Chai Tea | ಚಾಯ್ ಟೀ ಮಹಿಮೆ ಬಲ್ಲಿರಾ?; ಈ ಮಸಾಲೆ ಚಹಾದ ಉಪಯೋಗಗಳು ಹೀಗಿವೆ...

Chai Tea Benefits: ಚಾಯ್ ಟೀ ಎಂದರೆ, ಸಿಹಿ ಹಾಗೂ ಮಸಾಲೆಯುಕ್ತ, ಸುವಾಸನೆ ಭರಿತ ಟೀ. ನೀವು ಎಲ್ಲಿಯವರು ಎಂಬ ಆಧಾರದ ಮೇಲೆ, ನೀವು ಅದನ್ನು ಮಸಾಲೆ ಚಹಾ ಎಂದು ಗುರುತಿಸಬಹುದು.

ಟೀ

ಟೀ

  • Share this:

ಪ್ರಪಂಚದ ಹಲವು ಭಾಗಗಳಲ್ಲಿ ‘ಚಾಯ್’ ಎಂದರೆ ಟೀಗೆ ಇನ್ನೊಂದು ಹೆಸರು ಮಾತ್ರ. ಆದರೆ, ಪಾಶ್ಚಾತ್ಯ ಜಗತ್ತಿನಲ್ಲಿ, ‘ಚಾಯ್’ ಎಂದರೆ, ಸುವಾಸನೆ ಭರಿತ , ಮಸಾಲೆಯುಕ್ತ ಭಾರತೀಯ ಟೀ. ಅಂದರೆ, ಇಲ್ಲಿನ ನಮ್ಮ ಮಸಾಲೆ ಚಹಾ.ಅದನ್ನು ಕುಡಿಯುವುದರಿಂದ, ಹೃದಯದ ಆರೋಗ್ಯ, ಜೀರ್ಣಕ್ರಿಯೆ ಮತ್ತು ರಕ್ತ ಸಕ್ಕರೆ ಮಟ್ಟ ನಿಯಂತ್ರಣ ಸೇರಿದಂತೆ ಅನೇಕ ಆರೋಗ್ಯಕ್ಕೆ ಸಂಭಂಧಿಸಿದ ಲಾಭಗಳಿವೆ ಎನ್ನಲಾಗುತ್ತಿದೆ. ಈ ಲೇಖನದಲ್ಲಿ ಚಾಯ್ ಟೀ ಮತ್ತು ಅದರಿಂದ ಆರೋಗ್ಯಕ್ಕೆ ಆಗುವ ಉಪಯೋಗಗಳ ಬಗ್ಗೆ ತಿಳಿಸಲಾಗಿದೆ.


ಚಾಯ್ ಟೀ ಎಂದರೇನು?
ಚಾಯ್ ಟೀ ಎಂದರೆ, ಸಿಹಿ ಹಾಗೂ ಮಸಾಲೆಯುಕ್ತ, ಸುವಾಸನೆ ಭರಿತ ಟೀ. ನೀವು ಎಲ್ಲಿಯವರು ಎಂಬ ಆಧಾರದ ಮೇಲೆ, ನೀವು ಅದನ್ನು ಮಸಾಲೆ ಚಹಾ ಎಂದು ಗುರುತಿಸಬಹುದು. ಆದರೆ ಸ್ಪಷ್ಟತೆಯ ಉದ್ದೇಶಕ್ಕಾಗಿ ಈ ಇಡೀ ಲೇಖನದಲ್ಲಿ “ಚಾಯ್ ಟೀ” ಎಂಬ ಪದವನ್ನು ಬಳಸಲಾಗುತ್ತದೆ.


ಬ್ಲ್ಯಾಕ್‌ ಟೀ, ಶುಂಠಿ ಮತ್ತು ಇತರ ಮಸಾಲೆಗಳನ್ನು ಸೇರಿಸಿ, ಚಾಯ್ ಟೀ ಮಾಡಲಾಗುತ್ತದೆ. ಏಲಕ್ಕಿ, ದಾಲ್ಚಿನ್ನಿ, ಸೋಂಪು, ಕರಿಮೆಣಸು ಮತ್ತು ಲವಂಗ ಚಾಯ್ ಟೀನಲ್ಲಿ ಹೆಚ್ಚಾಗಿ ಬಳಸಲ್ಪಡುವ ಮಸಾಲೆ ಪದಾರ್ಥಗಳು. ಅನಾನಸ್ ಹೂ, ಕೊತ್ತಂಬರಿ ಬೀಜ ಮತ್ತು ಮೆಣಸಿನ ಬೀಜ ಹಾಕಿದ ಚಾಯ್ ಟೀಯನ್ನು ಕೂಡ ಜನ ಇಷ್ಟಪಡುತ್ತಾರೆ.


ಇದನ್ನೂ ಓದಿ: VK Sasikala: ಜಯಲಲಿತಾ ಆಪ್ತೆ ವಿ.ಕೆ. ಶಶಿಕಲಾ ಸಕ್ರಿಯ ರಾಜಕಾರಣಕ್ಕೆ ವಾಪಾಸ್?; ಆಡಿಯೋ ತುಣುಕು ವೈರಲ್

ಸಾಮಾನ್ಯ ಚಹಾವನ್ನು ನೀರಿನಲ್ಲಿ ಕುದಿಸಿ ತಯಾರಿಸಲಾಗುತ್ತದೆ. ಆದರೆ ಚಾಯ್ ಟೀ ಅನ್ನು ಬಿಸಿ ನೀರು ಮತ್ತು ಬಿಸಿ ಹಾಲು ಎರಡನ್ನೂ ಸೇರಿಸಿ ತಯಾರಿಸಲಾಗುತ್ತದೆ. ಅದಕ್ಕೆ ಹಂತ ಹಂತವಾಗಿ ಸಿಹಿಯನ್ನು ಕೂಡ ಸೇರಿಸಲಾಗುತ್ತದೆ.


ಚಾಯ್ ಲ್ಯಾಟೆಸ್, ಚಹಾವನ್ನು ಸೇವಿಸುವ ಇನ್ನೊಂದು ಜನಪ್ರಿಯ ವಿಧಾನ. ಚಾಯ್ ಟೀ ಕಷಾಯವನ್ನು ಸ್ಟೀಮ್ಡ್‌ ಹಾಲಿಗೆ ಸೇರಿಸಿ ಇದನ್ನು ತಯಾರಿಸಲಾಗುತ್ತದೆ. ಇದು ಸಾಮಾನ್ಯ ಚಾಯ್ ಟೀಗಿಂತ ಹೆಚ್ಚು ಹಾಲನ್ನು ಹೊಂದಿರುವ ಚಹಾವಾಗಿರುತ್ತದೆ. ಹೆಚ್ಚಿನ ಕೆಫೆಗಳಲ್ಲಿ ಚಾಯ್ ಟೀ ಸಿಗುತ್ತದೆ. ಆದರೆ ಅದನ್ನು ಮನೆಯಲ್ಲಿ ತಯಾರಿಸುವುದು ಬಹಳ ಸುಲಭ.


ಚಾಯ್ ಟೀಯಲ್ಲಿ ಇನ್ನೇನು ವಿಶೇಷವಿದೆ. ಖಂಡಿತಾ ಇದೆ, ಅದರಲ್ಲಿ ಅನೇಕ ಆರೋಗ್ಯಕರ ಅಂಶಗಳಿವೆ.


ಹೃದಯದ ಆರೋಗ್ಯಕ್ಕೆ ಸಹಕಾರಿ:


ಚಾಯ್ ಟೀ ನಿಮ್ಮ ಹೃದಯದ ಆರೋಗ್ಯಕ್ಕೆ ತುಂಬಾ ಸಹಕಾರಿ ಎಂದು ಸಾಬೀತಾಗಿದೆ. ಚಾಯ್ ಟೀನಲ್ಲಿ ಬಳಸಲ್ಪಡುವ ಪ್ರಮುಖ ಮಸಾಲೆ ಪದಾರ್ಥಗಳಲ್ಲಿ ಒಂದಾಗಿರುವ ದಾಲ್ಚಿನ್ನಿ, ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕಾರಿ ಎಂಬುದು ಪ್ರಾಣಿಗಳ ಮೇಲೆ ನಡೆಸಲಾದ ಪ್ರಯೋಗದಿಂದ ತಿಳಿದುಬಂದಿದೆ.ಕೆಲವು ವ್ಯಕ್ತಿಗಳಲ್ಲಿ , ದಾಲ್ಚಿನ್ನಿ ಸೇವನೆ ಒಟ್ಟು ಕೊಲೆಸ್ಟ್ರಾಲ್, ‘ಕೆಟ್ಟ’ ಎಲ್‍ಡಿಎಲ್ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ ಮಟ್ಟವನ್ನು ಶೇಕಡಾ 30ರಷ್ಟು ಕಡಿಮೆ ಮಾಡಲು ಸಹಕರಿಸುತ್ತದೆ ಎಂದು ತಿಳಿದುಬಂದಿದೆ.ಹೆಚ್ಚಿನ ಅಧ್ಯಯನಗಳಲ್ಲಿ, ದಿನಕ್ಕೆ 1-6 ಗ್ರಾಂಗಳಷ್ಟು ದಾಲ್ಚಿನ್ನಿಯನ್ನು ಬಳಸಲಾಗಿತ್ತು, ಇದು ನೀವು ಒಂದು ಕಪ್ ಸಾಮಾನ್ಯ ಚಾಯ್‍ ಟೀಯಲ್ಲಿ ಕಾಣುವುದಕ್ಕಿಂತ ಹೆಚ್ಚಿನ ಪ್ರಮಾಣದ್ದಾಗಿದೆ.


ಅದೇನೇ ಇದ್ದರೂ, ಹೃದಯದ ಆರೋಗ್ಯಕ್ಕೆ ಸಂಬಂಧಿಸಿ ಲಾಭಗಳನ್ನು ಪಡೆಯಲು, 120 ಮಿಲಿ ಗ್ರಾಂನಷ್ಟು ದಾಲ್ಚಿನ್ನಿಯನ್ನು ಸೇವಿಸಿದರೂ ಸಾಕಾಗುತ್ತದೆ ಎಂದು ಇತ್ತೀಚಿನ ವಿಮರ್ಶಾ ವರದಿಯೊಂದು ತಿಳಿಸಿದೆ.


ಇದನ್ನೂ ಓದಿ: Karnataka Politics: ಆತ ಬೊಗಳುತ್ತಲೇ ಇರಲಿ, ಯಡಿಯೂರಪ್ಪನವರೇ ನಮ್ಮ ನಾಯಕ; ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ


ಹಲವಾರು ಅಧ್ಯಯನಗಳ ಪ್ರಕಾರ, ಚಾಯ್ ಟೀ ಮಾಡಲು ಬಳಸುವ ಬ್ಲಾಕ್ ಟೀ , ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ದಿನಕ್ಕೆ ನಾಲ್ಕಕ್ಕಿಂತ ಹೆಚ್ಚು ಕಪ್ ಬ್ಲಾಕ್ ಟೀ ಕುಡಿಯುವುದರಿಂದ, ರಕ್ತದೊತ್ತಡ ಪ್ರಮಾಣ ಕೊಂಚ ಕಡಿಮೆ ಆಗಬಹುದು ಮತ್ತು ಹೃದ್ರೊಗದ ಪ್ರಮಾಣ 11ಶೇಕಡದಷ್ಟು ಕುಂಠಿತವಾಗುತ್ತದೆ ಎಂಬುದು ಅಧ್ಯಯನಗಳಿಂದ ದೃಢಪಟ್ಟಿದೆ.


ಆದರೂ, ಎಲ್ಲಾ ಅಧ್ಯಯನಗಳು ಒಮ್ಮತವನ್ನು ಹೊಂದಿಲ್ಲ ಮತ್ತು ಹೃದಯದ ಆರೋಗ್ಯದ ಮೇಲೆ ಚಾಯ್ ಟೀಯ ನೇರ ಪ್ರಮಾಣ ಏನೆಂಬುದರ ಬಗ್ಗೆ ಇನ್ನೂ ಯಾವ ಅಧ್ಯಯನವನ್ನೂ ಕೈಗೊಳ್ಳಲಾಗಿಲ್ಲ. ಅಂತಿಮ ತೀರ್ಮಾನಕ್ಕೆ ಬರುವ ಮುನ್ನ ಹೆಚ್ಚು ಸಂಶೋಧನೆಯ ಅಗತ್ಯವಿದೆ.


ಚಾಯ್ ಟೀ ಸಕ್ಕರೆ ಮತ್ತು ರಕ್ತದೊತ್ತಡಗಳನ್ನು ಕಡಿಮೆ ಮಾಡಬಹುದು:


ಚಾಯ್ ಟೀ ಸೇವನೆಯಿಂದ ಸಕ್ಕರೆ ಮತ್ತು ರಕ್ತದೊತ್ತಡ ನಿಯಂತ್ರಣ ಸಾಧ್ಯವಾಗಬಹುದು. ಅದರಲ್ಲಿ ಶುಂಠಿ ಮತ್ತು ದಾಲ್ಚಿನ್ನಿ ಇರುವುದೇ ಅದಕ್ಕೆ ಕಾರಣವಾಗಿರಬಹುದು. ಆ ಎರಡು ಮಸಾಲೆ ಪದಾರ್ಥಗಳು, ಸಕ್ಕರೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡಬಲ್ಲವು.


ದಾಲ್ಚಿನ್ನಿ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಶೇಕಡಾ 10-29ರಷ್ಟು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ.


ಕಡಿಮೆ ಇನ್ಸುಲಿನ್ ಪ್ರತಿರೋಧವು, ರಕ್ತ ಮತ್ತು ದೇಹದ ಜೀವಕೋಶಗಳಿಂದ ಸಕ್ಕರೆಯನ್ನು ಹೊರತೆಗೆಯಲು ಇನ್ಸುಲಿನನ್ನು ದೇಹ ಬಳಸಿಕೊಳ್ಳಲು ಸುಲಭ ಮಾಡುತ್ತದೆ.


ಇತ್ತೀಚಿನ ಅಧ್ಯಯನವೊಂದರಲ್ಲಿ, ಟೈಪ್ 2 ಮಧುಮೇಹ ಹೊಂದಿರುವ ಜನರಿಗೆ ದಿನಕ್ಕೆ 2 ಗ್ರಾಂನಷ್ಟು ಶುಂಠಿ ಪುಡಿಯನ್ನು ನೀಡಲಾಯಿತು, ಅದರಿಂದ ಸಕ್ಕರೆ ಮತ್ತು ರಕ್ತದೊತ್ತಡ ಪ್ರಮಾಣ ಶೇ.12ರಷ್ಟು ಇಳಿಕೆಯಾದದ್ದು ಕಂಡು ಬಂತು.


ದಿನಕ್ಕೆ 1 ರಿಂದ 6 ಗ್ರಾಂನಷ್ಟು ಶುಂಠಿ ಮತ್ತು ದಾಲ್ಚಿನ್ನಿ ಸೇವನೆ ಒಳ್ಳೆಯದು. ಅವು ನಿಮಗೆ ಹತ್ತಿರದ ಬರಿಸ್ತಾದಲ್ಲಿ ಮಾಡುವ ಒಂದು ಕಪ್ ಚಾಯ್ ಟೀ ಅಥವಾ ಅಂಗಡಿಯಿಂದ ತಂದ ಚಾಯ್ ಟೀ ಬ್ಯಾಗ್‍ಗಳಿಗಿಂತ ಹೆಚ್ಚು ಡೋಸ್‍ಗಳನ್ನು ಹೊಂದಿವೆ.


ಚಾಯ್ ಟೀಯ ಹೆಚ್ಚು ಲಾಭವನ್ನು ಪಡೆಯಲು, ನೀವೇ ಮನೆಯಲ್ಲಿ ಅದನ್ನು ತಯಾರಿಸಿ, ಆಗ ಬೇರೆಯವರ ಪಾಕ ವಿಧಾನದಲ್ಲಿ ಇರುವುದಕ್ಕಿಂತ ಹೆಚ್ಚು ದಾಲ್ಷಿನ್ನಿ ಮತ್ತು ಶುಂಠಿಯನ್ನು ನೀವು ಸೇರಿಸಬಹುದು.


ನೀವು ಗಮನಿಸಬೇಕಾದ ಇನ್ನೊಂದು ಅಂಶ ಏನೆಂದರೆ, ಕೆಫೆಗಳಲ್ಲಿ ಮಾರುವ ವಿವಿಧ ಪ್ರಕಾರದ ಚಾಯ್ ಟೀಗಳು ಹೆಚ್ಚು ಸಿಹಿಯಾಗಿರುತ್ತವೆ. ಅದರಿಂದಾಗಿ ಚಾಯ್ ಟೀನಲ್ಲಿರುವ ಇತರ ಪದಾರ್ಥಗಳ ಆರೋಗ್ಯಕರ ಅಂಶಗಳು ಪ್ರಯೋಜನಕ್ಕೆ ಬಾರದಿರಬಹುದು.


ವಾಸ್ತವದಲ್ಲಿ, ಸ್ಟಾರ್‌ಬಕ್ಸ್‌ನಲ್ಲಿ ಸಿಗುವ 12 ಔನ್ಸ್ (360ಎಂಎಲ್) ಕೊಬ್ಬು ರಹಿತ ಹಾಲಿನ ಚಾಯ್ ಟೀ, 35 ಗ್ರಾಂನಷ್ಟು ಸಕ್ಕರೆಯನ್ನು ಹೊಂದಿರುತ್ತದೆ, ಅದರಲ್ಲಿ ಮೂರನೇ ಎರಡು ಭಾಗ ಸಕ್ಕರೆಯನ್ನು ಹೊಂದಿರುತ್ತದೆ. ದಿಅಮೆರಿಕನ್ ಹಾರ್ಟ್ ಅಸೋಸಿಯೇಶನ್ ಸಲಹೆ ನೀಡಿರುವ ಪ್ರಕಾರ, ಮಹಿಳೆಯರು ದಿನಕ್ಕೆ 25 ಗ್ರಾಂಗಿಂತ ಕಡಿಮೆ ಮತ್ತು ಪುರುಷರು 38 ಗ್ರಾಂಗಿಂತ ಕಡಿಮೆ ಸಕ್ಕರೆ ಸೇವಿಸಬೇಕು. ರಕ್ತ-ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಇಡಬೇಕಾದರೆ, ಸಕ್ಕರೆ ಹಾಕದ ಚಾಯ್ ಟೀ ಕುಡಿಯಿರಿ.


ಇದನ್ನೂ ಓದಿ: Health Tips: ಆರೋಗ್ಯಕರ ಹೃದಯಕ್ಕಾಗಿ ನಿಮಗೆ ಎಷ್ಟು ವ್ಯಾಯಾಮ ಅಗತ್ಯ ಗೊತ್ತಾ?

ವಾಕರಿಕೆ ಕಡಿಮೆ ಮಾಡಬಹುದು ಮತ್ತು ಜೀರ್ಣ ಕ್ರೀಯೆ ಹೆಚ್ಚಿಸಬಹುದು -ಚಾಯ್ ಟೀನಲ್ಲಿರುವ ಶುಂಠಿ, ವಾಕರಿಕೆ ಕಡಿಮೆಗೊಳಿಸುವ ಶಕ್ತಿ ಹೊಂದಿದೆ, ಮುಖ್ಯವಾಗಿ ಗರ್ಭಾವಸ್ಥೆಯಲ್ಲಿ ಕಂಡುಬರುವ ವಾಕರಿಕೆ ಲಕ್ಷಣಗಳನ್ನು ನಿವಾರಿಸಲು ಇದು ತುಂಬಾ ಸಹಕಾರಿ. ಚಾಯ್ ಟೀಗೆ ನಿತ್ಯ 1.1ರಿಂದ -1.5 ಗ್ರಾಂನಷ್ಟು ಶುಂಠಿ ಸೇರಿಸಿ.


ಚಾಯ್ ಟೀನಲ್ಲಿರುವ ದಾಲ್ಚಿನ್ನಿ, ಲವಂಗ, ಕರಿ ಮೆಣಸು ಮತ್ತು ಏಲಕ್ಕಿ ಆ್ಯಂಟಿ ಬ್ಯಾಕ್ಟೀರಿಯಲ್‌ ಅಂಶಗಳನ್ನು ಹೊಂದಿದ್ದು, ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಅಜೀರ್ಣದ ಸಮಸ್ಯೆಗಳನ್ನು ನಿವಾರಿಸುತ್ತವೆ.


ತೂಕ ಕಡಿಮೆ ಮಾಡಲು ಸಹಾಯ ಮಾಡಬಲ್ಲದು:


ಚಾಯ್ ಟೀ ತೂಕ ಹೆಚ್ಚಳವಾಗುವುದನ್ನು ತಡೆಯುತ್ತದೆ ಮತ್ತು ಹಲವಾರು ರೀತಿಯಲ್ಲಿ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಚಾಯ್ ಟೀಯನ್ನು ಹಸುವಿನ ಹಾಲು ಅಥವಾ ಸೋಯಾ ಹಾಲಿನಿಂದ ತಯಾರಿಸಲಾಗುತ್ತದೆ. ಅವೆರಡೂ ಪ್ರೋಟೀನಿನ ಆಗರ. ಪ್ರೊಟೀನ್ ಹಸಿವು ಕಡಿಮೆ ಮಾಡಲು ಸಹಾಯ ಮಾಡುವ ಪೋಷಕಾಂಶ. ಹಾಗಾಗಿ ಇತರ ಚಹಾಗಳಿಗೆ ಹೋಲಿಸಿದರೆ, ಚಾಯ್ ಟೀ ಹಸಿವನ್ನು ಕುಂಠಿತಗೊಳಿಸುವ , ಹೆಚ್ಚು ತಿನ್ನುವುದನ್ನು ಕಡಿಮೆ ಮಾಡುವ ಪಾನೀಯ. ಇದನ್ನು ತಿಂಡಿಯಷ್ಟೇ ಉಪಯೋಗಕಾರಿ ಎಂದು ಪರಿಗಣಿಸಬಹುದು. ಬ್ಲ್ಯಾಕ್‌ ಟೀನಲ್ಲಿರುವ ಕೆಲವು ಅಂಶಗಳು ನಮ್ಮ ದೇಹದಲ್ಲಿನ ಕ್ಯಾಲೋರಿಗಳನ್ನು ಕರಗಿಸುತ್ತವೆ, ಮುಖ್ಯವಾಗಿ ದಿನಕ್ಕೆ ಮೂರು ಕಪ್‍ಗಿಂತ ಹೆಚ್ಚು ಬ್ಲ್ಯಾಕ್‌ ಟೀ ಕುಡಿಯುವುದರಿಂದ ಹೊಟ್ಟೆ ಭಾಗದಲ್ಲಿ ಕೊಬ್ಬು ಶೇಖರವಾಗುವುದನ್ನು ತಡೆಯಬಹುದು ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.


ಪ್ರಮಾಣ ಮತ್ತು ಸುರಕ್ಷತೆ:
ಮೇಲೆ ಪಟ್ಟಿ ಮಾಡಲಾದ ಆರೋಗ್ಯಕರ ಲಾಭಗಳನ್ನು ಪಡೆಯಲು ವ್ಯಕ್ತಿ ಎಷ್ಟು ಪ್ರಮಾಣದಷ್ಟು ಚಾಯ್ ಟೀ ಕುಡಿಯಬೇಕು ಎಂಬುದರ ಬಗ್ಗೆ ಒಮ್ಮತವಿಲ್ಲ. ಹೆಚ್ಚಿನ ಅಧ್ಯಯನಗಳು ಚಾಯ್ ಟೀ ಒಳಗೊಂಡಿರುವ ನಿರ್ದಿಷ್ಟ ಪದಾರ್ಥಗಳ ಕುರಿತಾಗಿವೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ, ಚಾಯ್ ಟೀ ಕೆಫಿನ್ ಹೊಂದಿರುತ್ತದೆ, ಮತ್ತು ಅದರ ಅತಿಯಾದ ಬಳಕೆಯಿಂದ ಕೆಲವು ವ್ಯಕ್ತಿಗಳು, ಆತಂಕ, ಮೈಗ್ರೇನ್, ಅಧಿಕ ರಕ್ತದೊತ್ತಡ ಮತ್ತು ನಿದ್ರಾಹೀನತೆಯಂತ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಾರೆ.
ವ್ಯಕ್ತಿಗಳು ದಿನವೊಂದಕ್ಕೆ 400 ಗ್ರಾಂಗಿಂತ ಹೆಚ್ಚು ಮತ್ತು ಗರ್ಭಿಣಿಯರು 200 ಗ್ರಾಂಗಿಂತ ಹೆಚ್ಚು ಕೆಫೆನ್ ಸೇವಿಸಬಾರದು. ಪ್ರತೀ ಕಪ್ (240 ಎಂಎಲ್) ಚಾಯ್ ಟೀನಲ್ಲಿ ಸುಮಾರು 25ಗ್ರಾಂನಷ್ಟು ಕೆಫಿನ್ ಇರುತ್ತದೆ ಎನ್ನಲಾಗುತ್ತದೆ. ಚಾಯ್ ಟೀನಲ್ಲಿ ಶುಂಠಿ ಇರುವುದರಿಂದ, ಕಡಿಮೆ ರಕ್ತದೊತ್ತಡ, ಸಕ್ಕರೆ ಪ್ರಮಾಣ ಕಡಿಮೆ ಇರುವವರು ಮತ್ತು ಬ್ಲಡ್ ಥಿನ್ನಿಂಗ್ ಔಷಧಿ ತೆಗೆದುಕೊಳ್ಳುತ್ತಿರುವವರು ಇದರ ಸೇವನೆ ಪ್ರಮಾಣದ ಬಗ್ಗೆ ಎಚ್ಚರಿಕೆ ವಹಿಸಬೇಕು.


Published by:Sushma Chakre
First published: