Diet Plan: ಜೋಳ ತಿಂದ್ರೆ ಬೇಗ ತೂಕ ಇಳಿಯುತ್ತಂತೆ ನೋಡಿ; ಚಪಾತಿ ಬದಲು ಇದೇ ಬೆಟರ್ ಅಂತಾರೆ ತಜ್ಞರು !

ಜೋಳದ ಧಾನ್ಯಗಳು ಕಬ್ಬಿಣಾಂಶ, ಮೆಗ್ನೀಶಿಯಂ, ಕಾಪರ್, ಕ್ಯಾಲ್ಸಿಯಂ, ಜಿಂಕ್, ವಿಟಮಿನ್ ಬಿ3 ಮುಂತಾದ ವಿಟಮಿನ್ , ಮಿನರಲ್‍ಗಳು ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿರುವುದರಿಂದ ಅವು ದೇಹದ ಮೂಳೆಗಳ ಆರೋಗ್ಯಕ್ಕೂ ಉತ್ತಮ.

ಜೋಳ

ಜೋಳ

 • Share this:

  ಜೋಳ ಉತ್ತರ ಕರ್ನಾಟಕದ ಮನೆಮಂದಿಯ ನಿತ್ಯದ ಆಹಾರದಲ್ಲಿ ಅವಿಭಾಜ್ಯ ಅಂಗ. ಜೋಳದ ಬಗೆಗಿನ ಅವರ ಪ್ರೀತಿ ಎಂತದ್ದೆಂದರೆ ಮೂರು ಹೊತ್ತು ಜೋಳ ಕೊಟ್ಟರೂ ತಿನ್ನುವ ಅಲ್ಲಿನ ಮಂದಿ, ಜೋಳದ ರೊಟ್ಟಿಯನ್ನಂತೂ ಬಿಟ್ಟಿರಲಾರರು. ಆದರೆ, ಜೋಳ ಈಗ ಉತ್ತರ ಕರ್ನಾಟಕ ಮಾತ್ರವಲ್ಲ, ಬೇರೆ ಪ್ರದೇಶಗಳ ಅಡುಗೆ ಮನೆಗೂ ಲಗ್ಗೆ ಇಡುತ್ತಿದೆ. ಹೌದು, ಕೋವಿಡ್‍ನ ದಾಳಿಯಿಂದ ತತ್ತರಿಸಿ ಹೋಗಿರುವ ಸದ್ಯದ ಈ ಪರಿಸ್ಥಿತಿಯಲ್ಲಿ, ಎಲ್ಲರೂ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಆರೋಗ್ಯಕರ ಆಯ್ಕೆಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಜನರ ಮೆಚ್ಚಿನ ಧಾನ್ಯಗಳ ಪಟ್ಟಿಯಲ್ಲಿ ಜೋಳವು ಕೂಡ ಒಂದು. ಜೋಳ ಆರೋಗ್ಯಕ್ಕೆ ಮಾತ್ರವಲ್ಲ ತೂಕ ಇಳಿಸುವುದಕ್ಕೂ ಸಹಕಾರಿ. ನಿಮ್ಮ ಅಡುಗೆ ಮನೆಗಿನ್ನೂ ಜೋಳದ ಪ್ರವೇಶವಾಗಿಲ್ಲವೇ? ಹಾಗಾದರೆ ಇಂದೇ ತನ್ನಿ. ಯಾಕಂತೀರಾ? ಜೋಳ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ತನ್ನ ಅದ್ಭುತ ರುಚಿಯ ಮೂಲಕ ನಿಮ್ಮ ನಾಲಗೆಯ ರುಚಿ ಮೊಗ್ಗುಗಳನ್ನು ಕೂಡ ಅರಳಿಸುತ್ತದೆ.


  ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಧಾನ್ಯಗಳು ಲಭ್ಯ ಇವೆ. ಆದರೆ, ಜನರು ಹೆಚ್ಚಾಗಿ ಬಯಸುವ ಧಾನ್ಯವೆಂದರೆ ಅದು ಜೋಳ. ಬೇರೆ ಬೇರೆ ಗುಣಮಟ್ಟದಲ್ಲಿ ಲಭ್ಯ ಇರುವ ಜೋಳ, ಅಷ್ಟೊಂದು ದುಬಾರಿ ಕೂಡ ಅಲ್ಲ.


  ಇದನ್ನೂ ಓದಿ:Supersonic Flights: ಬರಲಿವೆ ಶಬ್ಧಕ್ಕಿಂತ ವೇಗವಾಗಿ ಹೋಗೋ ವಿಮಾನಗಳು; ಪ್ರಯಾಣ ಸಮಯ ಅರ್ಧಕ್ಕರ್ಧ ಕಡಿತ !

  ಬೇಸಿಗೆಯಲ್ಲಂತೂ ಇದಕ್ಕೆ ಬೇಡಿಕೆ ಹೆಚ್ಚು. “ ಅತ್ಯಂತ ಆರೋಗ್ಯಕರ ಅಂಟುರಹಿತ ‘ಹೊಸ ಕಿನೋವಾ’” - ಆಯುರ್ವೇದ ವೈದ್ಯೆ ಡಾ. ದಿಕ್ಸಾ ಬವ್ಸಾರ್ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಜೋಳವನ್ನು ವ್ಯಾಖ್ಯಾನಿಸಿದ ರೀತಿಯಿದು.


  ತಾನು ದಿನ ಬಿಟ್ಟು ದಿನ, ಜೋಳದ ರೊಟ್ಟಿಗಳನ್ನು ತಿನ್ನುತ್ತೇನೆ ಏಕೆಂದರೆ, “ಅದು ಜೀರ್ಣಿಸಿಕೊಳ್ಳಲು ಸುಲಭ ಮತ್ತು ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಕಾರಿ” ಎಂದು ತಮ್ಮ ಪೋಸ್ಟ್‌ನಲ್ಲಿ ದಿಕ್ಸಾ ಬರೆದುಕೊಂಡಿದ್ದಾರೆ.


  ಬೇಸಿಗೆಯಲ್ಲಿ ಮಾತ್ರವಲ್ಲದೇ, ನಮ್ಮ ನಿತ್ಯದ ಆಹಾರ ಕ್ರಮದಲ್ಲಿ ಜೋಳ ಏಕೆ ಬಳಸಬೇಕು? ಅದಕ್ಕೆ ಇಲ್ಲಿದೆ ಉತ್ತರ :
  • ಜೋಳ ಅಂಟು ಮುಕ್ತ (ಗ್ಲುಟೆನ್ ಫ್ರೀ) ಧಾನ್ಯ
  • ಜೋಳ ಅತ್ಯಧಿಕ ಫೈಬರ್ ಹೊಂದಿದೆ
  • ಜೋಳವನ್ನು ಆಹಾರವಾಗಿ ಸೇವಿಸುವುದು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಕಾರಿ
  • ಜೋಳದಲ್ಲಿ ಅಧಿಕ ಪ್ರೋಟೀನ್‌ ಇದೆ
  • ಜೋಳದ ಧಾನ್ಯಗಳು ಕಬ್ಬಿಣಾಂಶ, ಮೆಗ್ನೀಶಿಯಂ, ಕಾಪರ್, ಕ್ಯಾಲ್ಸಿಯಂ, ಜಿಂಕ್, ವಿಟಮಿನ್ ಬಿ3 ಮುಂತಾದ ವಿಟಮಿನ್ , ಮಿನರಲ್‍ಗಳು ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿರುವುದರಿಂದ ಅವು ದೇಹದ ಮೂಳೆಗಳ ಆರೋಗ್ಯಕ್ಕೂ ಉತ್ತಮ.


  ಇದನ್ನೂ ಓದಿ:Corona Vaccine: ಸಿಹಿ ಸುದ್ದಿ- ಈ ವರ್ಷದೊಳಗೆ ಭಾರತಕ್ಕೆ ಬರಲಿವೆ ಇನ್ನೂ 4 ಹೊಸ ಕೊರೋನಾ ಲಸಿಕೆಗಳು


  • ಜೋಳವನ್ನು ನಿಯಮಿತವಾಗಿ ತಿಂದರೆ ತೂಕ ಇಳಿಯುವುದರಲ್ಲಿ ಸಂಶಯವಿಲ್ಲ.
  • ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.
  • ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
  • ಜೋಳದ ಆಹಾರ ಸೇವನೆ ದೇಹದ ಸಾಮರ್ಥ್ಯ ಅಥವಾ ಚೈತನ್ಯದ ಮಟ್ಟವನ್ನು ನಿಯಂತ್ರಿಸುತ್ತದೆ.
  • ಜೋಳ ನಮ್ಮ ದೇಹದ ರಕ್ತಪರಿಚಲನೆಯನ್ನು ವೃದ್ಧಿಸುತ್ತದೆ.


  ಜೋಳದಿಂದ ರೊಟ್ಟಿ ಮಾತ್ರವಲ್ಲ, ಲಾಡು, ಕಡುಬು, ಅಂಬಲಿ, ಮುದ್ದೆ, ಉಪ್ಪಿಟ್ಟು , ದೋಸೆ, ತಾಲಿಪಟ್ಟು ಹೀಗೆ ಅನೇಕ ಬಗೆಯ ತರಾವರಿ ಖಾದ್ಯಗಳನ್ನು ತಯಾರಿಸಬಹುದು.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:Latha CG
  First published: