ಹಲವು ರೋಗಗಳಿಗೆ ರಾಮಬಾಣ ಗೋಲ್ಡನ್ ಮಿಲ್ಕ್​: ಇದರ ಬಗ್ಗೆ ನಿಮಗೆಷ್ಟು ಗೊತ್ತು?

ಇದರೊಂದಿಗೆ ದಾಲ್ಚಿನ್ನಿ ಮತ್ತು ಶುಂಠಿಯನ್ನು ಸೇರಿಸಿದರೆ, ಅದರ ಪ್ರಯೋಜನವು ಅನೇಕ ಪಟ್ಟು ಹೆಚ್ಚಾಗುತ್ತದೆ. ದಾಲ್ಚಿನ್ನಿ ಬಳಸುವುದರಿಂದ ಪಾರ್ಕಿನ್ಸನ್ ಕಾಯಿಲೆಯ ಲಕ್ಷಣಗಳನ್ನು ಕಡಿಮೆ ಮಾಡಬಹುದು.

news18-kannada
Updated:May 22, 2020, 12:02 PM IST
ಹಲವು ರೋಗಗಳಿಗೆ ರಾಮಬಾಣ ಗೋಲ್ಡನ್ ಮಿಲ್ಕ್​: ಇದರ ಬಗ್ಗೆ ನಿಮಗೆಷ್ಟು ಗೊತ್ತು?
golden milk
  • Share this:
ಗೋಲ್ಡನ್ ಮಿಲ್ಕ್​...ಈ ಪದ ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಅಂದರೆ ನಾವು ಸಾಮಾನ್ಯವಾಗಿ ಕುಡಿಯುವ ಅರಿಶಿನ ಹಾಲು. ಇದೀಗ ವಿಶ್ವದ ಅನೇಕ ಕಡೆ ಕಾಫಿ ಶಾಪ್​ಗಳಲ್ಲೂ ಸಹ ಗೋಲ್ಡನ್ ಮಿಲ್ಕ್ ಅಥವಾ ಅರಿಶಿನ ಹಾಲು ಮಾರಾಟ ಮಾಡಲಾಗುತ್ತಿದೆ. ಅಂದರೆ ಗೋಲ್ಡನ್ ಮಿಲ್ಕ್​ನಿಂದ ಅನೇಕ ರೀತಿಯ ಆರೋಗ್ಯದ ಪ್ರಯೋಜನಗಳನ್ನು ಪಡೆಯಬಹುದು ಎಂಬುದುಮನವರಿಕೆಯಾಗುತ್ತಿದೆ. ನಿಮಗೆ ಗಾಯಗಳಾದಾಗ ಅಥವಾ ಶೀತದ ಸಮಸ್ಯೆ ಉಂಟಾದಾಗ ಅಜ್ಜಿ ಅಥವಾ ಹಿರಿಯರು ಹಿಂದಿನ ಕಾಲದಲ್ಲಿ ಮೊದಲು ನೀಡುತ್ತಿದ್ದ ಮನೆಮದ್ದೇ ಅರಿಶಿನ ಹಾಲು. ಆದರೆ ಆಧುನಿಕ ಜೀವನ ಶೈಲಿಯಲ್ಲಿ ಅನೇಕರು ಈ ಔಷಧ ವಿಧಾನವನ್ನು ಮರೆತಿದ್ದರು. ಇದೀಗ ಹೆಲ್ತ್‌ಲೈನ್ ವೆಬ್‌ಸೈಟ್ ವರದಿಯೊಂದಿಗೆ ಅರಿಶಿನ ಹಾಲು ಹೇಗೆ ಪ್ರಯೋಜಕ, ಅದರಲ್ಲಿರುವ ಆರೋಗ್ಯಕಾರಿ ಅಂಶಗಳಾವುವು ಎಂಬುದು ಮತ್ತೆ ಚರ್ಚಾ ವಿಷಯವಾಗಿದೆ.

ಆಂಟಿ-ಆಕ್ಸಿಡೆಂಟ್ ಅಂಶ ಸಮೃದ್ಧವಾಗಿದೆ:
ಅರಿಶಿನ ಆಂಟಿ-ಆಕ್ಸಿಡೆಂಟ್ ಗುಣಗಳನ್ನು ಹೊಂದಿರುತ್ತವೆ. ಇದನ್ನು ಅನೇಕ ಆಹಾರ ಪದಾರ್ಥಗಳಲ್ಲಿ ಮತ್ತು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ಇದು ಜೀವಕೋಶಗಳು ನಾಶವಾಗುವುದನ್ನು ತಡೆಯುತ್ತದೆ. ಹಾಗೆಯೇ ದೇಹವನ್ನು ಆಕ್ಸಿಡೇಟಿವ್ ಒತ್ತಡದಿಂದ ಮುಕ್ತವಾಗಿರಿಸುತ್ತದೆ. ಇನ್ನು ಇದನ್ನು ಹಾಲಿನಲ್ಲಿ ಬೆರಸಿ ಕುಡಿಯುವುದರಿಂದ ಮತ್ತಷ್ಟು ಆರೋಗ್ಯಕಾರಿ ಪ್ರಯೋಜನಗಳು ದೇಹಕ್ಕೆ ಲಭಿಸುತ್ತದೆ.

ಆಂಟಿ-ಇನ್​ಫ್ಲಮೆಂಟರಿ ಗುಣಗಳು ಸಮೃದ್ಧವಾಗಿದೆ:
ಗೋಲ್ಡನ್ ಹಾಲಿನಲ್ಲಿ ಅಥವಾ ಅರಿಶಿನದಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಗುಣಗಳಿವೆ. ಉರಿಯೂತ ಅಥವಾ ಗಾಯ ಸಮಸ್ಯೆಗೆ ಇದನ್ನು ಬಳಸಲಾಗುತ್ತದೆ. ಕ್ಯಾನ್ಸರ್, ಆಲ್ಜೈಮರ್, ಹೃದ್ರೋಗ ಮತ್ತು ಮೆಟಾಬಾಲಿಕ್ ಸಿಂಡ್ರೋಮ್‌ ತೊಂದರೆ ಇರುವವರು ಅರಿಶಿನ ಹಾಲನ್ನು ಕುಡಿಯುವುದು ಉತ್ತಮ ಎಂದು ವೈದ್ಯಲೋಕ ಅಭಿಪ್ರಾಯಪಟ್ಟಿದೆ.

ಮೆದುಳಿಗೆ ಪ್ರಯೋಜನಕಾರಿ:
ಗೋಲ್ಡನ್ ಮಿಲ್ಕ್​ ಮೆದುಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಇದರೊಂದಿಗೆ ದಾಲ್ಚಿನ್ನಿ ಮತ್ತು ಶುಂಠಿಯನ್ನು ಸೇರಿಸಿದರೆ, ಅದರ ಪ್ರಯೋಜನವು ಅನೇಕ ಪಟ್ಟು ಹೆಚ್ಚಾಗುತ್ತದೆ. ದಾಲ್ಚಿನ್ನಿ ಬಳಸುವುದರಿಂದ ಪಾರ್ಕಿನ್ಸನ್ ಕಾಯಿಲೆಯ ಲಕ್ಷಣಗಳನ್ನು ಕಡಿಮೆ ಮಾಡಬಹುದು. ಹಾಗೆಯೇ ಶುಂಠಿ ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದರಿಂದ ಜ್ಞಾಪಕ ಶಕ್ತಿ ಸುಧಾರಿಸುತ್ತದೆ.
First published:May 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading