Baby Care: ತಲೆಹೊಟ್ಟಿನಿಂದ ರ‍್ಯಾಷಸ್​ವರೆಗೆ ನಿಮ್ಮ ಮಗುವಿನ ಎಳೆ ತ್ವಚೆ ಬಗ್ಗೆ ನೀವು ತಿಳಿದಿರಲೇಬೇಕಾದ ಸಂಗತಿಗಳಿವು!

Health Tips: ಡೈಪರ್​ ರ‍್ಯಾಷಸ್ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವ ತ್ವಚೆಯ ಸಮಸ್ಯೆಯಾಗಿದೆ. ನವಜಾತ ಶಿಶುವಿನ ಈ ಸಮಸ್ಯೆಯನ್ನು ಪ್ರತಿ ಪೋಷಕರು ಗಮನಿಸಿರುತ್ತಾರೆ. ಮಗುವಿನ ತೊಡೆಯ ಕೆಳಭಾಗದಲ್ಲಿ ಈ ರ‍್ಯಾಷಸ್‌ಗಳು ಕಂಡು ಬರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಎಳೆ ಮಕ್ಕಳ ಮೃದು ತ್ವಚೆಯನ್ನು ಹಲವಾರು ಬಾರಿ ರ‍್ಯಾಷಷ್‌ನಂತಹ ಚರ್ಮದ ಸಮಸ್ಯೆಗಳು ಬಾಧಿಸಬಹುದು. ಆದರೆ ಇದರ ಬಗ್ಗೆ ಚಿಂತೆ ಬೇಡ ಎನ್ನುತ್ತಾರೆ ನೋಯ್ಡಾದ ಮದರ್​​ಹುಡ್​ ಆಸ್ಪತ್ರೆಯ ನಿಯೋನಾಟಾಲಜಿಸ್ಟ್ ಸಲಹೆಗಾರರಾಗಿರುವ ಡಾ. ನಿಶಾಂತ್​ ಬನ್ಸಾಲ್​.

ಬಹುತೇಕ ರ‍್ಯಾಷಸ್​ಗಳ ಜೀವಿತಾವಧಿ ಕಡಿಮೆ ಇರುತ್ತದೆ. ಅಲ್ಲದೇ ಅವುಗಳಿಂದ ಯಾವುದೇ ತೊಂದರೆ ಇರುವುದಿಲ್ಲ. ಕೆಲವು ನಿರ್ದಿಷ್ಟ ಸಮಯದ ನಂತರ ಅವು ಗುಣವಾಗಿಬಿಡುತ್ತವೆ. ಆದರೂ ಅವುಗಳ ಬಗ್ಗೆ ಒಂದು ಕಣ್ಣು ಇಡಲೇಬೇಕು. ಎಳೆ ಮಕ್ಕಳು ಕೆಲವೇ ಸಮಯದಲ್ಲಿ ರ‍್ಯಾಷಸ್​ ಅಥವಾ ದದ್ದುಗಳಿಗೆ ತುತ್ತಾಗಬಹುದು. ಈ ಬಗ್ಗೆ ಪೋಷಕರು ಸದಾ ಕಾಳಜಿವಹಿಸಬೇಕು. ಒಂದು ವೇಳೆ ಕಾಳಜಿ ಮರೆತರೆ ಅವುಗಳ ಕಾರಣವನ್ನು ಗುರುತಿಸುವುದು ಕಷ್ಟವಾಗಬಹುದು.

ಎಳೆ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕೆಲವು ರ‍್ಯಾಷಸ್‌ಗಳು​ ಇಲ್ಲಿದೆ ನೋಡಿ..
ನೀರು ತುಂಬಿಕೊಂಡ ಕೆಂಪು ಗುಳ್ಳೆಗಳು
ಮಗು ಜನಿಸಿದ ಕೆಲವೇ ದಿನಗಳಲ್ಲಿ ಹೆಚ್ಚಾಗಿ ಹರಡುವ ಸಮಸ್ಯೆ ರ‍್ಯಾಷಸ್​. ಇದು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ. ನೀರು ತುಂಬಿಕೊಂಡ ಕೆಂಪು ಗುಳ್ಳೆಗಳು, ಪಸ್​ ರೀತಿ ಕಂಡು ಬಂದರೆ, ಅದು ಇನ್​ಫೆಕ್ಷಸ್​ ಆಗಿರುವ ಸಾಧ್ಯತೆಗಳಿರುತ್ತವೆ. ಈ ಸಮಸ್ಯೆಗೆ ಕಾರಣಗಳೇನು ಅನ್ನೋದು ಇನ್ನೂ ತಿಳಿದುಬಂದಿಲ್ಲ. ಇದು ಮಕ್ಕಳ ಎದೆ , ಕತ್ತು ಮತ್ತು ಮುಖದ ಮೇಲೆ ಕಾಣಿಸಿಕೊಳ್ಳುತ್ತದೆ.

ನವಜಾತ ಮೊಡವೆ ಅಥವಾ ಪಿಂಕ್‌ ಗುಳ್ಳೆಗಳು
ಈ ಮೊಡವೆಗಳು ಸಾಮಾನ್ಯವಾಗಿ ಮಕ್ಕಳ ಕೆನ್ನೆ, ಮೂಗು ಮತ್ತು ಹಣೆ ಮೇಲೆ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಇಂತದ್ದೇ ಕಾರಣವೆಂದು ಹೇಳಲಾಗದಿದ್ದರೂ ಮಗು ಗರ್ಭದಲ್ಲಿದ್ದ ಸಮಯದಲ್ಲಿ ತಾಯಿಯ ಹಾರ್ಮೋನ್​ಗಳು ಇದರ ಮೇಲೆ ಪರಿಣಾಮ ಬೀರಿರುವ ಸಾಧ್ಯತೆಗಳಿರುತ್ತವೆ. ಕೆಂಪು ಬಣ್ಣದ ದದ್ದುಗಳು ಕೆಲವೊಮ್ಮೆ ಬಿಳಿ ಬಣ್ಣದ ಮಚ್ಚೆಗಳ ರೀತಿಯೂ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ. ಒಂದಷ್ಟು ಸಮಯದ ನಂತರ ಅವು ಹೊರಟು ಹೋಗುತ್ತವೆ. ಒಂದು ವಾರ, ಇಲ್ಲವೇ ಹದಿನೈದು ದಿನ ಅಥವಾ ಒಂದು ತಿಂಗಳಲ್ಲಿ ಮಾಯವಾಗುತ್ತವೆ. ಇದು ಮಗು ಹುಟ್ಟಿದ ಮೊದಲ ತಿಂಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಪೋಷಕರು ಮಗುವಿಗೆ ಗುಳ್ಳೆ ಕಾಣಿಸಿಕೊಳ್ಳುವ ಜಾಗವನ್ನು ಸ್ವಚ್ಚವಾಗಿಡಬೇಕು. ಸಾಫ್ಟ್​ ಕಾಟನ್ ಬಳಸಿ ಶುದ್ಧವಾಗಿಡಬೇಕು. ಅಲ್ಲದೇ ಮಗುವಿನ ತ್ವಚೆಯನ್ನು ಮಾಯಿಶ್ಚರೈಸ್ ಮಾಡುವುದು ಕೂಡ ಮುಖ್ಯವಾಗುತ್ತದೆ. ಆದ್ದರಿಂದ ಮೈಲ್ಡ್​ ಆಗಿರುವಂಥ ಮಾಯಿಶ್ಚರೈಸರ್ ಬಳಸುವುದು ಸೂಕ್ತ. ಒಂದು ವೇಳೆ ಆ ಮೊಡವೆಗಳು ಒಂದು ತಿಂಗಳ ನಂತರ ಹೋಗದಿದ್ದರೆ, ಕೂಡಲೇ ವೈದ್ಯರನ್ನು ಭೇಟಿ ಮಾಡಿ.

ಡೈಪರ್​ ರ‍್ಯಾಷಸ್
ಇದು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವ ತ್ವಚೆಯ ಸಮಸ್ಯೆಯಾಗಿದೆ. ನವಜಾತ ಶಿಶುವಿನ ಈ ಸಮಸ್ಯೆಯನ್ನು ಪ್ರತಿ ಪೋಷಕರು ಗಮನಿಸಿರುತ್ತಾರೆ. ಮಗುವಿನ ತೊಡೆಯ ಕೆಳಭಾಗದಲ್ಲಿ ಈ ರ‍್ಯಾಷಸ್‌ಗಳು ಕಂಡು ಬರುತ್ತದೆ. ಇದಕ್ಕೆ ಮುಂಜಾಗ್ರತ ಕ್ರಮ ತೆಗೆದುಕೊಳ್ಳದಿದ್ದರೆ ಬಹಳ ತೊಂದರೆಗಳಾಗುವ ಸಾಧ್ಯತೆಗಳಿರುತ್ತವೆ. ದೀರ್ಘಕಾಲದವರೆಗೆ ಮಲ ಮತ್ತು ಮೂತ್ರದ ಡೈಪರ್​ನ ಕಿರಿಕಿರಿಯಿಂದಾಗಿ ಮಗುವಿನ ತ್ವಚೆ ದದ್ದುಗಳ ಸಮಸ್ಯೆಗೆ ತುತ್ತಾಗುತ್ತದೆ. ಇನ್ನೂ ಕೆಲವೊಮ್ಮೆ ಡೈಪರ್​ನಲ್ಲಿರುವ ಕೆಮಿಕಲ್, ಯೀಸ್ಟ್ ಮತ್ತು ಫಂಗಸ್​ನಿಂದಾಗಿ ಮಗುವಿನ ತ್ವಚೆಗೆ ಅಲರ್ಜಿಯುಂಟಾಗಬಹುದು. ಡೈಪರ್ ರ‍್ಯಾಷಸ್​​ಗಳು ಒದ್ದೆಯಾದ ಸ್ಥಳದಲ್ಲಿ ಕಾಣಿಸಿಕೊಳ್ಳುವ ಕಾರಣ ಅವುಗಳೊಟ್ಟಿಗೆ ಹೋರಾಡುವುದು ಸ್ವಲ್ಪ ಕಷ್ಟ. ಆದ್ದರಿಂದ ಮಗುವಿನ ಈ ಜಾಗವನ್ನು ಪೋಷಕರು ಸ್ವಚ್ಚವಾಗಿಡಬೇಕು. ಜಿಂಕ್ ಆಯಿಂಟ್​ಮೆಂಟ್​ ಮೂಲಕ ಇದನ್ನು ಗುಣಪಡಿಸಬಹುದು ಹಾಗೂ ಹೊಸ ರ‍್ಯಾಷಸ್‌ಗಳು ಬಾರದಂತೆ ತಡೆಬಹುದು.

ಎಳೆ ಮಕ್ಕಳನ್ನು ಬಾಧಿಸುವ ತಲೆಹೊಟ್ಟು
ಸೆಬೋರಿಕ್ ಚರ್ಮ ಸಮಸ್ಯೆಯನ್ನು ಕ್ರೇಡಲ್ ಕ್ಯಾಪ್ ಅಥವಾ ಎಳೆ ಮಕ್ಕಳಲ್ಲಿ ಕಾಣಿಸಿಕೊಳ್ಳುವ ತಲೆಹೊಟ್ಟಿನ ಸಮಸ್ಯೆ ಎಂದು ಉಲ್ಲೇಖಿಸಲಾಗುತ್ತದೆ. ಇದು 2 ತಿಂಗಳಿನಿಂದ 12 ವಾರಗಳ ಮಗುವಿನಲ್ಲಿ ಕಂಡುಬರುವ ಸಮಸ್ಯೆಯಾಗಿದೆ. ಕೆಲವೊಮ್ಮೆ ಸ್ವಲ್ಪ ದೊಡ್ಡ ವಯಸ್ಸಿನ ಮಕ್ಕಳಲ್ಲೂ ಕಂಡುಬರುತ್ತದೆ. ಮಗುವಿನ ತಲೆ ಬುರುಡೆ, ನೆತ್ತಿಯ ಮೇಲೆ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಇದು ಮುಖ ಮತ್ತು ಕುತ್ತಿಗೆವರೆಗೂ ಹರಡುವ ಸಾಧ್ಯತೆಗಳಿರುತ್ತವೆ. ಹಾಗೆಂದು ಇದು ಸಾಂಕ್ರಾಮಿಕ ಸಮಸ್ಯೆಯಲ್ಲ. ಈ ತಲೆಹೊಟ್ಟು ತುರಿಕೆ ಉಂಟು ಮಾಡುವುದಿಲ್ಲ.

ಕ್ರೇಡಲ್ ಕ್ಯಾಪ್ ಅಥವಾ ತಲೆಹೊಟ್ಟಿಗೆ ಇಂಥದ್ದೇ ಕಾರಣವೆಂದು ಗುರುತಿಸಲು ಸಾಧ್ಯವಾಗಿಲ್ಲ. ಫಂಗಸ್ ಅಥವಾ ಹೆಚ್ಚು ಮೇದೋಗ್ರಂಥಿಗಳ ಸ್ರಾವ ಇದಕ್ಕೆ ಕಾರಣವಿರಬಹುದೆಂದು ಅಂದಾಜಿಸಲಾಗುತ್ತದೆ. ನೆತ್ತಿ ಮೇಲಿಂದ ಕೂದಲು ಸಹ ಉದುರಬಹುದು. ಆದ್ದರಿಂದ ಮಕ್ಕಳಿಗೆ ಸೌಮ್ಯವಾದ ಬೇಬಿ ಶ್ಯಾಂಪೂ ಬಳಸುವುದು ಸೂಕ್ತ. ಸ್ನಾನಕ್ಕಿಂತ ಮೊದಲು ಮಗುವಿಗೆ ಬೇಬಿ ಆಯಿಲ್​ನಿಂದ ತಲೆಗೆ ಮಸಾಜ್​ ನೀಡುವುದು ಮುಖ್ಯ. ಆ ನಂತರ ಸಾಫ್ಟ್​ ಬ್ರಶ್​ನಿಂದ ಹೊಟ್ಟನ್ನು ತೆಗೆದು ಹಾಕುವುದು ಉತ್ತಮ. ವಾರದಲ್ಲಿ 2-3 ಬಾರಿ ಹೀಗೆ ಮಾಡಿ. ಆದಷ್ಟು ನೈಸರ್ಗಿಕ ತೈಲ ಮತ್ತು ಶ್ಯಾಂಪೂ ಬಳಸಿ ಮಗುವನ್ನು ಆರೈಕೆ ಮಾಡಿ. ಈ ಎಲ್ಲಾ ಹಂತಗಳನ್ನು ನಿಮ್ಮ ಮಗುವಿನ ವೈದ್ಯರ ಸಲಹೆ ಮೇರೆಗೆ ಜಾಗ್ರತೆಯಾಗಿ ಅನುಸರಿಸಬೇಕು.
Published by:Sushma Chakre
First published: