HOME » NEWS » Lifestyle » HEALTH TIPS HOW TO CHOOSE THE RIGHT TOOTHBRUSH EXPERTS EXPLAIN SKTV

Oral Health: ನೀವು ಬಳಸುವ ಟೂತ್​ ಬ್ರಶ್ ಹೇಗಿರಬೇಕು ಗೊತ್ತಾ? ಸರಿಯಾದ ಬ್ರಶ್ ಆಯ್ಕೆ ಮಾಡೋದು ಹೀಗೆ !

Health Tips: ತುಂಬಾ ಜನಕ್ಕೆ ಸರಿಯಾದ ಬ್ರಶ್ ಆಯ್ಕೆ ಮಾಡೋಕೆ ಬರೋದಿಲ್ಲ. ಜಾಹೀರಾತುಗಳನ್ನು ನೋಡಿಯೋ ಅಥವಾ ಬೆಲೆ ನೋಡಿಯೋ ತಮ್ಮ ಟೂತ್​ಬ್ರಶ್ ಆಯ್ದುಕೊಳ್ತಾರೆ. ಆದ್ರೆ ಬ್ರಶ್ ಆಯ್ಕೆ ಮಾಡೋಕೂ ಒಂದು ವಿಧಾನವಿದೆ.

news18-kannada
Updated:June 18, 2021, 7:40 AM IST
Oral Health: ನೀವು ಬಳಸುವ ಟೂತ್​ ಬ್ರಶ್ ಹೇಗಿರಬೇಕು ಗೊತ್ತಾ? ಸರಿಯಾದ ಬ್ರಶ್ ಆಯ್ಕೆ ಮಾಡೋದು ಹೀಗೆ !
ಪ್ರಾತಿನಿಧಿಕ ಚಿತ್ರ
  • Share this:
Health Tips: ಪ್ರತಿದಿನ ಬೆಳಗಾಗೆದ್ದು ನಮ್ಮ ಮುಖ ನಾವು ನೋಡಿಕೊಳ್ಳೋಕೂ ಮುಂಚೆ ಇದರ ಮುಖ ನೋಡ್ತೀವಿ. ನಮ್ಮ ಇಡೀ ದಿನದ ಆರೋಗ್ಯದ ಆರಂಭ ಆಗೋದು ಹಲ್ಲುಜ್ಜುವುದರಿಂದ. ಅಂದ್ಮೇಲೆ ನಾವು ಬಳಸೋ ಬ್ರಶ್ ಸರಿಯಾಗಿ ಇರೋದು ಬಹಳ ಮುಖ್ಯ ಅಲ್ವಾ? ತುಂಬಾ ಜನಕ್ಕೆ ಸರಿಯಾದ ಬ್ರಶ್ ಆಯ್ಕೆ ಮಾಡೋಕೆ ಬರೋದಿಲ್ಲ. ಜಾಹೀರಾತುಗಳನ್ನು ನೋಡಿಯೋ ಅಥವಾ ಬೆಲೆ ನೋಡಿಯೋ ತಮ್ಮ ಟೂತ್​ಬ್ರಶ್ ಆಯ್ದುಕೊಳ್ತಾರೆ. ಆದ್ರೆ ಬ್ರಶ್ ಆಯ್ಕೆ ಮಾಡೋಕೂ ಒಂದು ವಿಧಾನವಿದೆ. ಅದನ್ನು ಅನುಸರಿಸಿದ್ರೆ ನಿಮ್ಮ ಹಲ್ಲು ಮತ್ತು ಬಾಯಿಯ ಆರೋಗ್ಯ ಚೆನ್ನಾಗಿರುತ್ತೆ ಅಂತಾರೆ ವೈದ್ಯರು. ಈ ಬಗ್ಗೆ ನಿಮಗೆ ಖಂಡಿತಾ ಪ್ರಯೋಜನವಾಘುವ ಒಂದಷ್ಟು ಮಾಹಿತಿ ಇಲ್ಲಿದೆ...

ನಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಪೋಷಕಾಂಶಗಳು ಹೋಗಬೇಕು ಎಂದರೆ ಹಲ್ಲು ಅತ್ಯುತ್ತಮವಾಗಿ ಇರಬೇಕಾಗುತ್ತದೆ. ಏಕೆಂದರೆ ಎಲ್ಲಾ ಆಹಾರವನ್ನೂ ಸರಿಯಾಗಿ ಜಗಿದು ನಂತರ ದೇಹದೊಳಗೆ ಕಳಿಸುವ ಬಹು ಮುಖ್ಯ ಜವಾಬ್ದಾರಿ ಬಾಯಿಗೆ ಅದರಲ್ಲೂ ಹಲ್ಲಿಗೆ ಇರುತ್ತದೆ. ಹಾಗಾಗಿ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳೋಕೆ ಟೂತ್​ ಬ್ರಶ್​ಗಳ ಆಯ್ಕೆ ಬಹಳ ಮುಖ್ಯ.

ಇದನ್ನೂ ಓದಿ: Delta Plus: ಇದು ಹೆಚ್ಚು ಅಪಾಯಕಾರಿಯೇ ? ಇನ್ನೆಷ್ಟು ರೂಪಗಳು? ಹೊಸಾ ಕೊರೊನಾ ರೂಪಾಂತರಿಯ ಬಗ್ಗೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ

ಸಾಮಾನ್ಯವಾಗಿ ನೀವು ಯಾವುದಾದರೂ ಅಂಗಡಿಗೋ, ಮೆಡಿಕಲ್ ಶಾಪ್​ಗೋ ಹೋಗಿ ಟೂತ್ ಬ್ರಶ್ ಕೊಳ್ಳುತ್ತೀರಿ. ಜನ ಅಂಗಡಿಯವರನ್ನು ಕೇಳುವ ಸಾಮಾನ್ಯ ಪ್ರಶ್ನೆ ಎಂದರೆ ಈ ಬ್ರಶ್ ಸಾಫ್ಟ್ ಇದ್ಯಾ? ಹಾರ್ಡ್ ಇದ್ಯಾ? ಅಂತೆ. ಸಾಫ್ಟ್, ಮೀಡಿಯಂ ಮತ್ತು ಹಾರ್ಡ್ ಎಂದು ಮೂರು ವಿಧದಲ್ಲಿ ಟೂತ್ ಬ್ರಶ್ ಗಳು ತಯಾರಾಗುತ್ತವೆ. ಸಾಫ್ಟ್ ಬ್ರಶ್ ಇದ್ದರೆ ವಸಡುಗಳಿಗೆ ಏಟಾಗುವುದಿಲ್ಲ, ಆದರೆ ಅದು ಹಲ್ಲುಗಳ ಸಂದಿಯಲ್ಲಿ ಸೇರಿಕೊಂಡಿರೋ ಕೊಳೆ ತೆಗೆಯುವುದಿಲ್ಲ ಎನ್ನುವುದೇ ಅನೇಕರ ಅನಿಸಿಕೆ. ಇನ್ನು ಹಾರ್ಡ್ ಇದ್ದರೆ ಹಲ್ಲು ಉಜ್ಜುವಾಗ ವಸಡಿನಿಂದ ರಕ್ತ ಬರುವಂಥಾ ಪರಿಸ್ಥಿತಿ ಬರಬಹುದು ಎನ್ನುವುದೂ ಜನರೇ ಅಂದುಕೊಳ್ಳೋ ವಿಚಾರ. ಹಾಗಾಗಿ ಆಕಡೆ ಸಾಫ್ಟ್ ಬ್ರಶ್ ಮತ್ತು ಈಕಡೆ ಹಾರ್ಡ್ ಬ್ರಶ್ ಎರಡೂ ಬೇಡ ಎನಿಸಿ 'ಮೀಡಿಯಮ್ ಕೊಟ್ಬಿಡಿ' ಎನ್ನುತ್ತಾರಂತೆ ಜನ, ಈ ಮಾಹಿತಿಯನ್ನು ಅಂಗಡಿ ಮಾಲೀಕರೊಬ್ಬರು ಹಂಚಿಕೊಂಡಿದ್ದಾರೆ.

ಈ ಬ್ರಶ್ ಬೆಟರ್ ಅಂತಾರೆ ವೈದ್ಯರು

ಆದರೆ ದಂತ ವೈದ್ಯರು ಹೇಳುವುದೇ ಬೇರೆ. ಸಾಫ್ಟ್ ಬ್ರಶ್ ತೆಗೆದುಕೊಳ್ಳೋದೇ ಉತ್ತಮ ಎನ್ನುತ್ತಾರವರು. ನಮ್ಮ ಹಲ್ಲುಗಳ ಮೇಲೆ ಎನಾಮಲ್‌ ಎನ್ನುವ ಒಂದು ಪದರ ಇರುತ್ತದೆ. ಹಲ್ಲಿನ ಎನಾಮಲ್ ನಮ್ಮ ದೇಹದ ಅತ್ಯಂತ ಗಟ್ಟಿಯಾದ ಭಾಗ. ಇದು ಹಲ್ಲನ್ನು ಬ್ಯಾಕ್ಟೀರಿಯಾಗಳಿಂದ ಕಾಪಾಡುತ್ತದೆ. ಹಲ್ಲಿಗೂ ಒಂದು ರಕ್ಷಣಾ ಪದರ ಇರುತ್ತದೆ. ಇದರ ಬಗ್ಗೆ ತಿಳುವಳಿಕೆ ಇಲ್ಲದೇ ಜನ ಹಾರ್ಡ್‌ ಬ್ರಶ್‌ನಿಂದ ಹಲ್ಲು ತಿಕ್ಕಿ ಆ ಪದರವನ್ನು ಹಾಳುಮಾಡಿಕೊಳ್ಳುತ್ತಾರೆ. ಆದರೆ ಸಾಫ್ಟ್‌ ಬ್ರಶ್‌ ಬಳಸಿದರೆ ಈ ಪದರಕ್ಕೆ ಏನೂ ಅಪಾಯ ಉಂಟಾಗೋದಿಲ್ಲ ಎನ್ನುವುದು ವೈದ್ಯರ ಅನಿಸಿಕೆ.

ಎಷ್ಟು ಸಮಯ ಬ್ರಶ್ ಮಾಡಬೇಕು?ಕೆಲವರು ಹೀಗೆ ಬ್ರಶ್ ಮಾಡೋಕೆ ಶುರು ಮಾಡಿದ್ರು ಅಂದುಕೊಳ್ಳುವಷ್ಟರಲ್ಲಿ ಹಲ್ಲುಜ್ಜಿ ಆಯ್ತು ಅಂತ ಬಂದಿರ್ತಾರೆ. ಇನ್ನು ಕೆಲವರು ಬ್ರಶ್ ಮಾಡೋಕೆ ಶುರು ಮಾಡಿದ್ರೆ ಅದು ಯಾಔಆಗ ಮುಗಿಯುತ್ತೋ ಎನಿಸುವರಷ್ಟು ದೀರ್ಘವಾಗಿ ಹಲ್ಲುಜ್ಜುತ್ತಲೇ ಇರುತ್ತಾರೆ. ಇಂಥವರಿಗೆ ನಿನ್ನ ಹಲ್ಲು ಸವೆದು ಹೋಗುತ್ತೆ ಎಂದು ಸುತ್ತಮುತ್ತಲಿನವರು ರೇಗಿಸುತ್ತಿರುತ್ತಾರೆ. ಆದರೆ ನಿಜವಾಗಲೂ ಹಲ್ಲು ಸವೆಯುತ್ತದೆ ಎನ್ನುತ್ತಾರೆ ವೈದ್ಯರು. ಹೇಗೆ ಬೇರೆ ವಸ್ತುಗಳು ಹೆಚ್ಚು ಬಳಸಿದಾಗ ಸವೆಯುತ್ತವೆಯೋ ಹಲ್ಲಿನ ಮೇಲಿರುವ ಎನಾಮಲ್ ಪದರ ಕೂಡಾ ವಿಪರೀತವಾಗಿ ಉಜ್ಜಿದರೆ ಸವೆಯುತ್ತದೆ. ಆಗಲೇ ಬಿಸಿ, ತಣ್ಣಗಿನ ಆಹಾರ ಸೇವಸಿದ್ರೆ, ಹುಳಿ ಉಪ್ಪು ಹೆಚ್ಚಿರುವ ಆಹಾರ ತಿಂದ್ರೆ ಹಲ್ಲು ಝುಂ ಎಂದು ಅನಿಸುವುದು.
Youtube Video

ದಿನಕ್ಕೆ ಎರಡು ಬಾರಿ ಎರಡು ನಿಮಿಷಗಳಷ್ಟು ಕಾಲ ಹಲ್ಲನ್ನು ನೀಟಾಗಿ ಉಜ್ಜಿದ್ರೆ ಸಾಕಾಗುತ್ತದೆ. ಹಲ್ಲು ಉಜ್ಜುವುದು ಹಲ್ಲುಗಳ ಸಂದಿಯಲ್ಲಿ ಸೇರಿರುವ ಆಹಾರದ ಹಣಗಳು ಅಥವಾ ಕೊಳೆಯನ್ನು ತೆಗೆಯಲು. ಬಲವಾಗಿ ಹಲ್ಲು ಉಜ್ಜಿ ಹಾನಿ ಮಾಡಿಕೊಳ್ಳದೇ ಜೋಪಾನವಾಗಿ ಬಳಸಿ ಹಲ್ಲಿನ ಆರೋಗ್ಯವನ್ನೂ ಸ್ವಚ್ಛತೆಯನ್ನೂ ಕಾಪಾಡಿಕೊಳ್ಳಬೇಕು ಎನ್ನುತ್ತಾರೆ ವೈದ್ಯರು.
Published by: Soumya KN
First published: June 18, 2021, 7:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories