Diabetes: ಮಧುಮೇಹಿಗಳೇ ಬೆಳಗ್ಗೆ ಈ ಆಹಾರವನ್ನ ಉಪಹಾರದಲ್ಲಿ ಸೇವಿಸಬೇಡಿ; ಹಾಗಾದ್ರೆ ಯಾವ ತಿಂಡಿ ಉತ್ತಮ?

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 1 ಚಮಚ ಕೊಬ್ಬರಿ ಎಣ್ಣೆಯನ್ನು ಸೇವಿಸುವುದರಿಂದ ಮಧುಮೇಹ ಔಷಧಿಯಿಂದ ಉಂಟಾಗುವ ಸಕ್ಕರೆಯ ಬಯಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ" ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮುಂಜಾನೆಯ ಉಪಾಹಾರ (Breakfast) ನಿಸ್ಸಂದೇಹವಾಗಿ ದಿನದ ಅತ್ಯಂತ ಮುಖ್ಯವಾದ ಊಟ (Food) ಎಂದು ಹೇಳಿದರೆ ತಪ್ಪಾಗುವುದಿಲ್ಲ. ಬೆಳಗ್ಗೆ ಸೇವಿಸಿದ ಉಪಾಹಾರ ಇಡೀ ದಿನದಲ್ಲಿ ನಮ್ಮನ್ನು ಶಕ್ತಿಯುತವಾಗಿರಿಸುವುದಲ್ಲದೆ, ಚಯಾಪಚಯ ಕ್ರಿಯೆಯನ್ನು (Digestion) ಸರಿಯಾಗಿ ನಿರ್ವಹಿಸುವಲ್ಲಿ ಸಹಾಯ ಮಾಡುತ್ತದೆ ಎಂದು ಹೇಳಬಹುದು. ಬೆಳಗ್ಗೆ ಚೆನ್ನಾಗಿ ಉಪಾಹಾರ ಸೇವಿಸುವುದರಿಂದ ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Sugar Level) ನಿರ್ವಹಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಮಧುಮೇಹ ಹೊಂದಿರುವ ಜನರಿಗೆ, ಹೆಚ್ಚಾಗಿ ರಕ್ತದ ಗ್ಲೂಕೋಸ್ (Glucose) ಮಟ್ಟದಲ್ಲಿ ಏರಿಳಿತಗಳ ಅಪಾಯವಿರುತ್ತದೆ. ಬೆಳಗ್ಗೆಯ ಉಪಾಹಾರವನ್ನು ಸೇವಿಸುವ ಮಧುಮೇಹ (Diabetes) ಹೊಂದಿರುವ ಜನರು ದಿನವಿಡೀ ಅತಿಯಾಗಿ ತಿನ್ನುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ಸಂಶೋಧನೆಯೊಂದು ಹೇಳುತ್ತದೆ.

ಆದರೂ, ಚಯಾಪಚಯ ಅಸ್ವಸ್ಥತೆಯಿಂದ ಬಳಲುತ್ತಿರುವ ಜನರಿಗೆ ಬೆಳಗ್ಗಿನ ಉಪಾಹಾರದ ಆಯ್ಕೆಯು ಅಷ್ಟೇ ಮುಖ್ಯವಾಗಿದೆ, ಏಕೆಂದರೆ ಬೆಳಗ್ಗೆ ಹೆಚ್ಚಿನ ಮಟ್ಟದ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಆಹಾರಗಳನ್ನು ಸೇವಿಸುವುದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಂತರದ ದಿನದಲ್ಲಿ ಹಾನಿಗೊಳಿಸುತ್ತದೆ.

ಮಧುಮೇಹಿಗಳಿಗೆ ಉತ್ತಮ ಆಹಾರದ ಅಗತ್ಯ

ನಾರಿನಂಶ, ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು, ಉತ್ತಮ ಕೊಬ್ಬುಗಳು, ತರಕಾರಿಗಳ ಸಂಯೋಜನೆಯು ಮಧುಮೇಹದಿಂದ ಬಳಲುತ್ತಿರುವವರಿಗೆ ಉತ್ತಮ ಉಪಾಹಾರದ ಆಯ್ಕೆಯಾಗಿದೆ ಎಂದು ಪಿಸಿಒಎಸ್ ಮತ್ತು ಗಟ್ ಹೆಲ್ತ್ ನ್ಯೂಟ್ರಿಷನಿಸ್ಟ್ ಅವಂತಿ ದೇಶಪಾಂಡೆ ಅವರು ಹೇಳುತ್ತಾರೆ.
"ಪ್ರತಿ ಊಟವು ದೇಹವನ್ನು ಪೋಷಿಸುತ್ತದೆ ಮತ್ತು ರಕ್ತದಲ್ಲಿ ಸಕ್ಕರೆಯನ್ನು ನಿಧಾನವಾಗಿ ಬಿಡುಗಡೆ ಮಾಡುತ್ತದೆ, ಇದು ಇನ್ಸುಲಿನ್ ಅನ್ನು ನಿಯಂತ್ರಿತವಾಗಿ ಬಿಡುಗಡೆ ಮಾಡುತ್ತದೆ" ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ:  ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏಕೆ ಏರುತ್ತದೆ? ಇದಕ್ಕೇನು ಕಾರಣ?

ಬೆಳಗ್ಗೆ ಈ ಆಹಾರದ ಸೇವನೆ ಬೇಡ

ಬೆಳಗ್ಗಿನ ಉಪಾಹಾರದಲ್ಲಿ ಸಕ್ಕರೆ ಪಾನೀಯಗಳು, ಬಿಳಿ ಬ್ರೆಡ್, ಆಲೂಗಡ್ಡೆ ಇತ್ಯಾದಿಗಳಂತಹ ಹೆಚ್ಚಿನ ಜಿಐ ಹೊಂದಿರುವ ಆಹಾರಗಳನ್ನು ಸೇವಿಸಬಾರದು. "ಹೆಚ್ಚಿನ ಜಿಐ ಹೊಂದಿರುವ ಆಹಾರಗಳಿಂದ ಸಮೃದ್ಧವಾಗಿರುವ ಹೆಚ್ಚಿನ ಗ್ಲೈಸೆಮಿಕ್ ಲೋಡ್ ಆಹಾರವು ಪ್ರತಿಕ್ರಿಯಾತ್ಮಕ ಹೈಪೋಗ್ಲೈಸಿಮಿಯಾಕ್ಕೆ ಕಾರಣವಾಗಬಹುದು.
ಇದರಿಂದಾಗಿ ಊಟದ ನಂತರ 5 ಗಂಟೆಗಳ ನಂತರ ರಕ್ತದಲ್ಲಿನ ಸಕ್ಕರೆಯ ಕುಸಿತವು ಉಪಾಹಾರದ ಊಟವನ್ನು ಸಂಪೂರ್ಣವಾಗಿ ತ್ಯಜಿಸಿದ ನಂತರ ಆ ಅನುಭವವನ್ನು ಹೋಲುತ್ತದೆ" ಎಂದು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಸಂಶೋಧನೆ ಹೇಳುತ್ತದೆ.

ಪ್ರೋಟೀನ್ ಗಿರುವ ಶಕ್ತಿ

ಬೇಳೆಗಳು, ಬೀಜಗಳು, ಹಾಲಿನ ಉತ್ಪನ್ನಗಳು, ಸೋಯಾ, ಮೊಟ್ಟೆಗಳು, ಚಿಕನ್ ಅಥವಾ ಮೀನುಗಳು ಸ್ನಾಯುಗಳ ಆರೋಗ್ಯಕ್ಕೆ ಮಾತ್ರವಲ್ಲದೆ, ಉತ್ತಮ ಸಕ್ಕರೆ ನಿಯಂತ್ರಣಕ್ಕೂ ಸಹಾಯ ಮಾಡುತ್ತವೆ. ಇದು ಮಧುಮೇಹ ಹೊಂದಿರುವ ಜನರಿಗೆ ವರದಾನವಾಗಿದೆ.

ಏಕೆಂದರೆ ಪ್ರೋಟೀನ್ ಆಹಾರಗಳು ಅದರ ಜೀರ್ಣಕ್ರಿಯೆಗೆ ಇನ್ಸುಲಿನ್ ಅಗತ್ಯವಿಲ್ಲ, ಇದು ಮಧುಮೇಹಿಗಳಿಗೆ ಉತ್ತಮ ಆಯ್ಕೆಯಾಗಿದೆ, ಏಕೆಂದರೆ ಇದು ಪೋಷಣೆಯನ್ನು ನೀಡುತ್ತದೆ.

ಕರಗದ ನಾರುಗಳು

ನಾವು ಸೇವಿಸುವ ಹಣ್ಣುಗಳು ಮತ್ತು ತರಕಾರಿಗಳ ಮೇಲಿನ ಸಿಪ್ಪೆಯಲ್ಲಿರುವ ಕರಗದ ನಾರು ಮಧುಮೇಹದ ನಿರ್ವಹಣೆಯಲ್ಲಿ ಗಮನಾರ್ಹ ಪಾತ್ರ ವಹಿಸುತ್ತದೆ ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ಇನ್ಸುಲಿನ್ ಹಾರ್ಮೋನುಗಳ ಮೇಲೆ ಕರಗದ ನಾರುಗಳ ಪಾತ್ರವನ್ನು ವಿವರಿಸುತ್ತಾ "ಕರಗದ ನಾರು ಕರುಳಿನಲ್ಲಿ ಆಹಾರಗಳ ಸಾಗಣೆಯ ಸಮಯವನ್ನು ಹೆಚ್ಚಿಸುತ್ತದೆ, ಇದು ರಕ್ತದಲ್ಲಿನ ಸಕ್ಕರೆಯ ನಿಧಾನಗತಿಯ ಬಿಡುಗಡೆಗೆ ಕಾರಣವಾಗುತ್ತದೆ, ಇದು ಇನ್ಸುಲಿನ್ ಹಾರ್ಮೋನ್‌ನ ನಿಧಾನಗತಿಯ ಬಿಡುಗಡೆಗೆ ಸಹಾಯ ಮಾಡುತ್ತದೆ" ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ.

ಉತ್ತಮ ಕೊಬ್ಬುಗಳು

ಉತ್ತಮ ಸಕ್ಕರೆ ನಿಯಂತ್ರಣದಲ್ಲಿ ಕೊಬ್ಬುಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕರುಳಿನ ಆರೋಗ್ಯ ತಜ್ಞರು ಹೇಳುತ್ತಾರೆ, ಏಕೆಂದರೆ ಅವು ಸಕ್ಕರೆ ಬಿಡುಗಡೆಯನ್ನು ನಿಧಾನಗೊಳಿಸುತ್ತವೆ. "ಬಾದಾಮಿ ಮತ್ತು ವಾಲ್ನಟ್ ಗಳಂತಹವುಗಳನ್ನು ಉತ್ತಮ ಕೊಬ್ಬುಗಳು ಅಥವಾ ಅಗಸೆ ಬೀಜಗಳು, ಕುಂಬಳಕಾಯಿ ಬೀಜಗಳು, ಕಲ್ಲಂಗಡಿ ಬೀಜಗಳಂತಹ ಬೀಜಗಳು ಒಮೆಗಾ 3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿರುತ್ತವೆ.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 1 ಚಮಚ ಕೊಬ್ಬರಿ ಎಣ್ಣೆಯನ್ನು ಸೇವಿಸುವುದರಿಂದ ಮಧುಮೇಹ ಔಷಧಿಯಿಂದ ಉಂಟಾಗುವ ಸಕ್ಕರೆಯ ಬಯಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ" ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ.

ಮಧುಮೇಹವಿದ್ದವರಿಗೆ ಇವು ಉತ್ತಮ ಉಪಾಹಾರಗಳ ಆಯ್ಕೆಗಳು

ಸಕ್ಕರೆ ಮಟ್ಟವನ್ನು ಉತ್ತಮವಾಗಿ ನಿರ್ವಹಿಸಲು ಪ್ರೋಟೀನ್, ಕೊಬ್ಬುಗಳು, ನಾರಿನಂಶ ಹೆಚ್ಚಿರುವ ಹಣ್ಣುಗಳು ಅಥವಾ ತರಕಾರಿಗಳು ಹಾಗೂ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಸೇರಿದಂತೆ ಎಲ್ಲಾ ಆಹಾರ ಪದಾರ್ಥಗಳನ್ನು ಉಪಾಹಾರದಲ್ಲಿ ಸೇರಿಸುವಂತೆ ಪೌಷ್ಟಿಕ ತಜ್ಞರು ಸಲಹೆ ನೀಡುತ್ತಾರೆ.

ಇದನ್ನೂ ಓದಿ:  Fruits: ಮಧುಮೇಹಿಗಳು ತಿನ್ನಬಹುದಾದ ಹತ್ತು ಹಣ್ಣುಗಳ ಪಟ್ಟಿ ಇಲ್ಲಿದೆ..!

1.ಎರಡು ಮೆಂತ್ಯೆ ಪರಾಠಾ, 1 ಕಪ್ ಕಡಿಮೆ ಕೊಬ್ಬಿನ ಮೊಸರು, 2 ಚಮಚ ಅಗಸೆ ಬೀಜಗಳ ಚಟ್ನಿ ಸೇವಿಸಿರಿ. ಇದರಲ್ಲಿ ಪ್ರೋಟೀನ್, ಉತ್ತಮ ಕೊಬ್ಬುಗಳು, ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು, ತರಕಾರಿ ಎಲ್ಲವೂ ಇರುತ್ತದೆ ಮತ್ತು ಇದು 300 ಕಿಲೋ ಕ್ಯಾಲೋರಿ ಹೊಂದಿರುತ್ತದೆ.

2.ಮಾವಿನಹಣ್ಣು 1 ಕಪ್, ಮೊಸರು 1 ಕಪ್, ಬಾದಾಮಿ ಹಾಲು 1 ಕಪ್, ಚಿಯಾ ಬೀಜಗಳು 1 ಚಮಚ, 3 ರಿಂದ 4 ಪಾಲಕ್ ಎಲೆಗಳು. ಇದರಲ್ಲಿ ಪ್ರೋಟೀನ್, ಉತ್ತಮ ಕೊಬ್ಬುಗಳು, ಸಂಕೀರ್ಣ ಕಾರ್ಬೋಹೈಡ್ರೇಟ್ ಗಳು, ತರಕಾರಿ ಎಲ್ಲವೂ ಇದ್ದು, 280 ಕಿಲೋ ಕ್ಯಾಲೋರಿ ಹೊಂದಿರುತ್ತದೆ.

3.ಒಂದು ಮೊಟ್ಟೆ, ಒಂದು ರಾಗಿ ರೊಟ್ಟಿ ಅಥವಾ ಫುಲ್ಕಾ, 1 ಬಟ್ಟಲು ಹಣ್ಣನ್ನು ಸೇವಿಸಿ, ಇದು 250 ಕಿಲೋ ಕ್ಯಾಲೋರಿಯನ್ನು ಹೊಂದಿರುತ್ತದೆ.

ಮಧುಮೇಹವಿದ್ದವರಿಗೆ ಇವು ಕೆಟ್ಟ ಉಪಾಹಾರಗಳ ಆಯ್ಕೆಗಳು

1.ಅವಲಕ್ಕಿ ಮತ್ತು ಟೀ
2.ಉಪ್ಪಿಟ್ಟು, ಒಂದು ಬಟ್ಟಲು ಹಣ್ಣು
3.ಆಲೂ ಪರಾಠಾ ಮತ್ತು ಮೊಸರು

ಇವೆಲ್ಲವೂ ಪ್ರೋಟೀನ್, ಫೈಬರ್ ಮತ್ತು ಉತ್ತಮ ಕೊಬ್ಬುಗಳನ್ನು ಹೊಂದಿದ್ದು, 300 ರಿಂದ 350 ಕಿಲೋ ಕ್ಯಾಲೋರಿಗಳನ್ನು ಹೊಂದಿರುತ್ತವೆ.
Published by:Mahmadrafik K
First published: