Health Tips: ಆ್ಯಸಿಡಿಟಿಯಿಂದ ಬಳಲುತ್ತಿದ್ದೀರಾ?; ಮನೆಯಲ್ಲೇ ಇದೆ 2 ಸುಲಭ ಪರಿಹಾರ

Acidity Home Remedies: ಆ್ಯಸಿಡಿಟಿಯ ಸಮಸ್ಯೆ ವಾರಕ್ಕೆ ಎರಡಕ್ಕಿಂತ ಹೆಚ್ಚು ಸಾರಿ ಕಾಣಿಸಿಕೊಳ್ಳುತ್ತಿದೆ ಎಂದರೆ, ಅದು ಆರೋಗ್ಯಕ್ಕೆ ಒಳ್ಳೆಯದಲ್ಲ.ಕೆಲವೊಂದು ಮನೆಮದ್ದುಗಳಿಂದ ಆ್ಯಸಿಡಿಟಿಯ ಸಮಸ್ಯೆಯ ನಿವಾರಣೆ ಸಾಧ್ಯ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:

ಆ್ಯಸಿಡಿಟಿ ಅತ್ಯಂತ ಸಾಮಾನ್ಯ ಮತ್ತು ಯಾವಾಗ ಬೇಕಾದರೂ ಎದುರಾಗಬಲ್ಲ ಸಮಸ್ಯೆ. ಕೆಲವರಿಗೆ ಎಣ್ಣೆ ಅಥವಾ ಮಸಾಲೆ ಪದಾರ್ಥಗಳನ್ನು ಭರ್ಜರಿಯಾಗಿ ತಿಂದ, ಸ್ವಲ್ಪ ಸಮಯದಲ್ಲೇ ಹೊಟ್ಟೆಯಲ್ಲಿ ಉರಿ ಶುರುವಾಗುತ್ತದೆ. ನಿತ್ಯವೂ ಕೊಬ್ಬಿನ ಮತ್ತು ಅನಾರೋಗ್ಯಕರ ಆಹಾರಗಳನ್ನು ತಿನ್ನುವವರಿಗೆ ಹಾಗೂ ಕಡಿಮೆ ನೀರು ಸೇವಿಸುವವರಿಗೆ ಆ್ಯಸಿಡಿಟಿ ಕಟ್ಟಿಟ್ಟ ಬುತ್ತಿ. ಆ್ಯಸಿಡಿಟಿಯ ಸಮಸ್ಯೆ ವಾರಕ್ಕೆ ಎರಡಕ್ಕಿಂತ ಹೆಚ್ಚು ಸಾರಿ ಕಾಣಿಸಿಕೊಳ್ಳುತ್ತಿದೆ ಎಂದರೆ, ಅದು ಆರೋಗ್ಯಕ್ಕೆ ಒಳ್ಳೆಯದಲ್ಲ.ಕೆಲವೊಂದು ಮನೆಮದ್ದುಗಳಿಂದ ಆ್ಯಸಿಡಿಟಿಯ ಸಮಸ್ಯೆಯ ನಿವಾರಣೆ ಸಾಧ್ಯ.


ಮನೆ ಮದ್ದಿನ ಮೇಲೆ ಯಾಕೆ ಅವಲಂಬಿತರಾಗಬೇಕು..?
ನಮಗೆ ಆ್ಯಸಿಡಿಟಿಯ ತೊಂದರೆ ಎಲ್ಲಾದರೂ ಅಥವಾ ಯಾವಾಗ ಬೇಕಾದರೂ ಆಗಬಹುದು. ಆ ಸಂದರ್ಭದಲ್ಲಿ ವೈದ್ಯರನ್ನು ಕಾಣುವುದು ಸಾಧ್ಯವಾಗದಿರಬಹುದು. ಹಾಗಾಗಿ ಶೀಘ್ರ ಪರಿಹಾರ ಪಡೆಯಲು ಮನೆ ಮದ್ದು ಅತ್ಯಂತ ಅಗತ್ಯ. ಜೀರ್ಣ ಸಮಸ್ಯೆಯ ನಿವಾರಣೆಗೆ ಇಲ್ಲಿ ಎರಡು ಸುಲಭ ಮತ್ತು ಪರಿಣಾಮಕಾರಿ ಮನೆಮದ್ದುಗಳ ಬಗ್ಗೆ ತಿಳಿಸಲಾಗಿದೆ.


1. ಅಲೋವೇರಾ ಜ್ಯೂಸ್
ಅಲೋವೇರಾ ತನ್ನ ಔಷಧೀಯ ಗುಣಗಳಿಂದ ಜನಪ್ರಿಯ. ಚರ್ಮದ ಸೋಂಕು ಮತ್ತು ಸುಟ್ಟ ಗಾಯಗಳ ನಿವಾರಣೆಗೆ ಅದು ಪ್ರಯೋಜನಕಾರಿ. ಹಾಗೆಯೇ ಅಲೋವೇರಾ ಸೇವನೆ ದೇಹದಲ್ಲಿನ ವಿಷಕಾರಿ ಅಂಶಗಳನ್ನು ತೆಗೆಯಲು ಸಹಕಾರಿಯಾಗಿದೆ. ಅದರಲ್ಲಿರುವ ಆ್ಯಂಟಿಆಕ್ಸಿಡೆಂಟ್‍ಗಳು, ವಿಟಮಿನ್‍ಗಳು ಹಾಗೂ ಅಮಿನೋ ಆಮ್ಲಗಳು, ಆ್ಯಸಿಡಿಟಿಯ ಸಮಸ್ಯೆಯನ್ನು ಕೂಡ ಶೀಘ್ರವಾಗಿ ಪರಿಹರಿಸಬಲ್ಲವು.


ಸೇವಿಸುವ ವಿಧಾನ:
ಅಲೋವೇರಾ ಎಲೆಯ ಒಳಗಿನ ತಿರುಳನ್ನು / ಲೋಳೆಯನ್ನು ತೆಗೆದುಕೊಂಡು, ಅದಕ್ಕೆ ನೀರು ಸೇರಿಸಿ. ದಿನಕ್ಕೆ 2-3 ಸಲ ಸೇವಿಸಿ.


2. ಮಸಾಲೆ ಪರಿಹಾರ
ಅಡುಗೆ ಮನೆಯ ಕೆಲವೊಂದು ಮಸಾಲೆ ಪದಾರ್ಥಗಳು ನಿಮ್ಮ ಆ್ಯಸಿಡಿಟಿಯ ಸಮಸ್ಯೆಗೆ ಪರಿಹಾರ ನೀಡಬಲ್ಲವು. ಜೀರಿಗೆ, ಏಲಕ್ಕಿ, ದಾಲ್ಚಿನ್ನಿ ಮತ್ತು ಶುಂಠಿ ಪುಡಿ, ಉರಿಯೂತ ನಿವಾರಕ ಅಂಶಗಳನ್ನು ಹೊಂದಿವೆ. ಮುಖ್ಯವಾಗಿ ಜೀರಿಗೆಯಂತೂ ಅಜೀರ್ಣದ ಸಮಸ್ಯೆಗೆ ಅತ್ಯಂತ ಪರಿಣಾಮಕಾರಿ ಪರಿಹಾರ.


ಸೇವಿಸುವ ವಿಧಾನ:
ಒಂದು ಪಾತ್ರೆಯಲ್ಲಿ ಒಂದು ಲೋಟ ನೀರು ಬಿಸಿ ಮಾಡಿ, ಅದಕ್ಕೆ ಜೀರಿಗೆ, ಏಲಕ್ಕಿ, ಶುಂಠಿ ಪುಡಿ ಮತ್ತು ಲವಂಗ ಹಾಕಿ. ಮಂದ ಉರಿಯಲ್ಲಿ ಕಷಾಯ ಚೆನ್ನಾಗಿ ಕುದಿಯಲಿ. ಬಳಿಕ ಅದನ್ನು ತಣ್ಣಗಾಗಲು ಬಿಟ್ಟು , ಸೇವಿಸಿ. ಬೇಕಿದ್ದರೆ ಬೆಲ್ಲ ಸೇರಿಸಬಹುದು.


ಇದನ್ನೂ ಓದಿ: Gold Price Today: ಚಿನ್ನ ಖರೀದಿಸಲು ಯೋಚಿಸುತ್ತಿದ್ದೀರಾ?; ಇಂದಿನ ಬೆಲೆಯ ಮಾಹಿತಿ ಇಲ್ಲಿದೆ

ಎಚ್ಚರಿಕೆಗಳು:
ಊಟವಾದ ಕೂಡಲೇ ಮಲಗಬೇಡಿ. ಹಾಗೆ ಮಾಡುವುದರಿಂದ ಆ್ಯಸಿಡಿಟಿ ಉಂಟಾಗಬಹುದು. ಬದಲಿಗೆ ಪ್ರತೀ ಸಾರಿ ಊಟ ಸೇವಿಸಿದ ನಂತರ 30-40 ನಿಮಿಷ ಕುಳಿತುಕೊಳ್ಳಿ ಅಥವಾ 10-15 ನಿಮಿಷ ನಡೆಯಿರಿ.
- ಕಾರ್ಬೋನೇಟೆಡ್ ಅಥವಾ ಫಿಸ್ಸಿ ಪಾನೀಯಗಳನ್ನು ಕುಡಿಯುವುದು ಒಳ್ಳೆಯದಲ್ಲ.
- ಆ್ಯಸಿಡಿಟಿ ಇದ್ದಾಗ ಸಿಟ್ರಸ್ ಜ್ಯೂಸ್‍ಗಳು (ಲಿಂಬೆ, ಕಿತ್ತಳೆ ಇತ್ಯಾದಿ) ಅಷ್ಟೊಂದು ಒಳ್ಳೆಯದಲ್ಲ.


ಇತರ ಪರಿಹಾರಗಳು:


-ಆ್ಯಸಿಡಿಟಿಯ ಸಮಸ್ಯೆ ಬಂದಾಗ ತಾಜಾ ಅನಾನಸಿನ ರಸವನ್ನು ಕೂಡ ಕುಡಿಯಬಹುದು. ಅದರಲ್ಲಿರುವ ವಿಟಮಿನ್, ಮಿನರಲ್‍ಗಳು ಮತ್ತು ಬ್ರೋಮೆಲೈನ್‍ಗಳು ಜೀರ್ಣದ ಸಮಸ್ಯೆಗಳನ್ನು ಪರಿಹರಿಸುತ್ತವೆ.


-ಬೇಸಿಲ್ ಎಲೆಗಳನ್ನು 5 ನಿಮಿಷ ನೀರಿನಲ್ಲಿ ಕುದಿಸಿ, ಕಷಾಯ ಮಾಡಿ ಕುಡಿಯುವುದರಿಂದಲೂ ಜೀರ್ಣದ ಸಮಸ್ಯೆ ಪರಿಹಾರ ಆಗುತ್ತದೆ.


-ಸೋಂಪು ಕಾಳುಗಳನ್ನು ತಿನ್ನುವುದರಿಂದ ಅಥವಾ ಅದನ್ನು ಕಷಾಯ ಮಾಡಿ ಕುಡಿಯುವುದರಿಂದ ಆ್ಯಸಿಡಿಟಿ ನಿವಾರಣೆ ಆಗುತ್ತದೆ.


-ಬೇಕಿಂಗ್ ಸೋಡಾ ಕೂಡ ಆ್ಯಸಿಡಿಟಿ ನಿವಾರಿಸಬಲ್ಲದು. 1/4ಚಮಚ ಬೇಕಿಂಗ್ ಸೋಡಾವನ್ನು , ಅರ್ಧ ಲೋಟ ನೀರಿಗೆ ಹಾಕಿ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು ಕುಡಿಯುವುದರಿಂದ ಸ್ವಲ್ಪ ಹೊತ್ತಿನವರೆಗೆ ಆ್ಯಸಿಡಿಟಿಯಿಂದ ಮುಕ್ತಿ ಪಡೆಯಬಹುದು.



Published by:Sushma Chakre
First published: