news18-kannada Updated:February 23, 2021, 1:09 PM IST
ಸಾಂದರ್ಭಿಕ ಚಿತ್ರ
ಹೃದಯಘಾತ ಸಮಸ್ಯೆ ಇತ್ತೀಚಿನ ದಿನದಲ್ಲಿ ದೊಡ್ಡ ಸಮಸ್ಯೆ ಆಗಿ ಕಾಡುತ್ತಿದೆ. ಚಿಕ್ಕ ವಯಸ್ಸಿನವರಲ್ಲಿಯೂ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸುತ್ತಿವೆ. ಇನ್ನು, ಧೂಮಪಾನ, ಮದ್ಯಪಾನ ಮತ್ತು ಮಾದಕ ವಸ್ತು ಬಳಸುವ ಹಿರಿಯ ವ್ಯಕ್ತಿಗಳಲ್ಲಿ ಹೆಚ್ಚಾಗಿ ಹೃದಯ ಸಮಸ್ಯೆ ಕಾಣಿಸುತ್ತದೆ ಎಂದು ಇತ್ತೀಚಿನ ಸಂಶೋಧನೆ ಬಹಿರಂಗಗೊಳಿಸಿದೆ.
ಹೊಸ ಅಧ್ಯಯನವು ಧೂಮಪಾನ, ಮದ್ಯಪಾನ ಚಟಗಳಿಂದ ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಸಮಸ್ಯೆಗಳನ್ನು ಎದುರಿಸುವಂತೆ ಮಾಡುತ್ತದೆ ಎಂದು ಹೇಳಿದೆ. ಇನ್ನು, ಧೂಮಪಾನ, ಮದ್ಯಪಾನ ಮತ್ತು ಮಾದಕ ವಸ್ತು ಬಳಸಿದವರು ಆರಂಭಿಕ ಹೃದಯ ಸಮಸ್ಯೆ ಎದುರಿಸಿದವರಿಗಿಂತ 9 ಪಟ್ಟು ಹೆಚ್ಚು ಅಪಾಯವನ್ನು ಎದುರಿಸುತ್ತಾರೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ.
1.2 ಮಿಲಿಯನ್ ರೋಗಿಗಳ ದಾಖಲೆ ಅಧ್ಯಯನ ಮಾಡಿದ ಸಂಶೋಧಕರು
ಹಾರ್ಟ್ ಎಂಬ ಜರ್ನಲ್ನಲ್ಲಿ ಪ್ರಕಟ ಆಗಿರುವ ವೀಕ್ಷಣಾ ಅಧ್ಯಯನವು, ಒಳಗೊಂಡ ಪೆಡರಲ್ ಇಲಾಖೆಯಿಂದ ರಾಷ್ಟ್ರವ್ಯಾಪಿ ಚಿಕಿತ್ಸೆ ಪಡೆದ 1.2 ಮಿಲಿಯನ್ ರೋಗಿಗಳ ದಾಖಲೆಗಳನ್ನು ಸಂಶೋಧಕರು ಅಧ್ಯಯನ ಮಾಡಿದ್ದಾರೆ.
ಇದನ್ನೂ ಓದಿ: Petrol Price: 2 ದಿನಗಳ ಬಳಿಕ ಇಂದು ಮತ್ತೆ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ
55 ಕ್ಕಿಂತ ಕಡಿಮೆ ವಯಸ್ಸಿನ ಪುರುಷರು ಮತ್ತು 65 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಲ್ಲಿ ಹೃದಯಘಾತ, ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿರುವುದು ಸಂಶೋಧಕರು ಗಮನಿಸಿದ್ದಾರೆ. ಇದರಲ್ಲಿ 1,35,000 ಮಂದಿ ಈ ಮೊದಲೇ ಹೃದಯ ಸಮಸ್ಯೆಯನ್ನು ಅನುಭವಿಸಿದ್ದರು. ಆದರೆ, 7700 ಮಂದಿ 40 ವರ್ಷ ಪ್ರಾಯ ತುಂಬುವ ಮೊದಲು ಆರಂಭಿಕ ಹೃದಯ ಸಮಸ್ಯೆ ಲಕ್ಷಣಗಳನ್ನು ಅನುಭವಿಸಿದ್ದರು.
ಹೃದಯ ಸಮಸ್ಯೆ ಅನುಭವಿಸುತ್ತಿರುವವರು ಹೆಚ್ಚಿನವರು ಧೂಮಪಾನ, ಮದ್ಯಪಾನ ಮತ್ತು ಮಾದಕ ವಸ್ತು ಬಳಸುವವರು ಆಗಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ತಂಬಾಕು ಸೇವನೆ ಕೂಡ ಹೃದಯ ಸಮಸ್ಯೆಗೆ ಕಾರಣ ಎಂಬುದು ಸಂಶೋಧಕರು ಅಧ್ಯಯನದಿಂದ ಪತ್ತೆ ಮಾಡಿದ್ದಾರೆ.
ಚಿಕ್ಕವರು ಇದ್ದಾಗ ದೇಹದ ರಕ್ಷಣೆಗೆ ಬೇಕಾದ ಶಕ್ತಿಯನ್ನು ಒದಗಿಸಿಕೊಳ್ಳಲು ನಾವು ಎಲ್ಲವನ್ನೂ ಮಾಡಬೇಕು ಎಂದು ಎಲ್ಎಸ್ಯು ಶ್ರೆವೆಪೋರ್ಟ್ ಸಂಶೋಧಕರ ತಂಡ ಹೇಳಿಕೊಂಡಿದೆ.
Published by:
Sushma Chakre
First published:
February 23, 2021, 1:09 PM IST