:


ಮಗುವಿನ ಅಂಗಾಂಶಗಳು ಹಾಗೂ ಆರೋಗ್ಯಕರ ಬೆಳವಣಿಗೆಗೆ ಪ್ರೋಟೀನ್‌ಗಳು ಅತ್ಯಗತ್ಯವಾದುದು. ಗರ್ಭಾವಸ್ಥೆಯಲ್ಲಿ ತಾಯಿ ಹಾಗೂ ಮಗು ಇಬ್ಬರ ಬೆಳವಣಿಗೆಯು ಪ್ರಮುಖವಾದುದು. ಸುರಕ್ಷಿತ ಗರ್ಭಧಾರಣೆಗಾಗಿ ಪ್ರೋಟೀನ್‌ಗಳ ಸೇವನೆ ಮುಖ್ಯವಾಗಿದೆ.


ಪ್ರೋಟೀನ್ ಸೇವನೆಯನ್ನು ತಾಯಿಯು ನಿತ್ಯದ ಆಹಾರದಲ್ಲಿ ಪ್ರತೀ ಬಾರಿಯೂ ಮಾಡಬೇಕಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಪ್ರೋಟೀನ್ ಆವಶ್ಯಕತೆ ಹೆಚ್ಚು ಬೇಕಾಗುತ್ತದೆ.


ಇದನ್ನೂ ಓದಿ:LPG Price Hike: ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್; LPG ಸಿಲಿಂಡರ್​ ಬೆಲೆಯಲ್ಲಿ ಏರಿಕೆ

5. ದೇಹದ ಚೇತರಿಕೆ:


ಅನಾರೋಗ್ಯ, ಶಸ್ತ್ರಚಿಕಿತ್ಸೆ ಇಲ್ಲವೇ ವ್ಯಾಯಾಮದಿಂದ ಉಂಟಾಗಿರುವ ಗಾಯಗಳನ್ನು ಶಮನಗೊಳಿಸಲು ಪ್ರೋಟೀನ್ ಅತ್ಯಗತ್ಯವಾಗಿದೆ. ಅಂಗಾಂಶಗಳನ್ನು ಆರೋಗ್ಯಕರವನ್ನಾಗಿಸಲು ಉತ್ತಮ ಪ್ರೋಟೀನ್ ಅಗತ್ಯವಾಗಿದೆ.


ಈ ಸಮಯದಲ್ಲಿ ನಿತ್ಯವೂ ಪ್ರೋಟೀನ್ ಸೇವನೆ ಮಾಡಬೇಕಾಗುತ್ತದೆ. ಅನಾರೋಗ್ಯ ಇಲ್ಲವೇ ಚೇತರಿಕೆಯ ಸಮಯದಲ್ಲಿ ಪ್ರೋಟೀನ್ ಅಗತ್ಯವಾಗಿರುತ್ತದೆ.
6. ಉತ್ತಮ ನಿದ್ರೆ:


ಪ್ರೋಟೀನ್ ಸೇವನೆಯಿಂದ ಸುಖ ನಿದ್ದೆಯನ್ನು ನೀವು ಪಡೆಯಬಹುದಾಗಿದೆ. ಹಾಗಾಗಿ ನಿದ್ರಿಸುವ ಸಮಯದಲ್ಲಿ ಸ್ವಲ್ಪ ಪ್ರಮಾಣದ ಪ್ರೋಟೀನ್ ಹಾಗೂ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಿ. ಪ್ರೋಟೀನ್‌ನಲ್ಲಿರುವ ಅಮಿನೊ ಆ್ಯಸಿಡ್ ಟ್ರಿಪ್ಟೊಫಾನ್ ನಿದ್ದೆಗೆ ಸಹಾಯ ಮಾಡುತ್ತದೆ.

Published by:Latha CG
First published: