• Home
  • »
  • News
  • »
  • lifestyle
  • »
  • Health Tips: ದಾಲ್​ ತಿಂದ ಬಳಿಕ ಹೊಟ್ಟೆ ಉಬ್ಬರಿಸಿದರೆ ಹೀಗೆ ಮಾಡಿ- ಆರಾಮಾಗುತ್ತೆ!

Health Tips: ದಾಲ್​ ತಿಂದ ಬಳಿಕ ಹೊಟ್ಟೆ ಉಬ್ಬರಿಸಿದರೆ ಹೀಗೆ ಮಾಡಿ- ಆರಾಮಾಗುತ್ತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆದ್ರೆ ಬೇಳೆಗಳು, ಪ್ರೋಟೀನ್ ಮತ್ತು ಇತರ ಅನೇಕ ಅಗತ್ಯ ಪೋಷಕಾಂಶಗಳಿಂದ ತುಂಬಿರುವುದರಿಂದ, ಅವುಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ಒಳ್ಳೆಯದಲ್ಲ. ಆದರೆ ನಿಮ್ಮ ಹೊಟ್ಟೆಗೆ ತೊಂದರೆಯಾಗದಂತೆ ನಿಮ್ಮ ಆಹಾರದಲ್ಲಿ ದಾಲ್ ಅನ್ನು ಸೇರಿಸಬಹುದು.

  • Trending Desk
  • 5-MIN READ
  • Last Updated :
  • Share this:

    ಬೇಳೆಗಳು(Dal) ಹೆಚ್ಚಿನ ಪ್ರಮಾಣದ ಪ್ರೋಟೀನ್‌(Protein) ಅನ್ನು ಹೊಂದಿರುತ್ತವೆ. ಹಾಗಾಗಿ ನಿಮ್ಮ ಡಯೆಟ್(Diet)‌ ಬೇಳೆಗಳನ್ನು ಹೊಂದಿರುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು. ಆದ್ರೆ ಕೆಲವರಿಗೆ ಈ ದಾಲ್‌ ಸೇವಿಸಿದರೆ ಹೊಟ್ಟೆಯುಬ್ಬರಿಸಿದ ಅನುಭವವಾಗುತ್ತದೆ. ಕೆಲವೊಮ್ಮೆ ಭಾರೀ ಊಟದ ನಂತರ ನಮ್ಮ ಹೊಟ್ಟೆ ಉಬ್ಬುತ್ತದೆ ಎಂದು ನಾವು ಭಾವಿಸುತ್ತೇವೆ. ಆದರೆ ಇನ್ನೂ ಕೆಲ ಜನರು ನಿರ್ದಿಷ್ಟ ಆಹಾರಗಳಿಂದ (Food) ಸಾಮಾನ್ಯ ಊಟದ ನಂತರವೂ ಹೊಟ್ಟೆ ಉಬ್ಬರದಿಂದ ಬಳಲುತ್ತಿರುತ್ತಾರೆ. ಆಶ್ಚರ್ಯ ಎಂದರೆ ಅದಕ್ಕೆ ಕಾರಣ ದಾಲ್‌ ಕೂಡ ಆಗಿರಬಹುದು.


    ಆದ್ರೆ ಬೇಳೆಗಳು, ಪ್ರೋಟೀನ್ ಮತ್ತು ಇತರ ಅನೇಕ ಅಗತ್ಯ ಪೋಷಕಾಂಶಗಳಿಂದ ತುಂಬಿರುವುದರಿಂದ, ಅವುಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ಒಳ್ಳೆಯದಲ್ಲ. ಆದರೆ ನಿಮ್ಮ ಹೊಟ್ಟೆಗೆ ತೊಂದರೆಯಾಗದಂತೆ ನಿಮ್ಮ ಆಹಾರದಲ್ಲಿ ದಾಲ್ ಅನ್ನು ಸೇರಿಸಬಹುದು.


    ಪ್ರೋಟೀನ್-ಭರಿತ ಆಹಾರಕ್ಕಾಗಿ ದಾಲ್ ಅನ್ನು ಆನಂದಿಸಲು ಈ ತಜ್ಞರ ಸಲಹೆಗಳನ್ನು ಪ್ರಯತ್ನಿಸಿ. ಪೌಷ್ಟಿಕತಜ್ಞ ರಾಶಿ ಚೌಧರಿ ದಾಲ್‌ಗಳಲ್ಲಿನ ಲೆಕ್ಟಿನ್‌ಗಳನ್ನು ಕಡಿಮೆ ಮಾಡಲು ಮತ್ತು ಯಾವುದೇ ಚಿಂತೆಯಿಲ್ಲದೆ ಅದನ್ನು ಸೇವಿಸಲು ಸಹಾಯ ಮಾಡಲು ಕೆಲವು ಪರಿಣಾಮಕಾರಿ ಸಲಹೆಗಳನ್ನು ಸೂಚಿಸುತ್ತಾರೆ.


    ದಾಲ್‌ ನಿಜವಾಗಿಯೂ ಹೊಟ್ಟೆಯುಬ್ಬರ ಉಂಟುಮಾಡುತ್ತದೆಯೇ?


    ತಜ್ಞರ ಪ್ರಕಾರ, ನೀವು ಸೂಕ್ಷ್ಮ ಕರುಳನ್ನು ಹೊಂದಿದ್ದರೆ ಅದು ಸಂಭವಿಸಬಹುದು. ಬೇಳೆಯಲ್ಲಿರುವ ಲೆಕ್ಟಿನ್‌ಗಳು ಸೇವನೆಯ ನಂತರ ಅನಿಲವನ್ನು ಉತ್ಪಾದಿಸಬಹುದು.


    ಪೌಷ್ಟಿಕ ತಜ್ಞರಾದ ರಾಶಿ ಚೌಧರಿ, ದಾಲ್‌ಗಳಲ್ಲಿನ ಲೆಕ್ಟಿನ್‌ಗಳನ್ನು ಕಡಿಮೆ ಮಾಡಲು ಮತ್ತು ಯಾವುದೇ ಚಿಂತೆಯಿಲ್ಲದೆ ಅದನ್ನು ಸೇವಿಸಲು ಸಹಾಯವಾಗುವಂಥ ಕೆಲವು ಪರಿಣಾಮಕಾರಿ ಸಲಹೆಗಳನ್ನು ಸೂಚಿಸುತ್ತಾರೆ.


    ಇದನ್ನೂ ಓದಿ: Bad Cholesterol: ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಇದೇ ಕಾರಣವಂತೆ!


    ಬೇಳೆಯನ್ನು ಜೀರ್ಣಿಸಿಕೊಳ್ಳಲು ಕಷ್ಟವೇ? ಎಂದು ನಿಮ್ಮಲ್ಲಿ ಕೆಲವರು ಆಶ್ಚರ್ಯ ಪಡಬಹುದು. ನಿಧಾನ ಜೀರ್ಣಕ್ರಿಯೆ ಮತ್ತು ದುರ್ಬಲ ಕರುಳಿನ ಆರೋಗ್ಯ ಹೊಂದಿರುವ ಜನರಿಗೆ ಇಂಥ ಸಮಸ್ಯೆಗಳು ಉಂಟಾಗಬಹುದು.


    ವಾಸ್ತವವಾಗಿ ಬೇಳೆಗಳಲ್ಲಿ ಫೈಬರ್‌ ಅಂಶಗಳು ಸಮೃದ್ಧವಾಗಿವೆ. ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ. ಆದರೆ ಬೇಳೆಗಳಲ್ಲಿ ಮುಖ್ಯವಾಗಿ ಉದ್ದಿನಬೇಳೆ (ಕಪ್ಪು), ಚನಾ ದಾಲ್, ಮಾತ್ರಾ ದಾಲ್, ರೊಂಗಿ ದಾಲ್ ಮತ್ತು ಅರ್ಹರ್ ದಾಲ್‌ಗಳು ಇತರ ದಾಲ್ ಪ್ರಭೇದಗಳಿಗಿಂತ ಹೆಚ್ಚು ಭಾರವಾಗಿರುತ್ತದೆ.


    ಹೊಟ್ಟೆಯುಬ್ಬರಿಸದಂತೆ ದಾಲ್‌ ತಿನ್ನುವುದು ಹೇಗೆ?


    ಪೌಷ್ಟಿಕ ತಜ್ಞರಾದ ರಾಶಿ ಚೌಧರಿ ಅವರು, ಬೇಳೆಯಿಂದ ಉತ್ಪತ್ತಿಯಾಗುವ ಅನಿಲವನ್ನು ಕಡಿಮೆ ಮಾಡಲು ಕೆಲವು ಸಲಹೆಗಳನ್ನು ಸೂಚಿಸುತ್ತಾರೆ.


    1. ದಾಲ್ ಅನ್ನು ಸುಲಭವಾಗಿ ಜೀರ್ಣವಾಗುವಂತೆ ಮಾಡಲು ಉತ್ತಮ ಮಾರ್ಗವೆಂದರೆ ಅದನ್ನು 1 ಚಮಚ ಆಪಲ್ ಸೈಡರ್ ವಿನೆಗರ್ ಜೊತೆಗೆ ರಾತ್ರಿ ನೀರಿನಲ್ಲಿ ನೆನೆಸಿಡುವುದು. ಮರುದಿನ ಎಂದಿನಂತೆ ಬೇಯಿಸಬಹುದು.


    2. ಚನಾ ದಾಲ್ ಮತ್ತು ರೊಂಗಿ ದಾಲ್‌ಗಳಂತಹ ದೊಡ್ಡ ದಾಲ್‌ಗಳನ್ನು ಅತಿಯಾಗಿ ಬೇಯಿಸುವ ಮೂಲಕ ನೀವು ದಾಲ್‌ನಲ್ಲಿರುವ ಲೆಕ್ಟಿನ್‌ಗಳನ್ನು ಕಡಿಮೆ ಮಾಡಬಹುದು. ಇದರಿಂದ ಅವು ಸಾಮಾನ್ಯಕ್ಕಿಂತ ಸ್ವಲ್ಪ ಮೆತ್ತಗಾಗಬಹುದು.


    3. ಜೀರ್ಣಕ್ರಿಯೆಯನ್ನು ಉತ್ತೇಜಿಸುವ ಸಾಮಾನ್ಯ ಮಸಾಲೆಗಳು ಸಹ ಇದಕ್ಕೆ ಸಹಾಯ ಮಾಡಬಹುದು. ನಿಮ್ಮ ದಾಲ್ ತಯಾರಿಕೆಯಲ್ಲಿ ಶುಂಠಿ ಮತ್ತು ಇಂಗನ್ನು ಸೇರಿಸುವುದರಿಂದ ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.


    ಆದ್ರೆ ಮೇಲೆ ತಿಳಿಸಿದ ಸಲಹೆಗಳನ್ನು ಮೊದಲು ಚಿಕ್ಕ ಬೇಳೆಗಳೊಂದಿಗೆ ಪ್ರಯತ್ನಿಸಲು ರಾಶಿಯವರು ಸಲಹೆ ನೀಡುತ್ತಾರೆ. ಅವು ಪ್ರಯೋಜನಕಾರಿಯಾದರೆ ಮಾತ್ರ ದೊಡ್ಡ ದಾಲ್‌ಗಳು ಮತ್ತು ರಾಜ್ಮಾ, ಚನಾದಂತಹ ದ್ವಿದಳ ಧಾನ್ಯಗಳ ಮೇಲೆ ಅನ್ವಯಿಸಿ ಎಂದು ಹೇಳುತ್ತಾರೆ.


    ಇದನ್ನೂ ಓದಿ: Health Care: ಮಗುವಿಗೆ ಜ್ವರವಿದ್ರೆ, ತಾಯಿಗೂ ಜ್ವರದ ಲಕ್ಷಣವಿದ್ರೆ ಹಾಲುಣಿಸೋದು ಸೂಕ್ತನಾ?


    ಇನ್ನು ಇವಿಷ್ಟು ಹೊಟ್ಟೆಯುಬ್ಬರಿಸದಂತೆ ಮಾಡಲು ಸಲಹೆಗಳಾದರೆ, ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸುವತ್ತ ಗಮನಹರಿಸುವುದು ಕೂಡ ಮುಖ್ಯವಾಗಿದೆ.


    ನಿಮ್ಮ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ನೀವು ಪ್ರಯತ್ನಿಸುವುದು ಆರೋಗ್ಯದ ದೃಷ್ಟಿಯಿಂದ ಮುಖ್ಯವಾಗಿದೆ. ಅದಕ್ಕಾಗಿ ನೀವು ವೈದ್ಯರ ಸಲಹೆಗಳನ್ನು ಪಡೆಯಬಹುದಾಗಿದೆ. 

    Published by:Latha CG
    First published: