Health Tips for Women: ಮನೆ, ಕಚೇರಿ ಕೆಲಸದಲ್ಲಿ ಬ್ಯುಸಿಯಾಗಿರೋ ಮಹಿಳೆಯರಿಗೆ ಆರೋಗ್ಯ ಸಲಹೆಗಳು

ಮಹಿಳೆಯರಿಗೆ ಒತ್ತಡ ಹೆಚ್ಚಿದಂತೆ ಬಂಜೆತನ, ಖಿನ್ನತೆ, ಆತಂಕ ಮತ್ತು ಹೃದ್ರೋಗದಂತಹ ಹೆಚ್ಚಿನ ಅಪಾಯಗಳು ಅಂಟಿಕೊಳ್ಳುತ್ತವೆ. ಅವು ನಿಮ್ಮ ಆರೋಗ್ಯ ಪರಿಣಾಮಗಳನ್ನು ಉಂಟುಮಾಡಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮಹಿಳೆಯರು (Women) ಯಾವಾಗಲೂ ಮನೆ ಕೆಲಸದಲ್ಲಿ ಬ್ಯುಸಿಯಾಗಿರುತ್ತಾರೆ. ಮನೆ (Home), ಮಕ್ಕಳು (Children), ಗಂಡನ ಆರೋಗ್ಯದ (Health) ಬಗ್ಗೆಯೇ ಚಿಂತೆ ಮಾಡ್ತಾರೆ. ಆದ್ರೆ ತಮ್ಮ ಬಗ್ಗೆ ತಾವೇ ಯೋಚನೆ ಮಾಡಲ್ಲ. ಆದ್ರೆ ನಿಮ್ಮ ಆರೋಗ್ಯವು ಮುಖ್ಯವಾಗುತ್ತೆ. ಇನ್ನು ಕೆಲವರು ಮಗಿಳೆಯರು ಯಾವುದೋ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಆದ್ರೆ ಅವುಗಳನ್ನು ಯಾರ ಬಳಿಯೂ ಶೇರ್ ಮಾಡಿಕೊಳ್ಳಲು ಇಷ್ಟ ಪಡಲ್ಲ. ನೀವು ಯಾರ ಬಳಿಯಾದ್ರೂ ನಿಮ್ಮ ಮನಸ್ಸಿನ ಮಾತನ್ನು ಹಂಚಿಕೊಳ್ಳಬೇಕು. ಮಹಿಳೆಯರಿಗೆ ಒತ್ತಡ ಹೆಚ್ಚಿದಂತೆ ಬಂಜೆತನ, ಖಿನ್ನತೆ, ಆತಂಕ ಮತ್ತು ಹೃದ್ರೋಗದಂತಹ ಹೆಚ್ಚಿನ ಅಪಾಯಗಳು ಅಂಟಿಕೊಳ್ಳುತ್ತವೆ. ಅವು ನಿಮ್ಮ ಆರೋಗ್ಯ ಪರಿಣಾಮಗಳನ್ನು ಉಂಟುಮಾಡಬಹುದು. ಆದಷ್ಟು ಒತ್ತಡವನ್ನು(Stress) ಕಡಿಮೆ ಮಾಡಿಕೊಳ್ಳಿ.

  ಉತ್ತಮ ಆಹಾರ ಪದ್ಧತಿ
  ಆರೋಗ್ಯಕರವಾಗಿ ತಿನ್ನುವುದು ಎಂದರೆ ನಿಮ್ಮ ಮೆಚ್ಚಿನ ವೈನ್ ಅಥವಾ ಚಾಕೊಲೇಟ್ ಕೇಕ್ ತುಂಡನ್ನು ನೀವು ಆಗೊಮ್ಮೆ ಈಗೊಮ್ಮೆ ತ್ಯಜಿಸಬೇಕು ಎಂದಲ್ಲ. ಪ್ರಮುಖ ಅಂಶವೆಂದರೆ ಮಿತವಾಗಿರುವುದು. ನೇರ ಪೆÇ್ರೀಟೀನ್ಗಳು, ಆರೋಗ್ಯಕರ ಕೊಬ್ಬುಗಳು, ಸ್ಮಾರ್ಟ್ ಕಾರ್ಬೋಹೈಡ್ರೇಟ್ಗಳು ಮತ್ತು ಫೈಬರ್ಗಳ ಮಿಶ್ರಣ ಇರೋ ಆಹಾರಗಳನ್ನು ಸೇವಿಸಬೇಕು.

  ವ್ಯಾಯಾಮವು ಉತ್ತಮ ಮಾರ್ಗ
  ಮಹಿಳೆಯರಿಗೆ  ಹೃದ್ರೋಗ, ಕ್ಯಾನ್ಸರ್ ಮತ್ತು ಮಧುಮೇಹವನ್ನು ತಡೆಗಟ್ಟಲು ವಾರಕ್ಕೆ ಕನಿಷ್ಠ ಮೂರರಿಂದ ಐದು ಬಾರಿ ಹೃದಯ ಮತ್ತು ಪ್ರತಿರೋಧ ಅಥವಾ ತೂಕ, ವ್ಯಾಯಾಮದ ಅಗತ್ಯವಿದೆ. ವ್ಯಾಯಾಮವು ಉತ್ತಮ ಮಾರ್ಗವಾಗಿದೆ. ಇದು ಮಹಿಳೆಗೆ ನಿಜವಾಗಿಯೂ ಮುಖ್ಯವಾಗಿದೆ.

  ಗರ್ಭಿಣಿಯಾಗುವ ಬಗ್ಗೆ ಯೋಚನೆ
  ಅನೇಕ ಮಹಿಳೆಯರು ತಮ್ಮ 30 ರ ಕೊನೆಯಲ್ಲಿ ಮತ್ತು ಅವರ 40 ವರ್ಷದ ಆರಂಭದಲ್ಲಿ ಗರ್ಭಿಣಿಯಾಗಲು ಯಾವುದೇ ಸಮಸ್ಯೆ ಇರುವುದಿಲ್ಲ. ಆದ್ರೆ ಕೆಲವರಿಗೆ 32 ರ ನಂತರ ಮಕ್ಕಳು ಆಗುವುದಿಲ್ಲ ಎನ್ನುತ್ತಾರೆ. ಸರಿಯಾದ ಸಮಯಕ್ಕೆ ಮಕ್ಕಳನ್ನು ಮಾಡಿಕೊಳ್ಳಿ.

  ಇದನ್ನೂ ಓದಿ: Weight Loss: ತೂಕ ಇಳಿಸಿಕೊಳ್ಳಲು ಪರದಾಡುತ್ತಿದ್ದೀರಾ? ಹಾಗಿದ್ರೆ ಇವರ ಕಥೆ ನಿಮಗೆ ಸ್ಪೂರ್ತಿಯಾಗಬಹುದು

  ಪ್ರತಿ ವರ್ಷ ನಿಮ್ಮ ವೈದ್ಯರನ್ನು ಭೇಟಿ ಮಾಡಿ
  ನೀವು 21 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ ಪ್ರತಿ 3 ವರ್ಷಗಳಿಗೊಮ್ಮೆ ಗರ್ಭ ಕಂಠದ ಕ್ಯಾನ್ಸರ್ ಅನ್ನು ಪರೀಕ್ಷಿಸಲು ನೀವು ಪ್ಯಾಪ್ ಪರೀಕ್ಷೆಯನ್ನು ಪಡೆಯಿರಿ. ನಿಮ್ಮ ವಯಸ್ಸು 30-65 ಆಗಿದ್ದರೆ, ನೀವು ಪ್ರತಿ 5 ವರ್ಷಗಳಿಗೊಮ್ಮೆ ಪ್ಯಾಪ್ ಪರೀಕ್ಷೆ ಮತ್ತು ಎಚ್‍ಪಿವಿ ಪರೀಕ್ಷೆ ಎರಡನ್ನೂ ಪಡೆಯಬಹುದು. ಒಮ್ಮೆಯಾದರೂ ಎಚ್‍ಐವಿ ಪರೀಕ್ಷೆಯನ್ನು ಮಾಡಿಸಿಕೊಳ್ಳಿ. ನಿಮ್ಮ ವಾರ್ಷಿಕ ತಪಾಸಣೆಯನ್ನು ಬಿಟ್ಟುಬಿಡಬೇಡಿ

  ಉತ್ತಮ ಲೈಂಗಿಕತೆಯನ್ನು ಹೊಂದಿರಿ
  ಸೆಕ್ಸ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಮತ್ತು ದೀರ್ಘಕಾಲದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಬಹುದು. ಆದರೆ ನೀವು ಅದನ್ನು ಇಷ್ಟ ಪಟ್ಟರೆ ಮಾತ್ರ.

  ಹೆಚ್ಚು ನಿದ್ರೆ ಪಡೆಯಿರಿ
  ನಿದ್ರೆಯ ಅಗತ್ಯತೆಗಳು ವಿಭಿನ್ನವಾಗಿವೆ. ಇತ್ತೀಚಿನ ಅಧ್ಯಯನಗಳ ಪ್ರಕಾರ, ಸರಿಯಾಗಿ ನಿದ್ದೆ ಮಾಡದ ಮಹಿಳೆಯರಿಗೆ, ಹೃದ್ರೋಗ ಮತ್ತು ಮಾನಸಿಕ ಸಮಸ್ಯೆಗಳ ಹೆಚ್ಚಿನ ಅಪಾಯವನ್ನುಂಟು ಮಾಡುತ್ತದೆ ಎಂದು ತಿಳಿದುಬಂದಿದೆ.

  ಅನುವಂಶಿಕ ಪರೀಕ್ಷೆಯನ್ನು ಪರಿಗಣಿಸಿ
  ವೈದ್ಯರು ಈಗ ಸ್ತನ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್ ಮತ್ತು ದೀರ್ಘಕಾಲದ ಕಾಯಿಲೆಗಳ ಅನುವಂಶಿಕವಾಗಿ ಬರುತ್ತವೆ. ನಿಮ್ಮ ಕುಟುಂಬದಲ್ಲಿ ಈ ರೀತಿ ಕಾಯಿಲೆ ಯಾರಿಗಾದ್ರೂ ಇದ್ರೆ, ನೀವೂ ಪರೀಕ್ಷೆ ಮಾಡಿಸಬೇಕು.

  ಇದನ್ನೂ ಓದಿ: Radish: ಊಟದ ವೇಳೆ ಹೆಚ್ಚು ಮೂಲಂಗಿ ತಿಂತೀರಾ? ಮರೆಯದೇ ಈ ಮುನ್ನೆಚ್ಚರಿಕೆಗಳನ್ನು ಪಾಲಿಸಿ

  ಹೆಚ್ಚು ಹೀರಿಕೊಳ್ಳುವ ಕ್ಯಾಲ್ಸಿಯಂ ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸಬಹುದು ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದು. ನೀವು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ದಿನಕ್ಕೆ 1,000 ಮಿಲಿಗ್ರಾಂಗಳಷ್ಟು ಕ್ಯಾಲ್ಸಿಯಂ ಬೇಕು. ಆದರೆ 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಮುಖ್ಯವಾಗಿ ದಿನಕ್ಕೆ 1,200 ಮಿಲಿಗ್ರಾಂಗಳನ್ನು ಪಡೆಯಬೇಕು. ಹಾಲು, ಬಾದಾಮಿಗಳಂತಹ ಕ್ಯಾಲ್ಸಿಯಂ ಭರಿತ ಆಹಾರಗಳ ಸುಮಾರು ಮೂರು ಬಾರಿ ಸೇವಿಸಿ.
  Published by:Savitha Savitha
  First published: