ಎಚ್ಚರ: ನೀವು ಸೇವಿಸುವ ಈ ಆಹಾರಗಳಿಂದ ಕ್ಯಾನ್ಸರ್ ಬರುತ್ತದೆ..!

Health Tips: ಭಾರತವು ಆಲೂಗಡ್ಡೆ ಚಿಪ್ಸ್​ನ ಬಹೃತ್​ ಮಾರುಕಟ್ಟೆಯಾಗಿದೆ. ಹೀಗಾಗಿಯೇ ಅನೇಕ ಕಂಪೆನಿಗಳು ಆಲೂಗಡ್ಡೆ ಚಿಪ್ಸ್​ಗಳನ್ನು ಪ್ಯಾಕೆಟ್​ಗಳ ಮೂಲಕ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಆದರೆ ಇಂತಹ ಚಿಪ್ಸ್​ಗಳಲ್ಲಿ ಸೋಡಿಯಂ ಹಾಗೂ ರಾಸಾಯನಿಕ ಬಣ್ಣಗಳನ್ನು ಬಳಸಲಾಗುತ್ತದೆ. ಇದರಿಂದ ಕೂಡ ಕ್ಯಾನ್ಸರ್ ರೋಗ ಉಂಟಾಗಬಹುದು.

news18
Updated:July 18, 2019, 8:31 PM IST
ಎಚ್ಚರ: ನೀವು ಸೇವಿಸುವ ಈ ಆಹಾರಗಳಿಂದ ಕ್ಯಾನ್ಸರ್ ಬರುತ್ತದೆ..!
@Medical News Today
  • News18
  • Last Updated: July 18, 2019, 8:31 PM IST
  • Share this:
ಆಧುನಿಕ ಜೀವನ ಶೈಲಿ ಮತ್ತು ನಮ್ಮ ಆಹಾರ ಕ್ರಮದಿಂದ ಅನೇಕ ರೀತಿಯ ಅನಾರೋಗ್ಯ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಮುಖ್ಯವಾಗಿ ನಾವು ಸೇವಿಸುವ ದೈನಂದಿನ ಆಹಾರಗಳಿಂದಲೇ ಕ್ಯಾನ್ಸರ್​ ಎಂಬ ಮಾರಕಕ್ಕೆ ತುತ್ತಾಗುತ್ತಿದ್ದೇವೆ ಎಂಬ ಅಚ್ಚರಿಯ ಸಂಗತಿಯನ್ನು ವೈದ್ಯಲೋಕ ಮುಂದಿಟ್ಟಿದೆ.

ಆಹಾರ ಪದ್ದತಿ ಮತ್ತು ಆಹಾರ ಸೇವನೆಯ ಕ್ರಮವು ಶರೀರದಲ್ಲಿ ಕೊಬ್ಬಿನಾಂಶವನ್ನು ಅಧಿಕಗೊಳಿಸಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ. ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಂತಹ ವ ಕೆಲ ಆಹಾರಗಳನ್ನು ಇಲ್ಲಿ ತಿಳಿಸಲಾಗಿದೆ.

ಡಬ್ಬಾದಲ್ಲಿರುವ ಟೊಮ್ಯಾಟೊ: ಟೊಮ್ಯಾಟೊ ಪೇಸ್ಟ್​ನ್ನು ದೀರ್ಘಕಾಲದವರೆಗೆ ಹಾಳಾಗದಂತೆ ಇಡಲು ಬಿಸ್ಫೆನಾಲ್-ಎ ಎಂಬ ರಾಸಾಯನಿಕವನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಡಬ್ಬಾದಲ್ಲಿ ಸಿಗುವ ಇಂತಹ ಟೊಮ್ಯಾಟೊ ಪೇಸ್ಟ್​ಗಳನ್ನು ಹೆಚ್ಚಾಗಿ ಬಳಸುವುದರಿಂದ ಕ್ಯಾನ್ಸರ್​ ರೋಗಕ್ಕೀಡಾಗುವ ಸಾಧ್ಯತೆ ಹೆಚ್ಚಿದೆ.

ಸಂಸ್ಕರಿಸಿದ ಮಾಂಸ:  ಇತ್ತೀಚಿನ ದಿನಗಳಲ್ಲಿ ಸಂಸ್ಕರಿಸಿದ ಆಹಾರ ಉತ್ಪನ್ನಗಳ ಮೊರೆ ಹೋಗುವವರೇ ಹೆಚ್ಚು. ಆದರೆ ಇಂತಹ ಮಾಂಸಾಹಾರಗಳನ್ನು ಕೆಡದಂತೆ ಸಂರಕ್ಷಿಸಿಡಲು ಸೋಡಿಯಂ ನೈಟ್ರೈಟ್​ ರಾಸಾಯನಿಕವನ್ನು ಬಳಸುತ್ತಾರೆ. ಈ ರೀತಿಯ ಸಂಸ್ಕರಿಸಿದ ಮಾಂಸವನ್ನು ಸೇವಿಸುವುದರಿಂದ ಕ್ಯಾನ್ಸರ್ ರೋಗಕ್ಕೆ ಗುರಿಯಾಗುತ್ತೀರಿ.

ಮೈಕ್ರೋವೇವ್ ಪಾಪ್​ಕಾರ್ನ್​: ಮೈಕ್ರೋವೇವ್​ನಲ್ಲಿ ತಯಾರಿಸಿದ ಪಾಪ್​ಕಾರ್ನ್​ನಿಂದ ಕೂಡ ಕ್ಯಾನ್ಸರ್​ ಬರಬಹುದು. ಏಕೆಂದರೆ ಮೈಕ್ರೋವೇವ್​ನಲ್ಲಿ ಪಾಪ್​ಕಾರ್ನ್​ನ್ನು ತಯಾರಿಸಿದರೆ ಪರ್ಫ್ಯೂಕ್ಟಾನೊಯಿಕ್ ಎಂಬ ಆ್ಯಸಿಡ್​ ಉತ್ಪತ್ತಿಯಾಗುತ್ತದೆ. ಹೀಗೆ ಸಿದ್ಧಪಡಿಸುವ ಪಾಪ್​ಕಾರ್ನ್​ನಿಂದ ಕ್ಯಾನ್ಸರ್​ ರೋಗದ ಅಪಾಯ ಹೆಚ್ಚಿದೆ. ಹೀಗಾಗಿಯೇ ಅಮೆರಿಕದಲ್ಲಿ ಪಾಪ್​ಕಾರ್ನ್​ ತಯಾರಿಸುವಾಗ ಸೋಯಾಬೀನ್ ಎಣ್ಣೆಯನ್ನು ಬಳಸುತ್ತಾರೆ.​

ಅಜೈವಿಕ ಹಣ್ಣುಗಳು: ದೀರ್ಘಕಾಲದವರೆಗೆ ಫ್ರಿಜ್​ನಲ್ಲಿಡುವ ಹಣ್ಣುಗಳು ನೋಡಲು ತಾಜಾತಣದಿಂದ ಕೂಡಿರುತ್ತದೆ. ಆದರೆ ಇಂತಹ ಹಣ್ಣುಗಳ ಪದರದ ಮೇಲೆ ರಾಸಾಯನಿಕ ಅಂಶಗಳು ಉಳಿದುಕೊಂಡಿರುತ್ತದೆ. ಇವುಗಳನ್ನು ಹೆಚ್ಚಾಗಿ ತಿನ್ನುವುದರಿಂದ ಕ್ಯಾನ್ಸರ್ ಸಂಭವಿಸುತ್ತದೆ. ಫ್ರಿಜ್​ನಲ್ಲಿ ನಿರ್ದಿಷ್ಟ ಸಮಯದವರೆಗೆ ಮಾತ್ರ ಹಣ್ಣು-ತರಕಾರಿಗಳನ್ನು ಹಿಡುವುದು ಆರೋಗ್ಯಕ್ಕೆ ಒಳ್ಳೆಯದು.

ಇದನ್ನೂ ಓದಿ: ಲೈಂಗಿಕ ಆಸಕ್ತಿ ಹೆಚ್ಚಲು ಈ ಮೂರು ಸುಲಭ ತಂತ್ರ ಉಪಯೋಗಿಸಿ!ಸಾಲ್ಮನ್ ಮೀನು: ಸಾಮಾನ್ಯವಾಗಿ ಸಾಲ್ಮನ್ ಮೀನುಗಳನ್ನು ಸಣ್ಣ ನೀರಿನ ತೊಟ್ಟಿಗಳಲ್ಲಿ ಸಾಕಲಾಗುತ್ತದೆ. ಏಕೆಂದರೆ ಈ ಮೀನುಗಳು ತಮ್ಮದೇ ಜಾತಿಯ ಮೀನುಗಳನ್ನೇ ತಿನ್ನುತ್ತದೆ. ಇದರಿಂದ ಈ ಮೀನುಗಳ ದೇಹದಲ್ಲಿ ಪಾದರಸದಂತಹ ಅಂಶಗಳು ಸಮೃದ್ಧವಾಗಿರುತ್ತದೆ. ಇಂತಹ ಮೀನುಗಳನ್ನು ದೀರ್ಘಕಾಲದವರೆಗೆ ಫ್ರೀಜರ್​​ನಲ್ಲಿರಿಸಿದರೆ ಅದು ವಿಷವಾಗಿ ಪರಿಣಮಿಸುತ್ತದೆ. ಅಮೆರಿಕದ ಅಲಸ್ಕಾದಲ್ಲಿ ತೆರೆದ ನೀರಿನ ತೊಟ್ಟಿಗಳಲ್ಲಿನ ಸಾಲ್ಮನ್ ಮೀನುಗಳನ್ನು ಸೇವಿಸಲು ಅವಕಾಶವಿದೆ. ಅದೇ ರೀತಿ ಫ್ರೀಜರ್​ನಲ್ಲಿರಿಸಿದ ಸಾಲ್ಮನ್​ ಮೀನುಗಳ ಮಾರಾಟವನ್ನು ನಿಷೇಧಿಸಲಾಗಿದೆ. ಇಂತಹ ಮೀನುಗಳನ್ನು ಆಹಾರ ಕ್ರಮದಲ್ಲಿ ಅಳವಡಿಸಿದರೂ ಕ್ಯಾನ್ಸರ್​ ರೋಗ ಉಂಟಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಈ ಕಂಪನಿಗಳಲ್ಲಿ ಡೇಟಿಂಗ್ ಹೋಗಲೂ ಸಿಗುತ್ತೆ ರಜೆ!

ಆಲೂಗೆಡ್ಡೆ ಚಿಪ್ಸ್: ಭಾರತವು ಆಲೂಗಡ್ಡೆ ಚಿಪ್ಸ್​ನ ಬಹೃತ್​ ಮಾರುಕಟ್ಟೆಯಾಗಿದೆ. ಹೀಗಾಗಿಯೇ ಅನೇಕ ಕಂಪೆನಿಗಳು ಆಲೂಗಡ್ಡೆ ಚಿಪ್ಸ್​ಗಳನ್ನು ಪ್ಯಾಕೆಟ್​ಗಳ ಮೂಲಕ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಆದರೆ ಇಂತಹ ಚಿಪ್ಸ್​ಗಳಲ್ಲಿ ಸೋಡಿಯಂ ಹಾಗೂ ರಾಸಾಯನಿಕ ಬಣ್ಣಗಳನ್ನು ಬಳಸಲಾಗುತ್ತದೆ. ಇದರಿಂದ ಕೂಡ ಕ್ಯಾನ್ಸರ್ ರೋಗ ಉಂಟಾಗಬಹುದು.

ಇದನ್ನೂ ಓದಿ: ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳದಿದ್ದರೆ ಯೌವ್ವನ ಕಳೆದು ಹೋಗಬಹುದು!; ಇಲ್ಲಿದೆ ಆತಂಕಕಾರಿ ವಿಚಾರ

ಘನೀಕೃತ ಎಣ್ಣೆ: ತರಕಾರಿಗಳು ಮತ್ತು ಸಸ್ಯಗಳಿಂದ ರಾಸಾಯನಿಕ ಪ್ರಕ್ರಿಯೆಗಳ ಮೂಲಕ ಹೈಡ್ರೋಜನೀಕರಿಸಿದ (ಘನೀಕೃತ) ತೈಲಗಳನ್ನು ತೆಗೆಯಲಾಗುತ್ತದೆ. ಇಂತಹ ತೈಲಗಳಲ್ಲಿ ಒಮೆಗಾ-6 ಪ್ರಮಾಣ ಅಧಿಕವಿರುತ್ತದೆ. ಇವುಗಳನ್ನು ಆಹಾರದಲ್ಲಿ ಸೇರಿಸುವುದರಿಂದ ಕ್ಯಾನ್ಸರ್ ಮತ್ತು ಹೃದಯ ರಕ್ತನಾಳದ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ.

 
First published: June 20, 2019, 12:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading