HOME » NEWS » Lifestyle » HEALTH TIPS WHAT IS PANDEMIC PARANOIA HERE IS THE DETAILS ABOUT EPIDEMIC INFECTION STG SCT

Health Tips: ಸಾಂಕ್ರಾಮಿಕ ಭಯ ಎಂದರೇನು?; ಅದರಿಂದ ಹೊರಬರಲು ತಜ್ಞರ ಉಪಯುಕ್ತ ಸಲಹೆ ಇಲ್ಲಿವೆ…

ಕೋವಿಡ್-19 ವೈರಸ್ ಸಾಂಕ್ರಾಮಿಕ ಭ್ರಮೆಯಿಂದಾಗಿ ಜಗತ್ತಿನ ಕೋಟ್ಯಂತರ ಜನರು ಅನಿಶ್ಚಿತತೆ, ಆತಂಕ ಮತ್ತು ಭವಿಷ್ಯದಲ್ಲಿ ಏನಾಗಬಹುದೆಂಬ ಭಯದಲ್ಲಿಯೇ ಬದುಕುತ್ತಿದ್ದಾರೆ.

news18-kannada
Updated:March 4, 2021, 8:32 AM IST
Health Tips: ಸಾಂಕ್ರಾಮಿಕ ಭಯ ಎಂದರೇನು?; ಅದರಿಂದ ಹೊರಬರಲು ತಜ್ಞರ ಉಪಯುಕ್ತ ಸಲಹೆ ಇಲ್ಲಿವೆ…
ಸಾಂದರ್ಭಿಕ ಚಿತ್ರ
  • Share this:
ಕೊರೊನಾ ವೈರಸ್ ಸಾಂಕ್ರಾಮಿಕದಿಂದ ನೀವೇನಾದರೂ ಹೆಚ್ಚಿನ ಆತಂಕ, ಚಿಂತೆ ಮತ್ತು ಅನಿರೀಕ್ಷಿತ ಅಪಾಯಗಳ ಬಗ್ಗೆ ಹೆದರುತ್ತಿದ್ದೀರಾ? ನೀವು ಒಬ್ಬರೇ ಅಲ್ಲ, ಪ್ರಪಂಚದಾದ್ಯಂತ ಜನರು ಇದೇ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆಂದು ವರದಿಗಳು ಸೂಚಿಸಿವೆ. ಇದಕ್ಕೆ ಸಾಂಕ್ರಾಮಿಕ ಭ್ರಮೆ(ಪ್ಯಾಂಡಮಿಕ್ ಪ್ಯಾರಾನೋಯಾ) ಎಂದು ಕರೆಯಲಾಗುತ್ತದೆ.

ಕೋವಿಡ್-19 ಇಡೀ ಜಗತ್ತಿನಲ್ಲೇ ಒಂದು ರೀತಿಯ ಭಯ ಸೃಷ್ಟಿಸಿದ್ದು, ಇದರಿಂದ ಅನೇಕರಿಗೆ ಭಾರಿ ನಷ್ಟವಾಗಿದೆ. ವಿಶ್ವದಾದ್ಯಂತ 2.53 ಮಿಲಿಯನ್ ಜನರು ಬಲಿಯಾಗಿದ್ದು, ಲಕ್ಷಾಂತರ ಜನರು ನಿರುದ್ಯೋಗಿಗಳಾಗಿದ್ದಾರೆ. ಅನೇಕರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಶೋಕದಲ್ಲಿದ್ದಾರೆ. ಕೋವಿಡ್-19 ಇಡೀ ಜಗತ್ತಿನ ಜನರೇ ಮರೆಯಲಾರದಂತಹ ಅತ್ಯಂತ ಕೆಟ್ಟ ಸಾಂಕ್ರಾಮಿಕ ಕಾಯಿಲೆಯಾಗಿದೆ.

ಕೊರೊನಾ ಸಾಂಕ್ರಾಮಿಕ ಪ್ರಭಾವದಿಂದ ಉಂಟಾದ ಒತ್ತಡ ಹೇಳಲಾಗದು. ಅದು ಪ್ರಪಂಚದ ಕಾರ್ಯವಿಧಾನವನ್ನೇ ಸಂಪೂರ್ಣವಾಗಿ ಬದಲಾಯಿಸಿಬಿಟ್ಟಿದೆ.

ಚೀನಾದ ಕೋವಿಡ್-19 ವೈರಸ್ ಕಾಲಿಟ್ಟ ಕೂಡಲೇ ಅನೇಕ ದೇಶಗಳಲ್ಲಿ ಪ್ರಯಾಣ ನಿಷೇಧ, ಲಾಕ್‌ಡೌನ್‌ಗಳು, ಹೋಮ್ ಕ್ವಾರಂಟೈನ್, ಸ್ಯಾನಿಟೈಸರ್ ಬಳಕೆ, ಮುಖಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ವೈದ್ಯರು ಪಿಪಿಇ ಸೂಟ್‌ಗಳನ್ನು ಧರಿಸುವುದು ಹೀಗೆ ಅನೇಕ ರೀತಿಯ ಬದಲಾವಣೆಗಳನ್ನು ನಾವು ಕಂಡಿದ್ದೇವೆ. ಈ ಸಾಂಕ್ರಾಮಿಕ ಭ್ರಮೆಯಿಂದಾಗಿ ಜಗತ್ತಿನ ಕೋಟ್ಯಂತರ ಜನರು ಅನಿಶ್ಚಿತತೆ, ಆತಂಕ ಮತ್ತು ಭವಿಷ್ಯದಲ್ಲಿ ಏನಾಗಬಹುದೆಂಬ ಭಯದಲ್ಲಿಯೇ ಬದುಕುತ್ತಿದ್ದಾರೆ.

ಇದನ್ನೂ ಓದಿ: Ramesh Jarkiholi: ರಾಸಲೀಲೆ ವಿಡಿಯೋ ಪ್ರಕರಣ; ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ

‘ಈ ಸಾಂಕ್ರಾಮಿಕ ರೋಗವು ಜನರಲ್ಲಿ ಹೆಚ್ಚಿನ ಅನಿಶ್ಚಿತತೆ ಮತ್ತು ಒತ್ತಡವನ್ನುಂಟು ಮಾಡಿದೆ’ ಎಂದು ನ್ಯೂಯಾರ್ಕ್‌ನ ಫೋರೆನ್ಸಿಕ್ ಮನೋವೈದ್ಯ ಡಾ.ಬ್ಯಾಂಡಿ ಎಕ್ಸ್ ಲೀ ಹೇಳಿದ್ದಾರೆ. ‘ದೀರ್ಘಕಾಲದ ಲಾಕ್‌ಡೌನ್ ಪರಿಣಾಮ ಸಾಮಾಜಿಕ ಅಡೆತಡೆ ಮತ್ತು ಆರ್ಥಿಕ ಸಂಕಷ್ಟಕ್ಕೆ ಕಾರಣವಾಯಿತು. ಅಲ್ಲದೇ ಆತ್ಮಹತ್ಯೆ, ಮಾದಕ ದ್ರವ್ಯ ಸೇವನೆ, ಖಿನ್ನತೆ ಮತ್ತು ಕೊಲೆ, ಸುಲಿಗೆಯಂತಹ ಘಟನೆಗಳಿಗೆ ಕಾರಣವಾಯಿತು’ ಎಂದು ಅವರು ಹೇಳಿದ್ದಾರೆ. ‘ಅಮೆರಿಕದಲ್ಲಿನ ಪ್ರಸ್ತುತ ಪರಿಸ್ಥಿತಿ ಮಹಾ ಆರ್ಥಿಕ ಕುಸಿತದ ಸಮಯಕ್ಕಿಂತಲೂ ಕೆಟ್ಟದಾಗಿದೆ. ಸಾಂಕ್ರಾಮಿಕ ರೋಗದ ಪರಿಣಾಮ ದೇಶವು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಯಿತು’ ಎಂದು ವಿಶ್ವ ಮಾನಸಿಕ ಆರೋಗ್ಯ ಒಕ್ಕೂಟದ ಅಧ್ಯಕ್ಷರೂ ಆಗಿರುವ ಲೀ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣಾ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದ ಸುಳ್ಳುಗಳನ್ನು ನಂಬುವಂತೆ ಅವರ ಬೆಂಬಲಿಗರು ಪ್ರಚಾರ ಮಾಡಿದರು. ಸ್ವತಃ ಟ್ರಂಪ್ ಅನೇಕ ಸಂದರ್ಭದಲ್ಲಿ ಕೊರೊನಾ ವೈರಸ್ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿ ಜನರಿಗೆ ತಪ್ಪು ಸಂದೇಶ ನೀಡಿದ್ದರು. ‘ಸ್ಯಾಟರ್ಡೇ ನೈಟ್ ಲೈವ್’ ಕಾರ್ಯಕ್ರಮದ ನಿರೂಪಕ, ಹಾಸ್ಯನಟ ಸೇಥ್ ಮೇಯರ್ಸ್ ಕೂಡ ಭಯ, ಸಾಂಕ್ರಾಮಿಕ ಭ್ರಮೆ ಸೃಷ್ಟಿಸುವಲ್ಲಿ ತಪ್ಪು ಮಾಹಿತಿಯು ದೊಡ್ಡ ಪಾತ್ರ ವಹಿಸಿದೆ ಎಂದು ಹೇಳಿದ್ದರು.

ಕೊರೊನಾ ಸಾಂಕ್ರಾಮಿಕ ರೋಗದಿಂದ ಭಯ, ಆತಂಕ ಮತ್ತು ಸಾಂಕ್ರಾಮಿಕ ಭ್ರಮೆಯುಳ್ಳ ವರ್ತನೆ ಹೊಂದಿರುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಈ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಪ್ರೀತಿಪಾತ್ರರೊಡನೆ ಮಾತನಾಡುವುದು, ನಿದ್ರೆ ಮತ್ತು ವ್ಯಾಯಾಮದಂತಹ ದೈಹಿಕ ಚಟುವಟಿಕೆ ಮಾಡುವುದು ಹಾಗೂ ಆರೋಗ್ಯಕರ ಆಹಾರ ಸೇವಿಸಬೇಕು. ಅನಿಶ್ಚಿತತೆ ಹಾಗೂ ಒತ್ತಡದಿಂದ ಮುಕ್ತರಾಗಿ ಜೀವಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
Published by: Sushma Chakre
First published: March 4, 2021, 8:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories