Health Tips: ಮಧುಮೇಹಿಗಳು ಈ ತಪ್ಪುಗಳನ್ನು ಮಾಡಲೇಬೇಡಿ: ಮಾಡಿದರೆ ಅಪಾಯ ತಪ್ಪಿದ್ದಲ್ಲ..!

ನೀವು ನಿಮ್ಮ ಮಧುಮೇಹ ನಿಯಂತ್ರಣದಲ್ಲಿಟ್ಟುಕೊಳ್ಳಲು ಬಯಸಿದರೆ ಕೆಲವು ತಪ್ಪುಗಳನ್ನು ಮಾಡಲೇಬೇಡಿ. ಒಂದು ವೇಳೆ ಅದನ್ನು ಮಾಡಿದ್ದಲ್ಲಿ ಅಪಾಯ ತಪ್ಪಿದ್ದಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈಗಂತೂ ಬಹುತೇಕವಾಗಿ ಪ್ರತಿ ಮನೆಯಲ್ಲಿ ಒಬ್ಬರಾದರೂ ಮಧುಮೇಹ (Diabetes) ಕಾಯಿಲೆಯಿಂದ ಬಳಲುತ್ತಿರುವುದನ್ನು ನಾವು ಕಾಣಬಹುದು. ಹಾಗಂತ ನೀವು ಈ ಕಾಯಿಲೆಯ ಬಗ್ಗೆ ಆತಂಕ ಪಡಬೇಡಿ. ಇದರ ಬಗ್ಗೆ ಜಾಗರೂಕತೆ ಬೆಳೆಸಿಕೊಳ್ಳಿ. ಈ ಕಾಯಿಲೆ ನಿಯಂತ್ರಣದಲ್ಲಿಟ್ಟುಕೊಳ್ಳದೇ ನಿರ್ಲಕ್ಷ್ಯ ಮಾಡಿದರೆ ಮಾತ್ರ ಭಾರಿ ತೊಂದರೆ ಎದುರಿಸಬೇಕಾಗುತ್ತದೆ. ನಾವು ಸೇವಿಸುವ ಆಹಾರ ಮತ್ತು ನಮ್ಮ ಜೀವನಶೈಲಿಯಲ್ಲಿ ಸರಳ ಮಾರ್ಪಾಡುಗಳು ಮಾಡಿಕೊಳ್ಳುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಆರೋಗ್ಯವಾಗಿ ಕಾಪಾಡಿಕೊಂಡು ಮಧುಮೇಹವನ್ನು ನಿಯಂತ್ರಿಸಬಹುದಾಗಿದೆ.

"ಮಧುಮೇಹ ಎನ್ನುವ ಕಾಯಿಲೆ ನಿಮ್ಮ ನಮ್ಮೆಲ್ಲರ ಜೀವನಶೈಲಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರೆ ತಪ್ಪಲ್ಲ. ಏಕೆಂದರೆ ನೀವು ಉತ್ತಮ ಜೀವನಶೈಲಿ ಮತ್ತು ಪೌಷ್ಟಿಕ ಆಹಾರ ಸೇವಿಸುತ್ತಿದ್ದರೆ, ಈ ಕಾಯಿಲೆ ನಿಮ್ಮ ಮೇಲೆ ಹೆಚ್ಚಾಗಿ ಪರಿಣಾಮ ಬಿರುವುದಿಲ್ಲ. ಒಂದು ವೇಳೆ ನೀವೇನಾದರೂ ಕಳಪೆ ಜೀವನಶೈಲಿ ಅನುಸರಿಸುತ್ತಿದ್ದು ಮತ್ತು ಆಹಾರ ಕ್ರಮ ಸರಿಯಾಗಿಲ್ಲದಿದ್ದಲ್ಲಿ ಈ ಟೈಪ್-2 ಮಧುಮೇಹಕ್ಕೆ ಸುಲಭವಾಗಿ ತುತ್ತಾಗಬಹುದು.

effexts of Diabetes, symptoms of Diabetes, blood sugar levels, Saliva production in mouth is impacted by blood sugar levels, ಸಕ್ಕರೆ ಕಾಯಿಲೆ, ಮಧುಮೇಹ, ರೋಗ ಲಕ್ಷಣಗಳು, ಕಾಯಿಲೆ ಲಕ್ಷಣಗಳು, ಮಧುಮೇಹ ಲಕ್ಷಣಗಳು, Diabetes, Diabetes symptoms, Diabetic patient, Sugar level, Blood sugar level, Symptoms
ಪ್ರಾತಿನಿಧಿಕ ಚಿತ್ರ


“ಸಮತೋಲಿತ ಆಹಾರ ಮತ್ತು ಸುಧಾರಿತ ಜೀವನಶೈಲಿಯಿಂದ ಎಂತಹ ಮಧುಮೇಹವನ್ನೂ ನಿಯಂತ್ರಣದಲ್ಲಿಡಬಹುದು" ಎಂದು ತಜ್ಞರು ಹೇಳುತ್ತಾರೆ. ಮಧುಮೇಹಿಗಳಿಗೆ ಈ ಮೂರು ಅಂಶಗಳನ್ನು ವೈದ್ಯರು ಪಾಲಿಸಲು ಹೇಳುತ್ತಾರೆ. ಅವುಗಳು ಸಮತೋಲಿತ ಪೌಷ್ಟಿಕಾಂಶ ಆಹಾರ, ಸಾಕಷ್ಟು ವ್ಯಾಯಾಮ ಮತ್ತು ಉತ್ತಮ ನಿದ್ದೆ. ನೀವು ನಿಮ್ಮ ಮಧುಮೇಹ ನಿಯಂತ್ರಣದಲ್ಲಿಟ್ಟುಕೊಳ್ಳಲು ಬಯಸಿದರೆ ಈ ಕೆಳಗೆ ನೀಡಿರುವ ತಪ್ಪುಗಳನ್ನು ನೀವು ಮಾಡಲೇಬೇಡಿ.

ಇದನ್ನೂ ಓದಿ:  Diabetes: ಮಾವಿನ ಎಲೆಯ ಕಷಾಯದಿಂದ ಮಧುಮೇಹ ಮಾಯ..!

ಜಡತ್ವದ ಜೀವನಶೈಲಿ

ನೀವು ಜಡತ್ವದ ಜೀವನಶೈಲಿ ಬೆಳೆಸಿಕೊಂಡರೆ ಅದರಿಂದ ನಿಮ್ಮ ದೇಹದ ತೂಕ ಹೆಚ್ಚಾಗುತ್ತದೆ . ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವುದರೊಂದಿಗೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅದೇ ನೀವು ಸದಾ ಯಾವುದಾದರೊಂದು ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಂಡು ಸಕ್ರಿಯ ಜೀವನಶೈಲಿ ಅನುಸರಿಸುತ್ತಿದ್ದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಹೆಚ್ಚು ಕೊಬ್ಬಿನಾಂಶವಿರುವ ಆಹಾರ ಸೇವಿಸುವುದು

ಇತರ ಪೋಷಕಾಂಶಗಳಂತೆಯೇ ಕೊಬ್ಬುಗಳು ನಿಮ್ಮ ದೈನಂದಿನ ಆಹಾರದ ಅತ್ಯಗತ್ಯ ಭಾಗವಾಗಿರಬೇಕು. ಅನೇಕರು ತಮ್ಮ ಆಹಾರದಿಂದ ಈ ಕೊಬ್ಬುಗಳನ್ನು ಸಂಪೂರ್ಣವಾಗಿ ತೆಗೆದು ಹಾಕುತ್ತಾರೆ". ಹೆಚ್ಚು ಕೊಬ್ಬಿನಾಂಶ ಇರುವ ಆಹಾರ ಸೇವಿಸದೆ ಕಡಿಮೆ ಕೊಬ್ಬಿನಾಂಶ ಇರುವ ಆಹಾರವನ್ನು ಸೇವಿಸಬೇಕು. ಏಕೆಂದರೆ ಇವುಗಳು ನಮ್ಮ ಹೃದಯದ ಆರೋಗ್ಯಕ್ಕೆ ಮತ್ತು ಮಧುಮೇಹಕ್ಕೆ ಒಳ್ಳೆಯದು.

ಊಟದ ನಡುವಿನ ದೀರ್ಘ ಅಂತರ

ನೀವು ಮಧುಮೇಹಿಯಾಗಿದ್ದರೆ, ಊಟದ ನಡುವಿನ ಅಂತರ ಕಡಿಮೆ ಮಾಡಲು ಪ್ರಯತ್ನಿಸಿ. ಊಟದ ನಡುವಿನ ದೊಡ್ಡ ಅಂತರವು ನಿಮ್ಮ ಮುಂದಿನ ಊಟದಲ್ಲಿ ಹೆಚ್ಚು ತಿನ್ನುವಂತೆ ಮಾಡುತ್ತದೆ ಮತ್ತು ಇದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚು ಮಾಡುತ್ತದೆ. ಅದಕ್ಕಾಗಿ ಆರೋಗ್ಯ ತಜ್ಞರು ಸ್ವಲ್ಪ ಸ್ವಲ್ಪ ಊಟವನ್ನು ಆಗಾಗ್ಗೆ ಮಾಡುತ್ತಿರಲು ಸಲಹೆ ನೀಡುತ್ತಾರೆ.

ತುಂಬಾ ಹೆಚ್ಚು ಅಥವಾ ತುಂಬಾ ಕಡಿಮೆ ಹಣ್ಣುಗಳನ್ನು ತಿನ್ನುವುದು

ಮಧುಮೇಹಿಗಳು ಸಕ್ಕರೆ ಅಂಶ ಹೊಂದಿರುವ ಹಣ್ಣುಗಳನ್ನು ಸೇವಿಸಲೆಬಾರದು ಎನ್ನುವುದು ತಪ್ಪು ಕಲ್ಪನೆ ಬಹಳಷ್ಟು ಜನರಲ್ಲಿದೆ. ನೀವು ಸಂಪೂರ್ಣವಾಗಿ ಹಣ್ಣುಗಳನ್ನು ತಿನ್ನದೇ ಇರಬಾರದು. ಹಾಗೆಯೇ ಹೆಚ್ಚು ಹಣ್ಣುಗಳನ್ನು ಸೇವಿಸಬಾರದು. ಮಧುಮೇಹದಿಂದ ಬಳಲುತ್ತಿರುವಾಗ ಹಣ್ಣುಗಳನ್ನು ಮಿತವಾಗಿ ಸೇವಿಸಬೇಕು.
ಅನಿಯಂತ್ರಿತ ಒತ್ತಡ

ಇದನ್ನೂ ಓದಿ: Maternal Diabetes: ಗರ್ಭಿಣಿಗೆ ಮಧುಮೇಹ ಇದ್ದಲ್ಲಿ ಗರ್ಭದಲ್ಲಿರುವ ಭ್ರೂಣಕ್ಕೆ ಅಪಾಯ ಕಟ್ಟಿಟ್ಟಬುತ್ತಿ

ನಿಮಗಾಗುವ ಒತ್ತಡವು ನೀವು ಯೋಚಿಸುವುದಕ್ಕಿಂತ ನಿಮ್ಮ ಆರೋಗ್ಯದ ಮೇಲೆ ಹೆಚ್ಚು ಹಾನಿ ಮಾಡುತ್ತದೆ. ಇದು ನಿಮ್ಮ ಹಾರ್ಮೋನುಗಳು, ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ದೀರ್ಘಕಾಲದ ಒತ್ತಡವು ಮಧುಮೇಹ ಹೊಂದಿರುವ ಜನರಿಗೆ ಹಾನಿಕಾರಕವಾಗಿದೆ. ಅಧ್ಯಯನಗಳ ಪ್ರಕಾರ, ಒತ್ತಡವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.

ನಿದ್ದೆ ಸರಿಯಾಗಿ ಆಗದಿರುವುದು

ದೇಹಕ್ಕೆ ವಿಶ್ರಾಂತಿ ಒದಗಿಸುವುದನ್ನು ಹೊರತುಪಡಿಸಿ ನಿದ್ರೆಯು ವಿವಿಧ ದೇಹದ ಕಾರ್ಯಗಳನ್ನು ನಿಯಂತ್ರಿಸುತ್ತದೆ. ನೀವು ಮಲಗಿದ್ದಾಗ ನಿಮ್ಮ ಹೆಚ್ಚಿನ ಹಾರ್ಮೋನುಗಳು ಸಮತೋಲನದಲ್ಲಿರುತ್ತವೆ. ಆದ್ದರಿಂದ, ಆರೋಗ್ಯಕರ ನಿದ್ದೆಯು ತುಂಬಾ ಅವಶ್ಯಕ.
Published by:Anitha E
First published: